ಮಡಿಕೇರಿ : ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಹುದ್ದೆಯಲ್ಲಿ ಕರ್ತವ್ಯದಲ್ಲಿರುವ ಕೊಡಗಿನ ಅಧಿಕಾರಿಯೊಬ್ಬರು ಇದೀಗ ಆರ್ಮಿ ಟ್ರೈನಿಂಗ್ ಕಮಾಂಡ್‍ನ ಮುಖ್ಯಸ್ಥರಾಗಿ ನಿಯುಕ್ತಿಗೊಳ್ಳುವ ಮೂಲಕ ಕೊಡಗಿನ ಸೇನಾ ಹಿರಿಮೆಗೆ ಮತ್ತೊಂದು ಗರಿ ಮೂಡಿದಂತಾಗಿದೆ.
ಲೇ.ಜ. ಪಟ್ಟಚೆರುವಂಡ ಸಿ. ತಮ್ಮಯ್ಯ ಅವರು ಶಿಮ್ಲಾದಲ್ಲಿರುವ ಆರ್ಮಿ ಟ್ರೈನಿಂಗ್ ಕಮಾಂಡ್‍ನ ಕಮಾಂಡರ್ ಆಗಿ ನಿಯೋಜಿತರಾಗಿದ್ದಾರೆ. ಈ ಕೇಂದ್ರ ಭಾರತೀಯ ಸೇನೆಯ ಏಳು ಕಮಾಂಡ್‍ಗಳಲ್ಲಿ ಒಂದಾಗಿದೆ. ಈ ಹಿಂದೆ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿದ್ದ ಬಿದ್ದಂಡ ಸಿ.ನಂದ ಅವರು ಈ ಶ್ರೇಣಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಅವರು ನಿವೃತ್ತಿಗೊಂಡ ನಂತರ ಹಲವು ವರ್ಷಗಳ ಸುದೀರ್ಘ ಅವಧಿಯ ಬಳಿಕ ಇದೀಗ ಪಟ್ಟಚೆರವಂಡ ಸಿ.ತಮ್ಮಯ್ಯ ಅವರು ಸ್ಥಾನವನ್ನು ಅಲಂಕರಿಸುತ್ತಿದ್ದಾರೆ. ಇವರು ಪಟ್ಟಚೆರವಂಡ ಪೊನ್ನಪ್ಪ ಚಂಗಪ್ಪ ಹಾಗೂ ಗೌರು ಚಂಗಪ್ಪ ಅವರ ಪುತ್ರ, ಭುವನೇಶ್ವರದ ಸೈನಿಕ್ ಶಾಲೆಯಲ್ಲಿ ಓದಿದ ಇವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಹಾಗೂ ಇಂಡಿಯನ್ ಮಿಲಿಟರಿ ಅಕಾಡೆಮಿ
ಡೆಹ್ರಾಡೊನ್‍ನಿಂದ ‘ಖಡ್ಗ ಗೌರವ’ದೊಂದಿಗೆ ಭಾರತೀಯ ಸೇನೆಯನ್ನು 1981 ಜುಲೈ 31ರಂದು ಸೇರಿದ್ದಾರೆ.