ವಿರಾಜಪೇಟೆ: ವಿರಾಜಪೇಟೆ ಲಯನ್ಸ್ ಕ್ಲಬ್‍ನ ನೂತನ ಅಧ್ಯಕ್ಷರಾಗಿ ಬೊಪ್ಪಂಡ ತ್ರಿಶು ಗಣಪತಿ ಆಯ್ಕೆಯಾಗಿ ದ್ದಾರೆ. ಕಾರ್ಯದರ್ಶಿಯಾಗಿ ಪೊಯ್ಯೆಟ್ಟಿರ ಪ್ರಧಾನ್ ತಮ್ಮಯ್ಯ, ಖಜಾಂಚಿಯಾಗಿ ಕೆ.ಪಿ.ನಿಯಾಝ್ ಅಧಿಕಾರ ವಹಿಸಿಕೊಂಡರು. ಮಂಗೋಲಿಯಾ ರೆಸಾರ್ಟ್‍ನಲ್ಲಿ ನಡೆದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಎಂಜೆಎಫ್ ಕಮಾಂಡರ್ ಲಯನ್ ಕುಕ್ಕೆರ ಉತ್ತಪ್ಪ ಅವರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಇದೇ ಸಂದರ್ಭದಲ್ಲಿ ಎಸ್‍ಎಸ್ ಎಲ್‍ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ವಿಕ್ರಮ್ ಸ್ವಾಗತಿ ಸಿದರು. ಕಾರ್ಯದರ್ಶಿ ಪ್ರಧಾನ್ ತಮ್ಮಯ್ಯ ವಂದಿಸಿದರು.