ಸ್ವಚ್ಛತಾ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಿ: ಶಾಸಕ
ಹಾಸನ

ಸ್ವಚ್ಛತಾ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಿ: ಶಾಸಕ

September 21, 2018

ಬೇಲೂರು:  ‘ಭಾರತ ಸ್ವಚ್ಛ ದೇಶ ಆಗಬೇಕಾ ದರೆ, ಕೇವಲ ಪೌರಕಾರ್ಮಿಕರ ಶ್ರಮ ಸಾಲದು. ಅದಕ್ಕೆ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳೂ ಕೈ ಜೋಡಿಸ ಬೇಕು. ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕು’ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ಪಟ್ಟಣದ ವಿಷ್ಣು ಕಲ್ಯಾಣಿಯಲ್ಲಿ ಗುರುವಾರ ಪುರಸಭೆ ಯಿಂದ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ವಚ್ಛತೆಯನ್ನು ಕೇವಲ ಕಾರ್ಮಿಕರನ್ನು ಬಳಸಿಕೊಂಡು ಮಾಡಿಸಿದರೆ ಸಾಲದು ಅವರೊಂದಿಗೆ ಸಾರ್ವಜನಿಕರು ಜನಪ್ರತಿನಿಧಿಗಳು ಭಾಗವಹಿ ಸಬೇಕು. ಈ ಸಂಬಂಧ ಜಾಗೃತಿ ಮೂಡಿಸಬೇಕು. ಗಾಂಧೀಜಿಯ ಕನಸಿನ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬ ಭಾರತೀಯನ್ನು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಅ. 2ರಂದು ನಡೆಯುವ ಗಾಂಧಿ ಜಯಂತಿ ಕಾರ್ಯ ಕ್ರಮವನ್ನು ವಿಶೇಷವಾಗಿ ಆಚರಿಸುವ ತೀರ್ಮಾನ ಕೈಗೊಂಡಿದ್ದು, ಅದರ ಅಂಗವಾಗಿ ಆ ದಿನ ಹರಿಜನ ಗ್ರಾಮವೊಂದನ್ನು ನಿಗದಿ ಪಡಿಸಿಕೊಂಡು ಸ್ವಚ್ಛತಾ ಕಾರ್ಯ ಕೈಗೊಳ್ಳಲಾ ಗುತ್ತದೆ. ಈ ಸ್ವಚ್ಛತಾ ಕಾರ್ಯದಲ್ಲಿ ತಾಲೂಕಿನ ಎಲ್ಲಾ ಅಧಿಕಾರಿಗಳು ಹಾಗೂ ಎಲ್ಲಾ ಜನಪ್ರತಿನಿಧಿಗಳು, ದಲಿತ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದ ಬಳಿಕ ತಾಲೂಕಿನ ಕುಂದು-ಕೊರತೆ ಹಾಗೂ ಎಸ್‍ಸಿ, ಎಸ್‍ಟಿ ಜನಾಂಗದವರ ಸಭೆ ಕರೆದು ಪ್ರತಿ ಯೊಬ್ಬರ ಸಮಸ್ಯೆ ಆಲಿಸುವ ನಿರ್ಧಾರವನ್ನು ಕೈಗೊಳ್ಳು ತ್ತೇನೆ. ಹೆಚ್ಚಿನ ಕಾರ್ಯಕ್ರಮವಿರುವುದರಿಂದ ಸ್ವಲ್ಪ ತಡವಾಗ ಬಹುದು ಇದಕ್ಕೆ ಎಲ್ಲರು ಸಹಕರಿಸಬೇಕು ಎಂದು ತಿಳಿಸಿದರು.

ಪುರಸಭಾ ಅಧ್ಯಕ್ಷೆ ಭಾರತಿ ಅರುಣ್‍ಕುಮಾರ್ ಮಾತನಾಡಿ, ಮಹಾತ್ಮ ಗಾಂಧೀಜಿ ಕಂಡ ಕನಸಿನಂತೆ ಸಾರ್ವಜನಿಕರು ಸ್ವಚ್ಛತಾ ಕಾರ್ಯದಲ್ಲಿ ಕೈ ಜೋಡಿಸಬೇಕು. ಇಂದಿನಿಂದ ಅ. 2ರವರೆಗೆ ಸತತವಾಗಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಇದು ಕೇವಲ ಸರ್ಕಾರಿ ಕಚೇರಿಗಳಲ್ಲಿ ಕಾರ್ಮಿಕರು ನಿರ್ವಹಿಸುವ ಕೆಲಸವಾಗಬಾರದು, ಪ್ರತಿ ಯೊಬ್ಬ ಭಾರತೀಯರ ಕೆಲಸವಾಗಬೇಕು. ಆ ದೃಷ್ಟಿಯಿಂದ ತಾಲೂಕಿನ ಗ್ರಾಮೀಣ ಮಟ್ಟದ ಜನತೆಗೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಹರೀಶ್, ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಂ.ದಯಾನಂದ, ಪುರಸಭಾ ಸದಸ್ಯ ರಾದ ರವಿ ಅಣ್ಣೇಗೌಡ, ನಾಮಿನಿ, ಪೈಂಟ್ ರವಿ, ಮಾಜಿ ಸದಸ್ಯರಾದ ಜಯಶ್ರೀ ಗುರುರಾಜ, ನಾಗಮ್ಮ, ಮುಖ್ಯಾಧಿ ಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Translate »