ಕೊಡಗು

ಆರ್ಮಿ ಟ್ರೈನಿಂಗ್ ಕಮಾಂಡರ್ ಆಗಿ ಕೊಡಗಿನ ಪಿ.ಸಿ.ತಿಮ್ಮಯ್ಯ
ಕೊಡಗು

ಆರ್ಮಿ ಟ್ರೈನಿಂಗ್ ಕಮಾಂಡರ್ ಆಗಿ ಕೊಡಗಿನ ಪಿ.ಸಿ.ತಿಮ್ಮಯ್ಯ

October 12, 2018

ಮಡಿಕೇರಿ : ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಹುದ್ದೆಯಲ್ಲಿ ಕರ್ತವ್ಯದಲ್ಲಿರುವ ಕೊಡಗಿನ ಅಧಿಕಾರಿಯೊಬ್ಬರು ಇದೀಗ ಆರ್ಮಿ ಟ್ರೈನಿಂಗ್ ಕಮಾಂಡ್‍ನ ಮುಖ್ಯಸ್ಥರಾಗಿ ನಿಯುಕ್ತಿಗೊಳ್ಳುವ ಮೂಲಕ ಕೊಡಗಿನ ಸೇನಾ ಹಿರಿಮೆಗೆ ಮತ್ತೊಂದು ಗರಿ ಮೂಡಿದಂತಾಗಿದೆ. ಲೇ.ಜ. ಪಟ್ಟಚೆರುವಂಡ ಸಿ. ತಮ್ಮಯ್ಯ ಅವರು ಶಿಮ್ಲಾದಲ್ಲಿರುವ ಆರ್ಮಿ ಟ್ರೈನಿಂಗ್ ಕಮಾಂಡ್‍ನ ಕಮಾಂಡರ್ ಆಗಿ ನಿಯೋಜಿತರಾಗಿದ್ದಾರೆ. ಈ ಕೇಂದ್ರ ಭಾರತೀಯ ಸೇನೆಯ ಏಳು ಕಮಾಂಡ್‍ಗಳಲ್ಲಿ ಒಂದಾಗಿದೆ. ಈ ಹಿಂದೆ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿದ್ದ ಬಿದ್ದಂಡ ಸಿ.ನಂದ ಅವರು ಈ ಶ್ರೇಣಿಯ ಅಧಿಕಾರಿಯಾಗಿ…

ಪ್ರವಾಹ ಪೀಡಿತ ಪ್ರದೇಶಗಳ ಬೆಳೆ ಹಾನಿ ರಿಯಾಯಿತಿ ನೀಡಲು ಬ್ಯಾಂಕ್‍ಗಳಿಗೆ ಆರ್‍ಬಿಐ ಮಾರ್ಗಸೂಚಿ
ಕೊಡಗು

ಪ್ರವಾಹ ಪೀಡಿತ ಪ್ರದೇಶಗಳ ಬೆಳೆ ಹಾನಿ ರಿಯಾಯಿತಿ ನೀಡಲು ಬ್ಯಾಂಕ್‍ಗಳಿಗೆ ಆರ್‍ಬಿಐ ಮಾರ್ಗಸೂಚಿ

October 12, 2018

ಮಡಿಕೇರಿ:  ಪ್ರವಾಹ ಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರ ಘೋಷಿಸಿರುವ ತಾಲೂಕುಗಳಲ್ಲಿ ಆಗಿರುವ ಬೆಳೆಹಾನಿಗೆ ಹಲವು ರೀತಿಯ ರಿಯಾಯಿತಿ ನೀಡಲು ಬ್ಯಾಂಕ್‍ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗ ದರ್ಶಿ ಸೂತ್ರದ ಪ್ರಕಾರ ಕಾಫಿ ಬೆಳೆಯುವ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳ ಕಾಫಿ ಬೆಳೆಗಾರರಿಗೂ ಅನೇಕ ರೀತಿಯ ಆರ್ಥಿಕ ಪರಿಹಾರ ದೊರಕಲಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಭೋಜೇಗೌಡ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ನರಸಿಂಹರಾಜಪುರ,…

ಮಡಿಕೇರಿ ದಸರಾ: ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಚಾಲನೆ
ಕೊಡಗು

ಮಡಿಕೇರಿ ದಸರಾ: ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಚಾಲನೆ

October 11, 2018

ಮಡಿಕೇರಿ: ಪೌರಾಣಿಕ ಹಿನ್ನಲೆ ಹೊಂದಿರುವ ಮಡಿಕೇರಿ ದಸರಾಕ್ಕೆ ಶಕ್ತಿ ದೇವತೆಗಳ ಕರಗ ಉತ್ಸವದ ಮೂಲಕ ಸಾಂಪ್ರದಾಯಿಕ ಚಾಲನೆ ದೊರೆತಿದೆ. ಮಡಿಕೇರಿಯ ಪಂಪಿನಕೆರೆಯಲ್ಲಿ 4 ಶಕ್ತಿ ದೇವತೆಗಳಾದ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿಯಮ್ಮ ಮತ್ತು ಶ್ರೀ ಕೋಟೆ ಮಾರಿಯಮ್ಮ ದೇವಿ ಗಳ ಕರಗಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಡಿಕೇರಿ ದಸರಾಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಆ ಬಳಿಕ ಕರಗಗಳನ್ನು ಮೆರವಣಿಗೆ ಮೂಲಕ ಬನ್ನಿ ಮಂಟಪಕ್ಕೆ ಕರೆತಂದು ವಿಶೇಷ ಪೂಜೆ…

ಕಾವೇರಿ ದಸರಾಗೆ ಚಾಲನೆ
ಕೊಡಗು

ಕಾವೇರಿ ದಸರಾಗೆ ಚಾಲನೆ

October 11, 2018

ಗೋಣಿಕೊಪ್ಪಲು:  ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಭವನದ ಎದುರು ಪ್ರತಿಷ್ಠಾಪಿ ಸುವ ದೇವಿ ಮಂಟಪದಲ್ಲಿ ಗಣಪತಿ ಪೂಜೆ ಸಲ್ಲಿ ಸುವ ಮೂಲಕ ಧಾರ್ಮಿಕ ವಿಧಿ ವಿಧಾನಗಳಿಗೆ ಕಾವೇರಿ ದಸರಾಗೆ ಚಾಲನೆ ನೀಡಲಾಯಿತು. ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆಯೊಂದಿಗೆ 40ನೇ ವರ್ಷದ ಗೋಣಿಕೊಪ್ಪ ದಸರಾ ಧಾರ್ಮಿಕ ವಿಧಿ-ವಿಧಾನದಂತೆ ನಡೆಯಿತು. ಬೆಳಗ್ಗೆ 7 ಗಂಟೆಗೆ ಗಣಪತಿ ಪೂಜಾ ಕಾರ್ಯ ಸಲ್ಲಿಸಲಾಯಿತು. ಉತ್ತರ ಭಾರತ ಶೈಲಿಯ ಕಲಾಕೃತಿಯನ್ನು ಪ್ರತಿ ಷ್ಠಾಪಿಸಲಾಗಿದೆ. ಇಲ್ಲಿವರೆಗೆ ಸುಮಾರು ಎರಡೂ ವರೆ ಅಡಿಯ ದೇವಿ ಸ್ಥಾಪಿಸಲಾಗುತ್ತಿತು. ಈ ಬಾರಿ 3…

ನೆರೆಯಲ್ಲಿ ಮರೆಯಾದಮಗಳ ಆತ್ಮಕ್ಕೆ ಮೋಕ್ಷ ಕಾಣಿಸಿದ ಮಾತಾಪಿತೃ!
ಕೊಡಗು

ನೆರೆಯಲ್ಲಿ ಮರೆಯಾದಮಗಳ ಆತ್ಮಕ್ಕೆ ಮೋಕ್ಷ ಕಾಣಿಸಿದ ಮಾತಾಪಿತೃ!

October 11, 2018

ಮಡಿಕೇರಿ:  ಭೂಕುಸಿತ ಮತ್ತು ಪ್ರವಾಹದಿಂದ ಸಂಪೂರ್ಣ ಧ್ವಂಸವಾಗಿರುವ ಜೋಡುಪಾಲ ಗ್ರಾಮ ಬುಧವಾರ ಮನ ಕಲಕುವ ಘಟನೆಗೆ ಸಾಕ್ಷಿಯಾಯಿತು. ಆಗಸ್ಟ್ 16 ಬೆಳಿಗ್ಗೆ 8.30ರ ಸಮಯದಲ್ಲಿ ಭಾರಿ ಕುಸಿದು ನದಿ ಪ್ರವಾಹ ಉಕ್ಕೇರಿ ಭೂ ಸಮಾಧಿಯಾದ ಮಂಜುಳಾ (15) ಮೃತದೇಹ ಇಂದಿಗೂ ಪತ್ತೆಯಾಗಿಲ್ಲ. ಇದರಿಂದ ಮನನೊಂದಿರುವ ಆಕೆಯ ಪೋಷಕರು ಮಂಜುಳಾ ಅವರ ಪ್ರತಿ ರೂಪವನ್ನೇ ತಯಾರಿಸಿ ಅದಕ್ಕೆ ಅಂತ್ಯಕ್ರಿಯೆ ನೆರವೇರಿಸಿ ತಮ್ಮ ವಿಧಿವಿಧಾನ ನೆರವೇರಿಸಿದರು. ಅಡಿಕೆ ಹಾಳೆಯಲ್ಲಿ ಮಂಜುಳಾ ಪ್ರತಿ ರೂಪ ತಯಾರಿಸಿ, ಅದಕ್ಕೆ ರೇಷ್ಮೆ ಸೀರೆ ತೊಡಿಸಿ,…

ಕೊಡಗು ಪುನರ್ ನಿರ್ಮಾಣಕ್ಕೆ 10 ಸಾವಿರ ಕೋಟಿ ವಿಶೇಷ ಪ್ಯಾಕೇಜ್‍ಗೆ ಆಗ್ರಹ
ಕೊಡಗು

ಕೊಡಗು ಪುನರ್ ನಿರ್ಮಾಣಕ್ಕೆ 10 ಸಾವಿರ ಕೋಟಿ ವಿಶೇಷ ಪ್ಯಾಕೇಜ್‍ಗೆ ಆಗ್ರಹ

October 10, 2018

ಮಡಿಕೇರಿ: ಹಿಂದೆಂದೂ ಕೇಳರಿಯದ ಪ್ರಕೃತಿ ವಿಕೋಪಕ್ಕೆ ಕೊಡಗು ಜಿಲ್ಲೆ ತುತ್ತಾಗಿದ್ದು, ಕೇಂದ್ರ ಸರಕಾರ ಜಿಲ್ಲೆಯ ಪುನರ್ ನಿರ್ಮಾಣಕ್ಕೆ 10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಬೇಕೆಂದು ಸಂಸದೀಯ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ ಆಗ್ರಹಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಮತ್ತು ಅದರಿಂದಾದ ನಷ್ಟಗಳ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಹಾರಂಗಿಯಲ್ಲಿ ಸಭೆ ನಡೆಸಿದ ವೀರಪ್ಪ ಮೊಯ್ಲಿ, ಸಮಗ್ರ ವರದಿ ಮತ್ತು ಈಗಾಗಲೇ ನಡೆಸಲಾದ ಪರಿಹಾರ ಕಾರ್ಯಗಳ ಕುರಿತು ಮಾಹಿತಿ ಪಡೆದುಕೊಂಡರು….

ಮಡಿಕೇರಿ ವ್ಯಾಪ್ತಿಯಲ್ಲಿ ಮತ್ತೆ ಮಳೆ
ಕೊಡಗು

ಮಡಿಕೇರಿ ವ್ಯಾಪ್ತಿಯಲ್ಲಿ ಮತ್ತೆ ಮಳೆ

October 10, 2018

ಹಾಲೇರಿ-ಹಟ್ಟಿಹೊಳೆ ಸಂಪರ್ಕ ಕಡಿತ, ಆತಂಕದಲ್ಲಿ ಜನತೆ ಮಡಿಕೇರಿ:  ಮಡಿಕೇರಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮತ್ತೆ ಮಳೆ ಮುಂದುವರಿದಿದೆ. ಸೋಮವಾರ ರಾತ್ರಿ ಮತ್ತು ಮಂಗಳವಾರ ಮಧ್ಯಾಹ್ನ ಗುಡುಗು ಸಿಡಿಲಿನ ಸಹಿತ ಕೆಲಕಾಲ ಧಾರಾಕಾರ ಮಳೆ ಸುರಿದಿದ್ದು, ಜನರ ಮನದಲ್ಲಿ ಮತ್ತೆ ಆತಂಕ ಮೂಡಿದೆ. ಹಾಲೇರಿ ಹಟ್ಟಿಹೊಳೆ ವ್ಯಾಪ್ತಿ ಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ರಸ್ತೆ ಸಂಚಾರ ಸ್ಥಗಿತ ಗೊಂಡಿದೆ. ಇದೀಗ ಮಡಿಕೇರಿ-ಸುಂಟಿಕೊಪ್ಪ-ಮಾದಾಪುರ ಪರ್ಯಾಯ ರಸ್ತೆಯಲ್ಲಿ ವಾಹನÀಗಳು ಸಂಚರಿಸುತ್ತಿವೆ. ಹಾಲೇರಿ ಬಳಿ ಈ ಹಿಂದೆ ದುರಸ್ಥಿ ಪಡಿಸಲಾದ ರಸ್ತೆಯಲ್ಲಿ…

ಅಕ್ರಮ ಶ್ರೀಗಂಧ ಸಾಗಾಟ; ಮಾಲು ಸಮೇತ ಆರೋಪಿಗಳ ಬಂಧನ
ಕೊಡಗು

ಅಕ್ರಮ ಶ್ರೀಗಂಧ ಸಾಗಾಟ; ಮಾಲು ಸಮೇತ ಆರೋಪಿಗಳ ಬಂಧನ

October 10, 2018

ಕುಶಾಲನಗರ: ಉತ್ತರ ಕೊಡಗಿನ ಬಾಣವಾರ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿ ಯಲ್ಲಿ ಕಾನೂನು ಬಾಹಿರವಾಗಿ ಶ್ರೀಗಂಧದ ನಾಟ ಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿ ಗಳನ್ನು ಮಾಲು ಸಮೇತ ಅರಣ್ಯ ಸಿಬ್ಬಂದಿಗಳು ಬಂಧಿಸಿದ್ದರು. ಆರೋಪಿಗಳಿಂದ ರೂ.10 ಲಕ್ಷ ಮೌಲ್ಯದ ಶ್ರೀಗಂಧ ನಾಟ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ತೊರೆನೂರು ಗ್ರಾಪಂ ವ್ಯಾಪ್ತಿಯ ಚಿಕ್ಕ ಅಳು ವಾರದಲ್ಲಿ ಶ್ರೀಗಂಧದ ನಾಟಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಚಿಕ್ಕ ಅಳುವಾರ ಗ್ರಾಮದ ಶಿವರಾಜ್ ಕುಮಾರ್ ಹಾಗೂ…

ಮಲ್ಲಳ್ಳಿ ಜಲಪಾತದಲ್ಲಿ ಕೊಚ್ಚಿ ಹೋದ ಯುವಕ
ಕೊಡಗು

ಮಲ್ಲಳ್ಳಿ ಜಲಪಾತದಲ್ಲಿ ಕೊಚ್ಚಿ ಹೋದ ಯುವಕ

October 10, 2018

ಸೋಮವಾರಪೇಟೆ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮಲ್ಲಳ್ಳಿ ಜಲಪಾತದಲ್ಲಿ ಪ್ರವಾಸಿ ಯುವಕನೋರ್ವ ಕೊಚ್ಚಿ ಹೋಗಿರುವ ಘಟನೆ ಇಂದು ಸಂಜೆ ಸಂಭವಿಸಿದೆ. ನೆರೆಯ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ಅರೆಹಳ್ಳಿ ಗ್ರಾಮ ನಿವಾಸಿ ಜಾವಿದ್ ಎಂಬಾತನೇ ಜಲ ಪಾತದಲ್ಲಿ ಕಣ್ಮರೆಯಾಗಿರುವ ಯುವಕ. ಈತನೊಂದಿಗೆ ಜಲಪಾತಕ್ಕೆ ಇಳಿದಿದ್ದ ಸ್ನೇಹಿತ ಫಾಜಿಲ್ ಕಲ್ಲುಬಂಡೆಯ ಆಶ್ರಯ ಪಡೆದು ಪ್ರಾಣ ಉಳಿಸಿಕೊಂಡಿದ್ದಾನೆ. ಜಾವಿದ್, ಫಾಜಿಲ್ ಸೇರಿದಂತೆ ಇತರ ಮೂವರು ಸ್ನೇಹಿತರು ಇಂದು ಸಂಜೆಯ ವೇಳೆಗೆ ಜಲಪಾತ ವೀಕ್ಷಣೆಗೆ ತೆರಳಿದ್ದರು. ಜಲಪಾತದಲ್ಲಿ ನೀರಿನ ಹರಿವು ಕಡಿಮೆ…

ಸಾಂಪ್ರದಾಯಿಕ, ಸರಳ ದಸರಾಗೆ ನಿರ್ಧಾರ: ಮಡಿಕೇರಿ ದಸರಾಗೆ 50, ಗೋಣಿಕೊಪ್ಪಲು ದಸರಾಗೆ 25 ಲಕ್ಷ ಅನುದಾನ
ಕೊಡಗು

ಸಾಂಪ್ರದಾಯಿಕ, ಸರಳ ದಸರಾಗೆ ನಿರ್ಧಾರ: ಮಡಿಕೇರಿ ದಸರಾಗೆ 50, ಗೋಣಿಕೊಪ್ಪಲು ದಸರಾಗೆ 25 ಲಕ್ಷ ಅನುದಾನ

October 9, 2018

ಮಡಿಕೇರಿ: ಮಡಿಕೇರಿ ದಸರಾಕ್ಕೆ 50 ಲಕ್ಷ ರೂ. ಮತ್ತು ಗೋಣಿಕೊಪ್ಪಲು ದಸರಾಕ್ಕೆ 25 ಲಕ್ಷ ರೂ. ಸೇರಿದಂತೆ ಕೊಡಗು ಜಿಲ್ಲೆಯಲ್ಲಿನ ನಾಡಹಬ್ಬಕ್ಕೆ 75 ಲಕ್ಷ ರೂ.ಗಳನ್ನು ಸರ್ಕಾರ ನೀಡುವುದಾಗಿ ಘೋಷಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ವಿಜೃಂಭಣೆಯ ಬದಲಿಗೆ ಸಾಂಪ್ರದಾಯಿಕವಾಗಿ ದಸರಾ ಆಚರಿಸುವಂತೆ ಸೂಚಿಸಿದ್ದಾರೆ. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಜರುಗಿದ ಕೊಡಗು ಜಿಲ್ಲಾ ದಸರಾ ಆಚರಣೆ ಸಂಬಂ ಧಿತ ಸಭೆಯಲ್ಲಿ ಮಾತನಾಡಿದ ಅವರು, ಪ್ರಕೃತಿ ವಿಕೋಪದಿಂದಾಗಿ ಮಡಿಕೇರಿ ತಾಲೂಕಿನ 7-8 ಪಂಚಾಯತ್‍ಗಳ ಜನ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ವಿಜೃಂಭಣೆ…

1 116 117 118 119 120 187
Translate »