ಕೊಡಗು

ವಿರಾಜಪೇಟೆ; 18 ವಾರ್ಡ್‍ಗಳಿಗೆ 65 ನಾಮಪತ್ರ
ಕೊಡಗು

ವಿರಾಜಪೇಟೆ; 18 ವಾರ್ಡ್‍ಗಳಿಗೆ 65 ನಾಮಪತ್ರ

October 17, 2018

ವಿರಾಜಪೇಟೆ: ವಿರಾಜಪೇಟೆ ಪಟ್ಟಣ ಪಂಚಾಯತಿಯ 18 ವಾರ್ಡ್ ಗಳಿಗೆ ಅ.28 ರಂದು ನಡೆಯುವ ಚುನಾ ವಣೆಗೆ ಬಿಜೆಪಿ ಪಕ್ಷದಿಂದ 19, ಕಾಂಗ್ರೆಸ್ ಪಕ್ಷದಿಂದ 14, ಜೆಡಿಎಸ್ ಪಕ್ಷದಿಂದ 4, ಪಕ್ಷೇತರರು 19, ಎಸ್‍ಡಿಪಿಐ 4, ಸಿಪಿಐಎಂ 1, ವೆಲ್ಪರ್ ಪಾರ್ಟಿ 4 ಅಭ್ಯರ್ಥಿಗಳು ಇಂದು ತಾಲೂಕು ಕಛೇರಿಯ ಸಭಾಂಗಣದಲ್ಲಿ ಚುನಾವಣಾ ಅಧಿಕಾರಿ ತಹಶಿಲ್ದಾರ್ ಆರ್. ಗೋವಿಂದರಾಜ್ ಹಾಗೂ ಪಟ್ಟಣ ಪಂಚಾ ಯಿತಿಯಲ್ಲಿ ಚಾಲ್ರ್ಸ್‍ಡಿಸೋಜ ಅವರಿಗೆ ನಾಮಪತ್ರ ಸಲ್ಲಿಸಿದರು. ವಾರ್ಡ್ ನಂ.1, ಚರ್ಚ್ ರಸ್ತೆ, ವಾರ್ಡ್ 2 ದೇವಾಂಗ…

ಕುಶಾಲನಗರ ಪಪಂ ಚುನಾವಣೆ: 16 ವಾರ್ಡ್‍ಗೆ 66 ಅಭ್ಯರ್ಥಿ
ಕೊಡಗು

ಕುಶಾಲನಗರ ಪಪಂ ಚುನಾವಣೆ: 16 ವಾರ್ಡ್‍ಗೆ 66 ಅಭ್ಯರ್ಥಿ

October 17, 2018

ಕುಶಾಲನಗರ: ಕುಶಾಲನಗರ ಪಪಂ 16 ವಾರ್ಡ್‍ಗಳಿಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್‍ಡಿಪಿಐ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 66 ಮಂದಿ ಅಭರ್ಥಿಗಳು 68 ನಾಮ ಪತ್ರಗಳನ್ನು ಮಂಗಳವಾರ ಚುನಾವಣಾ ಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಅ.16 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಯಿಂದ 3 ಗಂಟೆವರೆಗೆ ನಾಮ ಪತ್ರ ಸಲ್ಲಿಸಲು ಏಕ ದಿನವನ್ನು ಮಾತ್ರ ಚುನಾವಣಾ ಆಯೋಗ ನಿಗದಿ ಪಡಿಸಿದ ಹಿನ್ನೆಲೆಯಲ್ಲಿ ಈ ಹಿಂದೆ ಸಲ್ಲಿಸಿದ ಇಬ್ಬರ ನಾಮಪತ್ರ ಹೊರತು ಪಡಿಸಿ ಉಳಿದ 65 ಮಂದಿ ಒಂದೇ ದಿನ…

ಸೋಮವಾರಪೇಟೆ; 11 ವಾರ್ಡ್‍ಗೆ 29 ನಾಮಪತ್ರ ಸಲ್ಲಿಕೆ
ಕೊಡಗು

ಸೋಮವಾರಪೇಟೆ; 11 ವಾರ್ಡ್‍ಗೆ 29 ನಾಮಪತ್ರ ಸಲ್ಲಿಕೆ

October 17, 2018

ಸೋಮವಾರಪೇಟೆ:  ಪಟ್ಟಣ ಪಂಚಾಯಿತಿಯ 11 ವಾರ್ಡ್‍ಗಳಿಗೆ 29 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪಪಂ ಚುನಾವಣೆಯಲ್ಲಿ ಮೈತ್ರಿ ಮಾಡಿ ಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು 6 ಹಾಗೂ ಜೆಡಿಎಸ್ ಅಭ್ಯರ್ಥಿಗಳು 5 ವಾರ್ಡ್‍ಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. 1ನೇ ವಾರ್ಡ್‍ನಿಂದ ಬಿಜೆಪಿಯಿಂದ ಕೆ.ಜಿ. ಸುರೇಶ್, ಕಾಂಗ್ರೆಸ್‍ನಿಂದ ಉದಯ ಶಂಕರ್, ಪಕ್ಷೇತರರಾಗಿ ಬಿ.ಪಿ.ಶಿವಕುಮಾರ್ ಮತ್ತು ಎಸ್.ಮಹೇಶ್, 2ನೇ ವಾರ್ಡ್ ಬಿಜೆಪಿಯಿಂದ ಪಿ.ಕೆ.ಚಂದ್ರು, ಕಾಂಗ್ರೆಸ್ ನಿಂದ ಮಂಜುನಾಥ್, ಪಕ್ಷೇತರರಾಗಿ ರಘು ನಾಥ್ ಅವರುಗಳು ನಾಮಪತ್ರ ಸಲ್ಲಿಸಿದರು. 3ನೇ ವಾರ್ಡ್ ಬಿಜೆಪಿಯಿಂದ…

ನಾಳೆ ತಲಕಾವೇರಿಯಲ್ಲಿ ತೀರ್ಥೋದ್ಭವ
ಕೊಡಗು

ನಾಳೆ ತಲಕಾವೇರಿಯಲ್ಲಿ ತೀರ್ಥೋದ್ಭವ

October 16, 2018

ಮಡಿಕೇರಿ:  ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಕೊಡಗಿನ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅ.17ರ ಸಂಜೆ 6 ಗಂಟೆ 43 ನಿಮಿಷಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಮಾತೆ ಕಾವೇರಿ ತೀರ್ಥ ರೂಪಿಣಿಯಾಗಿ ಆವೀರ್ಭವಿಸಲಿದ್ದಾಳೆ. ಇದಕ್ಕಾಗಿ ಜಿಲ್ಲಾಡಳಿತ ಮತ್ತು ಭಾಗಮಂಡಲ ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಎಲ್ಲಾ ಅಗತ್ಯ ಸಿದ್ದತೆಯನ್ನು ಮಾಡಿಕೊಂಡಿದೆ. ಅ.17ರ ಮುಂಜಾನೆ ಯಿಂದಲೇ ತಲಕಾವೇರಿ ಮತ್ತು ಭಾಗಮಂಡಲ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ನೆರವೇರಲಿದೆ. ಜಿಲ್ಲಾಡಳಿತ, ಪೆÇಲೀಸ್ ಇಲಾಖೆ ಮತ್ತು ದೇವಸ್ಥಾನ ಸಮಿತಿ ಒಟ್ಟಾಗಿ…

ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು
ಕೊಡಗು

ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು

October 16, 2018

ಜಿಪಂ ಸದಸ್ಯ ಮಹೇಶ್ ಗಣಪತಿ ವಿರಾಜಪೇಟೆ:  ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಶ್ರದ್ಧೆ ಮತ್ತು ಛಲದಿಂದ ತಮ್ಮ ಗುರಿಯನ್ನು ಸಾದಿಸುವಂತಾಗಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಸರಕಾರಿ ಪದವಿ ಪೂರ್ವ ಕಾಲೇಜು ವಿರಾಜ ಪೇಟೆ, ಸಮೀಪದ ಆರ್ಜಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣ ದಲ್ಲಿ ಆಯೋಜಿಸಲಾಗಿದ್ದ 2018-19ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ಗಿಡಕ್ಕೆ ನೀರು ಎರೆದು ಕಾರ್ಯಕ್ರಮದ ಅಧ್ಯಕ್ಷತೆ…

ಕುಶಾಲನಗರ ಬಳಿ ಮೀನು ಅಂಗಡಿಗೆ ನುಗ್ಗಿ 1.5 ಲಕ್ಷ ದರೋಡೆ
ಕೊಡಗು

ಕುಶಾಲನಗರ ಬಳಿ ಮೀನು ಅಂಗಡಿಗೆ ನುಗ್ಗಿ 1.5 ಲಕ್ಷ ದರೋಡೆ

October 16, 2018

ಅಂಗಡಿ ಮಾಲೀಕ ಸೇರಿ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಕುಶಾಲನಗರ:  ಮೀನು ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿ 1.5 ಲಕ್ಷ ರೂ. ದರೋಡೆ ಮಾಡಿದ ಘಟನೆ ಇಂದು ಸಂಜೆ ಇಲ್ಲಿಗೆ ಸಮೀಪದ ಗಂಧದ ಕೋಟೆಯಲ್ಲಿ ನಡೆದಿದೆ. ಗಂಧದಕೋಟೆಯ ಮೀನು ಅಂಗಡಿ ಮಾಲೀಕ ದೀರಾರ್ ಮತ್ತು ನೌಕರ ರಜಾಕ್ ಮೇಲೆ ದರೋಡೆ ಕೋರರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಅವರಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಸಂಜೆ 7ಗಂಟೆ ಸುಮಾರಿನಲ್ಲಿ ಮಾದಪಟ್ಟಣದ ಸುಬ್ಬು, ಬೈಲ್‍ಕುಪ್ಪೆಯ ಆನಂದ್ ಸೇರಿದಂತೆ ಐವರ ತಂಡ…

ಕುಶಾಲನಗರ ಪಟ್ಟಣ ಪಂಚಾಯಿತಿ ಚುನಾವಣೆ; ಕಾಂಗ್ರೆಸ್ ಪಟ್ಟಿ ಪ್ರಕಟ
ಕೊಡಗು

ಕುಶಾಲನಗರ ಪಟ್ಟಣ ಪಂಚಾಯಿತಿ ಚುನಾವಣೆ; ಕಾಂಗ್ರೆಸ್ ಪಟ್ಟಿ ಪ್ರಕಟ

October 16, 2018

ಕುಶಾಲನಗರ: ಪಟ್ಟಣ ಪಂಚಾಯಿತಿ ಚುನಾವಣೆಗೆ 16 ವಾರ್ಡ್‍ಗಳಿಂದ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿ.ಪಿ.ಶಶಿಧರ್ ಬಿಡುಗಡೆಗೊಳಿಸಿದರು. ಪಟ್ಟಿ ಈ ಹೀಗಿದೆ: ಪಟ್ಟಿಯಲ್ಲಿ ಹಾಲಿ ಪಪಂ ಇಬ್ಬರು ಸದಸ್ಯರು ಟಿಕೆಟ್ ಪಡೆದವರಾಗಿದ್ದು, ಉಳಿದ ಎಲ್ಲ ಅಭ್ಯರ್ಥಿಗಳು ಹೊಸ ಮುಖಗಳಾಗಿವೆ . 1ನೇ ವಾರ್ಡ್ ಶೇಖ್ ಕಲೀಮುಲ್ಲಾ : 2ನೇ ವಾರ್ಡ್ – ಪುಟ್ಟಲಕ್ಷ್ಮಿ ; 3ನೇ ವಾರ್ಡ್ – ಪ್ರಮೋದ್ ಮುತ್ತಪ್ಪ ; 4ನೇ ವಾರ್ಡ್- ಮೆಹರುನ್ನೀಸಾ :5ನೇ ವಾರ್ಡ್ –…

ಗೋಣಿಕೊಪ್ಪ ದಸರಾ; ವಾಹನ ಸಂಚಾರ ಮಾರ್ಗ ಬದಲಾವಣೆ
ಕೊಡಗು

ಗೋಣಿಕೊಪ್ಪ ದಸರಾ; ವಾಹನ ಸಂಚಾರ ಮಾರ್ಗ ಬದಲಾವಣೆ

October 16, 2018

ಮಡಿಕೇರಿ: ಗೋಣಿಕೊಪ್ಪದಲ್ಲಿ ನಡೆಯಲಿರುವ ದಸರಾ ಮಂಟಪಗಳ ಮೆರವಣಿಗೆ ಸಂದರ್ಭದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಕ್ಟೋಬರ್, 19 ರ ಸಂಜೆ 4 ಗಂಟೆಯಿಂದ ಅಕ್ಟೋಬರ್, 20ರ ಬೆಳಗ್ಗೆ 8 ಗಂಟೆಯವರೆಗೆ ಗೋಣಿಕೊಪ್ಪದಲ್ಲಿ ಬದಲಿ ವಾಹನ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸಲು ಆರಕ್ಷಕ ಅದಿsೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ, ಕೊಡಗು ಜಿಲ್ಲೆ, ಇವರಿಗೆ ಅನುಮತಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಆದೇಶ ಹೊರಡಿಸಿದ್ದಾರೆ. ಬದಲಿ ವಾಹನ ಸಂಚಾರ ವ್ಯವಸ್ಥೆ:…

ಅ.17, ತೀರ್ಥೋದ್ಭವ: ತಲಕಾವೇರಿಯಲ್ಲಿ ಸಕಲ ಸಿದ್ಧತೆ
ಕೊಡಗು

ಅ.17, ತೀರ್ಥೋದ್ಭವ: ತಲಕಾವೇರಿಯಲ್ಲಿ ಸಕಲ ಸಿದ್ಧತೆ

October 15, 2018

ಮಡಿಕೇರಿ: ಪವಿತ್ರ ಕಾವೇರಿ ತೀರ್ಥೋದ್ಬವಕ್ಕೆ ದಿನಗಣನೆ ಆರಂಭವಾಗಿದ್ದು, ತಲಕಾವೇರಿ ಮತ್ತು ಭಾಗಮಂಡಲ ದೇವಾಲಯಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಹಿಟಾಚಿ ಯಂತ್ರ ಬಳಸಿ ಹೂಳು ತೆಗೆಯಲಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ ಮಣ್ಣು ಮಿಶ್ರಿತ ಮರಳು ತುಂಬಿಕೊಂಡಿದ್ದು ನೀರಿನ ಪ್ರಮಾಣ ಕ್ಷೀಣಿಸಲು ಕಾರಣವಾಗಿತ್ತು. ತಲಕಾವೇರಿ ತೀರ್ಥೋದ್ಭವದ ಸಂದರ್ಭ ಸಹಸ್ರ ಸಂಖ್ಯೆಯ ಯಾತ್ರಾರ್ಥಿಗಳು 1 ತಿಂಗಳ ಕಾಲ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಪುಣ್ಯ ಸ್ಥಾನಕ್ಕಾಗಿ ಹೂಳೆತ್ತುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ….

ಶಬರಿಮಲೆಗೆ ಸ್ತ್ರೀಯರ ಪ್ರವೇಶ: ಪಾಲಿಬೆಟ್ಟದಲ್ಲಿ ಬೃಹತ್  ಪ್ರತಿಭಟನಾ ಮೆರವಣಿಗೆ
ಕೊಡಗು

ಶಬರಿಮಲೆಗೆ ಸ್ತ್ರೀಯರ ಪ್ರವೇಶ: ಪಾಲಿಬೆಟ್ಟದಲ್ಲಿ ಬೃಹತ್  ಪ್ರತಿಭಟನಾ ಮೆರವಣಿಗೆ

October 15, 2018

ಸಿದ್ದಾಪುರ: ಶಬರಿಮಲೆ ಪ್ರಕರಣ ಕುರಿತು ಸುಪ್ರೀಂಕೋರ್ಟ್‍ಗೆ ಮರು ಪರಿಶೀಲನೆ ಅರ್ಜಿ ಸಲ್ಲಿಸಲು ವಿಫಲವಾಗಿರುವ ಕೇರಳ ಸರಕಾರದ ವಿರುದ್ಧ ಪಾಲಿಬೆಟ್ಟ ಗ್ರಾಮದಲ್ಲಿ ಅಯ್ಯಪ್ಪ ಭಕ್ತರು ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದರು. ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲಿಬೆಟ್ಟ ಹಾಗೂ ಚನ್ನಯ್ಯನಕೊಟೆ ಗ್ರಾಮದ ನೂರಾರು ಮಹಿಳೆಯರು ಹಾಗೂ ಪುರುಷರು ಮೆರವಣೆಗೆಯಲ್ಲಿ ಭಾಗವಹಿಸಿದ್ದರು. ಪಾಲಿಬೆಟ್ಟ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿ ಭಟನಾ ಸಭೆಯಲ್ಲಿ ಕೇರಳ ರಾಜ್ಯದ ಕಣ್ಣೂರು ಹಿಂದೂ ಐಕ್ಯವೇದಿಕೆಯ ಜಿಲ್ಲಾಧ್ಯಕ್ಷ ಮಣಿ ವರ್ಣನ್ ಮಾತನಾಡಿ, ಶಬರಿಮಲೆಗೆ ಸ್ತ್ರೀಯ…

1 114 115 116 117 118 187
Translate »