ಟಿಪ್ಪು ಜಯಂತಿ; ಪೊಲೀಸರ ಪಥಸಂಚಲನ
ಕೊಡಗು

ಟಿಪ್ಪು ಜಯಂತಿ; ಪೊಲೀಸರ ಪಥಸಂಚಲನ

November 9, 2018

ಗೋಣಿಕೊಪ್ಪಲು:  ಟಿಪ್ಪು ಜಯಂತಿ ಆಚರಣೆ ಹಿನ್ನಲೆ ಪಟ್ಟಣದಲ್ಲಿ ಪೊಲೀಸ್ ತುಕಡಿ ವತಿಯಿಂದ ಪಥ ಸಂಚಲನ ಮೂಲಕ ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿತು.

ಪಟ್ಟಣದ ಉಮಾಮಹೇಶ್ವರಿ ದೇವ ಸ್ಥಾನ ಆವರಣದಿಂದ ಮುಖ್ಯರಸ್ತೆಯಲ್ಲಿ ತೆರಳಿ ಹರಿಶ್ಚಂದ್ರಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದವರೆಗೆ ಸುಮಾರು 200 ಸಿಬ್ಬಂದಿ ಪಥಸಂಚಲನ ನಡೆಸಿದರು. ಜಯಂತಿ ಆಚರಣೆ ಹಿನ್ನೆಲೆ, ಸಾರ್ವಜನಿಕರಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸ್ಥಳೀಯ ಪೊಲೀಸ್, ಆರ್‍ಎಎಫ್ ಹಾಗೂ ಡಿಎಆರ್ ಸಿಬ್ಬಂದಿ ಪಾಲ್ಗೊಂಡಿದ್ದರು.

Translate »