ಸಿದ್ದಾಪುರ: ಶಬರಿಮಲೆಗೆ ಸ್ತ್ರೀಯರ ಪ್ರವೇಶ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಮರು ಪರಿಶೀಲಿಸುವಂತೆ ಕೇರಳ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಬೇಕೆಂದು ಒತ್ತಾಯಿಸಿ ಅಯ್ಯಪ್ಪ ಸೇವಾ ಸಂಘದ ನೇತೃತ್ವದಲ್ಲಿ ವಿವಿಧ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನೆಲ್ಯಹುದಿಕೇರಿ ಶ್ರೀ ಮುತ್ತಪ್ಪ ದೇವಾಲಯದಿಂದ ಸಿದ್ದಾಪುರ ಶ್ರೀ ಅಯ್ಯಪ್ಪ ದೇವಾಲಯದ ವರಗೆ ಮೆರವಣಿಗೆಯಲ್ಲಿ ತೆರಳಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ತಾ.ಪಂ ಮಾಜಿ ಅಧ್ಯಕ್ಷ ವಿ.ಕೆ ಲೋಕೇಶ್ ಮಾತನಾಡಿ, ದೇಶದಲ್ಲಿ ಹಿಂದಿನಿಂದಲೂ ಮಹಿಳೆಯ =ರನ್ನು ಪೂಜ್ಯ ಭಾವದಿಂದ ಗೌರವಿಸುತ್ತಾ, ಸಮಾನತೆಯಿಂದ ಕಾಣುವ ದೇಶವಾಗಿದೆ. ಶಬರಿಮಲೆ ಪ್ರಕರಣ ಹಿಂದೂಗಳ ಧಾರ್ಮಿಕ ವಿಚಾರವಾಗಿದ್ದು, ಅದರ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹದ್ದಾಗಿದೆ. ತೀರ್ಪನ್ನು ಮರು ಪರಿಶೀಲಿಸುವಂತೆ ಕೇರಳ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಬೇಕು ಮತ್ತು ನ್ಯಾಯಾಲಯ ತೀರ್ಪನ್ನು ಮರು ಪರಿಶೀಲಿಸಬೇಕೆಂದು ಒತ್ತಾಯಿಸಿದರು.
ಪೊಲೀಸ್ ವೃತ ನಿರೀಕ್ಷಕ ಮೇದಪ್ಪ ಅವರ ಮುಖಾಂತರ ಜಿಲ್ಲಾಧಿಕಾರಿ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭ ವಿವಿಧ ಸಂಘಟನೆಗಳ ಪ್ರಮುಖ ರಾದ, ಮಣಿ ಉತ್ತಪ್ಪ, ಕಾರ್ಯಪ್ಪ, ಶರಣ್, ಪ್ರಜೀತ್, ರಾಜ, ಷಾಜಿ, ಪದ್ಮನಾಭ್ ಮೋಹನ್, ಸುರೇಶ್ ನೆಲ್ಲಿಕ್ಕಲ್, ಪ್ರವೀಣ್, ನಿತಿನ್, ಗಣೇಶ್ ಮತ್ತು ಇತರರು ಇದ್ದರು.