ಕುಶಾಲನಗರ ರೈಲ್ವೆ ಮಾರ್ಗಕ್ಕೆ ಅನುದಾನ ಬಿಡುಗಡೆ ಕೋರಿ ಸಿಎಂಗೆ ಮನವಿ
ಕೊಡಗು

ಕುಶಾಲನಗರ ರೈಲ್ವೆ ಮಾರ್ಗಕ್ಕೆ ಅನುದಾನ ಬಿಡುಗಡೆ ಕೋರಿ ಸಿಎಂಗೆ ಮನವಿ

March 3, 2020

ಮಡಿಕೇರಿ,ಮಾ.2-ಮೈಸೂರು (ಬೆಳಗೊಳ) ಕುಶಾಲನಗರ ರೈಲ್ವೇ ಮಾರ್ಗಕ್ಕೆ 2020-21ರ ರಾಜ್ಯ ಬಜೆಟ್‍ನಲ್ಲಿ ಪ್ರಾರಂ ಭಿಕ ಅನುದಾನ ಘೋಷಣೆ ಮಾಡುವಂತೆ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕೊಡಗು ಜಿಲ್ಲೆ ಭೌಗೋಳಿಕವಾಗಿ ಚಿಕ್ಕ ದಾಗಿದ್ದು, ರೈಲ್ವೇ ಯೋಜನೆಯಿಂದ ಹೊರಗೆ ಉಳಿಯಲ್ಪಟ್ಟ ಜಿಲ್ಲೆಯಾಗಿ ಗುರು ತಿಸಿಕೊಂಡಿದೆ. ಬ್ರಿಟಿಷರ ಕಾಲದಿಂದಲೂ ಈ ಜಿಲ್ಲೆಗೆ ರೈಲ್ವೇ ಮಾರ್ಗ ಅಳವಡಿಸ ಬೇಕೆನ್ನುವ ಬೇಡಿಕೆ ಇತ್ತು.

ಆದರೆ ಯಾವ ಸರಕಾರ ಬಂದರೂ ಈ ಯೋಜನೆಗೆ ಅನುಮೋದನೆ ದೊರೆಯದ ಹಿನ್ನಲೆಯಲ್ಲಿ ಸಾಕಾರವಾ ಗಿಲ್ಲ. ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಸರಕಾರ 2018-19ನೇ ಸಾಲಿನ ಬಜೆಟ್‍ನಲ್ಲಿ 1899 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಿದೆ. ತದನಂತರ ರೈಲ್ವೇ ರಾಜ್ಯ ಸಚಿವ ಸುರೇಶ್ ಅಂಗಡಿ ಮೈಸೂರು-ಕುಶಾಲನಗರ ರೈಲ್ವೇ ಯೋಜನೆಗೆ ಅನುದಾನ ಕೋರಿ ತಮಗೂ ಮನವಿ ಪತ್ರ ಬರೆದಿದ್ದರು ಎಂದು ಮುಖ್ಯ ಮಂತ್ರಿಗಳ ಗಮನಕ್ಕೆ ತರಲಾಗಿದೆ.

ಈ ಹಿನ್ನಲೆಯಲ್ಲಿ ಕೂಡ ಸಕಾರಾತ್ಮಕ ವಾಗಿ ಸ್ಪಂದಿಸಿ ಮೈಸೂರಿನಿಂದ ರಾಣಿಗೇಟ್ ವರೆಗಿನ 87 ಕಿ.ಮೀ. ಉದ್ದದ ಹೊಸ ಸಂಪರ್ಕ ರೈಲ್ವೇ ಯೋಜನೆಗೆ ರಾಜ್ಯ ಸರ ಕಾರದಿಂದ ಉಚಿತವಾಗಿ ಭೂಮಿಯನ್ನು ನೀಡುವಂತೆ ಮತ್ತು ಸದರಿ ಯೋಜನೆಗೆ ಅಗತ್ಯವಿರುವ ಪ್ರಾರಂಭಿಕ ಅನುದಾನವನ್ನು ಈ ಸಾಲಿನ ಬಜೆಟ್‍ನಲ್ಲಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಕೋರಲಾಗಿದೆ.

ಈ ಸಂದರ್ಭ ಜೊತೆಯಲ್ಲಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಅಪ್ಪಚ್ಚು ರಂಜನ್ ಅವರ ಬೇಡಿಕೆಗೆ ಧ್ವನಿಗೂಡಿಸಿದ್ದಾರೆ.

Translate »