ಕಾವೇರಿ ದಸರಾಗೆ ಚಾಲನೆ
ಕೊಡಗು

ಕಾವೇರಿ ದಸರಾಗೆ ಚಾಲನೆ

October 11, 2018

ಗೋಣಿಕೊಪ್ಪಲು:  ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಭವನದ ಎದುರು ಪ್ರತಿಷ್ಠಾಪಿ ಸುವ ದೇವಿ ಮಂಟಪದಲ್ಲಿ ಗಣಪತಿ ಪೂಜೆ ಸಲ್ಲಿ ಸುವ ಮೂಲಕ ಧಾರ್ಮಿಕ ವಿಧಿ ವಿಧಾನಗಳಿಗೆ ಕಾವೇರಿ ದಸರಾಗೆ ಚಾಲನೆ ನೀಡಲಾಯಿತು. ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆಯೊಂದಿಗೆ 40ನೇ ವರ್ಷದ ಗೋಣಿಕೊಪ್ಪ ದಸರಾ ಧಾರ್ಮಿಕ ವಿಧಿ-ವಿಧಾನದಂತೆ ನಡೆಯಿತು. ಬೆಳಗ್ಗೆ 7 ಗಂಟೆಗೆ ಗಣಪತಿ ಪೂಜಾ ಕಾರ್ಯ ಸಲ್ಲಿಸಲಾಯಿತು.

ಉತ್ತರ ಭಾರತ ಶೈಲಿಯ ಕಲಾಕೃತಿಯನ್ನು ಪ್ರತಿ ಷ್ಠಾಪಿಸಲಾಗಿದೆ. ಇಲ್ಲಿವರೆಗೆ ಸುಮಾರು ಎರಡೂ ವರೆ ಅಡಿಯ ದೇವಿ ಸ್ಥಾಪಿಸಲಾಗುತ್ತಿತು. ಈ ಬಾರಿ 3 ಅಡಿ ಎತ್ತರದ ದೇವಿಯನ್ನು ಸ್ಥಾಪಿಸಲಾಗಿದೆ.

ಶಾಸಕ ಕೆ.ಜಿ.ಬೋಪಯ್ಯ, ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಕಾರ್ಯಾಧ್ಯಕ್ಷ ಬಿ.ಎನ್. ಪ್ರಕಾಶ್, ಪ್ರಧಾನ ಕಾರ್ಯ ದರ್ಶಿ ಚೇಂದೀರ ಪ್ರಭಾವತಿ, ಖಜಾಂಜಿ ಚೆಪ್ಪುಡೀರ ಧ್ಯಾನ್ ಸುಬ್ಬಯ್ಯ, ಹಿರಿಯರಾದ ಡಾ. ಕಾಳಿಮಾಡ ಶಿವಪ್ಪ, ಕೇಶವಕಾಮತ್, ಡಾ.ಚಂದ್ರಶೇಖರ್, ರಾಮ ಚಾರ್, ಸುಮಿ ಸುಬ್ಬಯ್ಯ, ಸಮಿತಿ ನಿಕಟಪೂರ್ವ ಅಧ್ಯಕ್ಷ ಕುಲ್ಲಚಂಡ ಬೋಪಣ್ಣ, ಮಹಿಳಾ ದಸರಾ ಸಮಿತಿ ನಿರ್ಗಮಿತ ಅಧ್ಯಕ್ಷೆ ಪ್ರವಿ ಮೊಣ್ಣಪ್ಪ, ಅಧ್ಯಕ್ಷೆ ಎಂ. ಮಂಜುಳ, ಕಾರ್ಯದರ್ಶಿ ಕಡೇಮಾಡ ಕುಸುಮ ಜೋಯಪ್ಪ, ಸಹಕಾರ್ಯದರ್ಶಿ ಯಾಶ್ಮಿನ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಗೋಣಿಕೊಪ್ಪ ದಸರಾಕ್ಕೆ ಘೋಷಣೆ ಮಾಡಿರುವ 25 ಲಕ್ಷ ರೂ. ಅನುದಾನ 3 ದಿನಗಳಲ್ಲಿ ಬಿಡುಗಡೆಯಾಗ ಲಿದೆ. ಸರಳ ದಸರಾ ಆಚರಿಸಲು ನಿರ್ಧರಿಸಿದಂತೆ ಆಚರಣೆ ನಡೆಯಲಿದೆ. ಸಾಂಪ್ರದಾಯಿಕ ಆಚರಣೆ ಧಾರ್ಮಿಕ ಪದ್ದತಿಯಂತೆ ನಡೆಯುತ್ತಿದೆ. ಕೊಡಗಿನಲ್ಲಿ ನಡೆದಿರುವ ಪ್ರಾಕೃತಿಕ ವಿಕೋಪದ ನೋವಿನ ನಡುವೆ ಜಿಲ್ಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳು ಸರಳವಾಗಿದೆ. ಇದರಂತೆ ಇಲ್ಲಿಯೂ ಕೂಡ ಆಚರಣೆಯಾಗುತ್ತಿದೆ ಎಂದರು.

ಮಂಟಪ ಸಮಿತಿಗಳಿಗೆ 1 ಲಕ್ಷ ನೀಡಲು ನಿರ್ಧಾರ: ಸ್ವಾತಂತ್ರ್ಯ ಹೋರಾಟಗಾರರ ಭವನ ದಲ್ಲಿ ಕಾವೇರಿ ದಸರಾ ಸಮಿತಿ ಗೌರವ ಅಧ್ಯಕ್ಷೆ ಶಾಸಕ ಕೆ.ಜಿ. ಬೋಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾವೇರಿ ದಸರಾ ಸಮಿತಿ ಸಭೆಯಲ್ಲಿ ಪ್ರತಿ ಮಂಟಪ ಸಮಿತಿಗಳಿಗೆ ತಲಾ 1 ಲಕ್ಷ ಅನುದಾನ ನೀಡಲು ನಿರ್ಧರಿಸಲಾಯಿತು.

ವಿಜಯದಶಮಿಯಂದು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಮಂಟಪ ಸಮಿತಿಗಳ ಖರ್ಚು ವೆಚ್ಚಕ್ಕೆ 1 ಲಕ್ಷ ರೂ. ನೀಡುವುದು, ಸರಳವಾಗಿ ದಸರಾ ಆಚರಿಸುವಂತೆಯೂ, ಮಂಟಪ ಅನಾವರಣ ಪಡಿಸುವ ಸಂದರ್ಭ ಮಂಟಪವನ್ನು ಸ್ಪರ್ಧೆ ರೂಪದಲ್ಲಿ ಹೊರತರದೆ, ಪ್ರದರ್ಶನದಲ್ಲಿ ಪಾಲ್ಗೊಳ್ಳುವಂತೆ ನಿರ್ಧರಿಸಲಾಯಿತು.

ಶಾಸಕ ಬೋಪಯ್ಯ ಮಾತನಾಡಿ, ಸರ್ಕಾರದ ಅನುದಾನ ನೇರವಾಗಿ ಕಾವೇರಿ ದಸರಾ ಸಮಿತಿ ಖಾತೆಗೆ ಬರಲಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕಾನೂನಿಗೆ ವಿರುದ್ಧವಾಗಿ ಡಿಜೆಯಂತಹ ಶಬ್ದ ಬಳಕೆ ಬೇಡ. ಮುಂದಿನ ಬಾರಿ ವಿಜೃಂಭಣೆಯ ದಸರಾ ಆಚರಣೆಗೆ ದೇವರು ಕರುಣಿಸಲಿ ಎಂದರು.

ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ.ಬೋಪಣ್ಣ ಮಾತನಾಡಿ, ಮಂಟಪ ಸಮಿತಿಗಳು ಖರ್ಚು ವೆಚ್ಚವನ್ನು ಸರಳವಾಗಿ ಬಳಸಬೇಕು. ಒಂದೆ ವಾಲಗ ತಂಡದೊಮದಿಗೆ ಎಲ್ಲಾ ಸಮಿತಿಯ ಮಂಟಪಗಳು ಪಾಳ್ಗೊಳ್ಳಬಹುದು. ಈ ರೀತಿ ಖರ್ಚು ಉಳಿಸಿ ಪ್ರಾಕೃತಿಕ ವಿಕೋಪದಲ್ಲಿ ನೊಂದ ಕುಟುಂಬಗಳಿಗೆ ಸಹಾಯ ಹಸ್ತ ನೀಡಬೇಕಿದೆ ಎಂದರು.

ಕಾರ್ಯಾಧ್ಯಕ್ಷ ಬಿ.ಎನ್. ಪ್ರಕಾಶ್ ಮಾತ ನಾಡಿ, ದಸರಾ ದಿನದಂದು ಕಲಾಭಿಮಾನಿಗಳನ್ನು ಮಧ್ಯಾಹ್ನದಿಂದಲೇ ಸೆಳೆಯಲು ನಾಡಹಬ್ಬ ನಡೆಸಿ ಕೊಂಡು ಬರುತ್ತಿರುವ ಸ್ತಬ್ದಚಿತ್ರ ಮೆರವಣಿಗೆ ಪ್ರಮುಖ ಪಾತ್ರವಹಿಸಿದೆ. ಇದನ್ನು ಮುಂದುವರಿ ಸಬೇಕಿದೆ. ಇದಕ್ಕಾಗಿ ಕಾವೇರಿ ದಸರಾ ಸಮಿತಿ ಯಿಂದ ಹೆಚ್ಚಿನ ಹಣ ನೀಡಲಾಗವುದು ಎಂದರು.

ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ, ಪ್ರಧಾನ ಕಾರ್ಯದರ್ಶಿ ಪ್ರಭಾವತಿ, ಸ್ಥಳೀಯ ಗ್ರಾಪಂ ಅಧ್ಯಕ್ಷೆ ಸೆಲ್ವಿ, ದಶಮಂಟಪ ಸಮಿತಿ ಅಧ್ಯಕ್ಷ ಜಮ್ಮಡ ಅರಸು ಉಪಸ್ಥಿತರಿದ್ದರು. ವಿವಿಧ ಮಂಟಪ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Translate »