ಸಂತ್ರಸ್ತರ ಪುನರ್ವಸತಿಗೆ ಆಗ್ರಹಿಸಿ ರೈತರ ಪ್ರತಿಭಟನೆ
ಕೊಡಗು

ಸಂತ್ರಸ್ತರ ಪುನರ್ವಸತಿಗೆ ಆಗ್ರಹಿಸಿ ರೈತರ ಪ್ರತಿಭಟನೆ

October 6, 2018

ಮಡಿಕೇರಿ:  ಮುಂಗಾರಿನ ಭಾರಿ ಮಳೆಯಿಂದ ಜಿಲ್ಲೆಯ ಕೆಲ ಭಾಗಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರಿಗೆ ಪರ್ಯಾಯ ಜಾಗದೊಂದಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿತು.

ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್. ನಿರ್ವಾಣಪ್ಪ, ಜಿಲ್ಲಾ ಮುಖಂಡ ಹೆಚ್.ಇ. ಸಣ್ಣಪ್ಪ, ಜಿಲ್ಲಾಧ್ಯಕ್ಷ ಎಸ್.ಆರ್. ಮಂಜು ನಾಥ ಅವರ ನೇತೃತ್ವದಲ್ಲಿ ಘೋಷಣೆಗಳ ಸಹಿತ ಪ್ರತಿಭಟನೆ ನಡೆದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್. ನಿರ್ವಾಣಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸಾವು ನೋವುಗಳು ಸಂಭವಿಸಿದ್ದು, ಗುಡ್ಡ ಕುಸಿತದಿಂದ ಸಾವಿರಾರು ಎಕರೆ ಕೃಷಿ ಭೂಮಿ ನಾಶ ವಾಗಿದೆ. ಕಾಫಿ, ಮೆಣಸು ಮುಂತಾದ ಬೆಳೆ ಗಳಿಗೆ ಅಪಾರ ಹಾನಿಯುಂಟಾಗಿದೆ. ಇದರಿಂದ ಪ್ರಸ್ತುತ ಕಾರ್ಮಿಕರು ಅಗತ್ಯ ಕೆಲಸ ದೊರಕದೆ ದೈನಂದಿನ ಬದುಕಿಗೆ ಪರದಾಡುವಂತಹ ಸ್ಥಿತಿ ಬಂದೊದಗಿದೆಯೆಂದು ತಿಳಿಸಿದರು.

ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಹಿನ್ನೆಲೆಯಲ್ಲಿ ನಾಡಿನಾದ್ಯಂತದಿಂದ ಕೊಡಗಿಗೆ ಹರಿದು ಬಂದ ಧನ ಸಹಾಯ, ಆಹಾರ, ಬಟ್ಟೆಗಳು ನೈಜ ಸಂತ್ರಸ್ತರಿಗೆ ಸಮರ್ಪಕ ವಾಗಿ ತಲುಪದೆ ವಂಚನೆಯಾಗಿದೆ. ಈ ಎಲ್ಲಾ ಸಂಕಷ್ಟಗಳ ನಡುವೆ ಸಂತ್ರಸ್ತರನ್ನು ಸಮಾನವಾಗಿ ಕಾಣುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿ, ಬಡ ಕೂಲಿ ಕಾರ್ಮಿಕರನ್ನು ಕಡೆಗಣಿಸ ಲಾಗಿದೆ ಎಂದು ಆರೋಪಿಸಿದರು.

ರೆಸಾರ್ಟ್ ಸಂಸ್ಕೃತಿಗೆ ಕಡಿವಾಣ ಹಾಕಿ: ಪ್ರಾಕೃತಿಕ ವಿಕೋಪಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಪರಿಸರಕ್ಕೆ ಧಕ್ಕೆ ತರುವ ಭೂ ಮಾಫಿಯ, ಅರಣ್ಯ ಮಾಫಿಯ, ಗಣಿಗಾರಿಕೆ ಹಾಗೂ ರೆಸಾರ್ಟ್ ಸಂಸ್ಕೃತಿಗೆ ಕಡಿವಾಣ ಹಾಕಬೇಕೆಂದು ನಿರ್ವಾಣಪ್ಪ ಆಗ್ರಹಿಸಿದರು.

ಪ್ರಾಕೃತಿಕ ವಿಕೋಪದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಮತ್ತು ಗಾಯಗೊಂಡಿರುವವರಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡಬೇಕು, ಭೂಮಿ ಕಳೆದು ಕೊಂಡವರಿಗೆ ತಲಾ 3 ಎಕರೆ ಭೂಮಿ ನೀಡಬೇಕು, ನಿರಾಶ್ರಿತರಾದವರಿಗೆ ಮತ್ತು ಲೈನ್ ಮನೆ, ಬಾಡಿಗೆ ಮನೆಯಲ್ಲಿರುವ ಜಿಲ್ಲೆಯ ಎಲ್ಲಾ ಭೂಹೀನ ಬಡವರಿಗೆ ತಲಾ 3 ಎಕರೆ ಭೂಮಿ ನೀಡಬೇಕೆಂದು ಒತ್ತಾಯಿಸಿದರು.

ದಾನಿಗಳು ನೀಡುತ್ತಿರುವ ಆಹಾರ ಧಾನ್ಯ, ಬಟ್ಟೆ ಮೊದಲಾದ ನೆರವನ್ನು ನೈಜ ಸಂತ್ರ ಸ್ತರಿಗೆ ನೀಡಬೇಕು, ಪ್ರವಾಹದಿಂದ 3 ತಿಂಗಳವರೆಗೆ ಕೆಲಸ-ಕಾರ್ಯಗಳಿಲ್ಲದೆ ಅನ್ನ, ಆಹಾರಕ್ಕಾಗಿ ಕಷ್ಟಪಡುತ್ತಿರುವ ಜಿಲ್ಲೆಯ ದಲಿತ ಆದಿವಾಸಿ ಕೂಲಿ ಕಾರ್ಮಿಕರಿಗೆ 25 ಸಾವಿರ ಸಹಾಯಧನ ನೀಡಬೇಕೆಂದು ಒತ್ತಾಯಿಸಿದರು. ಸಣ್ಣ ಮತ್ತು ಮಧ್ಯಮ ರೈತರ ಕಾಫಿ, ಮೆಣಸು, ಜೋಳ, ಶುಂಠಿ ನಷ್ಟವಾಗಿದ್ದು, ಸೂಕ್ತ ಪರಿಹಾರ ನೀಡಬೇಕು, ಸಂತ್ರಸ್ತರಿಗೆ ಸೂಕ್ತವಾದ ಜಾಗದಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಡುವುದರೊಂದಿಗೆ ಅಪಾಯ ಸಂಭವಿಸುವ ಮುನ್ಸೂಚನೆ ಇರುವ ಕಡೆಗಳಿಗೆ ಕಳುಹಿಸಬಾರದೆಂದರು.

ಅಮಾನತುಗೊಳಿಸಿ: ಕಳೆದ ಸೆ.18 ರಂದು ಕುಶಾಲನಗರ ವಾಲ್ಮೀಕಿ ಭವನದಲ್ಲಿ ತಹ ಶೀಲ್ದಾರ್ ಮಹೇಶ್ ನಿರಾಶ್ರಿತ ಜನರೊಂದಿಗೆ ಅನುಚಿತ ವರ್ತನೆ ತೋರಿದ್ದರಿಂದ ಅವ ರನ್ನು ಅಮಾನತುಗೊಳಿಸಬೇಕು ಮತ್ತು ಸಂತ್ರಸ್ತರ ಮೇಲೆ ಹೂಡಿರುವ ಪ್ರಕರಣ ವನ್ನು ಹಿಂದಕ್ಕೆ ಪಡೆಯಬೇಕು, ಜಿಲ್ಲೆಯಲ್ಲಿರುವ 37 ಸಾವಿರ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ, ಎಲ್ಲಾ ಒತ್ತುವರಿ ಭೂಮಿಯನ್ನು ತೆರವುಗೊಳಿಸಿ ಜಿಲ್ಲೆಯ ಭೂಹೀನ ಬಡವ ರಿಗೆ, ಆದಿವಾಸಿಗಳಿಗೆ ತಲಾ 3 ಎಕರೆಯಂತೆ ನೀಡಬೇಕು ಮತ್ತು ಉಳುವವನೇ ಭೂ ಒಡೆಯನೆಂದು ಘೋಷಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಟಿ.ಆನಂದ, ಬಿಎಸ್‍ಪಿ ಮುಖಂಡ ಮಂಜುನಾಥ್ ಸೇರಿದಂತೆ ಸಂಘ ಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

Translate »