ಕೊಡಗು

ಟಿಪ್ಪು ಜಯಂತಿ; ಪೊಲೀಸರ ಪಥಸಂಚಲನ
ಕೊಡಗು

ಟಿಪ್ಪು ಜಯಂತಿ; ಪೊಲೀಸರ ಪಥಸಂಚಲನ

November 9, 2018

ಗೋಣಿಕೊಪ್ಪಲು:  ಟಿಪ್ಪು ಜಯಂತಿ ಆಚರಣೆ ಹಿನ್ನಲೆ ಪಟ್ಟಣದಲ್ಲಿ ಪೊಲೀಸ್ ತುಕಡಿ ವತಿಯಿಂದ ಪಥ ಸಂಚಲನ ಮೂಲಕ ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿತು. ಪಟ್ಟಣದ ಉಮಾಮಹೇಶ್ವರಿ ದೇವ ಸ್ಥಾನ ಆವರಣದಿಂದ ಮುಖ್ಯರಸ್ತೆಯಲ್ಲಿ ತೆರಳಿ ಹರಿಶ್ಚಂದ್ರಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದವರೆಗೆ ಸುಮಾರು 200 ಸಿಬ್ಬಂದಿ ಪಥಸಂಚಲನ ನಡೆಸಿದರು. ಜಯಂತಿ ಆಚರಣೆ ಹಿನ್ನೆಲೆ, ಸಾರ್ವಜನಿಕರಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸ್ಥಳೀಯ ಪೊಲೀಸ್, ಆರ್‍ಎಎಫ್ ಹಾಗೂ ಡಿಎಆರ್ ಸಿಬ್ಬಂದಿ ಪಾಲ್ಗೊಂಡಿದ್ದರು.

ಬಲವಂತದ ಬಂದ್‍ಗೆ ಮುಂದಾದರೆ ಕಠಿಣ ಕ್ರಮ
ಕೊಡಗು

ಬಲವಂತದ ಬಂದ್‍ಗೆ ಮುಂದಾದರೆ ಕಠಿಣ ಕ್ರಮ

November 9, 2018

ಸೋಮವಾರಪೇಟೆ: ಟಿಪ್ಪು ಜಯಂತಿ ದಿನದಂದು ಬಲವಂತದ ಬಂದ್‍ಗೆ ಮುಂದಾ ದರೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗು ವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಎಚ್ಚರಿಸಿದ್ದಾರೆ.ಪಟ್ಟಣದಲ್ಲಿನ ಬಂದೋಬಸ್ತ್ ಬಗ್ಗೆ ಪರಿಶೀಲನೆ ನಡೆಸಿ, ಪೊಲೀಸ್ ಅಧಿ ಕಾರಿಗಳ ಬಗ್ಗೆ ಅಗತ್ಯ ಸೂಚನೆಗಳನ್ನು ನೀಡಿ, ನಂತರ ಅವರು ಮಾತನಾಡಿದರು. ಜನರು ಸ್ವಯಂಪೇರಿತ ಬಂದ್ ನಡೆಸಿ ದರೆ ಯಾರದ್ದೂ ಅಭ್ಯಂತರವಿಲ್ಲ. ಆದರೆ ಕಿಡಿಕೇಡಿಗಳು ಬಂದ್ ಹೆಸರಿನಲ್ಲಿ ಸಾರ್ವ ಜನಿಕ ಆಸ್ತಿಗೆ ಪಾಸ್ತಿ ಹಾನಿ, ವಾಹನಗಳಿಗೆ ಹಾನಿ ಮಾಡುವ ಕೃತ್ಯಕ್ಕೆ ಕೈಹಾಕಿದರೆ,…

ಮುತ್ತಾರ್ಮುಡಿಯಲ್ಲಿ ಅಕ್ರಮ ಗಾಂಜಾ ಬೆಳೆ; ಆರೋಪಿ ಬಂಧನ
ಕೊಡಗು

ಮುತ್ತಾರ್ಮುಡಿಯಲ್ಲಿ ಅಕ್ರಮ ಗಾಂಜಾ ಬೆಳೆ; ಆರೋಪಿ ಬಂಧನ

November 9, 2018

ಮಡಿಕೇರಿ:  ಮೂರ್ನಾಡು ಸಮೀಪದ ಮುತ್ತಾರ್ಮುಡಿ ಗ್ರಾಮದಲ್ಲಿ ಶುಂಠಿ ಕೃಷಿಯ ನಡುವೆ ಅಕ್ರಮವಾಗಿ ಬೆಳೆಯಲಾಗಿದ್ದ 2 ಗಾಂಜಾ ಗಿಡಗಳನ್ನು ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಪತ್ತೆ ಹಚ್ಚಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಮುತ್ತಾರ್ಮುಡಿ ಗ್ರಾಮದ ನಿವಾಸಿ ಕೆ. ಪ್ರಸನ್ನ ಅಲಿಯಾಸ್ ವಿನು(38) ಬಂಧಿತ ಆರೋಪಿಯಾ ಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪ್ರಸನ್ನ ಶುಂಠಿ ಕೃಷಿಯ ನಡುವೆ ಗಾಂಜಾ ಬೆಳೆಸಿರುವ ಖಚಿತ ಮಾಹಿತಿ ಪಡೆದ ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ದಾಳಿ ನಡೆಸಿ…

ಫುಟ್‍ಬಾಲ್‍ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಕೊಡಗು

ಫುಟ್‍ಬಾಲ್‍ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

November 9, 2018

ಗೋಣಿಕೊಪ್ಪಲು:  ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಕಾಲ್ಚೆಂಡು ಪಂದ್ಯಾಟದಲ್ಲಿ ಪಾಲ್ಗೊಂಡಿದ್ದ ಹಳ್ಳಿಗಟ್ಟು ಕೂರ್ಗ್ ಇನ್ಸಿಟ್ಯೂಟ್ ಆಫ್ ಪಿಯು ಕಾಲೇಜಿನ ಕ್ರೀಡಾಪಟು ಮಾಚಿ ಮಾಡ .ಡಿ. ಸಾಂಚಿತ್ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹರಿಯಾಣದಲ್ಲಿ ನಡೆಯುವ ರಾಷ್ಟ್ರಮಟ್ಟದ ಕಾಲ್ಚೆಂಡು ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ. ಇವರು ಮಾಯಮುಡಿ ಗ್ರಾಮದ ಮಾಚಿಮಾಡ ದೇವಾನಂದ ಬೀನಾ ದಂಪತಿ ಪುತ್ರಿ.

ಮಡಿಕೇರಿಯಲ್ಲಿ ಭೂಕುಸಿತ; ಇಬ್ಬರು ಮಹಿಳೆಯರ ಸಾವು
ಕೊಡಗು

ಮಡಿಕೇರಿಯಲ್ಲಿ ಭೂಕುಸಿತ; ಇಬ್ಬರು ಮಹಿಳೆಯರ ಸಾವು

November 8, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಘಟಿಸಿದ ಪ್ರಕೃತಿ ವಿಕೋಪದ ಕಹಿ ಘಟನೆ ಮರೆಯಾಗುವ ಮುನ್ನವೇ ಭೂ ಕುಸಿತಕ್ಕೆ ಸಿಲುಕಿ ಮತ್ತೆರೆಡು ಜೀವಗಳು ಬಲಿಯಾದ ಘಟನೆ ಮಡಿಕೇರಿ ನಗರದಲ್ಲಿ ಸಂಭವಿಸಿದೆ. ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪಿ.ರಮೇಶ್ ಎಂಬುವರಿಗೆ ಸೇರಿದ ಮನೆಯ ಮುಂಭಾಗ ತಡೆಗೋಡೆ ನಿರ್ಮಿಸಲು ಅಡಿಪಾಯ ತೋಡುತ್ತಿದ್ದ ಸಂದರ್ಭ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವನನ್ನು ಪೊಲೀಸರು ಮತ್ತು ಸಾರ್ವಜನಿಕರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ಹಾಸನದ ಬೇಲೂರು ಸಮೀಪವಿರುವ ಯಲಹಂಕದ ನಿವಾಸಿ ಗೌರಮ್ಮ(45) ಮತ್ತು ಚಿಕ್ಕಮಗಳೂರುವಿನ ಮಾದೇರಹಳ್ಳಿ ನಿವಾಸಿ…

ಟಿಪ್ಪು ಜಯಂತಿ; ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು
ಕೊಡಗು

ಟಿಪ್ಪು ಜಯಂತಿ; ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು

November 8, 2018

ಮಡಿಕೇರಿ:  ಜಿಲ್ಲಾಡಳಿತ ವತಿಯಿಂದ ನವೆಂಬರ್ 10 ರಂದು ನಡೆಯುವ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಶಾಂತಿಯುತವಾಗಿ ಆಚರಿಸುವ ನಿಟ್ಟಿನಲ್ಲಿ ಇದುವರೆಗೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಮಾಹಿತಿ ಪಡೆದರು. ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಟಿಪ್ಪು ಜಯಂತಿ ಆಚರಣೆ ಸಂಬಂಧ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗಳು ಕೈಗೊಂಡಿರುವ ಸೂಕ್ತ ಬಂದೋ ಬಸ್ತ್ ಬಗ್ಗೆ ದಕ್ಷಿಣ ವಲಯ ಐಜಿಪಿ, ಜಿಲ್ಲಾಧಿ ಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಂದ ಮಾಹಿತಿ ಪಡೆದರು….

ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್  ಹೆಸರಲ್ಲಿ ಬೆಂಗಳೂರು ವ್ಯಕ್ತಿಗೆ ಲಕ್ಷ ರೂ. ವಂಚನೆ
ಕೊಡಗು

ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್  ಹೆಸರಲ್ಲಿ ಬೆಂಗಳೂರು ವ್ಯಕ್ತಿಗೆ ಲಕ್ಷ ರೂ. ವಂಚನೆ

November 6, 2018

ಮಡಿಕೇರಿ: ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರ ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬರಿಗೆ 1.01 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಮಡಿಕೇರಿಯಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ವಂಚನೆಗೆ ಒಳಗಾಗಿದ್ದು 3 ಜನರ ತಂಡ ಈ ಕೃತ್ಯದಲ್ಲಿ ಪಾಲ್ಗೊಂಡಿರುವ ಶಂಕೆ ವ್ಯಕ್ತಗೊಂಡಿದೆ. ಈ ಕುರಿತು ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ವಿವರ: ಬೆಂಗಳೂರಿನ ಬನಶಂಕರಿ ನಿವಾಸಿ ಮೂಲತಃ ಮದ್ದೂರು ಗ್ರಾಮದವರಾದ ಲಿಂಗೇಗೌಡ ಎಂಬುವರು ಕುಶಾಲನಗರದಲ್ಲಿ 7 ಎಕರೆ ಭೂಮಿ ಹೊಂದಿದ್ದರು. ಈ ಭೂಮಿಯ…

ವಸತಿ ನಿಲಯ ಅವ್ಯವಸ್ಥೆ ಪರಿಶೀಲನೆ: ಮೇಲ್ವಿಚಾರಕರನ್ನು ವರ್ಗಾಯಿಸುವಂತೆ ಸೂಚನೆ
ಕೊಡಗು

ವಸತಿ ನಿಲಯ ಅವ್ಯವಸ್ಥೆ ಪರಿಶೀಲನೆ: ಮೇಲ್ವಿಚಾರಕರನ್ನು ವರ್ಗಾಯಿಸುವಂತೆ ಸೂಚನೆ

November 6, 2018

ಗೋಣಿಕೊಪ್ಪಲು: ವಿರಾಜಪೇಟೆ ತಾಲೂಕಿನ ಕಾಕೋಟು ಪರಂಬುವಿನಲ್ಲಿರುವ ಬಾಲಕರ ವಸತಿ ನಿಲಯಕ್ಕೆ ಜಿಲ್ಲಾ ಪಂಚಾಯ್ತಿಯ ಸಾಮಾಜಿಕ ನ್ಯಾಯಾ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ.ಬೋಪಣ್ಣ ದಿಢೀರ್ ಭೇಟಿ ನೀಡಿ ವಸತಿ ನಿಲಯದ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿ ದರು. ವಸತಿ ನಿಲಯದ ಮೇಲ್ವಿಚಾರಕ ರಾದ ರೇಣುಕುಮಾರ್ ಸ್ಥಳದಲ್ಲಿ ಇಲ್ಲದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು. ಹಲವಾರು ಸಮಯದಿಂದ ನಿಲಯದಲ್ಲಿ ಮೇಲ್ವಿಚಾರಕರು ಲಭ್ಯವಿಲ್ಲದ ಬಗ್ಗೆ ಸಾರ್ವಜನಿಕರು ಅಧ್ಯಕ್ಷರೊಂದಿಗೆ ನೋವನ್ನು ತೋಡಿಕೊಂಡರು. ಸ್ಥಳಕ್ಕೆ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಪ್ರೀತಿ ಚಿಕ್ಕಮಾದಯ್ಯಯ ವರನ್ನು…

ಕಳಪೆ ಕಾಮಗಾರಿ ವಿರುದ್ಧ ಹೋರಾಟದ ಎಚ್ಚರಿಕೆ
ಕೊಡಗು

ಕಳಪೆ ಕಾಮಗಾರಿ ವಿರುದ್ಧ ಹೋರಾಟದ ಎಚ್ಚರಿಕೆ

November 6, 2018

ಸೋಮವಾರಪೇಟೆ: ತಾಲೂಕಿನ 40 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2017-18ರ ಸಾಲಿನ ಕೊಡಗು ಪ್ಯಾಕೇಜ್ ಕಾಮಗಾರಿಗಳನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಬೇಕು. ತಪ್ಪಿದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಲೋಕೋ ಪಯೋಗಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಆರ್‍ಟಿಐ ಕಾರ್ಯಕರ್ತ ಬಿ.ಪಿ.ಅನಿಲ್ ಕುಮಾರ್ ಎಚ್ಚರಿಸಿದ್ದಾರೆ. ಕೊಡಗು ಪ್ಯಾಕೇಜ್ ಕಾಮಗಾರಿ ಗಳಲ್ಲಿ ಕಳಪೆ ಹಾಗು ಅಕ್ರಮ ನಡೆದಿದೆ ಎಂಬ ದೂರು ನೀಡಿದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವರ ಸೂಚನೆ ಯಂತೆ ಇಲಾಖೆಯ ಅಧೀಕ್ಷಕ ಇಂಜಿನಿ ಯರ್‍ಗಳ ತಂಡ, ತಾಲ್ಲೂಕಿನಲ್ಲಿ ಕೈಗೊಂಡಿ ರುವ ಕಾಮಗಾರಿಗಳ ಪರಿಶೀಲನೆ…

ಪ್ರಕೃತಿ ವಿಕೋಪದ ಎಫೆಕ್ಟ್; ಜೇನು ಹುಳುಗಳಿಗೆ ವೈರಸ್
ಕೊಡಗು

ಪ್ರಕೃತಿ ವಿಕೋಪದ ಎಫೆಕ್ಟ್; ಜೇನು ಹುಳುಗಳಿಗೆ ವೈರಸ್

November 5, 2018

ಮಡಿಕೇರಿ- ಕೊಡಗು ಜಿಲ್ಲೆಯಾದ್ಯಂತ ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರಕೃತಿ ವಿಕೋಪ ಕೇವಲ ಮಾನವನ ಮೇಲೆ ಮಾತ್ರ ಪರಿಣಾಮ ಬೀರದೆ, ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಜೇನು ಹುಳುಗಳ ಕುಟುಂಬಗಳ ಮೇಲೂ ತೀವ್ರ ಅಡ್ಡ ಪರಿಣಾಮವನ್ನು ಹುಟ್ಟು ಹಾಕಿದೆ. ಅತಿವೃಷ್ಟಿಯಿಂದ ಉಂಟಾದ ನೈಸರ್ಗಿಕ ಆಹಾರದ ಕೊರತೆ ಹಾಗೂ ಹೆಚ್ಚಾದ ಚಳಿಯಿಂದಾಗಿ ಕೊಡಗು ಜಿಲ್ಲೆಯಾದ್ಯಂತ ಇರುವ ಜೇನು ಕುಟುಂಬಗಳಲ್ಲಿ ‘ಥಾಯಿಶ್ಯಾಕ್ ಬ್ರೂಡ್’ ಎಂಬ ವೈರಸ್ ಕಾಯಿಲೆ ಉಲ್ಬಣಗೊಂಡಿದೆ. ಹೀಗಾಗಿ ಜಿಲ್ಲೆಯ ಜೇನು ಕೃಷಿಕರು ಆತಂಕದಲ್ಲಿದ್ದು, ವಿಶ್ವ…

1 107 108 109 110 111 187
Translate »