ಬಲವಂತದ ಬಂದ್‍ಗೆ ಮುಂದಾದರೆ ಕಠಿಣ ಕ್ರಮ
ಕೊಡಗು

ಬಲವಂತದ ಬಂದ್‍ಗೆ ಮುಂದಾದರೆ ಕಠಿಣ ಕ್ರಮ

November 9, 2018

ಸೋಮವಾರಪೇಟೆ: ಟಿಪ್ಪು ಜಯಂತಿ ದಿನದಂದು ಬಲವಂತದ ಬಂದ್‍ಗೆ ಮುಂದಾ ದರೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗು ವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಎಚ್ಚರಿಸಿದ್ದಾರೆ.ಪಟ್ಟಣದಲ್ಲಿನ ಬಂದೋಬಸ್ತ್ ಬಗ್ಗೆ ಪರಿಶೀಲನೆ ನಡೆಸಿ, ಪೊಲೀಸ್ ಅಧಿ ಕಾರಿಗಳ ಬಗ್ಗೆ ಅಗತ್ಯ ಸೂಚನೆಗಳನ್ನು ನೀಡಿ, ನಂತರ ಅವರು ಮಾತನಾಡಿದರು.

ಜನರು ಸ್ವಯಂಪೇರಿತ ಬಂದ್ ನಡೆಸಿ ದರೆ ಯಾರದ್ದೂ ಅಭ್ಯಂತರವಿಲ್ಲ. ಆದರೆ ಕಿಡಿಕೇಡಿಗಳು ಬಂದ್ ಹೆಸರಿನಲ್ಲಿ ಸಾರ್ವ ಜನಿಕ ಆಸ್ತಿಗೆ ಪಾಸ್ತಿ ಹಾನಿ, ವಾಹನಗಳಿಗೆ ಹಾನಿ ಮಾಡುವ ಕೃತ್ಯಕ್ಕೆ ಕೈಹಾಕಿದರೆ, ಪೊಲೀಸ್ ಇಲಾಖೆ ಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೆ ಸರ್ವೋಚ್ಛ ನ್ಯಾಯಾಲಯದಿಂದ ಸುತ್ತೋಲೆ ಬಂದಿದ್ದು, ಅದರಂತೆ ಕ್ರಮ ಜರುಗಿಸಲಾಗುತ್ತದೆ. ಸೂಕ್ತ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಅನೇಕರ ಚಲನವಲನಗಳ ಬಗ್ಗೆ ನಿಗಾ ಇಡಲಾಗಿದೆ ಎಂದರು. ಸೋಮವಾರಪೇಟೆಯಲ್ಲಿ ಒಬ್ಬರು ಎಎಸ್‍ಪಿ, ಡಿವೈಎಸ್‍ಪಿ, ಕೆಎಸ್‍ಆರ್‍ಪಿಯ ನಾಲ್ಕು, ಆರ್‍ಎಎಫ್ ಒಂದು, ಡಿಎಆರ್‍ನ 8 ತುಕಡಿಗಳನ್ನು ನಿಯೋಜಿಸಲಾಗುತ್ತದೆ. 80 ಮಂದಿ ಪೊಲೀಸ್ ಸಿಬ್ಬಂದಿ, 40 ಹೊಂ ಗಾಡ್ರ್ಸ್ ಕರ್ತವ್ಯ ನಿರ್ವಹಿಸಲಿದ್ದಾರೆ. ಸಾರ್ವಜನಿಕರು ಟಿಪ್ಪು ಜಯಂತಿ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದರು.

Translate »