ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ
ಕೊಡಗು

ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ

November 10, 2018

ವಿರಾಜಪೇಟೆ: ಸಂವಿಧಾನದ ಆಶ್ರಯದಲ್ಲಿ ನಾವೆಲ್ಲರೂ ಜೀವನ ನಡೆಸ ಬೇಕಾಗಿದೆ. ಪ್ರತಿಯೊಬ್ಬರಿಗೂ ನ್ಯಾಯ ದೊರ ಕಲು ಮನೆ ಮನೆಗೆ ಕಾನೂನು ಅರಿವು ತಲುಪುವಂತಹ ಕಾರ್ಯ ಇಂದು ನಡೆ ಯುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾ ಧೀಶ ಡಿ.ಆರ್.ಜಯಪ್ರಕಾಶ್ ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘದ ಅಶ್ರಯ ದಲ್ಲಿ ‘ರಾಷ್ಟ್ರೀಯ ಕಾನೂನು ಸೇವೆಗಳ ದಿನಾ ಚರಣೆ’ ಅಂಗವಾಗಿ ನ್ಯಾಯಾಲಯದ ಆವ ರಣದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, 1987 ರಿಂದಲೂ ಕಾನೂನು ಸೇವಾ ಪ್ರಾಧಿಕಾರ ಪ್ರತಿಯೊಬ್ಬ ವ್ಯಕ್ತಿಗೂ ಕಾನೂನಿನ ಅರಿವು ತಲುಪುವ ಉದ್ದೇಶದಿಂದ ಗ್ರಾಮೀಣ ಪ್ರದೇ ಶಗಳಲ್ಲಿನ ಮನೆ ಬಾಗಿಲಿಗೆ ಕಾನೂನಿನ ಅರಿ ವನ್ನು ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳು ವಂತಾಗಬೇಕು ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಾ ನಂದ ಲಕ್ಷ್ಮಣ ಅಂಚಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಚಿತ ಕಾನೂನಿನ ಅರಿವನ್ನು ಪಡೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಹಕ್ಕು. ರಾಷ್ಟ್ರೀಯ ಕಾನೂನು ಸೇವೆಗಳ ಸಮಿತಿಯಿಂದ ಇನ್ನು 10 ದಿನಗಳ ಕಾಲ ಮನೆ ಮನೆಗೆ ಕಾನೂನು ಅರಿವು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮಹಿಳೆ, ಮಕ್ಕಳು ಸೇರಿ ದಂತೆ ಪ್ರತಿಯೊಬ್ಬರು ಕಾನೂನಿನ ಅರಿ ವನ್ನು ಪಡೆದುಕೊಳ್ಳುವಂತಾಗಬೇಕು. ಹಾಗೂ ನ್ಯಾಯಾಲಯದಲ್ಲಿ ಕೌಟುಂಬಿಕ ವ್ಯಾಜ್ಯ ಗಳಿದ್ದಲ್ಲಿ ರಾಜಿ ಸಂಧಾನದ ಮೂಲಕ ಬಗೆ ಹರಿಸಿಕೊಳ್ಳುವಂತೆ ತಿಳಿಸಿದರು. ವಕೀಲರ ಸಂಘದ ಅಧ್ಯಕ್ಷ ಎಂ.ಎಂ.ನಂಜಪ್ಪ ಮಾತ ನಾಡಿ, ಹಿಂದುಳಿದ ವರ್ಗ, ಕಾರ್ಮಿಕರು, ಪ್ರತಿಯೊಬ್ಬ ಪ್ರಜೆಗಳಿಗೂ ನ್ಯಾಯ ಸಿಗ ಲೆಂದು ಕಾನೂನು ಸೇವಾ ಸಮಿತಿ ಗ್ರಾಮ ಗಳಲ್ಲಿಯು ಕಾನೂನು ಅರಿವು ಕಾರ್ಯ ಕ್ರಮವನ್ನು ನೀಡಲಾಗುತ್ತಿದೆ ಎಂದರು. ನ್ಯಾಯಾಲಯದ ಸಿಬ್ಬಂದಿ ಕೆ.ಬಿ.ಪ್ರದೀಪ್ ಸ್ವಾಗತಿಸಿ, ವಂದಿಸಿದರು.

Translate »