ವಿರಾಜಪೇಟೆ.ಮಾ,4-ಉತ್ತಮ ಆಹಾರ ಸೇವನೆಯಿಂದ ಮಧುಮೇಹ ಖಾಯಿಲೆ ಗುಣಪಡಿಸಲು ಸಾಧ್ಯ. ಎಂದು ಅಮೇರಿಕ ಸಂಯುಕ್ತ ಸಂಸ್ಥಾನದ ಕ್ಯಾಲಿಫೋರ್ನಿಯಾದಲ್ಲಿ ವೈದ್ಯಕೀಯ ವೃತ್ತಿ ಹೊಂದಿರುವ ಪುತ್ತೂರು ನಿವಾಸಿ ಡಾ||.ಸಂದೀಪ್ ಎಸ್.ನಾಯಕ್ ಹೇಳಿದ್ದಾರೆ. ಅವರು ಇಂದು ವಿರಾಜಪೇಟೆಗೆ ಸಮೀಪದ ಅರಮೇರಿಯ ಶ್ರೀ ಕಳಂಚೇರಿ ಮಠದಲ್ಲಿ ಹೊಂಬೆಳಕು ಮಾಸಿಕ ತತ್ವ ಚಿಂತನ ಗೋಷ್ಠಿಯ 196ನೇ ಕಿರಣದಲ್ಲಿ “ಮಧುಮೇಹ ಖಾಯಿಲೆ-ಅರಿವು ಮತ್ತು ಪರಿಹಾರ ವಿಷಯವಾಗಿ ಉಪನ್ಯಾಸ ನೀಡಿದರು. “ಸರಕಾರಗಳ ಮುಂದಾಲೊಚನೆ ಮತ್ತು ಗೊತ್ತು ಗುರಿಯಿಲ್ಲದ ಯೋಜನೆಗಳಿಂದಾಗಿ ಆಧುನಿಕ ರೋಗಗಳು ಹೆಚ್ಚಾಗುತ್ತಿವೆ. ಮಧುಮೇಹ ಖಾಯಿಲೆಯ ಕುರಿತು ಮೌಢ್ಯತೆ…
ಮೀಸಲಾತಿ ಕಡಿತ ವಿರೋಧಿಸಿ ಅರಣ್ಯ ವಿದ್ಯಾರ್ಥಿಗಳ ಪ್ರತಿಭಟನೆ
March 5, 2020ಗೋಣಿಕೊಪ್ಪ,ಮಾ.4-ಅರಣ್ಯ ಇಲಾಖೆ ಅಧಿಕಾರಿಗಳ ನೇಮಕ ಪ್ರಕಿಯೆಯಲ್ಲಿ ಅರಣ್ಯ ಶಾಸ್ತ್ರ ವಿದ್ಯಾರ್ಥಿಗಳ ಮೀಸಲಾತಿ ಯನ್ನು ಕಡಿತಗೊಳಿಸಿರುವ ಕ್ರಮವನ್ನು ಖಂಡಿಸಿ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ವಿದ್ಯಾರ್ಥಿಗಳು ಪೊನ್ನಂಪೇಟೆ ಯಲ್ಲಿ ಪ್ರತಿಭಟನೆ ನಡೆಸಿದರು. ಬೇರೆಯವರಿಗೆ ಅವಕಾಶ ಮಾಡಿ ಕೊಡಲು ನಮ್ಮ ಭವಿಷ್ಯದ ಜೊತೆ ಆಟವಾ ಡುತ್ತಿರುವುದು ಸರಿಯಲ್ಲ. ಇದರಿಂದಾಗಿ ಶೇ. ಮೀಸಲಾತಿ ನಮಗೆ ನೀಡಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು. ಡಿಆರ್‍ಎಫ್‍ಒ, ಅರ್‍ಎಫ್‍ಒ ಹಾಗೂ ಎಸಿಎಫ್ ಹುದ್ದೆಗಳಿಗೆ ಅರಣ್ಯ ಶಾಸ್ತ್ರ ಓದಿರುವ ವಿದ್ಯಾರ್ಥಿಗಳಿಗೆ ಶೇ. 75 ರಷ್ಟು ಮೀಸಲಾತಿ ನೀಡಿತ್ತು. ಇದರಿಂದಾಗಿ…
ಕುಶಾಲನಗರದ ಮೂವರು ವಂಚಕರ ಬಂಧನ: ಇನ್ನೂ ನಾಲ್ವರು ಆರೋಪಿಗಳಿಗಾಗಿ ಶೋಧ
March 4, 2020ಮಡಿಕೇರಿ,ಮಾ.3-ಆನ್‍ಲೈನ್ ಮೂಲಕ ಕುಶಾಲನಗರದ ವ್ಯಕ್ತಿಯೊಬ್ಬರಿಗೆ 10.50 ಲಕ್ಷ ರೂ.ಗಳನ್ನು ವಂಚಿಸಿದ್ದ 3 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ. ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ 10.50ಲಕ್ಷ ರೂ. ವಂಚನೆ ಪ್ರಕರಣ ದಾಖಲಾದ ಪ್ರಕರಣವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಅವರು ಜಿಲ್ಲಾ ಅಪರಾಧ ಪತ್ತೆ ದಳಕ್ಕೆ ಒಪ್ಪಿಸಿ ತನಿಖೆ ಮಾಡುವಂತೆ ಸೂಚಿಸಿದ್ದರು. ಅದರಂತೆ ಪ್ರಕರಣದ ಜಾಡು ಹಿಡಿದು ತನಿಖೆ ಆರಂಭಿಸಿದ ಕೊಡಗು ಡಿಸಿಐಬಿ ತಂಡ, ವಂಚನೆಯ ಜಾಲ ರಾಜ್ಯವ್ಯಾಪಿ ಹರಡಿಕೊಂಡಿರುವುದನ್ನು…
ವಿರಾಜಪೇಟೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
March 4, 2020ವೀರಾಜಪೇಟೆ,ಮಾ,3-ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿ ವೃದ್ಧಿ ಕಾಮಗಾರಿಗಳಿಗಾಗಿ ಸರಕಾರದಿಂದ ರೂ.3.5 ಕೋಟಿ ಅನುದಾನ ಬಂದಿದ್ದು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುವ ಸಂದರ್ಭ ಸ್ಥಳೀಯರು ಸಹಕಾರ ನೀಡು ವಂತಾಗಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2019-20ನೇ ಸಾಲಿನಲ್ಲಿ ಮಳೆಯಿಂದ ಹಾನಿಗೊಳಗಾದ ವಿಜಯ ನಗರದ ಮುಖ್ಯ ರೆಸ್ತೆಯ ಮಟನ್ ಮಾರ್ಕೆಟ್ ಬಳಿ ರೂ,25 ಲಕ್ಷ ಅನುದಾನ ದಲ್ಲಿ ಕಾಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ ಪಟ್ಟಣದ ಸುಭಾಶ್ ನಗರದಿಂದ ನೆಹರುನಗರಕ್ಕೆ…
ಸಂವಿಧಾನದ ಆಶಯವೇ ಸಾಮಾಜಿಕ ನ್ಯಾಯ
March 4, 2020ವೀರಾಜಪೇಟೆ,ಮಾ.3-ಭಾರತದ ಸಂವಿಧಾನದ ಮೂಲ ಆಶಯವೇ ಸಾಮಾಜಿಕ ನ್ಯಾಯ, ಸಂವಿಧಾನವು ಸಾಮಾ ಜಿಕ ನ್ಯಾಯವನ್ನು ಅನುಷ್ಠಾನಗೊಳಿಸುವ ಸಲುವಾಗಿ ಪರಿಶಿಷ್ಟ ಜಾತಿ-ಪ.ಪಂಗಡ ಗಳಿಗೆ ಮೀಸಲಾತಿಯನ್ನು ಕಲ್ಪಿಸಿಕೊಟ್ಟಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ವಿ.ಕೋನಪ್ಪ ಹೇಳಿದರು. `ಸಾಮಾಜಿಕ ದಿನಾಚರಣೆ’ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಪಾಲಿಬೆಟ್ಟದ ಸರ್ಕಾರಿ ಪ್ರೌಢ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಪ್ರೌಢ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಆರ್ಥಿಕ ಶೈಕ್ಷಣಿಕ, ನೈಸರ್ಗಿಕ ಮೂಲ ಸೌಲಭ್ಯ ಗಳನ್ನು…
ಜಿಲ್ಲೆಯಲ್ಲಿ ವರ್ಷಧಾರೆ ಒಂದೆಡೆ ಹರ್ಷ, ಮತ್ತೊಂದೆಡೆ ಆತಂಕ
March 3, 2020ಮಡಿಕೇರಿ,ಮಾ.2-ಕೊಡಗು ಜಿಲ್ಲೆಯ ವಿವಿಧ ಗ್ರಾಮೀಣ ಭಾಗಗಳಲ್ಲಿ ಕಳೆದ 2 ದಿನಗಳಿಂದ ತುಂತುರು ಮಳೆಯಾಗು ತ್ತಿದೆ. ಸೋಮವಾರ ಬೆಳಗಿನ ಜಾವ ಭಾಗ ಮಂಡಲದಲ್ಲಿ ಕೆಲ ಹೊತ್ತು ಮಳೆಯಾದರೆ ದಕ್ಷಿಣ ಕೊಡಗಿನ ವಿವಿಧ ಭಾಗಗಳಲ್ಲಿ ತುಂತುರು ಮಳೆಯಾದ ಬಗ್ಗೆ ವರದಿಯಾಗಿದೆ. ಮಡಿಕೇರಿ ಮತ್ತು ಸುತ್ತಲ ಗ್ರಾಮ ಗಳಲ್ಲಿ ದಟ್ಟ ಮೋಡ ಮತ್ತು ಮಂಜು ಕವಿದ ವಾತಾವರಣದೊಂದಿಗೆ ತುಂತುರು ಮಳೆಯಾಗಿದೆ. ನಾಪೋಕ್ಲು, ಚೇರಂ ಬಾಣೆ, ಮಕ್ಕಂದೂರು, ಕಾಲೂರು, ಕುಶಾಲ ನಗರದ ಬಸವನಹಳ್ಳಿಯಲ್ಲಿ ವ್ಯಾಪಕ ಮಳೆಯಾಗಿದೆ. ದಕ್ಷಿಣ ಕೊಡಗಿನ ನಾಲ್ಕೇರಿ, ಸೊಡ್ಲೂರು ವ್ಯಾಪ್ತಿಯಲ್ಲಿ…
ಕುಶಾಲನಗರ ರೈಲ್ವೆ ಮಾರ್ಗಕ್ಕೆ ಅನುದಾನ ಬಿಡುಗಡೆ ಕೋರಿ ಸಿಎಂಗೆ ಮನವಿ
March 3, 2020ಮಡಿಕೇರಿ,ಮಾ.2-ಮೈಸೂರು (ಬೆಳಗೊಳ) ಕುಶಾಲನಗರ ರೈಲ್ವೇ ಮಾರ್ಗಕ್ಕೆ 2020-21ರ ರಾಜ್ಯ ಬಜೆಟ್‍ನಲ್ಲಿ ಪ್ರಾರಂ ಭಿಕ ಅನುದಾನ ಘೋಷಣೆ ಮಾಡುವಂತೆ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಕೊಡಗು ಜಿಲ್ಲೆ ಭೌಗೋಳಿಕವಾಗಿ ಚಿಕ್ಕ ದಾಗಿದ್ದು, ರೈಲ್ವೇ ಯೋಜನೆಯಿಂದ ಹೊರಗೆ ಉಳಿಯಲ್ಪಟ್ಟ ಜಿಲ್ಲೆಯಾಗಿ ಗುರು ತಿಸಿಕೊಂಡಿದೆ. ಬ್ರಿಟಿಷರ ಕಾಲದಿಂದಲೂ ಈ ಜಿಲ್ಲೆಗೆ ರೈಲ್ವೇ ಮಾರ್ಗ ಅಳವಡಿಸ ಬೇಕೆನ್ನುವ ಬೇಡಿಕೆ ಇತ್ತು. ಆದರೆ ಯಾವ ಸರಕಾರ ಬಂದರೂ ಈ ಯೋಜನೆಗೆ ಅನುಮೋದನೆ ದೊರೆಯದ…
ವಿದ್ಯುತ್ ಸಮಸ್ಯೆ ವಿರುದ್ಧ ಬಾಳೆಲೆಯಲ್ಲಿ ಪ್ರತಿಭಟನೆ
March 3, 2020ಗೋಣಿಕೊಪ್ಪ,ಮಾ.2-ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಬಾಳೆಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು.ಸೆಸ್ಕ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಪಟ್ಟಣ ಬಂದ್, ಪ್ರತಿಭಟನಾ ಮೆರವಣಿಗೆ, ಮಾನವ ಸರಪಳಿ ಮೂಲಕ ಎಚ್ಚರಿಸಿದರು. ಗ್ರಾಮದ ಶ್ರೀರಾಮ ವೃತ್ತದಿಂದ ಮೆರವಣಿಗೆ ಮೂಲಕ ಸೆಸ್ಕ್ ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಸೆಸ್ಕ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಬಾಳೆಲೆ, ನಿಟ್ಟೂರು, ಕಾರ್ಮಾಡು, ಸುಳುಗೋಡು, ಪೊನ್ನಪ್ಪಸಂತೆ, ಬಿಳೂರು, ರಾಜಾಪುರ ಭಾಗದ ಕೃಷಿಕರು ಭಾಗವಹಿಸಿದರು. ಮುಖ್ಯ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸ್ಥಳೀಯ ಸೆಸ್ಕ್ ಜೆಇ ಮನು ಅವರ ಅಸಮರ್ಪಕ ಸೇವೆಯಿಂದ ತೊಂದರೆಯಾಗುತ್ತಿದೆ…
ಕೆದಮುಳ್ಳೂರಿನಲ್ಲಿ ನಿರಾಶ್ರಿತರ ಮನೆ ನಿರ್ಮಾಣಕ್ಕೆ ಭೂಮಿಪೂಜೆ
March 3, 2020ವೀರಾಜಪೇಟೆ,ಮಾ.2-ಪರಿಶಿಷ್ಟ ಪಂಗ ಡದ ಯೋಜನೆಯಡಿಯಲ್ಲಿ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳು ಎಕರೆ ಪೈಸಾರಿ ಜಾಗದ ಬಾರಿಕಾಡುವಿನಲ್ಲಿ ನಿರಾ ಶ್ರಿತ ಫಲಾನುಭವಿಗಳಿಗೆ 129 ಮನೆಗಳ ನಿರ್ಮಾಣ ಮಾಡಲು ಮತ್ತು ಮೂಲ ಭೂತ ಸೌಲಭ್ಯಗಳನ್ನು ಒದಗಿಸಲು ಒಟ್ಟು ರೂ,13 ಕೋಟಿ ಅನುದಾನದ ಯೋಜನೆ ತಯಾರಿಸಿರುವುದಾಗಿ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ವೀರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿ ಕಾಡುವಿನಲ್ಲಿ ನಿರಾಶ್ರಿತರ ಮನೆಗಳ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಬೋಪಯ್ಯ, ಪೈಸಾರಿ ಜಾಗದಲ್ಲಿ ಸರಕಾರದ…
ಕರ್ಣಂಗೇರಿ ಬೆಟ್ಟದಲ್ಲಿ ಮೈದಾಳುತ್ತಿದೆ ಸಾಲುಮರದ ತಿಮ್ಮಕ್ಕ ಪಾರ್ಕ್
March 2, 2020ಮಡಿಕೇರಿ,ಮಾ.1-ನಗರದಲ್ಲಿ ಸ್ವಾಗತ ಬೆಟ್ಟವೆಂದೇ ಹೆಸರುವಾಸಿಯಾಗಿರುವ ಕರ್ಣಂಗೇರಿ ಬೆಟ್ಟದಲ್ಲಿ ಸದ್ದಿಲ್ಲದೆ ಸಾಲು ಮರದ ತಿಮ್ಮಕ್ಕ ಪಾರ್ಕ್‍ವೊಂದು ಸುಮಾರು 45 ಎಕರೆ ಅರಣ್ಯ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿದೆ. ಪ್ರವಾಸೋದ್ಯಮ ಮತ್ತು ಪರಿಸರ ಜಾಗೃತಿಯ ಉದ್ದೇಶದಿಂದ ನಗರದ ಸಮೀಪದಲ್ಲೇ ಸಾಲುಮರದ ತಿಮ್ಮಕ್ಕ ಹೆಸರಿನ ಟ್ರೀ ಪಾರ್ಕ್ ಯೋಜನೆ ಸಾಕಾರಗೊಳ್ಳು ತ್ತಿದ್ದು, ಸುಮಾರು 50 ಲಕ್ಷ ವೆಚ್ಚದಲ್ಲಿ ಪಾರ್ಕ್ ನಿರ್ಮಾಣ ಗೊಳ್ಳುತ್ತಿದೆ. ಅರಣ್ಯ ಪ್ರದೇಶದ ಅಭಿವೃದ್ಧಿ ಮತ್ತು ಪ್ರವಾಸಿಗರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಹಿಂದಿನ ಸರಕಾರದ ಅರಣ್ಯ ಸಚಿವ ರಮಾನಾಥ್ ರೈ ಅವರು…