ನಾಳೆ ಟಿಪ್ಪು ಜಯಂತಿ; ಜಿಲ್ಲಾದ್ಯಂತ ಕಟ್ಟುನಿಟ್ಟಿನ ಭದ್ರತೆ 200ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಕೆ
ಕೊಡಗು

ನಾಳೆ ಟಿಪ್ಪು ಜಯಂತಿ; ಜಿಲ್ಲಾದ್ಯಂತ ಕಟ್ಟುನಿಟ್ಟಿನ ಭದ್ರತೆ 200ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಕೆ

November 9, 2018

ಮಡಿಕೇರಿ: ಕೊಡಗು ಜಿಲ್ಲಾ ಡಳಿತ ವತಿಯಿಂದ ನ.10ರಂದು ಮಡಿ ಕೇರಿ, ಸೋಮವಾರಪೇಟೆ ಮತ್ತು ವಿರಾಜ ಪೇಟೆಯಲ್ಲಿ ಸರಕಾರದ ಆದೇಶದಂತೆ ಬೆಳಗ್ಗೆ 9 ಗಂಟೆಗೆ ಟಿಪ್ಪು ಜಯಂತಿ ನಡೆಯಲಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಮುಂಜಾಗೃತಾ ಕ್ರಮ ಕೈಗೊಂ ಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾ.ಸುಮನ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ, ಬಂದೋ ಬಸ್ತ್ ಕಾರ್ಯಕ್ಕಾಗಿ ಒಟ್ಟು 1500ಕ್ಕೂ ಹೆಚ್ಚಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋ ಜಿಸಲಾಗುತ್ತದೆ ಎಂದು ತಿಳಿಸಿದರು.

ಒಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾ ಧಿಕಾರಿ, 6 ಡಿವೈಎಸ್‍ಪಿ, 20 ವೃತ್ತ ನಿರೀ ಕ್ಷಕರು, 46 ಉಪ ನಿರೀಕ್ಷಕರು, 104 ಸಹಾ ಯಕ ಉಪ ನಿರೀಕ್ಷಕರು ಸೇರಿದಂತೆ 850 ಪೊಲೀಸ್ ಸಿಬ್ಬಂದಿಗಳು, 21 ಡಿಎಆರ್ ತುಕಡಿ, 10 ಕೆಎಸ್‍ಆರ್‍ಪಿ ತುಕಡಿ ಸಹಿತ 300 ಹೋಂಗಾರ್ಡ್ ಹಾಗೂ ಕ್ಷಿಪ್ರ ಕಾರ್ಯಾ ಚರಣೆ ಪಡೆಯ 1 ಕಂಪೆನಿಯನ್ನು ಭದ್ರತೆ ಗಾಗಿ ನಿಯೋಜಿಸಲಾಗುತ್ತದೆ ಎಂದು ತಿಳಿಸಿದರು.

ಕ್ಷಿಪ್ರ ಕಾರ್ಯಾಚರಣೆ ತಂಡ ಜಿಲ್ಲೆಯ ಪ್ರಮುಖ ಪಟ್ಟಣ ಮತ್ತು ಸೂಕ್ಷ್ಮ ಪ್ರದೇಶ ದಲ್ಲಿ ಪಥ ಸಂಚಲನ ನಡೆಸಿ ಜನರಿಗೆ ಆಭಯ ನೀಡಲಿದೆ ಎಂದು ಡಾ.ಸುಮನ್ ಹೇಳಿದರು. ರಸ್ತೆಗೆ ಮರ ಕಡಿದು ಹಾಕುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ 30 ಮಂದಿ ಅರಣ್ಯ ಸಿಬ್ಬಂದಿಗಳ ತಂಡ ಪೊಲೀಸ್ ಪ್ಯಾಟ್ರೋಲ್ ತಂಡದೊಂದಿಗೆ ಕಾರ್ಯಾ ಚರಣೆ ನಡೆಸಲಿದ್ದು, ಈ ಕಾರ್ಯಕ್ಕೆ ಇಲಾಖೆ ಮತ್ತು ಖಾಸಗಿಯಾಗಿ ಒಟ್ಟು 74 ವಾಹನಗಳನ್ನು ನಿಯೋಜಿಸಲಾಗಿದೆ. ದಿನದ 24 ಗಂಟೆಗಳ ಕಾಲ ಈ ಗಸ್ತು ತಂಡ ಜಿಲ್ಲೆಯಾದ್ಯಂತ ಗಸ್ತು ತಿರುಗಲಿದೆ ಎಂದು ಡಾ.ಸುಮನ ಮಾಹಿತಿ ನೀಡಿದರು.

ಜಿಲ್ಲೆಯ 10 ಚೆಕ್‍ಪೋಸ್ಟ್‍ಗಳಲ್ಲಿ 40 ಸಿಸಿ ಕ್ಯಾಮರಾ ಅಳವಡಿಸಿ ಪ್ರತಿಯೊಂದು ವಾಹನಗಳನ್ನು ತಪಾಸಣೆಗೆ ನಡೆಸಲಾ ಗುತ್ತಿದೆ. ಮಾತ್ರವಲ್ಲದೆ ಸೂಕ್ಷ್ಮ ಪ್ರದೇಶ ಗಳಲ್ಲಿ ಈಗಾಗಲೇ 200 ಸಿಸಿ ಕ್ಯಾಮರಾ ಗಳನ್ನು ಅಳವಡಿಸಲಾಗಿದೆ ಎಂದು ಡಾ. ಸುಮನ ಮಾಹಿತಿ ನೀಡಿದರು.

ಪದ್ಮಾವತಿ ಚಲನಚಿತ್ರ ಬಿಡುಗಡೆ ಬಳಿಕ ಉಂಟಾದ ಗಲಭೆ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಪೊಲೀಸ್ ಇಲಾ ಖೆಗೆ ವಿಶೇಷ ಪರಮಾಧಿಕಾರದ ತೀರ್ಪು ನೀಡಿದೆ. ಈ ತೀರ್ಪಿನ ಪ್ರಕಾರ ಶಾಂತಿ ಕದಡುವ ವ್ಯಕ್ತಿಗಳ ಬಗ್ಗೆ ಮಾಹಿತಿ ದೊರೆ ತರೆ ಅಂತಹವರನ್ನು ಸ್ಥಳದಲ್ಲೇ ಬಂಧಿ ಸುವ ಅಧಿಕಾರವೂ ಇದೆ. ಹೀಗಾಗಿ ಯಾರು ಕೂಡ ಕಾನೂನನ್ನು ಕೈಗೆತ್ತಿಕೊಳ್ಳಬಾರ ದೆಂದು ಡಾ.ಸುಮನ ಮನವಿ ಮಾಡಿದರು. ಇಲ್ಲಿಯವರೆಗೆ ಶಾಂತಿ-ಸುವ್ಯವಸ್ತೆಯ ಹೆಸ ರಲ್ಲಿ ಯಾರನ್ನು ಕೂಡ ಬಂಧಿಸಿಲ್ಲ ಎಂದು ಡಾ.ಸುಮನ ಸ್ಪಷ್ಟನೆ ನೀಡಿದರು.

Translate »