ಪ್ರಕೃತಿ ವಿಕೋಪ ಸಂತ್ರಸ್ತರ ಪುನರ್ವಸತಿಗೆ ಆಗ್ರಹಿಸಿ ಸಿಎನ್‍ಸಿ ಧರಣಿ
ಕೊಡಗು

ಪ್ರಕೃತಿ ವಿಕೋಪ ಸಂತ್ರಸ್ತರ ಪುನರ್ವಸತಿಗೆ ಆಗ್ರಹಿಸಿ ಸಿಎನ್‍ಸಿ ಧರಣಿ

October 12, 2018

ಮಡಿಕೇರಿ: ಪ್ರಕೃತಿ ವಿಕೋಪದಲ್ಲಿ ನಿರಾಶ್ರಿತರಾದವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಎನ್‍ಸಿ ಹಮ್ಮಿ ಕೊಂಡಿದ್ದ 24 ಗಂಟೆಗಳ ಧರಣಿ ಬುಧವಾರ ಬೆಳಗ್ಗೆಯಿಂದ ಗುರುವಾರ ಬೆಳಿಗ್ಗೆವರೆಗೆ ಮಡಿ ಕೇರಿ ಗಾಂಧಿ ಮೈದಾನದಲ್ಲಿರುವ ಗಾಂಧಿ ಮಂಟ ಪದ ಎದುರು ನಡೆಯಿತು.

ಸಂತ್ರಸ್ತರಾದವರ ನೆರವಿಗಾಗಿ ದಾನಿಗಳಿಂದ ಹರಿದು ಬಂದ ಆರ್ಥಿಕ ಮತ್ತು ಸಾಮಾಗ್ರಿ ನೆರವು, ಈ ಸಂಬಂಧ ಸರಕಾರ ಸಂಗ್ರಹಿಸಿದ ಮತ್ತು ವ್ಯಯಿಸಿದ ಹಣದ ಕುರಿತು ಶ್ವೇತ ಪತ್ರ ಹೊರಡಿಸಬೇಕು, ತಾತ್ಕಾಲಿಕ ಮತ್ತು ಶಾಶ್ವತ ಪುನರ್ವಸತಿ ಕಲ್ಪಿಸುವ ಸಂಬಂಧದ ನೀಲ ನಕಾಶೆ ಬಿಡುಗಡೆ ಮಾಡಬೇಕು. ಕೊಡಗಿನ ಏಳು ನಾಡು ಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ಮೂಲಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಸಂಯೋಜನೆಗೊಂಡ ವಿಪತ್ತು ನಿರ್ವಹಣಾ ಮಂತ್ರಿಯನ್ನು ನೇಮಿಸಬೇಕು. ಈ ಘೋರ ವಿಪ ತ್ತಿಗೆ ಕಾರಣವಾಗಿದೆ ಎನ್ನಲಾದ ಹಾರಂಗಿ ಜಲಾ ಶಯವನ್ನು ಕೆಡವಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಸಿಎನ್‍ಸಿ ಸತ್ಯಾಗ್ರಹ ನಡೆಸಲಾಯಿತು.

ಕೊಡಗು ಮತ್ತು ಕೊಡಗಿನ ಜನ ಸಮೃದ್ಧಿ ಯಿಂದ ಇದ್ದಷ್ಟು ಕಾಲ ಕರ್ನಾಟಕದ ಖಜಾನೆ ತುಂಬುತ್ತಿತ್ತು. ಇದೀಗ ಪ್ರಾಕೃತಿಕ ವಿಕೋಪದ ಹಿನ್ನೆಲೆ ಪರಿಹಾರದ ಹೆಸರಿನಲ್ಲಿ ಸಾವಿರಾರು ಕೋಟಿ ದೇಣಿಗೆ ಹರಿದು ಬರುವ ಮೂಲಕ ಕರ್ನಾಟಕದ ಖಜಾನೆ ತುಂಬುತ್ತಲೇ ಇದೆ. ಆನೆ ಬದುಕಿದ್ದಾಗ, ಕೋಟಿ ರೂ. ವರಮಾನ ಅದರ ದುಡಿಮೆಯಿಂದ ದೊರಕಿದರೆ, ಆನೆ ಸತ್ತಮೇಲೆ ಅದರ ದಂತ ಮತ್ತು ಅಂಗಾಗಳಿಂದ ಕೋಟಿ ರೂ. ವರಮಾನ ಲಭ್ಯವಾಗುತ್ತದೆ.

ಈ ರೀತಿಯ ವಿಪರ್ಯಾಸ ಕೊಡಗಿಗೆ ಬಂದೊ ದಗಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಬೇಸರ ವ್ಯಕ್ತಪಡಿಸಿದರು.
ಗುರುವಾರ ಬೆಳಗ್ಗೆ 11 ಗಂಟೆಯವರೆಗೂ ಸತ್ಯಾ ಗ್ರಹ ನಡೆಸಿದ್ದು, ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ, ಕೆಪಿಸಿಸಿ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ ಇನ್ನಿತರರಿದ್ದರು. ವಿಶೇಷ ಜಿಲ್ಲಾಧಿ ಕಾರಿ ಜಗದೀಶ್ ಮನವಿ ಪತ್ರ ಸ್ವೀಕರಿಸಿದರು.

Translate »