ಕೊಡಗಿನ 3 ಪಪಂಗಳಿಗೆ ಇಂದು ಚುನಾವಣೆ
ಕೊಡಗು

ಕೊಡಗಿನ 3 ಪಪಂಗಳಿಗೆ ಇಂದು ಚುನಾವಣೆ

October 28, 2018

ಮಡಿಕೇರಿ:  ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧ ವಿರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ಪಪಂಗಳಿಗೆ ಚುನಾವಣೆಯ ಮತದಾನವು ಅಕ್ಟೋಬರ್ 28 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆ ವರೆಗೆ ನಡೆಯಲಿದೆ. ಮತದಾರರು ಮತದಾನ ಮಾಡುವಾಗ ಭಾರತ ಚುನಾವಣಾ ಆಯೋಗವು ನೀಡಿ ರುವ ಮತದಾರರ ಭಾವಚಿತ್ರದ ಗುರುತಿನ ಚೀಟಿ ಅಥವಾ ರಾಜ್ಯ ಚುನಾವಣಾ ಆಯೋ ಗವು ಆದೇಶಿಸಿರುವ 22 ದಾಖಲೆ ತೋರಿಸಿ ಮತದಾನ ಮಾಡಬಹುದಾಗಿದೆ.

ಪಾಸ್‍ಪೋರ್ಟ್, ಡ್ರೈವಿಂಗ್ ಲೈಸನ್ಸ್, ಆದಾಯ ತೆರಿಗೆ ಗುರುತಿನ ಚೀಟಿ(ಪಾನ್), ರಾಜ್ಯ, ಕೇಂದ್ರ ಸರ್ಕಾರ ಹಾಗೂ ಸಾರ್ವ ಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರ ವಿರುವ ಸೇವಾ ಗುರುತಿನ ಚೀಟಿಗಳು, ಸಾರ್ವಜನಿಕ ವಲಯದ ಬ್ಯಾಂಕ್, ಕಿಸಾನ್ ಮತ್ತು ಅಂಚೆ ಕಚೇರಿ ನೀಡಿರುವ ಭಾವ ಚಿತ್ರವಿರುವ ಪಾಸ್ ಪುಸ್ತಕ, ಮಾನ್ಯತೆ ಪಡೆದ ನೋಂದಾಯಿತ ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೊಟ್ಟಿರುವ ಗುರುತಿನ ಚೀಟಿಗಳು, ಭಾವಚಿತ್ರವಿರುವ ನೋಂದಾಯಿತ ಡೀಡ್‍ಗಳು, ಪಟ್ಟಾಗಳು ಮುಂತಾದ ಆಸ್ತಿ ದಾಖಲೆಗಳು, ಭಾವಚಿತ್ರವಿರುವ ಪಡಿತರ ಚೀಟಿಗಳು ಹಾಗೂ ಸಕ್ಷಮ ಪ್ರಾಧಿ ಕಾರ ನೀಡಿರುವ ಎಸ್‍ಸಿ, ಎಸ್‍ಟಿ, ಒಬಿಸಿ ಭಾವಚಿತ್ರವಿರುವ ಪ್ರಮಾಣ ಪತ್ರಗಳು.

ಸಕ್ಷಮ ಪ್ರಾಧಿಕಾರ ನೀಡಿರುವ ಭಾವ ಚಿತ್ರವಿರುವ ಪಿಂಚಣಿ ಪಾವತಿ ಆದೇಶ ಗಳು ಅಥವಾ ಮಾಜಿ ಯೋಧರ ಪಿಂಚಣಿ ಪುಸ್ತಕ, ಪಿಂಚಣಿ ಸಂದಾಯ ಆದೇಶಗಳಂತಹ ಪಿಂಚಣಿ ದಾಖಲೆಗಳು, ವೃದ್ದಾಪ್ಯ ವೇತನ, ಆದೇಶಗಳು, ವಿಧಾನ ವೇತನ ಆದೇಶಗಳು, ಭಾವಚಿತ್ರವಿರುವ ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿಗಳು, ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಶಸ್ತ್ರ ಪರವಾನಗಿ, ಅಂಗವಿಕಲರಿಗೆ ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿ, ಮಾಜಿ ಯೋಧರ ಭಾವ ಚಿತ್ರವಿರುವ ಸಿ.ಎಸ್.ಡಿ. ಕ್ಯಾಂಟೀನ್ ಕಾರ್ಡ್, ಸಂಧ್ಯಾ ಸುರಕ್ಷಾ ಯೋಜನೆಯ ಭಾವ ಚಿತ್ರವಿರುವ ಗುರುತಿನ ಚೀಟಿ, ಎನ್‍ಆರ್ ಇಜಿ ಯೋಜನೆಯ ಅಡಿಯಲ್ಲಿ ನೀಡಿ ರುವ ಭಾವಚಿತ್ರವಿರುವ ಉದ್ಯೋಗ ಕಾರ್ಡ್, ಭಾವಚಿತ್ರವಿರುವ ಯಶಸ್ವಿನಿ ಕಾರ್ಡ್, ಸ್ಥಳೀಯ ಸಂಸ್ಥೆಗಳು ನೀಡಿರುವ ಭಾವ ಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸರ್ಕಾರಿ ಇಲಾಖೆ ನೀಡಿರುವ ಭಾವ ಚಿತ್ರವಿರುವ ಹಿರಿಯ ನಾಗರಿಕರ ಗುರು ತಿನ ಚೀಟಿ, ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾ ಖೆಯು ನೀಡಿರುವ ಕುಟುಂಬದ ಸದಸ್ಯರ ಹೆಸರು ಮತ್ತು ವಯಸ್ಸು ಮತ್ತಿತರ ಸಂಬಂಧ ಒಳಗೊಂಡ ಭಾವಚಿತ್ರ ಇರುವ ತಾತ್ಕಾಲಿಕ, ಮೂಲ ಪಡಿತರ ಚೀಟಿ.

ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆ ಸ್ಮಾರ್ಟ್ ಕಾರ್ಡ್‍ಗಳು (ಕಾರ್ಮಿಕ ಮಂತ್ರಾಲಯ ಯೋಜನೆ) ಹಾಗೂ ಆಧಾರ್ ಕಾರ್ಡ್ ಯಾವುದಾ ದರೂ ಒಂದನ್ನು, ಅಲ್ಲದೇ ಮೊದಲ ಬಾರಿಗೆ ರಾಜ್ಯ ಚುನಾವಣಾ ಆಯೋಗವು ಮತದಾರರ ಚೀಟಿಯನ್ನು ಬೂತ್ ಮಟ್ಟದ ಅಧಿಕಾರಿಗಳಿಂದ ವಿತರಿಸಲಾಗುತ್ತಿದ್ದು, ಮತದಾರರ ಚೀಟಿಯನ್ನು ಸಹ ಹಾಜರು ಪಡಿಸಿ ಮತದಾನ ಮಾಡಬಹುದಾಗಿದೆ.

ಇಂದು ಪಪಂ ಚುನಾವಣೆ ವ್ಯಾಪಕ ಪೊಲೀಸ್ ಬಿಗಿ ಬಂದೋಬಸ್ತ್

ವಿರಾಜಪೇಟೆ: ಪಪಂನ 18 ವಾರ್ಡ್‍ಗಳಿಗೆ ಅ.28 ರಂದು ನಡೆಯುವ ಚುನಾವಣೆಗೆ ನೀತಿ ಸಂಹಿತೆ ಉಲ್ಲಂಘನೆಯಾಗ ದಂತೆ ಶಾಂತಿಯುತ ಮತದಾನ ನಡೆಯಲು ಹೆಚ್ಚು ಪೊಲೀಸರನ್ನು ನಿಯೋಜಿಸಿ ಮುಕ್ತ ಮತ್ತು ಸ್ವಾತಂತ್ರ ಮತದಾನ ನಡೆಯಲು ವ್ಯವಸ್ಥೆ ಕಲ್ಪಿಸಿ ರುವುದಾಗಿ ಜಿಲ್ಲಾ ಉಪ ವಿಭಾಗಧಿಕಾರಿ ಟಿ.ಜವರೆಗೌಡ ತಿಳಿಸಿದರು.

ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಚುನಾವಣಾ ಮುನ್ನದಿನ ಮತಗಟ್ಟೆಗೆ ಸಂಬಂಧಿಸಿದ ಸಾಮಾಗ್ರಿಗಳನ್ನು ಮತಗಟ್ಟೆ ಅಧಿಕಾರಿಗಳಿಗೆ ವಿತರಿಸುವ ಸಂದರ್ಭ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಚುನಾವಣಾಧಿಕಾರಿ ತಹಶೀಲ್ದಾರ್ ಆರ್.ಗೋವಿಂದ ರಾಜು ಮಾತನಾಡಿ, ಪಟ್ಟಣದ 18 ವಾರ್ಡ್‍ಗಳಿಗೆ 18 ಮತ ಪೆಟ್ಟಿಗೆ ಹಾಗೂ 72 ಅಧಿಕಾರಿಗಳನ್ನು ನೇಮಿಸಲಾಗಿದ್ದು. ಇದಕ್ಕಾಗಿ 10 ಜೀಪುಗಳು, 1 ಮಿನಿ ಬಸ್ ನೀಡಲಾಗಿದೆ. 18 ಮತಗಟ್ಟೆ ಯಲ್ಲಿ 4ನೇ ವಾರ್ಡ್ ತೆಲುಗರ ಬೀದಿ, 6ನೇ ವಾರ್ಡ್ ಹರಿಕೇರಿ, 7ನೇ ವಾರ್ಡ್ ನೆಹರುನಗರ[1] ಸೂಕ್ಷ್ಮ ಮತಗಟ್ಟೆಗಳು ಹಾಗೂ 5ನೇ ವಾರ್ಡ್ ಮೊಗರಗಲ್ಲಿ, ಮತ್ತು 9ನೇ ವಾರ್ಡ್ ಸುಭಾಷ್ ನಗರ ಅತೀ ಸೂಕ್ಷ್ಮ ಹಾಗೂ ಉಳಿದ 13 ಮತಗಟ್ಟೆಗಳು ಸಾಮಾನ್ಯ ಮತ ಗಟ್ಟೆಗಳಾಗಿವೆ ಎಂದರು. ಡಿವೈಎಸ್‍ಪಿ ನಾಗಪ್ಪ ಮಾತನಾಡಿ, ಪಟ್ಟಣ ಪಂಚಾಯಿತಿಯ ಇಂದು ನಡೆಯುವ ಚುನಾವಣೆ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತ ಮತದಾನಕ್ಕಾಗಿ ಬಿಗಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿದ್ದು, 2 ಡಿಆರ್, 5 ಸಬ್‍ಇನ್ಸ್‍ಪೆಕ್ಟರ್, 20 ಎಎಸ್‍ಐ ಮತ್ತು 90 ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಿರುವುದಾಗಿ ತಿಳಿಸಿದರು.

Translate »