ನಾಲೆಗೆ ಹಾರಿ ನಿರಾಶ್ರಿತ ಆತ್ಮಹತ್ಯೆ
ಕೊಡಗು

ನಾಲೆಗೆ ಹಾರಿ ನಿರಾಶ್ರಿತ ಆತ್ಮಹತ್ಯೆ

October 9, 2018

ಕುಶಾಲನಗರ:  ಮನನೊಂದ ಸಂತ್ರಸ್ತನೊಬ್ಬ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಶಾಲ ನಗರ ಸಮೀಪದ ಗುಡ್ಡೆ ಹೊಸೂರಿನಲ್ಲಿ ಜರುಗಿದೆ.

ಮೂಲತಃ ಸೋಮವಾರಪೇಟೆ ಸಮೀಪದ ಸೂರ್ಲಬ್ಬಿ ನಿವಾಸಿಯಾದ ವಿಜು ಭೀಮಯ್ಯ(42) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇತ್ತೀಚೆಗೆ ಸುರಿದ ಭಾರಿ ಮಳೆಗೆ ಈತನ ಮನೆಯು ಹಾನಿಯಾಗಿದ್ದು, ಆ ಕಾರಣದಿಂದಾಗಿ ಇತ್ತೀಚೆಗೆ ಗುಡ್ಡೆಹೊಸೂರುನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂದು ತಿಳಿದು ಬಂದಿದ್ದು ಗುಡ್ಡೆ ಹೊಸೂರಿನ ಬಿಎಂ ರಸ್ತೆಯ ರಾಜೇಶ್ ಹಲೋ ಬ್ರಿಕ್ಸ್ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ವಿಜು ಭೀಮಯ್ಯ ಅಂದಾಜು ಎರಡು ಲಕ್ಷಕ್ಕೂ ಅಧಿಕ ಸಾಲಗಾರರಾಗಿದ್ದಾರೆ ಎಂದು ತಿಳಿದು ಬಂದಿದೆ. ನೆನ್ನೆ ರಾತ್ರಿ ಪತ್ನಿ ಜಾನಕಿ ಚಿತ್ರ ಹಾಗೂ ಮಕ್ಕಳೊಂ ದಿಗೆ ಊಟ ಮಾಡಿ ಮಲಗಿದ್ದರೆನ್ನಲಾ ಗಿದ್ದು, ಸಮ ರಾತ್ರಿಯ ನಂತರ ಹೊರ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಕುಶಾಲ ನಗರ ಗ್ರಾಮಾಂತರ ಪೆÇಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದ್ದು ಪೆÇಲೀಸ ರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »