ಮಡಿಕೇರಿ: ಸೋಮವಾರಪೇಟೆ ತಾಲೂಕಿನ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರಗಳಲ್ಲಿ ವಾಸಿಸುವ ಗಿರಿ ಜನ ಕಟುಂಬಗಳಿಗೆ ಅಗತ್ಯ ಮೂಲ ಸೌಕರ್ಯವನ್ನು ಆದಷ್ಟು ಶೀಘ್ರ ಕಲ್ಪಿಸಬೇಕು ಎಂದು ಐಟಿಡಿಪಿ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ನಿರ್ದೇಶನ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರಗಳಲ್ಲಿ ವಾಸವಿರುವ ಗಿರಿಜನರ ಕಟುಂ ಬಗಳಿಗೆ ಒದಗಿಸಲಾಗುತ್ತಿರುವ ಮೂಲ ಸೌಕರ್ಯ ಸಂಬಂಧ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಬಸವನಹಳ್ಳಿಯ 136 ಮತ್ತು ಬ್ಯಾಡಗೊಟ್ಟದ 152 ಮನೆಗಳ…
ಜಿಲ್ಲೆಯಲ್ಲಿ ಮತ್ತೆ ಧಾರಾಕಾರ ಮಳೆ; ಭಯದಲ್ಲಿ ಜನತೆ
October 6, 2018ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಶುಕ್ರವಾರ ಧಾರಾಕಾರ ಮಳೆ ಸುರಿದಿದೆ. ಗುಡುಗು ಸಿಡಿಲಿನೊಂದಿಗೆ ಬಿರುಗಾಳಿ ಸಹಿತ ಸುರಿದ ಮಳೆಗೆ ಕೆಲಕಾಲ ಕೊಡಗು ಜಿಲ್ಲೆ ತತ್ತರಿಸುವಂತಾಯಿತು. ವಿರಾಜಪೇಟೆ, ಸೋಮವಾರಪೇಟೆಯಲ್ಲಿ ಧಾರಾಕಾರ ಮಳೆ ಸುರಿದ ಬಗ್ಗೆ ವರದಿಯಾಗಿದೆ. ವಿರಾಜಪೇಟೆಯಲ್ಲಿ ಮಳೆಯಿಂದಾಗಿ ವಿದ್ಯುತ್ ಪೂರೈಕೆ ಕೆಲ ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಪ್ರಕೃತಿ ವಿಕೋಪದಿಂದ ತತ್ತರಿಸಿ ಸಹಜ ಸ್ಥಿತಿಯತ್ತ ಮರಳುತ್ತಿರುವ 32 ಗ್ರಾಮಗಳ ನಿವಾಸಿಗಳಿಗೆ ಮಹಾಮಳೆ ಮತ್ತೆ ಆತಂಕವನ್ನು ತಂದೊಡ್ಡಿದೆ. ಸಂಪೂರ್ಣ ಧ್ವಂಸ ಗೊಂಡು ಇದೀಗ ದುರಸ್ಥಿ ಪಡಿಸಲಾದ ಗ್ರಾಮೀಣ ಭಾಗದ ರಸ್ತೆಗಳು ಕೆಸರಿನ…
ಸಂತ್ರಸ್ತರ ಪುನರ್ವಸತಿಗೆ ಆಗ್ರಹಿಸಿ ರೈತರ ಪ್ರತಿಭಟನೆ
October 6, 2018ಮಡಿಕೇರಿ: ಮುಂಗಾರಿನ ಭಾರಿ ಮಳೆಯಿಂದ ಜಿಲ್ಲೆಯ ಕೆಲ ಭಾಗಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರಿಗೆ ಪರ್ಯಾಯ ಜಾಗದೊಂದಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿತು. ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್. ನಿರ್ವಾಣಪ್ಪ, ಜಿಲ್ಲಾ ಮುಖಂಡ ಹೆಚ್.ಇ. ಸಣ್ಣಪ್ಪ, ಜಿಲ್ಲಾಧ್ಯಕ್ಷ ಎಸ್.ಆರ್. ಮಂಜು ನಾಥ ಅವರ ನೇತೃತ್ವದಲ್ಲಿ ಘೋಷಣೆಗಳ ಸಹಿತ ಪ್ರತಿಭಟನೆ ನಡೆದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಸಂಘದ ರಾಜ್ಯ…
ಪೊಲೀಸರು ಜನ ಸ್ನೇಹಿಯಾಗಲು ಸಲಹೆ
October 6, 2018ಸೋಮವಾರಪೇಟೆ: ಪೊಲೀಸರು ಜನಸ್ನೇಹಿ ಯಾಗಿ ಕರ್ತವ್ಯ ನಿರ್ವಹಿಸಿದಲ್ಲಿ ಸಾರ್ವಜನಿಕರ ಸಹಕಾರ ಸಿಗುತ್ತದೆ ಎಂದು ಪೊಲೀಸ್ ಉಪ ಅಧೀಕ್ಷಕ ಪೆರುಬಾಯಿ ಕೆ.ಮುರಳೀಧರ್ ಹೇಳಿದರು. ಪಟ್ಟಣದಲ್ಲಿ ಉಪ ಆರಕ್ಷಕ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ಚಾಮರಾಜನಗರಕ್ಕೆ ವರ್ಗಾವಣೆಗೊಂಡಿರುವ ಶಿವಣ್ಣ ಅವರಿಗೆ ಐಗೂರಿನ ಸ್ಪ್ರಿಂಗ್ ವ್ಯಾಲಿ ರೆಸಾರ್ಟ್‍ನಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಟ್ಟಣದ ಠಾಣೆಯಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ ಎರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ್ದ ಶಿವಣ್ಣ ಅವರು 1998ರ ಬ್ಯಾಚ್‍ನ ಅಧಿಕಾರಿಯಾಗಿದ್ದು, ಉತ್ತಮ ಸೇವೆ ಸಲ್ಲಿಸಿದ್ದಾರೆ. ಎಂದೂ ತಮ್ಮ…
ಸುಂಟಿಕೊಪ್ಪದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ
October 6, 2018ಸುಂಟಿಕೊಪ್ಪ: ಶಾಲಾ ವಿದ್ಯಾರ್ಥಿನಿಯೋರ್ವಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ. ಬೆಟ್ಟಗೇರಿಯ ಬಿಜಿಲಿಮಂಟಿ ಕಾಫಿ ತೋಟದಲ್ಲಿ ಕಾರ್ಮಿಕರಾಗಿರುವ ಕಿಟ್ಟು ಹಾಗೂ ನೇತ್ರ ದಂಪತಿಯ ಪುತ್ರಿ ಸಿಂಚನ (13) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಕುಶಾಲನಗರದ ಶಾಲೆಯೊಂದರಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಿಂಚನಾಳನ್ನು ಪೋಷಕರು ಹಾಸ್ಟೆಲ್‍ಗೆ ಸೇರ್ಪಡೆ ಮಾಡಿ ದ್ದರು. ಆದರೆ ಸಿಂಚನಳಿಗೆ ಹಾಸ್ಟೆಲ್‍ನಲ್ಲಿರಲು ಇಷ್ಟವಿರದೇ ಒಲ್ಲದ ಮನಸ್ಸಿ ನಿಂದ ಹಾಸ್ಟೆಲ್‍ನಿಂದ ಶಾಲೆಗೆ ಹೋಗಿ ಬರುತ್ತಿದ್ದಳು ಎನ್ನಲಾಗಿದೆ. ಇತ್ತೀಚೆಗೆ ತೋಟದಲ್ಲಿರುವ ಲೈನ್ ಮನೆಗೆ ಬಂದಿದ್ದ…
ಕೂಲಿ ಕಾರ್ಮಿಕರ ನೆರವಿಗೆ ಆಗ್ರಹಿಸಿ ಪ್ರತಿಭಟನೆ
October 6, 2018ಮಡಿಕೇರಿ: ಹಣಕಾಸು ಸಂಸ್ಥೆಗಳಲ್ಲಿ ಸ್ವ-ಸಹಾಯ ಸಂಘಗಳ ಮೂಲಕ ಕಾರ್ಮಿಕರು ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು ಮತ್ತು ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಕೂಲಿಯನ್ನು ಸೃಷ್ಟಿಸಬೇಕೆಂದು ಒತ್ತಾಯಿಸಿ ರೈತ ಕೃಷಿ ಕಾರ್ಮಿಕರ ಸಂಘಟನೆ ಮತ್ತು ಎಐಯುಟಿಯುಸಿ ಸಂಘಟನೆಗಳು ಜಂಟಿಯಾಗಿ ಜಿಲ್ಲಾಡಳಿತ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದವು. ಎಐಯುಟಿಯುಸಿ ಸಂಚಾಲಕ ಬಿ.ರವಿ, ಆರ್.ಕೆ.ಎಸ್‍ನ ರಾಜ್ಯ ಉಪಾಧ್ಯಕ್ಷ ಎಂ. ಶಶಿಧರ್ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಕಾರ್ಮಿಕರು ಪ್ರತಿಭಟನೆ ನಡೆಸಿ, ಬೇಡಿಕೆಗಳ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಈ ಸಂದರ್ಭ ಎಐಯುಟಿಯುಸಿ ಸಂಚಾಲಕ…
ಎಪಿಎಂಸಿ: ಆನ್‍ಲೈನ್ ವ್ಯವಸ್ಥೆಯಿಂದ ರೈತರಿಗೆ ಉತ್ತಮ ಬೆಲೆ
October 5, 2018ಗೋಣಿಕೊಪ್ಪಲು: ಪ್ರಧಾನಿ ನರೇಂದ್ರ ಮೋದಿ ಚಿಂತನೆಯಂತೆ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಆನ್‍ಲೈನ್ ವ್ಯವಸ್ಥೆ ಯಿಂದಾಗಿ ಮಾರುಕಟ್ಟೆ ಆವರಣ ದಲ್ಲಾಳಿ ಗಳಿಂದ ಮುಕ್ತವಾಗುವಂತಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರಗತಿಪರ ರೈತರು ಹಾಗೂ ವರ್ತಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರಿಗೆ ಮಾರುಕಟ್ಟೆಯಿಂದ ಉತ್ತಮ ಧಾರಣೆ ದೊರಕುವಂತಾಗಬೇಕು, ದಲ್ಲಾಳಿ ಗಳ ಮಧ್ಯಸ್ಥಿಕೆಯಿಂದ ಅನುಭವಿಸುತ್ತಿದ್ದ ನಷ್ಟವನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯವನ್ನು ಮಾದರಿ ಪ್ರಯೋಗವನ್ನಾಗಿಸಿ ಆನ್‍ಲೈನ್ ಮಾರು…
ಪಾಲಿಬೆಟ್ಟ ಗ್ರಾಮ ಪಂಚಾಯಿತಿಗೆ ಪ್ರಶಸ್ತಿಯ ಗರಿ: ಸಿಎಂಯಿಂದ ಗಾಂಧಿ ಗ್ರಾಮ ಪುರಸ್ಕಾರ ಸ್ವೀಕಾರ
October 5, 2018ಸಿದ್ದಾಪುರ: ಜಿಲ್ಲೆಯ ಮಾದರಿ ಗ್ರಾಮ ಪಂಚಾಯಿತಿಯಾಗಿ ಇದುವರೆಗೂ ರಾಷ್ಟ್ರ ರಾಜ್ಯ ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡು ಅತ್ಯುತ್ತಮ ಸಾಧನೆ ಮಾಡಿರುವ ಪಾಲಿಬೆಟ್ಟ ಗ್ರಾಮ ಪಂಚಾಯಿತಿಗೆ ಮೂರನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಲಭಿಸಿದೆ. ಗಾಂಧೀಜಿಯವರ 150ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಗಾಂಧಿ ಗ್ರಾಮ ಪುರಸ್ಕಾರ ಕಾರ್ಯಕ್ರಮ ಬೆಂಗಳೂರು ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ, ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅವರಿಗೆ ಪ್ರಶಸ್ತಿ ಪ್ರದಾನ…
ವಿರಾಜಪೇಟೆ ದಂತ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪ್ರದಾನ
October 5, 2018ವಿರಾಜಪೇಟೆ: ಕೊಡಗು ದಂತ ಕಾಲೇಜಿನಲ್ಲಿ ದಂತ ಆರೋಗ್ಯ ಕ್ಷೇತ್ರದ 9 ವಿಭಾಗಗಳಲ್ಲಿಯು ಸ್ನಾತಕೋತ್ತರ ತರ ಬೇತಿ ಲಭ್ಯವಿದ್ದು, ಈಗಾಗಲೇ ಸಂಸ್ಥೆಯು ತಜ್ಞ ದಂತ ವೈದ್ಯರುಗಳನ್ನು, ಉಪನ್ಯಾಸ ಕರುಗಳನ್ನು ವಿಜ್ಞಾನಿಗಳನ್ನು ವಿಶ್ವಕ್ಕೆ ಕೊಡು ಗೆಯಾಗಿ ನೀಡಿದೆ. ದಂತ ವೈದ್ಯಕೀಯ ಕಾಲೇಜಿಗೆ ಹಿರಿಯ ಪ್ರಾಧ್ಯಾಪಕರುಗಳು ಭೇಟಿ ನೀಡುತ್ತಿರುವುದು ವಿದ್ಯಾ ಸಂಸ್ಥೆಗೆ ಮೆರುಗು ಬಂದಂತಾಗಿದೆ ಎಂದು ದಂತ ಕಾಲೇಜಿನ ಡೀನ್ ಪ್ರೊ.ಡಾ. ಸುನಿಲ್ ಮುದ್ದಯ್ಯ ಹೇಳಿದರು. ವಿರಾಜಪೇಟೆ ಬಳಿಯ ಕೊಡಗು ದಂತ ವೈದ್ಯಕೀಯ ಕಾಲೇಜಿನ 2018ರ ಪದವಿ ಪ್ರದಾನ ಸಮಾರಂಭದಲ್ಲಿ ಅವರು…
ಶೀಘ್ರ ಕೊಡಗು ಪುನರ್ ನಿರ್ಮಾಣಕ್ಕೆ ನಾಗರಿಕ ವೇದಿಕೆ ಮನವಿ
October 5, 2018ಪೊನ್ನಂಪೇಟೆ: ಕೊಡಗಿನಲ್ಲಿ ಸಂಭ ವಿಸಿದ ಪ್ರಕೃತಿ ವಿಕೋಪದಿಂದ ಅಪಾರ ನಷ್ಟ ಅನುಭವಿಸಿ ನೆಲೆ ಕಳೆದುಕೊಂಡು ನಿರಾಶ್ರಿತಗೊಂಡವರಿಗೆ ಸೂಕ್ತ ಪರಿಹಾರ, ಮನೆ ನಿರ್ಮಾಣ ಹಾಗೂ ಜಮೀನು ಮಂಜೂರಾತಿ ಸೇರಿದಂತೆ ಅಗತ್ಯ ಸೌಲ ಭ್ಯಗಳನ್ನು ಶೀಘ್ರ ಕಲ್ಪಿಸುವಂತೆ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಇಲ್ಲಿನ ನಾಗರಿಕ ವೇದಿಕೆ ಹಾಗೂ ಪೊನ್ನಂ ಪೇಟೆ ತಾಲೂಕು ಪುನರ್ರಚನಾ ಹೋರಾಟ ಸಮಿತಿ ಪತ್ರ ಬರೆದು ಮನವಿ ಮಾಡಿದೆ. ಅನಿರೀಕ್ಷಿತ ಪ್ರಾಕೃತಿಕ ವಿಕೋಪಕ್ಕೆ ಮಡಿ ಕೇರಿ ತಾಲೂಕಿನ ಸುಮಾರು 15 ಗ್ರಾಮ ಗಳು, ಸೋಮವಾರಪೇಟೆ ತಾಲೂಕಿನ…










