ಶೀಘ್ರ ಲಘು ವಾಹನ ಸಂಚಾರ: ಅಧಿಕಾರಿಗಳ ಭರವಸೆ
ಕೊಡಗು

ಶೀಘ್ರ ಲಘು ವಾಹನ ಸಂಚಾರ: ಅಧಿಕಾರಿಗಳ ಭರವಸೆ

June 26, 2018

ಮಾಕುಟ್ಟ-ವಿರಾಜಪೇಟೆ ಸಂಪರ್ಕ ರಸ್ತೆಯ ಕಾಮಗಾರಿ ಪರಿಶೀಲಿಸಿದ ಸಂಕೇತ್ ಪೂವಯ್ಯ

ಗೋಣಿಕೊಪ್ಪಲು:  ಈ ಬಾರಿ ಸುರಿದ ಭಾರಿ ಮಳೆಯಿಂದ ಕೊಡಗು-ಕೇರಳ ಸಂಪರ್ಕ ರಸ್ತೆ ಕಡಿತಗೊಂಡಿರುವ ವಿರಾಜಪೇಟೆ-ಮಾಕುಟ್ಟ ಸಂಪರ್ಕ ರಸ್ತೆಯ ಕಾಮಗಾರಿಯನ್ನು ಜೆಡಿಎಸ್ ಜಿಲ್ಲಾ ಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಪರಿಶೀಲನೆ ನಡೆಸಿದರು.

ಸೋಮವಾರ ಮಾಕುಟ್ಟಕ್ಕೆ ತೆರಳಿದ ಸಂಕೇತ್ ಪೂವಯ್ಯ ಘಟನಾ ಸ್ಥಳದಿಂದ ಮಡಿಕೇರಿ ಲೋಕೋಪಯೋಗಿ ಅಧಿಕಾರಿ ಗಳಾದ ವಿನಯ್ ಕುಮಾರ್‍ರವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತು ಕತೆ ನಡೆಸಿದರು. ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗನೆ ಸರಿಪಡಿಸಿ ಸಾರ್ವ ಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು.

ಸಂಕೇತ್ ಪೂವಯ್ಯನವರ ದೂರವಾಣಿಗೆ ಸ್ಪಂದಿಸಿದ ಎಇಇ ವಿನಯ್ ಕುಮಾರ್ ಇನ್ನು ನಾಲ್ಕು ದಿನಗಳಲ್ಲಿ ಲಘು ವಾಹನಗಳು ಸಂಚರಿಸಲು ಅನು ಕೂಲ ಕಲ್ಪಿಸಲಾಗುವುದು. ನಂತರ ಭಾರಿ ವಾಹನದ ಓಡಾಟಕ್ಕೆ ಪ್ರಯತ್ನಿಸಲಾಗು ವುದು ಎಂದ ಅವರು, ಕಾಮಗಾರಿಯನ್ನು ನಾಲ್ಕು ಸಹಾಯಕ ಇಂಜಿನಿಯರುಗಳ ಸಹಕಾರದಿಂದ ಹಲವು ಕಾರ್ಮಿಕರು ದುಡಿಯುತ್ತಿರುವುದಾಗಿ ಮಾಹಿತಿ ನೀಡಿ ದರು. ಭೇಟಿ ಸಂದರ್ಭ ಲೋಕೋಪ ಯೋಗಿ ಇಂಜಿನಿಯರುಗಳಾದ ಯತೀಶ್, ನವೀನ್, ಸತೀಶ್, ಸುಬ್ಬಯ್ಯ, ಪಕ್ಷದ ಪ್ರಮುಖರಾದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕ್ಷೇತ್ರ ಅಧ್ಯಕ್ಷ ಎಸ್. ಹೆಚ್. ಮತೀನ್, ವಿರಾಜಪೇಟೆ ನಗರ ಅಧ್ಯಕ್ಷ, ಪಿ.ಎ.ಮಂಜುನಾಥ್, ಮುಖಂಡರಾದ ಟಿ.ಆರ್. ಸಫೀಕ್, ಎಂ.ಕೆ.ನಝೀಬ್, ಯುವ ಜೆಡಿಎಸ್‍ನ ಅಧ್ಯಕ್ಷ ಅಮ್ಮಂಡ ವಿವೇಕ್, ಬೇಟೋಳಿ ಪೆರುಂಬಾಡಿ ಜೆಡಿಎಸ್ ಸ್ಥಾನೀಯ ಸಮಿ ತಿಯ ಮುಖಂಡರು ಹಾಗೂ ಕಾರ್ಯ ಕರ್ತರು ಹಾಗೂ ಹಾಜರಿದ್ದರು.

Translate »