ಕೊಡಗು

ಸೋಮವಾರಪೇಟೆ: ಕಾಂಗ್ರೆಸ್ 4, ಜೆಡಿಎಸ್-ಬಿಜೆಪಿಗೆ ತಲಾ 3 ಸ್ಥಾನ
ಕೊಡಗು

ಸೋಮವಾರಪೇಟೆ: ಕಾಂಗ್ರೆಸ್ 4, ಜೆಡಿಎಸ್-ಬಿಜೆಪಿಗೆ ತಲಾ 3 ಸ್ಥಾನ

November 1, 2018

ಸೋಮವಾರಪೇಟೆ:  ಇಲ್ಲಿನ ಪಟ್ಟಣ ಪಂಚಾಯಿತಿಯ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ 22 ವರ್ಷಗಳ ಬಿಜೆಪಿ ಆಡಳಿತಕ್ಕೆ ತೆರೆ ಎಳೆದಿದೆ. ಒಟ್ಟು 11 ವಾರ್ಡ್‍ಗಳ ಪೈಕಿ ಕಾಂಗ್ರೆಸ್ 4, ಜೆಡಿಎಸ್ 3, ಬಿಜೆಪಿ 3 ಹಾಗೂ ಪಕ್ಷೇ ತರ ಅಭ್ಯರ್ಥಿ 1 ಸ್ಥಾನ ಗಳಿಸಿದ್ದಾರೆ. ವಾರ್ಡ್ 1ರಲ್ಲಿ ಕಾಂಗ್ರೆಸ್‍ನ ಡಿ.ವಿ.ಉದಯ ಶಂಕರ್, 2ನೇ ವಾರ್ಡ್‍ನಲ್ಲಿ ಬಿಜೆಪಿಯ ಪಿ.ಕೆ.ಚಂದ್ರು, 3ನೇ ವಾರ್ಡ್‍ನಲ್ಲಿ ಬಿಜೆಪಿಯ ನಳಿನಿ ಗಣೇಶ್, 4ನೇ ವಾರ್ಡ್‍ನಲ್ಲಿ ಜೆಡಿಎಸ್‍ನ ಬಿ.ಸಂಜೀವ,…

ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ನ್ಯಾಯಾಲಯಕ್ಕೆ ಹಾಜರು: ನಕ್ಸಲ್ ಪರ ಘೋಷಣೆ
ಕೊಡಗು

ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ನ್ಯಾಯಾಲಯಕ್ಕೆ ಹಾಜರು: ನಕ್ಸಲ್ ಪರ ಘೋಷಣೆ

October 30, 2018

ಮಡಿಕೇರಿ:  ದಕ್ಷಿಣ ಭಾರತದ ನಕ್ಸಲ್ ಮುಖಂಡ ಎಂಬ ಹಣೆಪಟ್ಟಿಯೊಂದಿಗೆ ನಿಷೇಧಿತ ಮಾವೋವಾದಿ ಸಂಘಟನೆಯಲ್ಲಿ ಗುರುತಿಸಿಕೊಂಡು ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಅಡಿಯಲ್ಲಿ ಬಂಧಿಸಲ್ಪಟ್ಟಿರುವ ನಕ್ಸಲ್‍ವಾದಿ ರೂಪೇಶ್‍ನನ್ನು ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸೋಮವಾರ ಹಾಜರು ಪಡಿಸಲಾಯಿತು. 2010ರಲ್ಲಿ ಭಾಗಮಂಡಲ ಸಮೀಪದ ಮುಂಡ್ರೋಟು ಮತ್ತು 2013ರಲ್ಲಿ ಕಾಲೂರಿನಲ್ಲಿ ನಕ್ಸಲ್ ರೂಪೇಶ್ ಪ್ರತ್ಯಕ್ಷ ಗೊಂಡಿದ್ದ. ಮಾತ್ರವಲ್ಲದೆ ಕಾಲೂರು ನಿವಾಸಿ ಗಣೇಶ್ ಎಂಬವರ ಮನೆಯಿಂದ ದಿನಸಿ ಸಾಮಗ್ರಿಗಳನ್ನು ಬಲವಂತವಾಗಿ ಪಡೆದು ಬೆದರಿಕೆ ಒಡ್ಡಿರುವ ಹಾಗೂ ಶಸ್ತ್ರಸಜ್ಜಿತ 5 ಮಂದಿಯ ತಂಡದೊಂದಿಗೆ…

ರಾಜಾಸೀಟ್‍ನಲ್ಲಿ ಜನವರಿಯಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಡಿಸಿ ಶ್ರೀವಿದ್ಯಾ ಸೂಚನೆ
ಕೊಡಗು

ರಾಜಾಸೀಟ್‍ನಲ್ಲಿ ಜನವರಿಯಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಡಿಸಿ ಶ್ರೀವಿದ್ಯಾ ಸೂಚನೆ

October 30, 2018

ಮಡಿಕೇರಿ: ಜನವರಿ ಮೊದಲ ವಾರದಲ್ಲಿ ರಾಜಸೀಟ್‍ನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸುವಂತೆ ತೋಟಗಾರಿಕೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆ ಯಲ್ಲಿ ಸೋಮವಾರದಲ್ಲಿ ರಾಜಸೀಟ್ ಮತ್ತು ಗದ್ದುಗೆ ಉದ್ಯಾನವನ ಅಭಿವೃದ್ಧಿ ಸಂಬಂಧ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕೊಡಗು ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಫಲಪುಷ್ಟ ಪ್ರದರ್ಶನ ಏರ್ಪಡಿಸುವಂತೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. ರಾಜಸೀಟ್‍ನಲ್ಲಿ ಸಂಗೀತ ಕಾರಂಜಿ ಹಾಗೂ ಪುಟಾಣಿ…

ತಿತಿಮತಿಯಲ್ಲಿ ರೈತ ಸಂಘದ ಶಾಖೆ ಉದ್ಘಾಟನೆ
ಕೊಡಗು

ತಿತಿಮತಿಯಲ್ಲಿ ರೈತ ಸಂಘದ ಶಾಖೆ ಉದ್ಘಾಟನೆ

October 30, 2018

ಗೋಣಿಕೊಪ್ಪಲು: ಸ್ಥಳೀಯ ಸಮಸ್ಯೆಗಳನ್ನು ಹೋರಾಟ ಮಾರ್ಗದ ಮೂಲಕ ಬಗೆ ಹರಿಸಿಕೊಳ್ಳಲು ರೈತ ಸಂಘ ದಲ್ಲಿ ವಿಫುಲ ಅವಕಾಶವಿದೆ ಎಂದು ಕರ್ನಾ ಟಕ ರಾಜ್ಯ ರೈತ ಸಂಘದ ಮೈಸೂರು ಭಾಗದ ರೈತ ಮುಖಂಡ ಅಶ್ವತ್ ನಾರಾಯಣ ಅರಸ್ ಅವರು ಅಭಿಪ್ರಾಯಪಟ್ಟರು. ತಿತಿಮತಿಯ ಕಾವೇರಿ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ರೈತ ಸಂಘಕ್ಕೆ ನೂತನ ಸದಸ್ಯರ ಸೇರ್ಪಡೆ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತ ಸಂಘಕ್ಕೆ ತನ್ನದೇ ಆದ ಇತಿಹಾಸವಿದ್ದು ಆರಂಭದಿಂದಲೂ ಹಲವು ಹೋರಾಟಗಳ ಮೂಲಕವೇ ರೈತರ ಸಮಸ್ಯೆಗಳನ್ನು ಬಗೆ ಹರಿಸಿಕೊಂಡಿದ್ದೇವೆ….

ವಿವಿಗಳನ್ನು ಜಾತಿ ಆಧಾರದಲ್ಲಿ ಪರಿಗಣಿಸುತ್ತಿರುವುದು ಅಪಾಯಕಾರಿ ಮಾಜಿ ಸಚಿವ ಎಂ.ಸಿ. ನಾಣಯ್ಯ ವಿಷಾದ
ಕೊಡಗು

ವಿವಿಗಳನ್ನು ಜಾತಿ ಆಧಾರದಲ್ಲಿ ಪರಿಗಣಿಸುತ್ತಿರುವುದು ಅಪಾಯಕಾರಿ ಮಾಜಿ ಸಚಿವ ಎಂ.ಸಿ. ನಾಣಯ್ಯ ವಿಷಾದ

October 30, 2018

ಮಡಿಕೇರಿ: ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾನಿಲಯ ಗಳನ್ನು ಕೂಡ ಜಾತಿ ಆಧಾರದಲ್ಲಿ ಪರಿಗಣಿಸುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಮಾಜಿ ಕಾನೂನು ಸಚಿವ ಎಂ.ಸಿ.ನಾಣಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ. ನಗರದ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜ್‍ನ ಆವರಣದಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಸಹಕಾರದಿಂದ ನಿರ್ಮಾಣ ಗೊಂಡಿರುವ ನೂತನ ಕೊಠಡಿಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಶ್ವವಿದ್ಯಾನಿಲಯ ಗಳನ್ನು ಜಾತಿ ಆಧಾರದಲ್ಲಿ ಪರಿಗಣಿಸಿದರೆ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ, ಆದ್ದರಿಂದ ಶಿಕ್ಷಣ ಸಂಸ್ಥೆಗಳು ಜಾತಿ ರಹಿತವಾಗಿ ಕಾರ್ಯ ನಿರ್ವಹಿಸುವ…

ಕಳಪೆ ರಸ್ತೆ ಕಾಮಗಾರಿ: ಸಾರ್ವಜನಿಕರಿಂದ ಪ್ರತಿಭಟನೆ
ಕೊಡಗು

ಕಳಪೆ ರಸ್ತೆ ಕಾಮಗಾರಿ: ಸಾರ್ವಜನಿಕರಿಂದ ಪ್ರತಿಭಟನೆ

October 29, 2018

ಕೆ.ಆರ್.ಪೇಟೆ: ಕಳಪೆ ಗುಣಮಟ್ಟದಿಂದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿ ಪಟ್ಟಣದ 8ನೇ ವಾರ್ಡ್‍ನ ನಿವಾಸಿಗಳು ಹಾಗೂ ಸಾರ್ವಜನಿಕರು ಭಾನುವಾರ ಪ್ರತಿಭಟನೆ ನಡೆಸಿದರು.ವಾರ್ಡ್‍ನಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ ಸ್ಥಳದಲ್ಲಿ ಜಮಾಯಿಸಿದ ವಾರ್ಡ್‍ನ ನಿವಾಸಿಗಳು ಪುರಸಭೆ ಇಂಜಿನಿಯರ್‍ಗಳು ಮತ್ತು ಗುತ್ತಿಗೆದಾರರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಬಡಾವಣೆಯ ನಿವಾಸಿ ಕುಮಾರ್ ಮಾತನಾಡಿ, ಡಾಂಬರು ರಸ್ತೆ ಕಳೆಪೆ ಗುಣಮಟ್ಟದಿಂದ ಕೂಡಿದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗೆ ತಿಂಗಳ ಹಿಂದೆ ದೂರು ನೀಡಿದ್ದೇವೆ. ಅವರು ಗುಣಮಟ್ಟದ ಕಾಮಗಾರಿ ನಡೆಸಲು…

ಸ್ಥಳೀಯ ಸಂಸ್ಥೆ ಚುನಾವಣೆ: ಶಾಂತಿಯುತ ಮತದಾನ
ಕೊಡಗು

ಸ್ಥಳೀಯ ಸಂಸ್ಥೆ ಚುನಾವಣೆ: ಶಾಂತಿಯುತ ಮತದಾನ

October 29, 2018

ಮಡಿಕೇರಿ: ಜಿಲ್ಲೆಯ ವಿರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿಗಳಲ್ಲಿ ಭಾನುವಾರ ಶಾಂತಿಯುತ ಮತದಾನ ನಡೆಯಿತು. ಜಿಲ್ಲೆಯ ಮೂರು ಪಟ್ಟಣ ಪಂಚಾಯ್ತಿಗಳ ಬಹು ತೇಕ ಎಲ್ಲಾ ಮತಗಟ್ಟೆಗಳಲ್ಲಿ ಬೆಳಗ್ಗಿನಿಂದಲೇ ಬಿರುಸಿನ ಮತದಾನ ಆರಂಭವಾಯಿತು. ಮತ್ತೆ ಕೆಲವು ಮತಗಟ್ಟೆಗಳಲ್ಲಿ ಮಧ್ಯಾಹ್ನದ ನಂತರ ಮತದಾನ ಚುರುಕು ಪಡೆಯಿತು. ವಿರಾಜಪೇಟೆಯಲ್ಲಿ ಶೇ.68.15, ಕುಶಾಲನಗರ ಶೇ.77, ಸೋಮವಾರಪೇಟೆ 77.94ರಷ್ಟು ಮತ ದಾನವಾದ ಬಗ್ಗೆ ವರದಿಯಾಗಿದೆ. ವಿರಾಜಪೇಟೆ ವರದಿ: ವಿರಾಜಪೇಟೆ ಪಟ್ಟಣ ಪಂಚಾಯಿತಿಯ 18 ವಾರ್ಡ್‍ಗಳಿಗೆ ಇಂದು ಶಾಂತಿ ಯುತ ಮತದಾನ ನಡೆಯಿತು. ಬೆಳಿಗ್ಗೆ…

ಶಂಕಿತ ನಕ್ಸಲ್ ರೂಪೇಶ್‍ನನ್ನು ಸರ್ಪಗಾವಲಲ್ಲಿ ಮಡಿಕೇರಿಗೆ ಕರೆತಂದ ಪೊಲೀಸರು: ಇಂದು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ
ಕೊಡಗು

ಶಂಕಿತ ನಕ್ಸಲ್ ರೂಪೇಶ್‍ನನ್ನು ಸರ್ಪಗಾವಲಲ್ಲಿ ಮಡಿಕೇರಿಗೆ ಕರೆತಂದ ಪೊಲೀಸರು: ಇಂದು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ

October 29, 2018

ಮಡಿಕೇರಿ: ದಕ್ಷಿಣ ಭಾರತದಲ್ಲಿ ನಿಷೇಧಿತ ನಕ್ಸಲ್ ಸಂಘಟನೆಯ ಚಟುವಟಿ ಕೆಯನ್ನು ಸಕ್ರಿಯಗೊಳಿಸುವ ಹೊಣೆ ಹೊತ್ತ ಆರೋಪ ಎದುರಿಸುತ್ತಿರುವ ಶಂಕಿತ ನಕ್ಸಲ್ ಮುಖಂಡ ರೂಪೇಶ್ ಎಂಬಾತನನ್ನು ವಿಚಾರಣೆಗಾಗಿ ಮಡಿಕೇರಿಗೆ ಕರೆತರಲಾಗಿದೆ. ಸೋಮವಾರ (ಇಂದು) ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ರೂಪೇಶ್‍ನ ವಿಚಾರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯಲ್ಲಿ ಭಾನುವಾರ ಸಂಜೆ 5.15ರ ಸಮಯದಲ್ಲಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ರೂಪೇಶನನ್ನು ಬಂಧಿಸಿಡಲಾಯಿತು. ಕೇರಳ ರಾಜ್ಯದ ವೈವೂರು ಕೇಂದ್ರ ಕಾರಾ ಗೃಹದಲ್ಲಿದ್ದ ಶಂಕಿತ ನಕ್ಸಲ್ ರೂಪೇಶ್‍ನನ್ನು ಕೇರಳ ಪೊಲೀಸರು ವಿರಾಜಪೇಟೆಯ…

ಕಾಡುಕುರಿ ಬೇಟೆ; ಆರೋಪಿ ಬಂಧನ
ಕೊಡಗು

ಕಾಡುಕುರಿ ಬೇಟೆ; ಆರೋಪಿ ಬಂಧನ

October 29, 2018

ಮಡಿಕೇರಿ:  ಕಾಫೀ ತೋಟದಲ್ಲಿ ಉರುಳು ಬಳಸಿ ಕಾಡು ಕುರಿ ಯನ್ನು ಭೇಟಿಯಾಡಿದ್ದ ಆರೋಪಿಯನ್ನು ಮಡಿಕೇರಿ ಉಪವಲಯ ಅರಣ್ಯ ಸಿಬ್ಬಂದಿ ಮತ್ತು ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಮೂಲಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂರ್ನಾಡು ಸಮೀಪದ ಕುಂಬಳದಾಳು ನಿವಾಸಿ ಕೆ.ಹೇಮಂತ್ (36) ಬಂಧಿತ ಆರೋಪಿಯಾಗಿದ್ದಾನೆ. ಅ.26ರ ರಾತ್ರಿ ಕುಂಬಳದಾಳುವಿನ ಪಿ.ವಾಸು ಮತ್ತು ದಿನೇಶ್ ಎಂಬುವರಿಗೆ ಸೇರಿದ ಅಡಿಕೆ ಮತ್ತು ಕಾಫಿ ತೋಟದಲ್ಲಿ ಆರೋಪಿ ಹೇಮಂತ್ ಕಾಡು ಪ್ರಾಣಿಯ ಬೇಟೆಗೆಂದು ಉರುಳು ಹಾಕಿದ್ದ. ಈ ಉರುಳಿನಲ್ಲಿ ಕಾಡುಕುರಿ…

ಕೊಡಗಿನ 3 ಪಪಂಗಳಿಗೆ ಇಂದು ಚುನಾವಣೆ
ಕೊಡಗು

ಕೊಡಗಿನ 3 ಪಪಂಗಳಿಗೆ ಇಂದು ಚುನಾವಣೆ

October 28, 2018

ಮಡಿಕೇರಿ:  ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧ ವಿರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ಪಪಂಗಳಿಗೆ ಚುನಾವಣೆಯ ಮತದಾನವು ಅಕ್ಟೋಬರ್ 28 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆ ವರೆಗೆ ನಡೆಯಲಿದೆ. ಮತದಾರರು ಮತದಾನ ಮಾಡುವಾಗ ಭಾರತ ಚುನಾವಣಾ ಆಯೋಗವು ನೀಡಿ ರುವ ಮತದಾರರ ಭಾವಚಿತ್ರದ ಗುರುತಿನ ಚೀಟಿ ಅಥವಾ ರಾಜ್ಯ ಚುನಾವಣಾ ಆಯೋ ಗವು ಆದೇಶಿಸಿರುವ 22 ದಾಖಲೆ ತೋರಿಸಿ ಮತದಾನ ಮಾಡಬಹುದಾಗಿದೆ. ಪಾಸ್‍ಪೋರ್ಟ್, ಡ್ರೈವಿಂಗ್ ಲೈಸನ್ಸ್, ಆದಾಯ ತೆರಿಗೆ ಗುರುತಿನ ಚೀಟಿ(ಪಾನ್), ರಾಜ್ಯ, ಕೇಂದ್ರ…

1 109 110 111 112 113 187
Translate »