ವಿರಾಜಪೇಟೆ ತಾಲೂಕು ಕಚೇರಿಯಲ್ಲಿ ದಳ್ಳಾಳಿಗಳ ಹಾವಳಿ  ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಆಗ್ರಹ
ಕೊಡಗು

ವಿರಾಜಪೇಟೆ ತಾಲೂಕು ಕಚೇರಿಯಲ್ಲಿ ದಳ್ಳಾಳಿಗಳ ಹಾವಳಿ  ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಆಗ್ರಹ

October 7, 2018

ವಿರಾಜಪೇಟೆ:  ಇಲ್ಲಿನ ತಾಲೂಕು ಕಚೇರಿಯಲ್ಲಿ ದಳ್ಳಾಳಿಗಳ ಹಾವಳಿ ಹೆಚ್ಚಾ ಗಿದ್ದು, ಸಾಮಾನ್ಯ ಜನರು ಸಣ್ಣ-ಪುಟ್ಟ ಕೆಲ ಸಗಳಿಗೂ ಹಣ ನೀಡುವಂತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆ ತಾಲೂಕು ಕಚೇರಿಯ ಒಳಗೆ ಮತ್ತು ಹೊರಗೆ ಸುಮಾರು 30ಕ್ಕೂ ಹೆಚ್ಚು ದಳ್ಳಾಳಿಗಳಿದ್ದು, ಕಚೇರಿಯಲ್ಲಿ ಜನ ಸಾಮಾ ನ್ಯರ ಕೆಲಸ ನೇರವಾಗಿ ಆಗುತ್ತಿಲ್ಲ. ಬದ ಲಿಗೆ ಹಣಕ್ಕಾಗಿ ದಳ್ಳಾಳಿಗಳದ್ದೇ ಕಾರುಬಾರು. ಉದ್ದೇಶ ಪೂರಕವಾಗಿ ಭೂ ಹಿಡುವಳಿ ದಾರರಿಗೆ ದಿನನಿತ್ಯ ಕಿರುಕುಳ ನೀಡಲಾ ಗುತ್ತಿದೆ. ಹಾಗಾಗಿ, ಜಿಲ್ಲಾಧಿಕಾರಿಗಳು ತಿಂಗಳಿ ಗೊಮ್ಮೆ ತಾಲೂಕು ಕಚೇರಿಗೆ ಭೇಟಿ ನೀಡಿ ಈ ದಳ್ಳಾಳಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಭೂ ಹಿಡುವಳಿದಾರರಿಗೆ ಆರ್‍ಟಿಸಿಯ ತಪ್ಪು ಮಾಹಿತಿ ನೀಡಿ ಕಚೇರಿಗೆ ಅಲೆ ದಾಡಿಸುವುದು ಸಾಮಾನ್ಯವಾಗಿದೆ. ಇದು ಇತ್ತೀಚಿನ ಸಭೆಯಲ್ಲಿ ಬಹಿರಂಗವಾಗಿದೆ. ದಳ್ಳಾಳಿಗಳು ಕಚೇರಿ ತೆರೆಯುವ ಮುಂಚೆ, ಮಧ್ಯಾಹ್ನ ಊಟದ ಸಮಯದಲ್ಲಿ, ಸಂಜೆ 5 ಗಂಟೆ ನಂತರ ಇಂತಿಷ್ಟು ಹಣ ಪಡೆದು ಕೆಲಸ ಮಾಡಿಸಿಕೊಡುತ್ತಿದ್ದಾರೆ. ಇದರಿಂದ ತಾಲೂಕು ಕಚೇರಿಯಲ್ಲಿ ಹಣ ಇಲ್ಲದೆ ಯಾವುದೇ ಕೆಲಸವಿಲ್ಲ ಎಂಬಂತೆ ಸಿಬ್ಬಂದಿ ಚಾಚು ತಪ್ಪದೆ ಪಾಲಿಸುತ್ತಿದ್ದಾರೆ. ಸಾರ್ವ ಜನಿಕರು ನೇರವಾಗಿ ಕಚೇರಿಗೆ ಹೋದರೆ ಸೌಜನ್ಯಯುತವಾಗಿ ಸಿಬ್ಬಂದಿ ನಡೆದು ಕೊಳ್ಳದೆ ಉಢಾಪೆಯಿಂದ ಉತ್ತರ ನೀಡು ತ್ತಾರೆ. ಸಂಜೆ ಕಚೇರಿ ಅವಧಿ ಮುಗಿದ ನಂತರವೂ ಹೆಚ್ಚು ಜನರು ಕಚೇರಿ ಒಳಗೆ ಇರುತ್ತಾರೆ ಎಂದು ದೂರಿದರು.

ವಿರಾಜಪೇಟೆ ಸಮೀಪದ ಕಾಕೋಟುಪರಂ ಬುವಿನ ಗ್ರಾಮ ಪಂಚಾಯಿತಿಗೆ ದಾನಿಗಳು ಜಾಗವನ್ನು ನೀಡಿದ್ದಾರೆ. ಈ ಸಂಬಂಧ ಗ್ರಾಮ ಪಂಚಾಯಿತಿ ಆರ್‍ಟಿಸಿ ಬದಲಾ ವಣೆಗೆ ಒಂದು ವರ್ಷದ ಹಿಂದೆಯೇ ಕಡತ ಬಂದಿದೆ. ಆದರೂ ಗ್ರಾಮ ಪಂಚಾಯಿತಿಗೆ ಮಾತ್ರ ಆರ್‍ಟಿಸಿ ದೊರೆತಿಲ್ಲ. ವಿರಾಜ ಪೇಟೆ ಗ್ರಂಥಾಲಯದ ಅತಿಕ್ರಮಣದ ಜಾಗದ ಕುರಿತು ಮಾಹಿತಿ ಹಕ್ಕಿನಲ್ಲಿ 4 ತಿಂಗಳ ಹಿಂದೆ ಕೇಳಿದರು ಇನ್ನು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇದು ತಾಲೂಕು ಕಚೇ ರಿಯ ಕಾರ್ಯ ವೈಖರಿಯಾಗಿದೆ. ತಾಲೂಕು ಕಚೇರಿಯಲ್ಲಿ ಇದೇ ರೀತಿ ದಳ್ಳಾಳಿಗಳ ಹಾವಳಿ ಮುಂದುವರಿದರೆ ಪಪಂ ಚುನಾ ವಣೆ ಮುಗಿದ ನಂತರ ಹೋರಾಟ ನಡೆಸ ಲಾಗುವುದು ಎಂದು ಅನಿಲ್ ಅಯ್ಯಪ್ಪ ಎಚ್ಚರಿಸಿದ್ದಾರೆ. ಸಂಘಟನೆಯ ನಗರ ಸಮಿತಿ ಅಧ್ಯಕ್ಷ ಎಸ್.ಎಚ್.ಮಂಜುನಾಥ್ ಮಾತ ನಾಡಿ, ಸುಮಾರು ಐದು ವರ್ಷದ ಹಿಂದೆ ನಾನು ಪೆರುಂಬಾಡಿಯಲ್ಲಿ ಸಾಗು ಬಾಣೆ ಜಾಗವನ್ನು ಖರೀದಿ ಮಾಡಿದ್ದೇನೆ. ಇದನ್ನು ಕೃಷಿಯೇತರ ಎಂದು ಪರಿವರ್ತನೆ ಮಾಡಲು ಜಿಲ್ಲಾಧಿಕಾರಿ ನಿಯಮ ಅನುಸಾರ 2016, ಆಗಸ್ಟ್ 3ರಲ್ಲಿ ಒಪ್ಪಿಗೆ ಸೂಚಿಸಿದ್ದರು.

ವಿರಾಜಪೇಟೆ ಕಚೇರಿಯಲ್ಲಿ ಈ ಕುರಿತು ಭೂ ದಾಖಲೆ ಆರ್‍ಟಿಸಿ ಪಡೆಯಲು 4 ತಿಂಗ ಳಿಂದಲೂ ಪ್ರಯತ್ನ ನಡೆಸಲಾಗಿದ್ದರೂ ಕಂದಾಯ ಪರಿವೀಕ್ಷಕರು ಕಡತ ವಿಲೇ ವಾರಿಗಾಗಿ ಸತಾಯಿಸುತ್ತಿದ್ದಾರೆ. ತಾಲೂಕು ತಹಶೀಲ್ದಾರ್ ಸೂಚನೆ ನೀಡಿದರೂ, ಅವರ ಆದೇಶ ಪಾಲಿಸುತ್ತಿಲ್ಲ. ಈ ಸಂಬಂಧ ನಾನು ರೆವಿನ್ಯೂ ಕಚೇರಿಗೆ ಹೋಗಿ ಕಡತ ವಿಲೇ ವಾರಿ ಮಾಡಿಕೊಡುವಂತೆ ಕೇಳಿದಾಗ ಉಢಾಪೆ ಉತ್ತರ ನೀಡಿದ್ದಾರೆ. ಈಗಾಗಲೇ, ತಾಲೂಕು ಮತ್ತು ರೆವಿನ್ಯೂ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಜಿಲ್ಲಾ ಡಳಿತ ನೊಂದ ಜನರಿಗೆ ನ್ಯಾಯ ಒದಗಿಸಿಕೊಂಡುವಂತೆ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಸದ ಸ್ಯರಾದ ಬೆಳ್ಳಪ್ಪ, ಲೋಕೇಶ್ ಮತ್ತು ಹರೀಶ್ ಇತರರು ಇದ್ದರು.

Translate »