ನಾಳೆಯಿಂದ ವಿವಿಧ ಸ್ಪರ್ಧೆಗಳ ಆಯೋಜನೆ
ಮೈಸೂರು

ನಾಳೆಯಿಂದ ವಿವಿಧ ಸ್ಪರ್ಧೆಗಳ ಆಯೋಜನೆ

November 9, 2018

ಮೈಸೂರು:  ಪ್ರವಾದಿ ಮಹಮದ್ ಅವರ ಜನ್ಮದಿನ ಆಚರಣೆ ಹಿನ್ನೆಲೆಯಲ್ಲಿ ಮೈಸೂರಿನ ರಾಜೀವ್‍ನಗರ ದಲ್ಲಿ ನ.10ರಿಂದ 18ರವರೆಗೆ ಕ್ರಿಕೆಟ್, ನಾಡಕುಸ್ತಿ, ದೇಹದಾಢ್ರ್ಯ ಹಾಗೂ ಮೊಜಹರ್-ಇ-ನಾಥ್ ಪಂದ್ಯಾವಳಿ ಆಯೋಜಿಸ ಲಾಗಿದೆ ಎಂದು ಮಿಲದ್ ಸ್ಪೋಟ್ರ್ಸ್ ಮತ್ತು ವೆಲ್ಫೇರ್ ಕೌನ್ಸಿಲ್ ಸದಸ್ಯ, ವಕೀಲ ಮುದಾಸೀರ್ ಅಲಿಖಾನ್ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಿಲದ್ ಸ್ಪೋಟ್ರ್ಸ್ ಮತ್ತು ವೆಲ್ಫೇರ್ ಕೌನ್ಸಿಲ್ ವತಿಯಿಂದ ಕಳೆದ 19 ವರ್ಷಗಳಿಂದ ಪ್ರವಾದಿ ಮಹಮದ್ ಜನ್ಮದಿನ ಆಚರಣೆ ಹಿನ್ನೆಲೆಯಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳನ್ನು ನಡೆಸುತ್ತಾ ಬರಲಾಗಿದೆ. ಈ ಸಾಲಿ ನಲ್ಲಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ, ನಾಡಕುಸ್ತಿ, ಫುಟ್ ಬಾಲ್ ಪಂದ್ಯಾವಳಿ ಜೊತೆಗೆ ಪ್ರವಾದಿ ಮಹಮದ್ ಗುಣಗಾನ, ಅವರ ತತ್ವ ಸಿದ್ಧಾಂತಗಳು, ಆದರ್ಶಗಳನ್ನು ಸಾರುವ ಮೊಜ ಹರ್-ಇ-ನಾಥ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ನ.10ರಂದು ಮೈಸೂರಿನ ರಾಜೀವ್‍ನಗರ 2 ನೇ ಹಂತದ ನಿಮ್ರಾ ಮೈದಾನದಲ್ಲಿ ಲೆದರ್‍ಬಾಲ್ ಟಿ-20 ಕ್ರಿಕೆಟ್ ಪಂದ್ಯಾವಳಿ, ಟೆನ್ನಿಸ್‍ಬಾಲ್ ಟಿ-10 ಪಂದ್ಯಾವಳಿ ನಡೆಯಲಿದೆ. ರಾಜ್ಯದ 40 ತಂಡಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಅಂದು ಬೆಳಿಗ್ಗೆ 10.30ಕ್ಕೆ ಶಾಸಕ ತನ್ವೀರ್ ಸೇಠ್, ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಲಿ ದ್ದಾರೆ. ನ.11ರಂದು ಮಧ್ಯಾಹ್ನ 3ರಿಂದ ರಾತ್ರಿ 10 ಗಂಟೆಯವರೆಗೆ ರಾಜೀವ್‍ನಗರದ ನಿಮ್ರಾ ಸ್ಟೇಡಿಯಂನಲ್ಲಿ ನಾಡಕುಸ್ತಿ ಪಂದ್ಯಾ ವಳಿ ನಡೆಯಲಿದ್ದು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಇದಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ನ.17ರಂದು ಸಂಜೆ 6ಕ್ಕೆ ಉದಯಗಿರಿಯ ಸಫಾ ಫಂಕ್ಷನ್ ಹಾಲ್‍ನಲ್ಲಿ ಪ್ರವಾದಿಗಳ ಸ್ತುತಿಸುವ ಮೊಜಹರ್-ಇ-ನಾಥ್ ಸ್ಪರ್ಧೆ ಏರ್ಪಡಿಸಲಾಗಿದೆ. ನ.18ರಂದು ರಾಜೀವ್‍ನಗರ 2ನೇ ಹಂತದ ಮೈದಾನದಲ್ಲಿ ಫುಟ್‍ಬಾಲ್ ಸ್ಪರ್ಧೆ ನಡೆಯಲಿದೆ. ಅಂದು ಸಂಜೆ 6ರಿಂದ ರಾತ್ರಿ 11 ಗಂಟೆವರೆಗೆ ರಾಜೀವ್‍ನಗರದ ಆಂಪಿ ಥಿಯೇ ಟರ್‍ನಲ್ಲಿ ದೇಹದಾಢ್ರ್ಯ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ 1.50 ಲಕ್ಷ ರೂ. ನಗದು ಬಹು ಮಾನ ಹಾಗೂ ಟ್ರೋಫಿಯನ್ನು ನ.21ರಂದು ಅಶೋಕ ರಸ್ತೆಯ ಮಿಲಾದ್ ಪಾರ್ಕ್‍ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ವಿಜೇ ತರಿಗೆ ವಿತರಿಸಲಾಗುತ್ತದೆ. ಸುದ್ದಿಗೋಷ್ಠಿ ಯಲ್ಲಿ ಮಿಲದ್ ಸ್ಪೋಟ್ರ್ಸ್ ಮತ್ತು ವೆಲ್ಫೇರ್ ಕೌನ್ಸಿಲ್ ಪದಾಧಿಕಾರಿ ಗಳಾದ ನಸೀರುದ್ದೀನ್ ಬಾಬು, ನಗರಪಾಲಿಕೆ ಸದಸ್ಯ ಅಯ್ಯಾಜ್ ಪಾಶ ಅಲಿಯಾಸ್ ಪಂಡು, ಮುಖಂಡರುಗಳಾದ ಇಲಿಯಾಜ್ ಬೇಗ್, ಅಸ್ಲಾಂ, ಸೈಯ್ಯದ್ ಮುಜಾಹಿದ್ ಹಾಗೂ ಇನ್ನಿತರರು ಇದ್ದರು.

Translate »