ಕೊಡಗು

ಮೈಸೂರಿನಲ್ಲಿ ಕೊಡಗಿನ ಜನತೆಗೆ ಪಾಸ್‍ಪೋರ್ಟ್ ಸೇವೆ
ಕೊಡಗು

ಮೈಸೂರಿನಲ್ಲಿ ಕೊಡಗಿನ ಜನತೆಗೆ ಪಾಸ್‍ಪೋರ್ಟ್ ಸೇವೆ

November 10, 2018

ಮಡಿಕೇರಿ: ಜಿಲ್ಲೆಯ ಪಾಸ್‍ಪೋರ್ಟ್ ಅಪೇಕ್ಷಿತರಿಗೆ ಮೈಸೂರು ಮೇಟಗಳ್ಳಿ ಅಂಚೆ ಕಚೇರಿಯಲ್ಲಿ ತೆರೆಯಲಾಗಿರುವ ಪಾಸ್‍ಪೋರ್ಟ್ ಸೇವಾ ಕೇಂದ್ರದಲ್ಲಿ ಪಾಸ್‍ಪೋರ್ಟ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಕೊಡಗು ಜಿಲ್ಲೆಯ ಮಂದಿ ಪಾಸ್‍ಪೋರ್ಟ್‍ಗಾಗಿ ಮಂಗ ಳೂರು ಅಥವಾ ಬೆಂಗಳೂರಿಗೆ ತೆರಳಬೇಕಾಗಿತ್ತು. ಇದರಿಂದ ತೊಂದರೆಯಾಗುತ್ತಿದ್ದುದನ್ನು ಗಮನಿಸಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ಅವರಿಗೆ ಮೈಸೂರಿನ ಪಾಸ್‍ಪೋರ್ಟ್ ಸೇವಾ ಕೇಂದ್ರದಲ್ಲಿ ಕೊಡಗಿನ ಮಂದಿಗೆ ಅವಕಾಶ ನೀಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಕೇಂದ್ರ ಸಚಿವರು…

ನ.21, ಹರದಾಸ ಅಪ್ಪಚ್ಚಕವಿ 150ನೇ ಜಯಂತಿ ಆಚರಣೆ
ಕೊಡಗು

ನ.21, ಹರದಾಸ ಅಪ್ಪಚ್ಚಕವಿ 150ನೇ ಜಯಂತಿ ಆಚರಣೆ

November 10, 2018

ವಿರಾಜಪೇಟೆ: ಆದಿಕವಿ ಹರ ದಾಸ ಅಪ್ಪನೆರವಂಡ ಅಪ್ಪಚ್ಚಕವಿಯ 150ನೇ ಹುಟ್ಟು ಹಬ್ಬ ಹಾಗೂ 75ನೇ ಪುಣ್ಯ ದಿನಾಚರಣೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಸಂಯುಕ್ತ ಆಶ್ರಯದಲ್ಲಿ ನ.21 ರಂದು ಗೋಣಿಕೊಪ್ಪ ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲಾ ಆವ ರಣದಲ್ಲಿ ತೂಕ್ ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ನಡೆ ಯಲಿದೆ ಎಂದು ಅಪ್ಪಚ್ಚಕವಿ ಪುತ್ಥಳಿ ಸ್ಥಾಪಕ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ತಿಳಿಸಿದ್ದಾರೆ. ವೀರಾಜಪೇಟೆಯಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು,…

ಇಂದು ಟಿಪ್ಪು ಜಯಂತಿ: ಕರಾಳ ದಿನ ಆಚರಣೆಗೆ ಕರೆ
ಕೊಡಗು

ಇಂದು ಟಿಪ್ಪು ಜಯಂತಿ: ಕರಾಳ ದಿನ ಆಚರಣೆಗೆ ಕರೆ

November 10, 2018

ಪೊನ್ನಂಪೇಟೆ:  ಕೊಡವರನ್ನು ನಿರ್ನಾಮ ಮಾಡುವ ಉದ್ದೇಶದಿಂದ ಸಹಸ್ರಾರು ಕೊಡ ವರ ಮಾರಣಹೋಮಕ್ಕೆ ಕಾರಣಕರ್ತ ಹಾಗೂ ಕೊಡಗಿನ ಮಣ್ಣಿಗೆ ದ್ರೋಹ ಬಗೆದ ಟಿಪ್ಪುವನ್ನು ವೈಭವೀಕರಿಸಿ ಆತನ ಜಯಂತಿಯ ಆಚ ರಣೆಗೆ ಮುಂದಾಗಿರುವ ಸರ್ಕಾರವು ಜನರ ಭಾವನೆಯನ್ನು ಅವಮಾನಿಸಿದೆ. ಆದ್ದರಿಂದ ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ವಿರೋ ಧಿಸಿ ನ.10ರಂದು ಕರಾಳ ದಿನವನ್ನಾಗಿ ಆಚ ರಿಸಲು ಯುನೈಟೆಡ್ ಕೊಡವ ಆರ್ಗ ನೈಜೇóಷನ್ (ಯುಕೊ) ಸಂಚಾಲಕ ಕೊಕ್ಕಲೇ ಮಾಡ ಮಂಜುಚಿಣ್ಣಪ್ಪ ಕರೆ ನೀಡಿದ್ದಾರೆ. ಈ ಬಗ್ಗೆ ಪತ್ರಿಕೆ ಹೇಳಿಕೆ ನೀಡಿರುವ ಅವರು,…

ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ
ಕೊಡಗು

ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ

November 10, 2018

ವಿರಾಜಪೇಟೆ: ಸಂವಿಧಾನದ ಆಶ್ರಯದಲ್ಲಿ ನಾವೆಲ್ಲರೂ ಜೀವನ ನಡೆಸ ಬೇಕಾಗಿದೆ. ಪ್ರತಿಯೊಬ್ಬರಿಗೂ ನ್ಯಾಯ ದೊರ ಕಲು ಮನೆ ಮನೆಗೆ ಕಾನೂನು ಅರಿವು ತಲುಪುವಂತಹ ಕಾರ್ಯ ಇಂದು ನಡೆ ಯುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾ ಧೀಶ ಡಿ.ಆರ್.ಜಯಪ್ರಕಾಶ್ ಹೇಳಿದರು. ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘದ ಅಶ್ರಯ ದಲ್ಲಿ ‘ರಾಷ್ಟ್ರೀಯ ಕಾನೂನು ಸೇವೆಗಳ ದಿನಾ ಚರಣೆ’ ಅಂಗವಾಗಿ ನ್ಯಾಯಾಲಯದ ಆವ ರಣದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, 1987…

ಟಿಪ್ಪು ಜಯಂತಿ ರದ್ದು ಮಾಡಲು ಒತ್ತಾಯ
ಕೊಡಗು

ಟಿಪ್ಪು ಜಯಂತಿ ರದ್ದು ಮಾಡಲು ಒತ್ತಾಯ

November 10, 2018

ಮಡಿಕೇರಿ: ಕೊಡಗಿನ ಜನರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಮತ್ತೆ ಟಿಪ್ಪು ಜಯಂತಿ ಆಚರಣೆಯನ್ನು ಬಲವಂತವಾಗಿ ಹೇರಲು ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಇನ್ನಾ ದರು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚೆತ್ತುಕೊಂಡು ಜಿಲ್ಲೆಯಲ್ಲಿ ಜಯಂತಿಯನ್ನು ರದ್ದುಗೊಳಿ ಸಬೇಕೆಂದು ಒತ್ತಾಯಿಸಿದ್ದಾರೆ. ನಗರದಲ್ಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಟಿಪ್ಪು ಜಯಂತಿ ಆಚರಿ ಸುವಂತೆ ಯಾವುದೇ ಮುಸಲ್ಮಾನರು ಬೇಡಿಕೆ ಇಟ್ಟಿಲ್ಲ. ಅಲ್ಲದೆ, ಸುಮಾರು 50 ವರ್ಷ ಗಳ ಕಾಲ ರಾಜ್ಯವನ್ನು ಆಳಿದ ಕಾಂಗ್ರೆಸ್ಸಿಗೂ…

ಕುಶಾಲನಗರದಲ್ಲಿ ಮಾಂಗಲ್ಯ ಸರ ಕಳವು
ಕೊಡಗು

ಕುಶಾಲನಗರದಲ್ಲಿ ಮಾಂಗಲ್ಯ ಸರ ಕಳವು

November 10, 2018

ಕುಶಾಲನಗರ: ಇಲ್ಲಿನ ರಾಧಾಕೃಷ್ಣ ಬಡಾವಣೆಯ ಗೌಡ ಸಮಾಜ ರಸ್ತೆಯಲ್ಲಿರುವ ಶ್ರೀ ಕೋಣಮಾರಿ ಯಮ್ಮ ದೇವಿಯ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಅಪಹರಣ ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ದೇವಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂ ಡಿದ್ದ ಗುಮ್ಮನಕೊಲ್ಲಿ ಗ್ರಾಮದ ಮಹಿಳೆ ಪೂವಮ್ಮ ಮಾಂಗಲ್ಯ ಸರ ಕಳೆದುಕೊಂಡವರು. 25 ಗ್ರಾಂ ತೂಕವುಳ್ಳ ಈ ಸರದ ಬೆಲೆ ರೂ.85 ಸಾವಿರ ಮೌಲ್ಯದ್ದಾಗಿದೆ. ಪೊಲೀಸ್ ಭದ್ರತೆಯ ನಡುವೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಂದ…

ಟಿಪ್ಪು ಜಯಂತಿ ವಿರೋಧಿಸಿ ವಿರಾಜಪೇಟೆಯಲ್ಲಿ ಪ್ರತಿಭಟನೆ
ಕೊಡಗು

ಟಿಪ್ಪು ಜಯಂತಿ ವಿರೋಧಿಸಿ ವಿರಾಜಪೇಟೆಯಲ್ಲಿ ಪ್ರತಿಭಟನೆ

November 9, 2018

ವಿರಾಜಪೇಟೆ:  ಟಿಪ್ಪು ಜಯಂತಿ ಆಚರಣೆಗೆ ಕೊಡಗಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇಂದು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಹಾಗೂ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷದ್ ವತಿಯಿಂದ ವಿರಾಜಪೇಟೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಪ್ಪು ಪಟ್ಟಿ ಧರಿಸಿ ಸಂಘಟನೆಗಳ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಪ್ರತಿಭಟನಾಕಾರ ರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಯಾವುದೇ ಜನಾಂಗದ ವಿರುದ್ಧ ನಾವು ಅಪಪ್ರಚಾರ ಮಾಡಿಲ್ಲ. ಕೊಡಗಿನ ಪುಣ್ಯ ಕ್ಷೇತ್ರಗಳನ್ನು ನಾಶ…

ಇಂದಿನಿಂದ ಕೊಡಗು ಜಿಲ್ಲಾದ್ಯಂತ ನಿಷೇಧಾಜ್ಞೆ
ಕೊಡಗು

ಇಂದಿನಿಂದ ಕೊಡಗು ಜಿಲ್ಲಾದ್ಯಂತ ನಿಷೇಧಾಜ್ಞೆ

November 9, 2018

ಮಡಿಕೇರಿ: ಟಿಪ್ಪು ಜಯಂತಿ (ಶನಿವಾರ) ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೆಕ್ಷನ್ 144, 144(ಎ) ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35ರಡಿ ನವೆಂಬರ್ 9 ರ ಸಂಜೆ 6 ಗಂಟೆಯಿಂದ ನವೆಂಬರ್ 11 ಬೆಳಿಗ್ಗೆ 6 ಗಂಟೆಯವರೆಗೆ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳೂ ಆದ ಜಿಲ್ಲಾ ದಂಡಾಧಿಕಾರಿ ಪಿ.ಐ.ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ. ನಿಷೇಧಿತ ಅವಧಿಯಲ್ಲಿ ಸರ್ಕಾರಿ ಕಾರ್ಯಕ್ರಮ ಮತ್ತು ಪೂರ್ವ ನಿಯೋಜಿತ ನಿಶ್ಚಿತಾರ್ಥ, ಮದುವೆ, ನಾಮಕರಣ,…

ನಾಳೆ ಟಿಪ್ಪು ಜಯಂತಿ; ಜಿಲ್ಲಾದ್ಯಂತ ಕಟ್ಟುನಿಟ್ಟಿನ ಭದ್ರತೆ 200ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಕೆ
ಕೊಡಗು

ನಾಳೆ ಟಿಪ್ಪು ಜಯಂತಿ; ಜಿಲ್ಲಾದ್ಯಂತ ಕಟ್ಟುನಿಟ್ಟಿನ ಭದ್ರತೆ 200ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಕೆ

November 9, 2018

ಮಡಿಕೇರಿ: ಕೊಡಗು ಜಿಲ್ಲಾ ಡಳಿತ ವತಿಯಿಂದ ನ.10ರಂದು ಮಡಿ ಕೇರಿ, ಸೋಮವಾರಪೇಟೆ ಮತ್ತು ವಿರಾಜ ಪೇಟೆಯಲ್ಲಿ ಸರಕಾರದ ಆದೇಶದಂತೆ ಬೆಳಗ್ಗೆ 9 ಗಂಟೆಗೆ ಟಿಪ್ಪು ಜಯಂತಿ ನಡೆಯಲಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಮುಂಜಾಗೃತಾ ಕ್ರಮ ಕೈಗೊಂ ಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾ.ಸುಮನ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ, ಬಂದೋ ಬಸ್ತ್ ಕಾರ್ಯಕ್ಕಾಗಿ ಒಟ್ಟು 1500ಕ್ಕೂ ಹೆಚ್ಚಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋ ಜಿಸಲಾಗುತ್ತದೆ ಎಂದು ತಿಳಿಸಿದರು. ಒಬ್ಬರು…

ಟಿಪ್ಪು ಜಯಂತಿ ವಿರುದ್ಧ ಸೋಮವಾರಪೇಟೆಯಲ್ಲಿ ಪ್ರತಿಭಟನೆ
ಕೊಡಗು

ಟಿಪ್ಪು ಜಯಂತಿ ವಿರುದ್ಧ ಸೋಮವಾರಪೇಟೆಯಲ್ಲಿ ಪ್ರತಿಭಟನೆ

November 9, 2018

ಸೋಮವಾರಪೇಟೆ: ನ.10ರಂದು ನಡೆಯುವ ಟಿಪ್ಪು ಸುಲ್ತಾನ್ ಜಯಂತಿ ಯನ್ನು ವಿರೋಧಿಸಿ, ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್ ಹಾಗು ಶಾಸಕ ಅಪ್ಪಚ್ಚು ರಂಜನ್ ಮುಂದಾಳತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಬಿಜೆಪಿ ಹಾಗೂ ಹಿಂದುಪರ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು. ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಹಾದಿಯುದ್ದಕ್ಕೂ ಸಮ್ಮಿಶ್ರ ಸರ್ಕಾರ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ…

1 106 107 108 109 110 187
Translate »