ನಾಳೆ ಸಿದ್ದಾಪುರ ಠಾಣೆ ಮುಂದೆ ಪ್ರತಿಭಟನೆ
ಕೊಡಗು

ನಾಳೆ ಸಿದ್ದಾಪುರ ಠಾಣೆ ಮುಂದೆ ಪ್ರತಿಭಟನೆ

June 26, 2018

ಸಿದ್ದಾಪುರ: ಇತ್ತೀಚೆಗೆ ಕಾಡಾನೆ ದಾಳಿಗೆ ಸಿಲುಕಿ ಬೆಳಗಾರರೊ ಬ್ಬರು ಮೃತ ಪಟ್ಟ ಘಟನೆಗೆ ಸಂಬಂಧಿಸಿ ದಂತೆ ಅರಣ್ಯ ಅಧಿಕಾರಿಗಳ ವಿರುದ್ಧ ದಾಖ ಲಾದ ಎಫ್‍ಐಆರ್ ನಿಷ್ಕ್ರಿಯಗೊಳಿಸುವ ಉದ್ದೇಶದಿಂದ ಬಿ ರಿಪೋರ್ಟ್ ಮಾಡಲಾ ಗಿದೆ ಎಂದು ಆರೋಪಿಸಿ ಜೂ.27 ರಂದು ಸಿದ್ದಾಪುರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡುವುದಾಗಿ ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ಕಾನೂನು ಸಲಹೆಗಾರ ಹೇಮಚಂದ್ರ ತಿಳಿಸಿದ್ದಾರೆ

ಸಣ್ಣ ಬೆಳಗಾರರ ಸಂಘದ ಕಟ್ಟಡದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಇತ್ತೀಚೆಗೆ ಕರಡಿಗೋಡು ಗ್ರಾಮದ ಕಾಫಿ ಬೆಳೆಗಾರ ಮೋಹನ್ ದಾಸ್ ಎಂಬುವರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು.

ಅವರ ಸಾವಿಗೆ ಪರೋಕ್ಷವಾಗಿ ಅರಣ್ಯ ಅಧಿಕಾರಿಗಳೇ ಕಾರಣ ಎಂದು ಆರೋ ಪಿಸಿ ಹೋರಾಟ ಸಮಿತಿ ಹಾಗೂ ರೈತ ಸಂಘ, ಕಾರ್ಮಿಕ ಸಂಘದ ಪ್ರಮುಖರು ಅರಣ್ಯ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಸೂಚನೆಯಂತೆ ಅರಣ್ಯ ಅಧಿಕಾರಿಗಳಾದ ಸಿಸಿಎಫ್ ಲಿಂಗರಾಜು, ಡಿಎಫ್‍ಒ ಮರಿಯ ಕ್ರಿಸ್ತರಾಜ್, ಆರ್‍ಎಫ್‍ಒ ಗಂಗಾಧರ್ ವಿರುದ್ಧ ಮೃತರ ಸಹೋದರ ಕೆ.ಎ. ಸೋಮಣ್ಣ ನೀಡಿದ ದೂರಿನ ಮೇರೆಗೆ ಎಫ್‍ಐಆರ್ ದಾಖಲಿಸಲಾಗಿತ್ತು. ನಂತ ರದ ದಿನಗಳಲ್ಲಿ ಅರಣ್ಯ ಅಧಿಕಾರಿಗಳನ್ನು ಸಂರಕ್ಷಿಸಲು ಪೊಲೀಸ್ ಅಧಿಕಾರಿಗಳು ದೂರುದಾರರನ್ನು ಠಾಣೆಗೆ ಕರೆಸಿ ಬೆದರಿಸಿ ಖಾಲಿ ಪತ್ರದಲ್ಲಿ ಸಹಿ ಪಡೆದು ಬಿ ರಿಪೋರ್ಟ್ ಮಾಡಿದ್ದಾರೆ ಎಂದು ಆರೋಪಿಸಿದರು.

ನ್ಯಾಯಾಲಯದಿಂದ ಬಿ ರಿಪೋರ್ಟ್ ಹಿಂದಕ್ಕೆ ಪಡೆದು ಮರು ತನಿಖೆ ನಡೆಸ ಬೇಕೆಂದು ಹಾಗೂ ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿ ಠಾಣೆ ಮುಂದೆ ಹೊರಾಟ ಸಮಿತಿ, ಕಾರ್ಮಿಕ ಸಂಘಟನೆ, ರೈತ ಸಂಘ ಸೇರಿದಂತೆ ಸಾರ್ವಜನಿಕರನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸುವುದಾಗಿ ಮಂಡೆಪಂಡ ಪ್ರಮೀಣ್ ಬೊಪ್ಪಯ್ಯ ತಿಳಿಸಿದರು.

ಈ ಸಂದರ್ಭ ಸಭೆಯಲ್ಲಿ ಸಮಿತಿ ಪ್ರಮುಖರಾದ ನಂದ ಗಣಪತಿ, ನಾಣಯ್ಯ, ಪ್ರಭಾಕರ್, ಗಪ್ಪಣ್ಣ, ಸುಜಯ್, ಮಾಚ್ಚಯ್ಯ, ಭರತ್, ರಮೇಶ್, ರಜೀತ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »