ಕೊಡಗು

ಶಬರಿಮಲೆಗೆ ಸ್ತ್ರೀಯರ ಪ್ರವೇಶ; ಸಿದ್ದಾಪುರದಲ್ಲಿ ಪ್ರತಿಭಟನೆ
ಕೊಡಗು

ಶಬರಿಮಲೆಗೆ ಸ್ತ್ರೀಯರ ಪ್ರವೇಶ; ಸಿದ್ದಾಪುರದಲ್ಲಿ ಪ್ರತಿಭಟನೆ

October 9, 2018

ಸಿದ್ದಾಪುರ:  ಶಬರಿಮಲೆಗೆ ಸ್ತ್ರೀಯರ ಪ್ರವೇಶ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಮರು ಪರಿಶೀಲಿಸುವಂತೆ ಕೇರಳ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಬೇಕೆಂದು ಒತ್ತಾಯಿಸಿ ಅಯ್ಯಪ್ಪ ಸೇವಾ ಸಂಘದ ನೇತೃತ್ವದಲ್ಲಿ ವಿವಿಧ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು. ನೆಲ್ಯಹುದಿಕೇರಿ ಶ್ರೀ ಮುತ್ತಪ್ಪ ದೇವಾಲಯದಿಂದ ಸಿದ್ದಾಪುರ ಶ್ರೀ ಅಯ್ಯಪ್ಪ ದೇವಾಲಯದ ವರಗೆ ಮೆರವಣಿಗೆಯಲ್ಲಿ ತೆರಳಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ತಾ.ಪಂ ಮಾಜಿ ಅಧ್ಯಕ್ಷ ವಿ.ಕೆ ಲೋಕೇಶ್ ಮಾತನಾಡಿ, ದೇಶದಲ್ಲಿ ಹಿಂದಿನಿಂದಲೂ ಮಹಿಳೆಯ =ರನ್ನು ಪೂಜ್ಯ ಭಾವದಿಂದ ಗೌರವಿಸುತ್ತಾ, ಸಮಾನತೆಯಿಂದ…

ದಂತ ವೈದ್ಯಕೀಯ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ
ಕೊಡಗು

ದಂತ ವೈದ್ಯಕೀಯ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ

October 9, 2018

ವಿರಾಜಪೇಟೆ: ಕೊಡಗು ದಂತ ಮಹಾ ವೈದ್ಯಕೀಯ ಕಾಲೇಜು ಉತ್ತಮ ಪರಿಸರ ಪ್ರಕೃತಿ ಸೌಂದರ್ಯದ ಮಡಿಲಿನ ಬೆಟ್ಟದ ತಪ್ಪಲಿನಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದು ದಂತ ಕಾಲೇಜಿಗೆ ಹೊಸ ದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಶ್ರದ್ಧೆ ಹಾಗೂ ಛಲದಿಂದ ಗುರಿ ಮುಟ್ಟು ವಂತಾಗಬೇಕು ಎಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾಲೇಜಿನ ಪ್ರಾಂಶುಪಾಲ ರಾದ ಡಾ. ಎ.ಎ.ಪಾರ್ವತಿ ಹೇಳಿದರು. ವಿರಾಜಪೇಟೆ ಬಳಿಯ ಕೊಡಗು ದಂತ ವೈದ್ಯಕೀಯ ಕಾಲೇಜಿಗೆ 2018-19ರ ಸಾಲಿಗೆ ಹೊಸದಾಗಿ ಸೇರ್ಪಡೆ ಗೊಂಡ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿ…

ನಾಲೆಗೆ ಹಾರಿ ನಿರಾಶ್ರಿತ ಆತ್ಮಹತ್ಯೆ
ಕೊಡಗು

ನಾಲೆಗೆ ಹಾರಿ ನಿರಾಶ್ರಿತ ಆತ್ಮಹತ್ಯೆ

October 9, 2018

ಕುಶಾಲನಗರ:  ಮನನೊಂದ ಸಂತ್ರಸ್ತನೊಬ್ಬ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಶಾಲ ನಗರ ಸಮೀಪದ ಗುಡ್ಡೆ ಹೊಸೂರಿನಲ್ಲಿ ಜರುಗಿದೆ. ಮೂಲತಃ ಸೋಮವಾರಪೇಟೆ ಸಮೀಪದ ಸೂರ್ಲಬ್ಬಿ ನಿವಾಸಿಯಾದ ವಿಜು ಭೀಮಯ್ಯ(42) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇತ್ತೀಚೆಗೆ ಸುರಿದ ಭಾರಿ ಮಳೆಗೆ ಈತನ ಮನೆಯು ಹಾನಿಯಾಗಿದ್ದು, ಆ ಕಾರಣದಿಂದಾಗಿ ಇತ್ತೀಚೆಗೆ ಗುಡ್ಡೆಹೊಸೂರುನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂದು ತಿಳಿದು ಬಂದಿದ್ದು ಗುಡ್ಡೆ ಹೊಸೂರಿನ ಬಿಎಂ ರಸ್ತೆಯ ರಾಜೇಶ್ ಹಲೋ ಬ್ರಿಕ್ಸ್ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ….

ಪ್ರಕೃತಿ ವಿಕೋಪ ಸಂತ್ರಸ್ತ ಯುವಕರು ಸೇನೆ ಸೇರಲು ಸಜ್ಜು
ಕೊಡಗು

ಪ್ರಕೃತಿ ವಿಕೋಪ ಸಂತ್ರಸ್ತ ಯುವಕರು ಸೇನೆ ಸೇರಲು ಸಜ್ಜು

October 8, 2018

ಮಡಿಕೇರಿ: ಕೊಡಗು ಜಿಲ್ಲೆಯ ಹಲವು ಗ್ರಾಮಗಳಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಕುಟುಂಬಗಳ ಯುವಕರು ಇದೀಗ ಭಾರತೀಯ ಸೇನೆ ಸೇರಲು ಸಜ್ಜಾಗುತ್ತಿದ್ದಾರೆ.ಸಂತ್ರಸ್ತ  ಕುಟುಂಬಗಳ 50ಕ್ಕೂ ಹೆಚ್ಚು ಯುವಕರು ಅ.14 ರಂದು ಮಂಡ್ಯದಲ್ಲಿ ನಡೆಯಲಿರುವ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಪೂರ್ವ ತಯಾರಿ ನಡೆಸುತ್ತಿದ್ದಾರೆ. ಮಡಿಕೇರಿ ಕೊಡವ ಸಮಾಜ, ಸೇನೆ ಸೇರ್ಪಡೆಗೆ ಒಲವು ತೋರಿರುವ ಯುವ ಕರಿಗೆ 2 ವಾರಗಳ ಉಚಿತ ತರಬೇತಿ ನೀಡಲು ಮುಂದಾಗಿದೆ. ದೈಹಿಕ ಪರೀಕ್ಷೆಯೊಂದಿಗೆ ಸೇನೆ ನಡೆಸುವ ಲಿಖಿತ ಪರೀಕ್ಷೆಗೂ ಕೂಡ ಯುವಕರನ್ನು ತರಬೇತುಗೊಳಿಸಲಾಗುತ್ತಿದ್ದು, ಆ…

ಹ್ಯುಮಾನಿಟಿ ಫಸ್ಟ್‍ನಿಂದ ಸಂತ್ರಸ್ತರ ಮನೆ ದುರಸ್ತಿ
ಕೊಡಗು

ಹ್ಯುಮಾನಿಟಿ ಫಸ್ಟ್‍ನಿಂದ ಸಂತ್ರಸ್ತರ ಮನೆ ದುರಸ್ತಿ

October 8, 2018

ಮಡಿಕೇರಿ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಸಂಕಷ್ಟಕ್ಕೊಳಗಾದ ಸಂತ್ರಸ್ತರಿಗೆ ಮಡಿಕೇರಿಯ ಕಮ್ಯುನಿಟಿ ಹಾಲ್‍ನಲ್ಲಿ ಆಶ್ರಯ ನೀಡಿ ಸೇವೆಗೈದ ಹ್ಯುಮ್ಯಾನಿಟಿ ಫಸ್ಟ್ ಇಂಡಿಯಾದ ಸ್ವಯಂಸೇವಕರು ಇದೀಗ ಅತಿವೃಷ್ಟಿಯಿಂದಾಗಿ ತ್ಯಾಗರಾಜ ಕಾಲೋನಿಯಲ್ಲಿ ಹಾನಿಗೀಡಾದ ಗೋಡೆ ಕುಸಿದ ಕೆಲವು ಮನೆಗಳನ್ನು ದುರಸ್ತಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ತ್ಯಾಗರಾಜ ಕಾಲೋನಿಯ ಜನಾರ್ದನ, ಗಣೇಶ್, ಅಬ್ಬು, ಆಯಿಷ, ಸರೋಜ ಹಾಗೂ ಕಮರು ಎಂಬುವರ ಮನೆಗಳನ್ನು ದುರಸ್ತಿ ಮಾಡಲಾಗಿದೆ. ಹ್ಯುಮ್ಯಾನಿಟಿ ಫಸ್ಟ್‍ನ ಸುಮಾರು 20 ಸ್ವಯಂಸೇವಕರು ಕಳೆದ 15 ದಿನಗಳಿಂದ ಮನೆಗಳ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು,…

ಪ್ರಕೃತಿ ವಿಕೋಪದಿಂದ ಕಣ್ಮರೆಯಾದ ‘ಜೋಡುಪಾಲ’
ಕೊಡಗು

ಪ್ರಕೃತಿ ವಿಕೋಪದಿಂದ ಕಣ್ಮರೆಯಾದ ‘ಜೋಡುಪಾಲ’

October 8, 2018

ಮಡಿಕೇರಿ: ಮನೆಯ ಕುರುಹುಗಳನ್ನೇ ಅಳಿಸಿ ಹಾಕಿದ ಭೀಕರ ಪ್ರಕೃತಿ ವಿಕೋಪ. ಭೂ ಸಮಾಧಿಯಾದ ಮನೆಯ ಅವಶೇಷಗಳಡಿಯಲ್ಲಿ ಅಳಿದುಳಿದ ವಸ್ತುಗಳಿಗಾಗಿ ಹುಡುಕುತ್ತಿರುವ ಮನೆಮಂದಿ. ಇಲ್ಲಿ ಮನೆಯೊಂದಿತ್ತು ಎಂಬುದಕ್ಕೆ ಸಾಕ್ಷಿ ಹೇಳುತ್ತಿರುವ ರುಬ್ಬುವ ಕಲ್ಲು. ಸಂಪೂರ್ಣ ಕೆಸರುಮಯವಾಗಿರುವ ಮಕ್ಕಳ ಶಾಲಾ ಪುಸ್ತಕಗಳು. ಗಿಡವೊಂದರಲ್ಲಿ ನೇತಾಡು ತ್ತಿರುವ ಮಕ್ಕಳ ಶಾಲಾ ಗುರುತಿನ ಕಾರ್ಡ್. ಕೆಸರಿನಲ್ಲಿ ಹೂತು ಹೋಗಿರುವ ಟಿವಿಯನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಿರುವ ಮನೆ ಮಾಲೀಕ. ಇದು ಇತ್ತೀಚೆಗೆ ಕೊಡಗಿನಲ್ಲಿ ಸುರಿದ ಮಹಾಮಳೆಯಿಂದಾಗಿ ಸಂಭವಿಸಿದ ಭೀಕರ ಭೂಕು ಸಿತಕ್ಕೊಳಗಾದ ಜೋಡುಪಾಲ ಗ್ರಾಮದಲ್ಲಿ ಕಂಡುಬಂದ…

ಗೋಣಿಕೊಪ್ಪದಲ್ಲಿ ರಸ್ತೆ ಬದಿ ವ್ಯಾಪಾರ ಕಡಿವಾಣಕ್ಕೆ ಚಿಂತನೆ
ಕೊಡಗು

ಗೋಣಿಕೊಪ್ಪದಲ್ಲಿ ರಸ್ತೆ ಬದಿ ವ್ಯಾಪಾರ ಕಡಿವಾಣಕ್ಕೆ ಚಿಂತನೆ

October 8, 2018

ಗೋಣಿಕೊಪ್ಪಲು: ಪಟ್ಟಣದ ರಸ್ತೆ ಬದಿ ವ್ಯಾಪಾರಕ್ಕೆ ಕಡಿವಾಣ ಹಾಕಲಾಗು ವುದು ಎಂದು ಗೋಣಿಕೊಪ್ಪ ಪೊಲೀಸ್ ಉಪನಿರೀಕ್ಷಕ ಶ್ರೀಧರ್ ಹೇಳಿದರು. ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ನಡೆದ ರಸ್ತೆ ಸಂಚಾರ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ವಾಹನ ದಟ್ಟಣೆ ನಿವಾರಣೆಗೆ ಅಂಗಡಿ ಮಾಲೀಕರ ಸಹಾಯ ಬೇಕಾಗಿದೆ. ಟ್ರಾಫಿಕ್ ಸಮಸ್ಯೆ ನಿವಾರಿಸಲು 50 ಮೀಟರ್‍ಗೆ ಒಬ್ಬರಂತೆ ಪೊಲೀಸ್ ಸಿಬ್ಬಂದಿ ನಿಯೋ ಜಿಸಲಾಗಿದೆ. ಖಾಸಗಿ ಹಾಗೂ ಸರ್ಕಾರಿ ಬಸ್ ಚಾಲಕರಿಗೆ ಟ್ರಾಫಿಕ್ ಸಮಸ್ಯೆ ಮಾಡ ದಂತೆ ಎಚ್ಚರ ನೀಡಲಾಗಿದೆ. ಸಾರ್ವಜನಿ…

ಕಾನ್‍ಬೈಲು ಬೈಚನಹಳ್ಳಿಯಲ್ಲಿ ಆನೆ ಹಾವಳಿ
ಕೊಡಗು

ಕಾನ್‍ಬೈಲು ಬೈಚನಹಳ್ಳಿಯಲ್ಲಿ ಆನೆ ಹಾವಳಿ

October 8, 2018

ಸುಂಟಿಕೊಪ್ಪ:  ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆಗುಂಡಿ ಕಾನ್‍ಬೈಲು ಬೈಚನಹಳ್ಳಿ ನಿವಾಸಿ ಅಣ್ಣುನಾಯ್ಕ ಎಂಬುವರ ಗದ್ದೆಗೆ ಕಾಡಾನೆಗಳ ಹಿಂಡು ದಾಳಿ ನಡೆಸಿ ಬೆಳೆ ನಾಶ ಮಾಡಿ ಸುಮಾರು 50 ಸಾವಿರ ರೂ. ನಷ್ಟ ಉಂಟು ಮಾಡಿರುವ ಬಗ್ಗೆ ವರದಿಯಾಗಿದೆ. ಈ ಬಾರಿ ಅತಿವೃಷ್ಠಿಯಿಂದ ಬೆಳೆ ನಷ್ಟಗೊಂಡಿದ್ದು, ಇದೀಗ ಕಾಡಾನೆಗಳು ನಾಟಿ ಮಾಡಿದ ಗದ್ದೆಗಳಿಗೆ ದಾಳಿ ಮಾಡಿ ಪೈರುಗಳನ್ನು ತಿಂದು ತುಳಿದು ದ್ವಂಸ ಗೊಳಿಸಿ ನಂತರ ಬಾಳೆ ತೆಂಗು ಭಾರಿ ಪ್ರಮಾಣದಲ್ಲಿ ನಷ್ಟ ಪಡಿಸಿವೆ ಎಂದು ಕಾನ್‍ಬೈಲು…

ನಿರಾಶ್ರಿತರಿಗೆ ಮನೆ ನಿರ್ಮಾಣ ಸದ್ಯದಲ್ಲೇ ಆರಂಭ: ಜಗದೀಶ್
ಕೊಡಗು

ನಿರಾಶ್ರಿತರಿಗೆ ಮನೆ ನಿರ್ಮಾಣ ಸದ್ಯದಲ್ಲೇ ಆರಂಭ: ಜಗದೀಶ್

October 7, 2018

ಮಡಿಕೇರಿ:  ‘ ಆಗಸ್ಟ್‌ನಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯ ಜನಜೀವನ ಅಸ್ತ ವ್ಯಸ್ತವಾಗಿತ್ತು. ಇದರಿಂದ ಹಲವು ಕುಟುಂಬಗಳು ಮನೆ-ಮಠ ಕಳೆದುಕೊಂಡು ನಿರಾಶ್ರಿತರಾದರು. ಪ್ರಕೃತಿ ವಿಕೋಪದಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಯಿತು. ಈ ನಿಟ್ಟಿನಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ವಸತಿ ಸೌಕರ್ಯ ಕಲ್ಪಿಸಲು ಸರ್ಕಾರ ಈಗಾಗಲೇ ಜಾಗ ಗುರುತಿಸಿದ್ದು, ಸಮತಟ್ಟು ಮಾಡುವ ಕಾರ್ಯ ಪೂರ್ಣಗೊಂಡು, ಬಡಾವಣೆ ನಿರ್ಮಾಣ ಸಂಬಂಧ ಅನುಮೋದನೆ ಪಡೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಹೇಳಿದರು. ಮನೆ ನಿರ್ಮಾಣ ಸಂಬಂಧ ನಿರ್ಮಾಣಗೊಳ್ಳುತ್ತಿರುವ…

ವಿರಾಜಪೇಟೆ ತಾಲೂಕು ಕಚೇರಿಯಲ್ಲಿ ದಳ್ಳಾಳಿಗಳ ಹಾವಳಿ  ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಆಗ್ರಹ
ಕೊಡಗು

ವಿರಾಜಪೇಟೆ ತಾಲೂಕು ಕಚೇರಿಯಲ್ಲಿ ದಳ್ಳಾಳಿಗಳ ಹಾವಳಿ  ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಆಗ್ರಹ

October 7, 2018

ವಿರಾಜಪೇಟೆ:  ಇಲ್ಲಿನ ತಾಲೂಕು ಕಚೇರಿಯಲ್ಲಿ ದಳ್ಳಾಳಿಗಳ ಹಾವಳಿ ಹೆಚ್ಚಾ ಗಿದ್ದು, ಸಾಮಾನ್ಯ ಜನರು ಸಣ್ಣ-ಪುಟ್ಟ ಕೆಲ ಸಗಳಿಗೂ ಹಣ ನೀಡುವಂತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆ ತಾಲೂಕು ಕಚೇರಿಯ ಒಳಗೆ ಮತ್ತು ಹೊರಗೆ ಸುಮಾರು 30ಕ್ಕೂ ಹೆಚ್ಚು ದಳ್ಳಾಳಿಗಳಿದ್ದು, ಕಚೇರಿಯಲ್ಲಿ ಜನ ಸಾಮಾ ನ್ಯರ ಕೆಲಸ ನೇರವಾಗಿ ಆಗುತ್ತಿಲ್ಲ. ಬದ ಲಿಗೆ ಹಣಕ್ಕಾಗಿ ದಳ್ಳಾಳಿಗಳದ್ದೇ ಕಾರುಬಾರು….

1 117 118 119 120 121 187
Translate »