ವಸತಿ ನಿಲಯ ಅವ್ಯವಸ್ಥೆ ಪರಿಶೀಲನೆ: ಮೇಲ್ವಿಚಾರಕರನ್ನು ವರ್ಗಾಯಿಸುವಂತೆ ಸೂಚನೆ
ಕೊಡಗು

ವಸತಿ ನಿಲಯ ಅವ್ಯವಸ್ಥೆ ಪರಿಶೀಲನೆ: ಮೇಲ್ವಿಚಾರಕರನ್ನು ವರ್ಗಾಯಿಸುವಂತೆ ಸೂಚನೆ

November 6, 2018

ಗೋಣಿಕೊಪ್ಪಲು: ವಿರಾಜಪೇಟೆ ತಾಲೂಕಿನ ಕಾಕೋಟು ಪರಂಬುವಿನಲ್ಲಿರುವ ಬಾಲಕರ ವಸತಿ ನಿಲಯಕ್ಕೆ ಜಿಲ್ಲಾ ಪಂಚಾಯ್ತಿಯ ಸಾಮಾಜಿಕ ನ್ಯಾಯಾ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ.ಬೋಪಣ್ಣ ದಿಢೀರ್ ಭೇಟಿ ನೀಡಿ ವಸತಿ ನಿಲಯದ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿ ದರು. ವಸತಿ ನಿಲಯದ ಮೇಲ್ವಿಚಾರಕ ರಾದ ರೇಣುಕುಮಾರ್ ಸ್ಥಳದಲ್ಲಿ ಇಲ್ಲದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು. ಹಲವಾರು ಸಮಯದಿಂದ ನಿಲಯದಲ್ಲಿ ಮೇಲ್ವಿಚಾರಕರು ಲಭ್ಯವಿಲ್ಲದ ಬಗ್ಗೆ ಸಾರ್ವಜನಿಕರು ಅಧ್ಯಕ್ಷರೊಂದಿಗೆ ನೋವನ್ನು ತೋಡಿಕೊಂಡರು.

ಸ್ಥಳಕ್ಕೆ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಪ್ರೀತಿ ಚಿಕ್ಕಮಾದಯ್ಯಯ ವರನ್ನು ಬರಮಾಡಿಕೊಂಡು ನಿಲಯದ ಅವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭ ನಿಲಯದಲ್ಲಿರುವ ವಿದ್ಯಾರ್ಥಿಗಳು ಬೀಡಿ ಸಿಗರೇಟು ಸೇದುವ ಬಗ್ಗೆ ಹಾಗೂ ಸಮೀಪದ ಕೆರೆ, ಹೊಳೆ ಯಲ್ಲಿ ಮೀನು ಹಿಡಿಯುವ ಬಗ್ಗೆ ಸಾರ್ವ ಜನಿಕರು ಅಧ್ಯಕ್ಷರಿಗೆ ಮಾಹಿತಿ ಒದಗಿಸಿ ದರು. ಪ್ರತಿನಿತ್ಯ ಮೇಲ್ವಿಚಾರಕರು ನಿಲಯಕ್ಕೆ ಭೇಟಿ ನೀಡದೇ ಇರುವುದ ರಿಂದ ಹಾಗೂ ನಿಲಯದಲ್ಲಿರದಿರುವುದ ರಿಂದ ಅಡುಗೆಯವರು, ಸಹಾಯಕರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಇದ ರಿಂದ ವಿದ್ಯಾರ್ಥಿಗಳನ್ನು ಕೇಳುವವರೇ ಇಲ್ಲ ದಂತಾಗಿದೆ. ತಕ್ಷಣದಿಂದ ನಿಲಯದಲ್ಲಿರುವ ಮೇಲ್ವಿಚಾರಕರನ್ನು ಹಾಗೂ ಅಡುಗೆಯ ವರನ್ನು ಬದಲಾಯಿಸುವಂತೆ ಅಧ್ಯಕ್ಷ ಸಿ.ಕೆ.ಬೋಪಣ್ಣ, ಜಿಲ್ಲಾ ಸಮಾಜ ಕಲ್ಯಾಣಾ ಧಿಕಾರಿಯವರಿಗೆ ದೂರವಾಣಿ ಮೂಲಕ ಮಾತನಾಡಿದರು. ಈ ಬಗ್ಗೆ ಕೂಡಲೇ ಕ್ರಮ ವಹಿಸುವುದಾಗಿ ಅಧಿಕಾರಿ ಭರವಸೆ ನೀಡಿದರು. ಭೇಟಿಯ ಸಂದರ್ಭ ಕಾಕೋಟು ಪರಂಬು ಕ್ಷೇತ್ರದ ಜಿ.ಪಂ.ಸದಸ್ಯ ಅಚ್ಚಪಂಡ ಮಹೇಶ್, ಅಧ್ಯಕ್ಷರ ಆಪ್ತ ಸಹಾಯಕ ಜಪ್ಪು ಸುಬ್ಬಯ್ಯ ಹಾಜರಿದ್ದರು.

Translate »