ಕಾರ್ಯ ಕ್ಷೇತ್ರದ ಪರಿಣತರಿಂದ  ಜಲಾಮೃತ ಕರಡು ಮಾರ್ಗಸೂಚಿ ತಯಾರಿ
ಮೈಸೂರು

ಕಾರ್ಯ ಕ್ಷೇತ್ರದ ಪರಿಣತರಿಂದ ಜಲಾಮೃತ ಕರಡು ಮಾರ್ಗಸೂಚಿ ತಯಾರಿ

March 12, 2019

ಮೈಸೂರು: ತಂತ್ರಜ್ಞಾನದ ಸಮರ್ಪಕ ಬಳಕೆ, ವೈಜ್ಞಾನಿಕ ವಿಶ್ಲೇಷಣೆ ಹಾಗೂ ಜಲ ಪ್ರಜ್ಞೆ ಮೂಡಿಸುವ ಮೂಲಕ ಜಲ ವರ್ಷ-2019ರ ಜಲ ಸಂರಕ್ಷಣಾ ಅಭಿಯಾನ ವನ್ನು ಮುಂದಿನ 3 ವರ್ಷಗಳಿಗೆ ಸುಸ್ಥಿರ ಕಾರ್ಯ ಚಟು ವಟಿಕೆಯಾಗಿ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಖ್ ಪ್ರಕಟಿಸಿದ್ದಾರೆ.

ನಗರದ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಎಸ್.ಕೆ. ಡೇ ಹಾಲ್‍ನಲ್ಲಿ ಆರ್.ಡಿ.ಪಿ.ಆರ್ ಮತ್ತು ಎಸ್.ಐ.ಆರ್.ಡಿ. ಸಹಯೋಗದಲ್ಲಿ ಏರ್ಪಾಡಾಗಿದ್ದ 2 ದಿನಗಳ ಜಲಾಮೃತ ಮಾರ್ಗಸೂಚಿ ತಯಾರಿ ಕಾರ್ಯಾಗಾರದಲ್ಲಿ ಪ್ರಾಸ್ತಾವಿಕ ವಾಗಿ ಮಾತನಾಡಿದ ಎಲ್.ಕೆ. ಅತೀಖ್, ಕಾರ್ಯಕ್ಷೇತ್ರದ ವಿಷಯ ತಜ್ಞರು, ಸರ್ಕಾರೇತರ ಸಂಘಸಂಸ್ಥೆಗಳು ಹಾಗೂ ಸಮುದಾಯ ಕಾರ್ಯಕರ್ತರ ಅಭಿಪ್ರಾಯಗಳನ್ನು ಕ್ರೋಢೀ ಕರಿಸಿ ‘ಜಲಾಮೃತ’ ಕಾರ್ಯಾನುಷ್ಠಾನ ಮಾರ್ಗಸೂಚಿ ಗಳನ್ನು ಸಿದ್ಧಪಡಿಸಲು ಸರ್ಕಾರ ಮುಂದಾಗಿದೆ ಎಂದರು.

ಜಲ ಸಾಕ್ಷರತೆ, ಜಲ ಮೂಲಗಳ ಪುನರುಜ್ಜೀವನ ಹಾಗೂ ನಿರ್ಮಾಣ, ನೀರಿನ ಪ್ರಜ್ಞಾವಂತ ಬಳಕೆ, ಹಸಿರೀಕರಣ ಜಲಾಮೃತದಲ್ಲಿ ಪ್ರಮುಖ ಉದ್ದೇಶಗಳಾಗಿವೆ ಪ್ರಸ್ತುತ ನಡೆಯು ತ್ತಿರುವ ಕಾರ್ಯಾಗಾರದಲ್ಲಿ ಜಲ ಸಾಕ್ಷರತೆ, ಜಲಾಮೃತ ಪರಿಕಲ್ಪನೆ ಮತ್ತು ಸಾಮಥ್ರ್ಯಾಭಿವೃದ್ಧಿ, ಜಲಾಮೃತ ತಾಂತ್ರಿಕ ಹಾಗೂ ಆಡಳಿತಾತ್ಮಕ ಅಂಶಗಳ ಕುರಿತು ಮಾರ್ಗಸೂಚಿ ಗಳನ್ನು ಕರಡು ತಯಾರಿಸಲಾಗುವುದು. ಜಲಾಮೃತ ಕಾರ್ಯ ಕ್ರಮದ ಪ್ರಕ್ರಿಯೆಗಳ ನಿರ್ವಹಣೆಗಾಗಿ ಪ್ರತ್ಯೇಕ ಜಾಲತಾಣ ರೂಪಿಸಿ ನಿರ್ವಹಿಸಲಾಗುವುದು ಎಂದು ಹೇಳಿದರು.

ವೇದಿಕೆಯಲ್ಲಿ ಭಾಗವಹಿಸಿದ್ದ ಜಲಾನಯನ ಆಯುಕ್ತ ರಾದ ಪಿ.ಸಿ.ರೇ ಮಾತನಾಡಿ, ರಾಜ್ಯ ಜಲಾನಯನ ಯೋಜ ನೆಯ ಚಟುವಟಿಕೆಗಳನ್ನು ‘ಜಲಾಮೃತ’ ಕಾರ್ಯಕ್ರಮ ದೊಂದಿಗೆ ಸಂಯೋಜಿಸಿ ಅನುಷ್ಠಾನಗೊಳಿಸಲಾಗುವುದು ಎಂದರು. ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ ಬೆಳಗಾವಿ ಜಲಾನಯನ ಅಧಿಕಾರಿ ಬೈರಾರೆಡ್ಡಿ ಜಲಸಂರಕ್ಷಣೆಯ ಯಶಸ್ವಿ ಅನುಷ್ಠಾನ ಅನುಭವಗಳನ್ನು ಹಂಚಿಕೊಂಡರು.

ಎಸ್‍ಐಆರ್‍ಡಿ ನಿರ್ದೇಶಕಿ ಜ್ಯೋತಿ ಸ್ವಾಗತಿಸಿದರು. ಆರ್‍ಡಿ &ಪಿಆರ್ ನಿರ್ದೇಶಕ ಕೆಂಪೇಗೌಡ, ಎಸ್‍ಐಆರ್‍ಡಿ ಉಪ ನಿರ್ದೇಶಕ ರವೀಂದ್ರ, ಕಾರ್ಯಕ್ರಮ ಸಂಯೋಜಕ ಡಾ. ಗಣೇಶಪ್ರಸಾದ್ ವೇದಿಕೆಯಲ್ಲಿದ್ದರು. ರಾಜ್ಯದ ವಿವಿಧೆಡೆ ಯಿಂದ ಕಾರ್ಯಕ್ಷೇತ್ರದ ಸಾಧಕರು, ತಜ್ಞರು, ತಳ ಹಂತದ ಅನು ಭವಿ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Translate »