ಲೋಕಸಭೆ ಚುನಾವಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
ಹಾಸನ

ಲೋಕಸಭೆ ಚುನಾವಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

March 12, 2019

ಮಾರ್ಚ್.10 ರಿಂದ ಮೇ. 27ರವರೆಗೂ ನೀತಿ ಸಂಹಿತೆ ಚಾಲ್ತಿಯಲ್ಲಿ: ಜಿಲ್ಲಾಧಿಕಾರಿ ಅಕ್ರಂ ಪಾಷ
ಹಾಸನ: ಜಿಲ್ಲಾಡಳಿತ ಲೋಕ ಸಭೆ ಚುನಾವಣೆಯ ಸಕಲ ಸಿದ್ಧತೆಯನ್ನು ಕೈಗೊಂಡಿದ್ದು, ನೀತಿ ಸಂಹಿತೆ ಈಗಾಗಲೇ ಜಾರಿಯಾಗಿ ಮೇ. 27ರ ವರೆಗೂ ಚಾಲ್ತಿ ಯಲ್ಲಿ ಇರುತ್ತದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದರು.

ಜಿಲ್ಲಾ ಪಂಚಾಯತ್ ಹೇಮಾವತಿ ಹೊಯ್ಸಳ ಸಭಾಂಗಣದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ಲೋಕಸಭೆ ಚುನಾವಣೆಯ ಸಿದ್ಧತೆ ಬಗ್ಗೆ ವಿವರಿಸಿದ ಅವರು, ಲೋಕಸಭಾ ಕ್ಷೇತ್ರದಲ್ಲಿ 16.30 ಲಕ್ಷ ಮತದಾರರು ಮತದಾನಕ್ಕೆ ಅರ್ಹರಾ ಗಿದ್ದು, ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನದವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅವ ಕಾಶ ನೀಡಲಾಗುವುದು ಎಂದರು.

ಹಾಸನ ಲೋಕಸಭಾ ಚುನಾವಣಾ ವ್ಯಾಪ್ತಿಯ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ 1.99.235, ಅರಸೀಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ 207621, ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ 190383, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ 211905, ಹೊಳೆ ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿಜಿಲ್ಲೆಗೆ 6 ಕೇಂದ್ರ ಅರೆಸೇನಾ ತುಕಡಿಗಳು 208824, ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ 216223, ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ 195574 ಹಾಗೂ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ 199822 ಮತ ದಾರರು ಸೇರಿಸಧ್ಯ 1630000 ಮತ ದಾರರ ಮತದಾನಕ್ಕೆ ಅರ್ಹರಾಗಿ ದ್ದಾರೆಂದು ಹೇಳಿದರು.

ಹಾಸನ ಲೋಕಸಭಾ ಚುನಾವಣೆ ಯಲ್ಲಿ ಒಟ್ಟು 2235 ಮತಗಟ್ಟೆಗಳನ್ನು ತೆರೆ ಯಲು ಮುಂದಾಗಿದ್ದು, ಶ್ರವಣಬೆಳಗೊಳ ದಲ್ಲಿ 271, ಅರಸೀಕೆರೆಯಲ್ಲಿ 276, ಬೇಲೂರಿನಲ್ಲಿ 273, ಹಾಸನದಲ್ಲಿ 273, ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ದಲ್ಲಿ 318, ಅರಕಲಗೂಡು 287, ಸಕಲೇಶಪುರ 287, ಹಾಗೂ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ 250 ಮತಗಟ್ಟೆ ಗಳನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು. ಹಾಸನ ಲೋಕ ಸಭಾ ಚುನಾವಣೆಗೆ ಸಹಾಯಕ ಚುನಾ ವಣಾಧಿಕಾರಿಗಳಾಗಿ 9 ಅಧಿಕಾರಿಗಳನ್ನು ತೆಗೆದುಕೊಂಡಿದ್ದು ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಈಗಾಗಲೇ ಜಿಲ್ಲೆಯಲ್ಲಿ ರಾಜಕೀಯ ಮುಖಂಡರು, ಸರ್ಕಾರಿ ಜಾಹೀರಾತುಗಳು ಸೇರಿದಂತೆ ಎಲ್ಲಾ ರೀತಿಯ ಫ್ಲೆಕ್ಸ್, ಬಂಟಿಂಗ್ಸ್‍ಗಳನ್ನು ತೆರವುಗೊಳಿಸಲಾಗುತ್ತಿದೆ. ಅಲ್ಲದೆ ಪ್ರಸಕ್ತ ರಾಜಕೀಯದಲ್ಲಿರುವ ಮುಖಂಡರ ಚಿತ್ರ ಗಳನ್ನು ಸಹ ಸರ್ಕಾರಿ ಇಲಾಖೆ ಹಾಗೂ ಸರ್ಕಾರಿ ವೆಬ್‍ಸೈಟ್‍ಗಳಿಂದ ತೆರವು ಗೊಳಿಸಲಾಗುತ್ತಿದೆ ಎಂದು ವಿವರಿಸಿದರು.

ಮಾದರಿ ನೀತಿ ಸಂಹಿತೆ ಜಾರಿಗೊಳಿ ಸಲು ನೋಡಲ್ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್‍ಗಳು, ವಿಚಕ್ಷಣ ದಳಗಳನ್ನು ನೇಮಿಸಲಾಗುತ್ತಿದ್ದು. ಜಿಲ್ಲೆಯ ಗಡಿ ಭಾಗ ಗಳಲ್ಲಿ ಚೆಕ್‍ಪೋಸ್ಟ್ ತೆಗೆದು ನೀತಿ ಸಂಹಿತೆ ಜಾರಿಗೊಳಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಹಾಸನ ಲೋಕಸಭಾ ಚುನಾವಣೆ ವೇಳಾ ಪಟ್ಟಿ ಇಂತಿದ್ದು, ಮಾ.19 (ಮಂಗಳ ವಾರ) ಅಧಿಸೂಚನೆ ಹೊರ ಬೀಳಲಿದ್ದು, ಮಾ.26ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಮಾ.27 ನಾಮ ಪತ್ರ ಪರಿಶೀಲನೆ, ಮಾ.29 ನಾಮ ಪತ್ರ ಹಿಂಪಡೆಯುವ ಕೊನೆಯ ದಿನವಾಗಿ ರುತ್ತದೆ. ಏ.18ರಂದು ಮತದಾನ ನಡೆ ಯಲಿದೆ. ಮೇ 23 ಮತ ಎಣಿಕೆ ನಡೆಯ ಲಿದ್ದು, ಮೇ 27ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತದೆ ಎಂದು ಲೋಕಸಭೆ ಚುನಾವಣೆಯ ಬಗ್ಗೆ ಪೂರ್ಣ ವಿವರ ನೀಡಿದರು.
ಯಾವ ಕಾಮಗಾರಿ ಪ್ರಗತಿಯಲ್ಲಿವೆಯೋ ಆ ಕಾಮಗಾರಿಗಳಿಗೆ ಯಾವುದೇ ಅಡ್ಡಿ ಇಲ್ಲವೆಂದು ಸ್ಪಷ್ಟಪಡಿಸಿದ ಜಿಲ್ಲಾಧಿಕಾರಿ ಗಳು ಹೊಸದಾಗಿ ಟೆಂಡರ್ ಕರೆಯುವು ದಕ್ಕೆ, ಹಾಗೂ ಹೊಸ ಯೋಜನೆಗಳ ಅನುಷ್ಠಾನ ಸ್ಥಗಿತಗೊಳ್ಳುತ್ತವೆ ಎಂದು ಹೇಳಿದರು. ಹಾಸನ ಲೋಕಸಭಾ ಚುನಾವಣೆ ಬಗ್ಗೆ ಮಾಹಿತಿಗಾಗಿ ಅಥವಾ ಯಾವುದೇ ಸಮಸ್ಯೆಗಳಿದ್ದಲ್ಲಿ ಹಾಸನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 24×7 ಮಾದರಿ ಕಾರ್ಯನಿರ್ವಹಿಸುವ ದೂರ ವಾಣಿ ಸಂಖ್ಯೆ:08172-261111 ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿ ಕಾರಿ ವೈಶಾಲಿ, ವಾರ್ತಾಧಿಕಾರಿ ವಿನೋದ್ ಚಂದ್ರ ಇತರರು ಉಪಸ್ಥಿತರಿದ್ದರು.

ಜಿಲ್ಲಾ ಪೊಲೀಸ್ ಇಲಾಖೆ ಸಜ್ಜು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‍ಗೌಡ ಮಾತನಾಡಿ, ಹಾಸನ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಹಾಸನ ಜಿಲ್ಲೆಗೆ 6 ಅರೆ ಸೇನಾ ತುಕಡಿಗಳು ಆಗಮಿಸಲಿದ್ದು ಒಟ್ಟು 680 ಸಿಬ್ಬಂದಿಗಳು ಕೇಂದ್ರದಿಂದ ಆಗಮಿಸಲಿದ್ದು, ರಾಜ್ಯದ 8 ಕೆ.ಎಸ್.ಆರ್.ಪಿ ತುಕಡಿಗಳು ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಲಿವೆ.

ಅದರೊಂದಿಗೆ ಬೇರೆ ಜಿಲ್ಲೆಗಳಿಂದಲೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸ ಲಾಗುವುದರೊಂದಿಗೆ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳನ್ನು ಬಳಸಿಕೊಂಡು ಹಲವಾರು ಚೆಕ್ ಪೋಸ್ಟ್‍ಗಳನ್ನು ತೆರೆದು ಲೋಕಸಭಾ ಚುನಾವಣೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಪ್ರಕಾಶ್ ಗೌಡ ವಿವರಿಸಿದರು.

323 ಕಮ್ಯೂನಲ್ ಗೂಂಡಾ ಕಾಯ್ದೆಯುಳ್ಳ ವ್ಯಕ್ತಿಗಳನ್ನು ಠಾಣೆಗೆ ಕರೆಸಿ ಅವರ ಮೇಲೆ ಸಿಆರ್‍ಪಿ 107,110ರಂತೆ ಬಾಂಡ್ ಪೇಪರ್‍ನಲ್ಲಿ ಮುಚ್ಚಳಿಕೆ ಬರೆಸಿಕೊಳ್ಳುತ್ತಿದ್ದು. ಚುನಾವಣೆ ಸಂದರ್ಭದಲ್ಲಿ ಶಾಂತಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಂಡಿರುವುದಾಗಿ ಮಾಹಿತಿ ನೀಡಿದರು.

ಅಲ್ಲದೆ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿರುವ ಹಿನ್ನಲೆಯಲ್ಲಿ ಈಗಾಗಲೇ ಆಯುಧ ಪರವಾನಗಿ ಹೊಂದಿರುವವರು ತಮ್ಮ ಆಯುಧಗಳನ್ನು ಸ್ಥಳೀಯ ಠಾಣೆಗಳಿಗೆ ಒಪ್ಪಿಸಬೇಕಿದ್ದು, ಈ ಪ್ರಕ್ರಿಯೆ ಜಾರಿಗೆ ಬಂದಿದೆ ಎಂದ ಅವರು ಈ ಹಿಂದಿನ ಚುನಾವಣೆಗಳಲ್ಲಿ 13 ಬೂತ್‍ಗಳನ್ನು ನಕ್ಸ್‍ಲ್ ಚಟುವಟಿಕೆ ಕೇಂದ್ರಗಳ ಬೂತ್‍ಗಳೆಂದು ಪರಿಗಣಿಸಿ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಎಲ್ಲಾ ಬಂದೋಬಸ್ತ್ ಮಾಡಲಾಗಿದೆ.

Translate »