ಡಿಜಿಟಲ್ ಮಾರುಕಟ್ಟೆ ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ  ಸಾಗುತ್ತಿದೆ: ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್
ಮೈಸೂರು

ಡಿಜಿಟಲ್ ಮಾರುಕಟ್ಟೆ ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ಸಾಗುತ್ತಿದೆ: ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್

March 12, 2019

ಮೈಸೂರು: ಡಿಜಿಟಲ್ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದ್ದು, ಕೇವಲ ವಾಣಿಜ್ಯ ಮತ್ತು ನಿರ್ವಹಣೆಯ ಅಂಶವಾಗಿ ಮಾತ್ರವಲ್ಲದೇ, ಸಾಂಪ್ರ ದಾಯಿಕ ನೆಲೆಗಟ್ಟಿನಲ್ಲಿ ಸಾಗುತ್ತಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಹೇಳಿದರು.

ನಗರದ ಸರಸ್ವತಿಪುರಂನಲ್ಲಿರುವ ಟಿಟಿಎಲ್ ಕಾಲೇಜ್ ಆಫ್ ಬ್ಯುಸಿನೆಸ್ ಮ್ಯಾನೇಜ್‍ಮೆಂಟ್ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಡಿಜಿಟಲ್ ಮಾರುಕಟ್ಟೆ ಮತ್ತು ವೃತ್ತಿಜೀವನದ ಅವಕಾಶಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ವಾಣಿಜ್ಯ ಕೋರ್ಸ್‍ಗಳಲ್ಲಿ ತಂತ್ರಜ್ಞಾನದ ವಿಷಯ ಅಳ ವಡಿಸುವ ಮೂಲಕ ವೃತ್ತಿ ಜೀವನಕ್ಕೆ ಸಹಕಾರಿಯಾಗುವಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಮೈಸೂರು ವಿ.ವಿ. ಯಲ್ಲಿ 120-140 ವಿದ್ಯಾರ್ಥಿಗಳು ವಾಣಿಜ್ಯ ವಿಷಯ ಅಧ್ಯಯನ ಮಾಡುತ್ತಿದ್ದಾರೆ. ಮೈಸೂರು ವಿವಿಯ ಅಧೀನ ದಲ್ಲಿರುವ ಸುಮಾರು 40 ಕಾಲೇಜುಗಳಲ್ಲಿ ಎಂ.ಕಾಂ ವಿಷಯ ಅಳವಡಿಸಲಾಗಿದೆ. ಇಂಥ ಸಾವಿರಾರು ವಿದ್ಯಾರ್ಥಿಗಳ ವೃತ್ತಿ ಜೀವನಕ್ಕೆ ಸಹಕಾರಿಯಾದ ಡಿಜಿಟಲ್ ಮಾರುಕಟ್ಟೆ ವಿಷಯ ಅಧ್ಯಯನಕ್ಕೆ ಸಲಹೆ ನೀಡಬೇಕು ಎಂದರು.

ವಿದ್ಯಾರ್ಥಿಗಳು ಉದ್ಯೋಗದಾತರಾಗಬೇಕೇ ಹೊರತು ಬೇಡುವವರಾಗಬಾರದು. ಹಾಗಾಗಿ, ಎಲ್ಲರೂ ಡಿಜಿಟಲ್ ಮಾರುಕಟ್ಟೆ ವಲಯಕ್ಕೆ ಪಾದಾರ್ಪಣೆ ಮಾಡಬೇಕು. ಈ ಹಾದಿ ನಿಮಗೆ ಹೆಚ್ಚಿನ ಮಟ್ಟದಲ್ಲಿ ಉದ್ಯೋಗಾವಕಾಶ ಕಲ್ಪಿಸುತ್ತದೆ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲೆ ಎಂ.ಪ್ರೀತಿ, ಪ್ರೊ.ನಾಗರಾಜು, ಪ್ರೊ.ಹೆಚ್.ಎನ್.ಅಶ್ವಥ್ ನಾರಾಯಣ್, ಉಪಸ್ಥಿತರಿದ್ದರು.

Translate »