ಅಕ್ರಮ ಶ್ರೀಗಂಧ ಸಾಗಾಟ; ಮಾಲು ಸಮೇತ ಆರೋಪಿಗಳ ಬಂಧನ
ಕೊಡಗು

ಅಕ್ರಮ ಶ್ರೀಗಂಧ ಸಾಗಾಟ; ಮಾಲು ಸಮೇತ ಆರೋಪಿಗಳ ಬಂಧನ

October 10, 2018

ಕುಶಾಲನಗರ: ಉತ್ತರ ಕೊಡಗಿನ ಬಾಣವಾರ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿ ಯಲ್ಲಿ ಕಾನೂನು ಬಾಹಿರವಾಗಿ ಶ್ರೀಗಂಧದ ನಾಟ ಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿ ಗಳನ್ನು ಮಾಲು ಸಮೇತ ಅರಣ್ಯ ಸಿಬ್ಬಂದಿಗಳು ಬಂಧಿಸಿದ್ದರು. ಆರೋಪಿಗಳಿಂದ ರೂ.10 ಲಕ್ಷ ಮೌಲ್ಯದ ಶ್ರೀಗಂಧ ನಾಟ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ತೊರೆನೂರು ಗ್ರಾಪಂ ವ್ಯಾಪ್ತಿಯ ಚಿಕ್ಕ ಅಳು ವಾರದಲ್ಲಿ ಶ್ರೀಗಂಧದ ನಾಟಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಚಿಕ್ಕ ಅಳುವಾರ ಗ್ರಾಮದ ಶಿವರಾಜ್ ಕುಮಾರ್ ಹಾಗೂ ದಿಲೀಪ್ ಅವರÀನ್ನು ಬಂಧಿಸಿದ್ದಾರೆ.

ಸೋಮವಾರಪೇಟೆ ವಿಭಾಗದ ವಲಯ ಅರ ಣ್ಯಾಧಿಕಾರಿ ಲಕ್ಷ್ಮಿಕಾಂತ್ ಮಾರ್ಗದರ್ಶನದಲ್ಲಿ ಬಾಣಾವರ ಉಪ ವಲಯ ಅರಣ್ಯಾಧಿಕಾರಿ ಮಹದೇವ ನಾಯಕ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಕಾರ್ಯಾಚರಣೆ ವೇಳೆ ಅರಿಸಿನಗುಪ್ಪೆ ಗ್ರಾಮದ ನಾಗರಾಜು ಹಾಗೂ ಅಳುವಾರ ಗ್ರಾಮದ ನಾಗರಾಜು ಪರಾರಿಯಾಗಿದ್ದಾರೆ.
ಈ ಕುರಿತು ಬಾಣಾವಾರ ಉಪ ವಲಯ ಕಚೇರಿಯಲ್ಲಿ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಪರಾರಿಯಾಗಿ ರುವ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕರಾದ ಎಸ್.ಪಿ.ರಾಜಣ್ಣ, ಪ್ರಮೋದ್, ಸಿಬ್ಬಂದಿಗಳಾದ ಈರಪ್ಪ, ದೀವಾಕರ್ ಹಾಗೂ ಆರ್.ಆರ್.ಪಿ. ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Translate »