ಕೊಡಗು

ಕಾಡಾನೆ ದಾಳಿಗೆ ಬಲಿಯಾದವರ ಕುಟುಂಬಕ್ಕೆ ತಕ್ಷಣ ಪರಿಹಾರ ವಿತರಿಸಿ :ಅಧಿಕಾರಿಗಳಿಗೆ ಅರಣ್ಯ ಸಚಿವ ಆರ್.ಶಂಕರ್ ಸೂಚನೆ
ಕೊಡಗು

ಕಾಡಾನೆ ದಾಳಿಗೆ ಬಲಿಯಾದವರ ಕುಟುಂಬಕ್ಕೆ ತಕ್ಷಣ ಪರಿಹಾರ ವಿತರಿಸಿ :ಅಧಿಕಾರಿಗಳಿಗೆ ಅರಣ್ಯ ಸಚಿವ ಆರ್.ಶಂಕರ್ ಸೂಚನೆ

June 27, 2018

ಮಡಿಕೇರಿ:  ಕಾಡಾನೆ ದಾಳಿಯಿಂದ ಜೀವ ಹಾನಿಯಾದ ವ್ಯಕ್ತಿಯ ಕುಟುಂಬಕ್ಕೆ ತಕ್ಷಣವೇ ಪರಿಹಾರ ವಿತರಿಸ ಬೇಕು. ಪ್ರಾಣ ಹಾನಿಯಿಂದ ನೊಂದಿರುವ ಕುಟುಂಬ ಸದಸ್ಯರನ್ನು ಪರಿಹಾರ ನೀಡುವ ನೆಪದಲ್ಲಿ ಕಚೇರಿಗೆ ಅಲೆದಾಡಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ರಾಜ್ಯ ಅರಣ್ಯ ಸಚಿವ ಆರ್.ಶಂಕರ್ ಕೊಡಗು ಸಿಸಿಎಫ್ ಲಿಂಗರಾಜ್ ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ. ಮಡಿಕೇರಿ ಅರಣ್ಯ ಇಲಾಖೆ ನಿರೀಕ್ಷಣಾ ಮಂದಿರದಲ್ಲಿ ಅರಣ್ಯ ಅಧಿ ಕಾರಿಗಳೊಂದಿಗೆ ಸಚಿವ ಆರ್.ಶಂಕರ್ ಸಭೆ ನಡೆಸಿ ಮಾಹಿತಿ ಪಡೆದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಸೋಮ ವಾರಪೇಟೆ…

ಮೂಲ ಸೌಕರ್ಯ ಒದಗಿಸಲು ಡಿಸಿ ಸೂಚನೆ
ಕೊಡಗು

ಮೂಲ ಸೌಕರ್ಯ ಒದಗಿಸಲು ಡಿಸಿ ಸೂಚನೆ

June 26, 2018

ಮಡಿಕೇರಿ:  ಸೋಮವಾರ ಪೇಟೆ ತಾಲೂಕಿನ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರಗಳಲ್ಲಿ ವಾಸಿಸುವ ಗಿರಿಜನ ಕಟುಂಬಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಆದಷ್ಟು ಬೇಗನೆ ಕಲ್ಪಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ನಿರ್ದೇಶನ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಸವನಹಳ್ಳಿ ಮತ್ತು ಬ್ಯಾಡ ಗೊಟ್ಟ ಪುನರ್ವಸತಿ ಕೇಂದ್ರಗಳಲ್ಲಿ ವಾಸವಿರುವ ಗಿರಿಜನರ ಕುಟುಂಬಗಳಿಗೆ ಒದಗಿಸಲಾಗುತ್ತಿರುವ ಮೂಲಭೂತ ಸೌಕರ್ಯಗಳ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಅವರು ಮಾತನಾಡಿದರು. ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಪುನ ರ್ವಸತಿ ಕೇಂದ್ರಗಳಲ್ಲಿ…

ಸೋಮವಾರಪೇಟೆ ಸುತ್ತಮುತ್ತ ಸರಣಿ ಕಳ್ಳತನ
ಕೊಡಗು

ಸೋಮವಾರಪೇಟೆ ಸುತ್ತಮುತ್ತ ಸರಣಿ ಕಳ್ಳತನ

June 26, 2018

ಸೋಮವಾರಪೇಟೆ: ಭಾನುವಾರ ರಾತ್ರಿ ಪಟ್ಟಣ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಸರಣಿ ಕಳ್ಳತನವಾಗಿದ್ದು, ಜನರಲ್ಲಿ ಮತ್ತೊಮ್ಮೆ ಆತಂಕ ಸೃಷ್ಠಿಯಾಗಿದೆ. ಭಾನುವಾರ ಬೆಳಗ್ಗಿನ ಜಾವ 4 ಗಂಟೆಯ ಸಮಯದಲ್ಲಿ ಪಟ್ಟಣಕ್ಕೆ ಸಮೀಪದ ಬಿಟಿಸಿಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶು ಪಾಲರ ಕೊಠಡಿಯ ಬೀಗವನ್ನು ಒಡೆದು ಒಳನುಗ್ಗಿದ ಕಳ್ಳರು ಲಾಕರ್ ಒಡೆಯುವ ಪ್ರಯತ್ನ ಮಾಡಿದ್ದಾರೆ. ಶಬ್ದದಿಂದ ಅನು ಮಾನಗೊಂಡ ವಾಚ್‍ಮನ್ ಬೊಬ್ಬೆಹೊಡೆದ ಸಂದರ್ಭ, ವಿಚಲಿತ ನಾದ ಕಳ್ಳ, ಡ್ರಾಯರ್‍ನಲ್ಲಿದ್ದ 250 ರೂ.ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಕಳ್ಳನ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ….

ಹುಲಿ ದಾಳಿಗೆ ಹಸು ಬಲಿ
ಕೊಡಗು

ಹುಲಿ ದಾಳಿಗೆ ಹಸು ಬಲಿ

June 26, 2018

ಮಡಿಕೇರಿ: ಹುಲಿ ದಾಳಿಗೆ ಮತ್ತೊಂದು ಹಸು ಬಲಿಯಾಗಿರುವ ಘಟನೆ ಸುಂಟಿಕೊಪ್ಪ ಸಮೀಪದ ಅತ್ತೂರು ನಲ್ಲೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ರಾಬರ್ಟ್ ಎಂಬುವರಿಗೆ ಸೇರಿದ 3 ವರ್ಷ 9 ತಿಂಗಳು ಪ್ರಾಯದ, ಗರ್ಭ ಧರಿಸಿರುವ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಮೇಯಲು ಹೋಗಿದ್ದ ಹಸು ಕಳೆದೆರಡು ದಿನಗಳಿಂದ ಕಾಣೆಯಾಗಿತ್ತು. ಮನೆಯ ಹತ್ತಿರವಿರುವ ತೊರೆಯ ಬದಿಯಲ್ಲಿ ನೀರು ಕುಡಿಯಲು ಹೋದ ಸಂದರ್ಭ ಹತ್ತಿರದ ಮೀನುಕೊಲ್ಲಿ ಅರಣ್ಯದಿಂದ ಬಂದ ಹುಲಿ ದಾಳಿ ಮಾಡಿರುವ ಬಗ್ಗೆ ಸಂಶಯ…

ಶೀಘ್ರ ಲಘು ವಾಹನ ಸಂಚಾರ: ಅಧಿಕಾರಿಗಳ ಭರವಸೆ
ಕೊಡಗು

ಶೀಘ್ರ ಲಘು ವಾಹನ ಸಂಚಾರ: ಅಧಿಕಾರಿಗಳ ಭರವಸೆ

June 26, 2018

ಮಾಕುಟ್ಟ-ವಿರಾಜಪೇಟೆ ಸಂಪರ್ಕ ರಸ್ತೆಯ ಕಾಮಗಾರಿ ಪರಿಶೀಲಿಸಿದ ಸಂಕೇತ್ ಪೂವಯ್ಯ ಗೋಣಿಕೊಪ್ಪಲು:  ಈ ಬಾರಿ ಸುರಿದ ಭಾರಿ ಮಳೆಯಿಂದ ಕೊಡಗು-ಕೇರಳ ಸಂಪರ್ಕ ರಸ್ತೆ ಕಡಿತಗೊಂಡಿರುವ ವಿರಾಜಪೇಟೆ-ಮಾಕುಟ್ಟ ಸಂಪರ್ಕ ರಸ್ತೆಯ ಕಾಮಗಾರಿಯನ್ನು ಜೆಡಿಎಸ್ ಜಿಲ್ಲಾ ಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಪರಿಶೀಲನೆ ನಡೆಸಿದರು. ಸೋಮವಾರ ಮಾಕುಟ್ಟಕ್ಕೆ ತೆರಳಿದ ಸಂಕೇತ್ ಪೂವಯ್ಯ ಘಟನಾ ಸ್ಥಳದಿಂದ ಮಡಿಕೇರಿ ಲೋಕೋಪಯೋಗಿ ಅಧಿಕಾರಿ ಗಳಾದ ವಿನಯ್ ಕುಮಾರ್‍ರವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತು ಕತೆ ನಡೆಸಿದರು. ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗನೆ ಸರಿಪಡಿಸಿ ಸಾರ್ವ ಜನಿಕರಿಗೆ…

ಕೂಡಿಗೆ ಸೈನಿಕ ಶಾಲೆಯಲ್ಲಿ ಪೊಲೀಸರ ತನಿಖೆ ಚುರುಕು
ಕೊಡಗು

ಕೂಡಿಗೆ ಸೈನಿಕ ಶಾಲೆಯಲ್ಲಿ ಪೊಲೀಸರ ತನಿಖೆ ಚುರುಕು

June 26, 2018

ಕುಶಾಲನಗರ:  ಸೋಮವಾರಪೇಟೆ ತಾಲೂಕಿನ ಕೂಡಿಗೆ ಸೈನಿಕ ಶಾಲೆಯಲ್ಲಿ ಶನಿವಾರ ಸಂಭವಿಸಿದ ವಿದ್ಯಾರ್ಥಿ ಚಿಂಗಪ್ಪ ಅವರ ಅನುಮಾನಾಸ್ಪದ ಸಾವಿನ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ಬಿರುಸಿನ ತನಿಖಾ ಕಾರ್ಯ ಆರಂಭಗೊಂಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಸೋಮ ವಾರಪೇಟೆ ಉಪ ವಿಭಾಗದ ಉಪ ಪೊಲೀಸ್ ಅಧೀಕ್ಷಕ ಮುರುಳೀಧರ್ ನೇತೃತ್ವದಲ್ಲಿ ತನಿಖಾಧಿಕಾರಿ ಕುಶಾಲನಗರದ ವೃತ್ತ ನಿರೀಕ್ಷಕ ಕ್ಯಾತೇಗೌಡ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನವೀನ್ ಗೌಡ ಅವರು ಸೋಮವಾರ ಕೂಡಿಗೆ ಸೈನಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು….

ವಿರಾಜಪೇಟೆ ಲಯನ್ಸ್ ಕ್ಲಬ್‍ಗೆ ಪದಾಧಿಕಾರಿಗಳ ಆಯ್ಕೆ
ಕೊಡಗು

ವಿರಾಜಪೇಟೆ ಲಯನ್ಸ್ ಕ್ಲಬ್‍ಗೆ ಪದಾಧಿಕಾರಿಗಳ ಆಯ್ಕೆ

June 26, 2018

ವಿರಾಜಪೇಟೆ: ವಿರಾಜಪೇಟೆ ಲಯನ್ಸ್ ಕ್ಲಬ್‍ನ ನೂತನ ಅಧ್ಯಕ್ಷರಾಗಿ ಬೊಪ್ಪಂಡ ತ್ರಿಶು ಗಣಪತಿ ಆಯ್ಕೆಯಾಗಿ ದ್ದಾರೆ. ಕಾರ್ಯದರ್ಶಿಯಾಗಿ ಪೊಯ್ಯೆಟ್ಟಿರ ಪ್ರಧಾನ್ ತಮ್ಮಯ್ಯ, ಖಜಾಂಚಿಯಾಗಿ ಕೆ.ಪಿ.ನಿಯಾಝ್ ಅಧಿಕಾರ ವಹಿಸಿಕೊಂಡರು. ಮಂಗೋಲಿಯಾ ರೆಸಾರ್ಟ್‍ನಲ್ಲಿ ನಡೆದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಎಂಜೆಎಫ್ ಕಮಾಂಡರ್ ಲಯನ್ ಕುಕ್ಕೆರ ಉತ್ತಪ್ಪ ಅವರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಇದೇ ಸಂದರ್ಭದಲ್ಲಿ ಎಸ್‍ಎಸ್ ಎಲ್‍ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ವಿಕ್ರಮ್ ಸ್ವಾಗತಿ ಸಿದರು. ಕಾರ್ಯದರ್ಶಿ ಪ್ರಧಾನ್…

ಅರಣ್ಯ ವಿದ್ಯಾಲಯ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ
ಕೊಡಗು

ಅರಣ್ಯ ವಿದ್ಯಾಲಯ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

June 26, 2018

ಗೋಣಿಕೊಪ್ಪಲು:  ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯವನ್ನು ಖಾಸಗಿ ಕಾಲೇಜು ಮಾಡಲು ಮುಂದಾಗಿರು ವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪ್ರಸ್ತುತ ಕಾಲೇಜಿಗೆ ಉತ್ತಮ ಅನುದಾನ ಸೇರಿದಂತೆ ಅಭಿವೃದ್ಧಿಗೆ ಪೂರಕವಾಗಿ ನಡೆಯುತ್ತಿದ್ದು, ಇದನ್ನು ಖಾಸಗಿಗೆ ನೀಡಬಾರದು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಕಾಲೇಜು ಎದುರು ಜಮಾಯಿಸಿದ ವಿದ್ಯಾರ್ಥಿಗಳು ಖಾಸಗಿಗೆ ನೀಡಿದರೆ ಉದ್ಯೋಗ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಹಣದ ಆಮಿಷಕ್ಕೆ ಒಳಗಾಗುವುದರಿಂದ ಪ್ರತಿಭೆಗಳು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ….

ನಾಳೆ ಸಿದ್ದಾಪುರ ಠಾಣೆ ಮುಂದೆ ಪ್ರತಿಭಟನೆ
ಕೊಡಗು

ನಾಳೆ ಸಿದ್ದಾಪುರ ಠಾಣೆ ಮುಂದೆ ಪ್ರತಿಭಟನೆ

June 26, 2018

ಸಿದ್ದಾಪುರ: ಇತ್ತೀಚೆಗೆ ಕಾಡಾನೆ ದಾಳಿಗೆ ಸಿಲುಕಿ ಬೆಳಗಾರರೊ ಬ್ಬರು ಮೃತ ಪಟ್ಟ ಘಟನೆಗೆ ಸಂಬಂಧಿಸಿ ದಂತೆ ಅರಣ್ಯ ಅಧಿಕಾರಿಗಳ ವಿರುದ್ಧ ದಾಖ ಲಾದ ಎಫ್‍ಐಆರ್ ನಿಷ್ಕ್ರಿಯಗೊಳಿಸುವ ಉದ್ದೇಶದಿಂದ ಬಿ ರಿಪೋರ್ಟ್ ಮಾಡಲಾ ಗಿದೆ ಎಂದು ಆರೋಪಿಸಿ ಜೂ.27 ರಂದು ಸಿದ್ದಾಪುರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡುವುದಾಗಿ ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ಕಾನೂನು ಸಲಹೆಗಾರ ಹೇಮಚಂದ್ರ ತಿಳಿಸಿದ್ದಾರೆ ಸಣ್ಣ ಬೆಳಗಾರರ ಸಂಘದ ಕಟ್ಟಡದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಇತ್ತೀಚೆಗೆ ಕರಡಿಗೋಡು ಗ್ರಾಮದ ಕಾಫಿ ಬೆಳೆಗಾರ ಮೋಹನ್…

ಕೂಡಿಗೆ ಸೈನಿಕ ಶಾಲೆ ವಿದ್ಯಾರ್ಥಿ ಅನುಮಾನಾಸ್ಪದ ಸಾವು ಪ್ರಕರಣ :ಉಪ ಪ್ರಾಂಶುಪಾಲೆ ಸೇರಿ ಐವರ ವಿರುದ್ಧ ಕೊಲೆ ಕೇಸ್
ಕೊಡಗು, ಮೈಸೂರು

ಕೂಡಿಗೆ ಸೈನಿಕ ಶಾಲೆ ವಿದ್ಯಾರ್ಥಿ ಅನುಮಾನಾಸ್ಪದ ಸಾವು ಪ್ರಕರಣ :ಉಪ ಪ್ರಾಂಶುಪಾಲೆ ಸೇರಿ ಐವರ ವಿರುದ್ಧ ಕೊಲೆ ಕೇಸ್

June 25, 2018

ಕುಶಾಲನಗರ: ಇಲ್ಲಿಗೆ ಸಮೀ ಪದ ಕೂಡಿಗೆ ಸೈನಿಕ ಶಾಲೆ ವಿದ್ಯಾರ್ಥಿ ಅನು ಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈನಿಕ ಶಾಲೆಯ ಉಪ ಪ್ರಾಂಶುಪಾಲೆ ಸೇರಿದಂತೆ ಐವರ ವಿರುದ್ಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ. ಸೈನಿಕ ಶಾಲೆಯ ಉಪ ಪ್ರಾಂಶುಪಾಲೆ ಸೀಮಾ ತ್ರಿಪಾಠಿ, ಕನ್ನಡ ಶಿಕ್ಷಕ ಮಂಜಪ್ಪ, ಕಂಪ್ಯೂಟರ್ ಶಿಕ್ಷಕ ಗೋವಿಂದರಾಜು, ವಾರ್ಡನ್ ಸುನೀಲ್ ಮತ್ತು ಮ್ಯಾಥ್ಯು ಅವರು ಗಳು ಆರೋಪಕ್ಕೆ ಗುರಿಯಾದವರಾಗಿದ್ದು, ಮೃತ ವಿದ್ಯಾರ್ಥಿ ಎನ್.ಪಿ.ಚಿಂಗಪ್ಪ ತಂದೆ ಸೈನಿಕ ಶಾಲೆಯ ಹಾಕಿ ಕೋಚ್…

1 165 166 167 168 169 187
Translate »