ಬೇಲೂರು: ವೃದ್ಧನೋರ್ವ ಪತ್ನಿಯನ್ನೇ ಹತ್ಯೆಗೈದಿರುವ ಘಟನೆ ತಾಲೂಕಿನ ಕಲ್ಲು ಶೆಟ್ಟಿಹಳ್ಳಿಯಲ್ಲಿ ನಡೆದಿದೆ. ಗ್ರಾಮದ ರಾಮಮ್ಮ(60) ಹತ್ಯೆಗೀಡಾದವರು. ಹಂತಕ ಪತಿ ಮೂಡ್ಲುಗಿರಿ ಬೋವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಸಾರದಲ್ಲಿ ಮೂರ್ನಾಲ್ಕು ತಿಂಗಳಿಂದಲೂ ಜಗಳ ನಡೆಯುತ್ತಿತ್ತು. ಇಂದು ಸಂಭವಿಸಿದ ಮಾತಿನ ಚಕಮಕಿ ತಾರಕ್ಕೇರಿ ವೃದ್ಧ ಮೂಡ್ಲುಗಿರಿ ಮಚ್ಚಿನಿಂದ ತನ್ನ ಪತ್ನಿ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾನೆ. ಹಳೇಬಿಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿಯಿಂದ ಭಾರೀ ಪ್ರತಿಭಟನೆ
September 22, 2018ಹಾಸನ: ಬಿಎಸ್‍ವೈ ಹಾಗೂ ಪಕ್ಷದ ವಿರುದ್ಧ ದಂಗೆ ಏಳಬೇಕೆಂಬ ಸಿಎಂ ಹೆಚ್‍ಡಿಕೆ ಹೇಳಿಕೆ ಖಂಡಿಸಿ ನಗರದಲ್ಲಿಂದು ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾರಮೇಶ್ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಸಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರ ವಣಿಗೆ ಮೂಲಕ ಸಂಚರಿಸಿ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿ ಭಟನಾಕಾರರು, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಮ್ಮಿಶ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಬೀಳುವ ಭಯದಿಂದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹತಾಶರಾಗಿದ್ದು, ಚನ್ನರಾಯಪಟ್ಟಣದಲ್ಲಿ ನಡೆದ ಕಾರ್ಯ ಕ್ರಮ ಉದ್ದೇಶಿಸಿ ಮಾತನಾಡುವಾಗ…
ಹಾಸನ ಹಾಲು ಒಕ್ಕೂಟಕ್ಕೆ 5.65 ಕೋಟಿ ರೂ. ಲಾಭ
September 22, 2018ಹಾಸನ: ಹಾಸನ ಸಹಕಾರಿ ಉತ್ಪಾದಕರ ಸಂಘಗಳ ಒಕ್ಕೂಟ ಈ ಬಾರಿ 5.65 ಕೋಟಿ ರೂ ಲಾಭಗಳಿಸಿದ್ದು, 3.92 ಕೋಟಿ ರೂ.ಗಳನ್ನು ಸದಸ್ಯ ಸಂಘಗಳಿಗೆ ಬೋನಸ್ ಮತ್ತು ಡಿವಿಡೆಂಡ್ ಪಾವತಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು. ನಗರದ ಡೈರಿ ಆವರಣದಲ್ಲಿ ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಸೇನಾ ಸಂಸ್ಥೆಗಳಿಗೆ ಸುಮಾರು 15 ಲಕ್ಷ ಲೀ. ಯುಹೆಚ್‍ಟಿ ಹಾಲನ್ನು…
ಹಾಸನಕ್ಕೆ 20 ಕೋಟಿ ಬಂಡವಾಳ ಹೂಡಿಕೆ: ಎಚ್‍ಡಿಕೆ
September 21, 2018ಹಾಸನ: ‘ದಸರಾಕ್ಕೂ ಮೊದಲು ಜಿಲ್ಲೆಯಲ್ಲಿ 20 ಕೋಟಿ ಬಂಡವಾಳ ಹೂಡಿಕೆ ಮಾಡುವ ಯೋಜನೆಯನ್ನು ರೂಪಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಜಿಲ್ಲೆಯ ಹಿರೀಸಾವೆ ಹೋಬಳಿಯ ತೋಟಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ, ಚನ್ನರಾಯಪಟ್ಟಣದ ಅಮಾನಿಕೆರೆಯಿಂದ ಕುಡಿಯುವ ನೀರಿಗಾಗಿ ತಾಲೂಕಿನ ಕಾವೇರಿ ನೀರಾವರಿ ನಿಗಮದ ವತಿಯಿಂದ ಹಲಗೊಂಡನ ಹಳ್ಳಿ ಏತ ನೀರಾವರಿ ಯೋಜನೆ, ಚನ್ನರಾಯಪಟ್ಟಣ ಅಮಾನಿಕೆರೆ ಏತ ನೀರಾವರಿ ಯೋಜನೆ ಕಾಲುವೆಯಿಂದ 25 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು….
ಕೊಡವರಿಗೆ ಸೋಷಿಯಲ್ ಕ್ಲಬ್‍ನಿಂದ 1 ಲಕ್ಷ ರೂ ದೇಣಿಗೆ
September 21, 2018ಹೊಳೆನರಸೀಪುರ: ಕೊಡಗು ಪ್ರವಾಹ ಸಂತ್ರಸ್ತರ ನಿಧಿಗೆ ಪಟ್ಟಣದ ಸೋಷಿ ಯಲ್ ಕ್ಲಬ್ ವತಿಯಿಂದ ಒಂದು ಲಕ್ಷ ರೂ. ಚೆಕ್ ಅನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಹಸ್ತಾಂತರಿಸಲಾಯಿತು. ಹಾಸನದ ನಗರದ ಜಿಲ್ಲಾಧಿಕಾರಿ ಕಚೇರಿಗೆ ಕ್ಲಬ್‍ನ ಸದಸ್ಯರು ತೆರಳಿ ಕೊಡಗು ಪ್ರವಾಹ ಸಂತ್ರಸ್ತರಿಗೆ ಸಂಕಷ್ಟಕ್ಕೆ ನೆರವಾ ಗುವ ಉದ್ದೇಶದಿಂದ ದೇಣಿಗೆ ನೀಡಿದರು. ಕ್ಲಬ್‍ನ ಸದಸ್ಯರು ಮಾತನಾಡಿ, ಸೋಷಿ ಯಲ್ ಕ್ಲಬ್ ಸಮಾಜಮುಖಿ ಕಾರ್ಯ ಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಪ್ರತಿ ವರ್ಷ ಸ್ವಾತಂತ್ರ ದಿನಾಚರಣೆ ಸಮಾ ರಂಭದಲ್ಲಿ ಭಾಗವಹಿಸುವ ಪಟ್ಟಣದ…
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ
September 21, 2018ಹಾಸನ: ‘ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆ ನಿಷೇಧಿಸಲಾಗಿದ್ದು, ಇದನ್ನು ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಾಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ನಗರದ ಹೊಸ ಬಸ್ ನಿಲ್ದಾಣದ ವಿವಿಧ ಟೀ ಸ್ಟಾಲ್‍ಗಳು, ಹೋಟೆಲ್‍ಗಳು, ಪ್ರಾವಿಜನ್ ಸ್ಟೋರ್ ಹಾಗೂ ಬೀದಿ ಬದಿ ವ್ಯಾಪಾರಿ ಅಂಗಡಿಗಳಿಗೆ ತಂಬಾಕು ನಿಯಂತ್ರಣ ಕೋಶದ ವತಿಯಿಂದ ದಾಳಿ ನಡೆಸಿ 1,180 ರೂ. ದಂಡ ವಸೂಲಿ ಮಾಡಿದ್ದಾರೆ. ಧೂಮಪಾನ, ಗುಟ್ಕಗಳಂತಹ ದುರಭ್ಯಾಸಗಳಿಗೆ ಬಲಿಯಾದರೆ ಗಂಟಲು ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ…
ಹೊಳೆನರಸೀಪುರದಲ್ಲಿ ವಕೀಲನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ
September 21, 2018ಅರಸೀಕೆರೆ: ಜಿಲ್ಲೆಯ ಹೊಳೆನರಸೀಪುರ ವಕೀಲ ಅವಿನಾಶ್ ಅವರ ಮೇಲೆ ಕೆಎಸ್‍ಆರ್‍ಟಿಸಿ ಬಸ್ ನಿರ್ವಾಹಕ ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ಸಂಬಂಧ ಕೂಡಲೇ ಕ್ರಮವಹಿಸಬೇಕು. ನಿರ್ವಾಹಕನನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಗುರುವಾರ ವಕೀಲರು ಸಭೆ ನಡೆಸಿ ಪ್ರತಿಭಟಿಸಿದರು. ನಗರದ ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಂಘದ ಭವನದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ.ಎಸ್.ಲೋಕೇಶ್ ಕುಮಾರ್ ಅವರು ಮಾತನಾಡಿ, ಹೊಳೆನರಸೀಪುರ ವಕೀಲ ಅವಿನಾಶ್ ಎಂಬುವವರ ಮೇಲೆ ಸರ್ಕಾರಿ ಬಸ್ ನಿರ್ವಾಹಕ ತಮ್ಮಣ್ಣ ಅವರು ಹಲ್ಲೆ ಮಾಡಿದ್ದು ಇದು…
ಶೀಘ್ರವಾಗಿ ಬೆಳೆ ಸಮೀಕ್ಷೆ ಮುಗಿಸಲು ಡಿಸಿ ಸೂಚನೆ
September 21, 2018ಹಾಸನ: ಅತಿವೃಷ್ಟಿ ಹಾಗೂ ಅನಾವೃಷ್ಟಿ ಬೆಳೆ ಪರಿಹಾರ ಹಾಗೂ ವಿಮೆ ಪಾವತಿಗೆ ಪೂರಕವಾಗಿ ಜಿಲ್ಲಾದ್ಯಂತ 10 ದಿನಗಳೊಳಗಾಗಿ ಬೆಳೆ ಸಮೀಕ್ಷೆ ಪ್ರಾರಂಭಿಸಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಂದಾಯ ಕೃಷಿ ಹಾಗೂ ತೋಟಗಾರಿಕಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಹಾಗೂ ತಾಲೂಕು ತಹಶೀಲ್ದಾರ್ ಮತ್ತು ವಿವಿಧ ಇಲಾಖಾ ಅಧಿಕಾರಿಗಳ ವೀಡಿಯೋ ಕಾನ್ಫರೆನ್ಸ್ ನಡೆಸಿದ ಅವರು, ಸರ್ವೇ ಕಾರ್ಯ ಪ್ರಾರಂಭಿಸುವಂತೆ ನಿರ್ದೇಶನ ನೀಡಿದರಲ್ಲದೆ, ಆಯಾ ತಹಶೀ ಲ್ದಾರ್ ತಮ್ಮ ತಾಲೂಕು…
ಸ್ವಚ್ಛತಾ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಿ: ಶಾಸಕ
September 21, 2018ಬೇಲೂರು: ‘ಭಾರತ ಸ್ವಚ್ಛ ದೇಶ ಆಗಬೇಕಾ ದರೆ, ಕೇವಲ ಪೌರಕಾರ್ಮಿಕರ ಶ್ರಮ ಸಾಲದು. ಅದಕ್ಕೆ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳೂ ಕೈ ಜೋಡಿಸ ಬೇಕು. ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕು’ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು. ಪಟ್ಟಣದ ವಿಷ್ಣು ಕಲ್ಯಾಣಿಯಲ್ಲಿ ಗುರುವಾರ ಪುರಸಭೆ ಯಿಂದ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ವಚ್ಛತೆಯನ್ನು ಕೇವಲ ಕಾರ್ಮಿಕರನ್ನು ಬಳಸಿಕೊಂಡು ಮಾಡಿಸಿದರೆ ಸಾಲದು ಅವರೊಂದಿಗೆ ಸಾರ್ವಜನಿಕರು ಜನಪ್ರತಿನಿಧಿಗಳು ಭಾಗವಹಿ ಸಬೇಕು. ಈ ಸಂಬಂಧ ಜಾಗೃತಿ ಮೂಡಿಸಬೇಕು. ಗಾಂಧೀಜಿಯ ಕನಸಿನ ಭಾರತ…
ದೇವರು, ಜನರ ಆಶೀರ್ವಾದದಿಂದ ಸರ್ಕಾರ ಸುಭದ್ರ
September 20, 2018ಹಾಸನ: ದೇವರ ಅನುಗ್ರಹ, ಜನರ ಆಶೀರ್ವಾದದಿಂದ ರಾಜ್ಯ ಸರ್ಕಾರ ಸುಭದ್ರವಾಗಿದ್ದು, ಹೆಚ್.ಡಿ.ಕುಮಾರ ಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದು ವರೆಯಲಿದ್ದಾರೆ ಎಂದು ಲೋಕೋಪ ಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಪುನರುಚ್ಛರಿಸಿದರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುನಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ದಕ್ಷ ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ ಸನ್ಮಾನ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ರೈತರು ಕಳೆದ ನಾಲ್ಕು ವರ್ಷ ದಲ್ಲಿ ಮಳೆ-ಬೆಳೆ…