ದಂತ ವೈದ್ಯಕೀಯ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ
ಕೊಡಗು

ದಂತ ವೈದ್ಯಕೀಯ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ

October 9, 2018

ವಿರಾಜಪೇಟೆ: ಕೊಡಗು ದಂತ ಮಹಾ ವೈದ್ಯಕೀಯ ಕಾಲೇಜು ಉತ್ತಮ ಪರಿಸರ ಪ್ರಕೃತಿ ಸೌಂದರ್ಯದ ಮಡಿಲಿನ ಬೆಟ್ಟದ ತಪ್ಪಲಿನಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದು ದಂತ ಕಾಲೇಜಿಗೆ ಹೊಸ ದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಶ್ರದ್ಧೆ ಹಾಗೂ ಛಲದಿಂದ ಗುರಿ ಮುಟ್ಟು ವಂತಾಗಬೇಕು ಎಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾಲೇಜಿನ ಪ್ರಾಂಶುಪಾಲ ರಾದ ಡಾ. ಎ.ಎ.ಪಾರ್ವತಿ ಹೇಳಿದರು.

ವಿರಾಜಪೇಟೆ ಬಳಿಯ ಕೊಡಗು ದಂತ ವೈದ್ಯಕೀಯ ಕಾಲೇಜಿಗೆ 2018-19ರ ಸಾಲಿಗೆ ಹೊಸದಾಗಿ ಸೇರ್ಪಡೆ ಗೊಂಡ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಗಹಿಸಿದ್ದ ಎ.ಎ.ಪಾರ್ವತಿ ಮಾತನಾಡುತ್ತಾ, ಕೊಡಗು ದಂತ ವೈದ್ಯಕೀಯ ಕಾಲೇಜು ದೇಶ ವಿದೇಶ ಗಳಲ್ಲಿ ವಿಶ್ವ ವಿದ್ಯಾಲಯಗಳಲ್ಲಿ ಸಂಶೋ ಧನೆ ಹಾಗೂ ಉನ್ನತ ಮಟ್ಟದ ವಿದ್ಯಾ ರ್ಜನೆಗಾಗಿ ಒಡಂಬಡಿಕೆ ಮಾಡಿಕೊಂಡಿ ರುವುದು ಉತ್ತಮ ಕಾರ್ಯವಾಗಿದ್ದು ಅಲ್ಪ ಸಮಯದಲ್ಲಿಯೇ ಈ ಕಾಲೇಜಿನ ಸಾಧನೆ ಶ್ಲಾಘನಿಯ ಎಂದರು.

ಕಾಲೇಜಿನ ಪ್ರಿನ್ಸಿಪಾಲ್ ಡಾ. ಕೆ.ಸಿ. ಪೊನ್ನಪ್ಪ ಅವರು ಹೊಸದಾಗಿ ಸೇರ್ಪಡೆ ಗೊಂಡ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜಿನ ಡೀನ್ ಪ್ರೊ: ಡಾ: ಸುನಿಲ್ ಮುದ್ದಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.. ವೇದಿಕೆಯಲ್ಲಿ ಡಾ:ಜಿತೇಶ್ ಜೈನ್ ಹಾಗೂ ಕೊಡಗು ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸಿತಾರ ಸುಬ್ಬಯ್ಯ, ಕಾರ್ಯದರ್ಶಿ ಶ್ವೇತಾ ಲೆಸ್ಲಿ, ಜಂಟಿ ಕಾರ್ಯದರ್ಶಿಯಾಗಿ ತರಣಿ ಸುಬ್ಬಯ್ಯ, ಸಾಂಸ್ಕøತಿಕ ವಿಭಾಗದ ಕಾರ್ಯದರ್ಶಿ ಅನುಶ್ರೀ ಮಧುಸೂದನ್, ಕ್ರೀಡಾ ಕಾರ್ಯದರ್ಶಿ ವಿಶ್ವಜಿತ್ ಗಂಗಾಧರನ್, ಸಮಿತಿ ಸದಸ್ಯ ರುಗಳಾಗಿ ಡಿಕ್ಷನ್ ಕುರಿಯಾ ಕೋಸ್, ಶೆಲ್ಮಾ ಸಿ. ಪೌಲ್, ಸ್ನೇಹ ಪಂಕಜಾಕ್ಷನ್ ಹಾಗೂ ಸಮಂತ್ ಗಣಪತಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಸಿತಾರ ಸ್ವಾಗತಿಸಿದರು. ಆದಿತ್ಯ ನಿರೂಪಿಸಿದರೆ. ಶೃಂಗ ವಂದಿಸಿದರು.

Translate »