ಕೊಡಗು

ಕೊಡಗಿನ ಹಲವೆಡೆ ಮಳೆ
ಕೊಡಗು

ಕೊಡಗಿನ ಹಲವೆಡೆ ಮಳೆ

March 27, 2022

ಮಡಿಕೇರಿ, ಮಾ.26- ಬೇಸಿಗೆಯ ಬೇಗೆಯಿಂದ ಬಸವಳಿದಿದ್ದ ಮಡಿಕೇರಿ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಶನಿವಾರ ಸಂಜೆ ವೇಳೆಗೆ ಭಾರೀ ಮಳೆ ಸುರಿದಿದೆ. ಗುಡುಗು-ಗಾಳಿ ಸಹಿತ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಧರೆಗೆ ತಂಪೆರೆದಂತಾಗಿದೆ. ಏಕಾಏಕಿ ಮಳೆ ಸುರಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಂಗಡಿ ಮಳಿಗೆಗಳ ಮುಂದೆ ಆಶ್ರಯ ಪಡೆದಿದ್ದು ಕಂಡು ಬಂತು. ಮಡಿಕೇರಿ ನಗರ, ಗಾಳಿಬೀಡು, ಮಕ್ಕಂದೂರು, ಹೆಮ್ಮೆತ್ತಾಳು, ಮೇಘತ್ತಾಳು, ಮುಕೋಡ್ಲು, ಹಟ್ಟಿಹೊಳೆ, ಮೇಕೇರಿ, ಹಾಕತ್ತೂರು, ಬಿಳಿಗೇರಿ ವ್ಯಾಪ್ತಿಯಲ್ಲಿ ಮಳೆಯಾಗಿದ್ದು, ಕಾಫಿ ಬೆಳೆಗಾರರಿಗೆ ವರವಾಗಿ ಪರಿಣಮಿಸಿದೆ….

ಕೂಡಿಗೆ ಸೈನಿಕ ಶಾಲೆಯಲ್ಲಿ ಕೊಡಗಿನ  ವಿದ್ಯಾರ್ಥಿಗಳಿಗೆ ಮೀಸಲಾತಿಗೆ ಆಗ್ರಹ
ಕೊಡಗು

ಕೂಡಿಗೆ ಸೈನಿಕ ಶಾಲೆಯಲ್ಲಿ ಕೊಡಗಿನ ವಿದ್ಯಾರ್ಥಿಗಳಿಗೆ ಮೀಸಲಾತಿಗೆ ಆಗ್ರಹ

March 25, 2022

ಮಡಿಕೇರಿ, ಮಾ.24- ‘ಕೂಡಿಗೆ ಸೈನಿಕ ಶಾಲೆ’ಯಲ್ಲಿ ಕೊಡಗಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶವನ್ನು ಒದಗಿಸಲು ‘ಮೀಸಲಾತಿ’ಯನ್ನು ನಿಗದಿ ಪಡಿಸಬೇಕು. ಶಾಲೆಯಲ್ಲಿನ ಕನಿಷ್ಟ ‘ಡಿ’ ಗ್ರೂಪ್ ಹುದ್ದೆಗಳನ್ನಾದರೂ ಜಿಲ್ಲೆಯ ವರಿಗೆ ನೀಡಲು ಅಗತ್ಯ ಕ್ರಮ ಕೈಗೊಳ್ಳು ವಂತೆ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಸೈನಿಕ ಶಾಲೆ ನಿರ್ಮಾಣಕ್ಕೆ ತಾವು ಕಾರಣವೆಂದು ಹೇಳಿಕೊಳ್ಳುವ ಶಾಸಕ ಅಪ್ಪಚ್ಚು ರಂಜನ್ ಅವರು ಸಹ ಸೈನಿಕ ಶಾಲೆಯಲ್ಲಿ ಜಿಲ್ಲೆಯ ಮಕ್ಕಳ ಓದಿಗೆ ಹೆಚ್ಚಿನ ಅವಕಾಶ…

ಜುಲೈ ಅಂತ್ಯಕ್ಕೆ ಭಾಗಮಂಡಲ ಫ್ಲೈಓವರ್ ಕಾಮಗಾರಿ ಪೂರ್ಣ
ಕೊಡಗು

ಜುಲೈ ಅಂತ್ಯಕ್ಕೆ ಭಾಗಮಂಡಲ ಫ್ಲೈಓವರ್ ಕಾಮಗಾರಿ ಪೂರ್ಣ

March 25, 2022

ಮಡಿಕೇರಿ, ಮಾ.24- ಕೊಡಗಿನ ಭಾಗಮಂಡಲದಲ್ಲಿ ನಿರ್ಮಾಣದ ಹಂತ ದಲ್ಲಿರುವ ಫ್ಲೈ ಓವರ್ ಅನ್ನು 2022ರ ಜುಲೈ ಅಂತ್ಯಕ್ಕೆ ಪೂರ್ಣ ಗೊಳಿಸಲಾ ಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಅವರು ಸದನಕ್ಕೆ ಮಾಹಿತಿ ನೀಡಿದ್ದಾರೆ. ಭಾಗಮಂಡಲದಲ್ಲಿ ನಿರ್ಮಾಣ ವಾಗುತ್ತಿರುವ ಫ್ಲೈ ಓವರ್ ಕಾಮಗಾರಿಯ ಪ್ರಗತಿ, ಅನುದಾನ, ಕಾಮಗಾರಿ ಪೂರ್ಣ ವಾಗುವ ಕಾಲಮಿತಿಗಳ ವಿವರ ಕುರಿತು ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಸರಕಾರವನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವ ಗೋವಿಂದ ಕಾರಜೋಳ, ಕಾವೇರಿ ನೀರಾವರಿ ನಿಗಮದ ಮೂಲಕ ಫ್ಲೈ…

ಕಾಫಿ ಬೆಳೆಗಾರರ 10 ಹೆಚ್‍ಪಿವರೆಗಿನ ಪಂಪ್‍ಸೆಟ್‍ಗೆ  ಉಚಿತ ವಿದ್ಯುತ್
ಕೊಡಗು

ಕಾಫಿ ಬೆಳೆಗಾರರ 10 ಹೆಚ್‍ಪಿವರೆಗಿನ ಪಂಪ್‍ಸೆಟ್‍ಗೆ ಉಚಿತ ವಿದ್ಯುತ್

March 23, 2022

ಮಡಿಕೇರಿ,ಮಾ.22-ಕಾಫಿ ಬೆಳೆಗಾರರಿಗೆ 10 ಹೆಚ್‍ಪಿವರೆಗೆ ಉಚಿತ ವಿದ್ಯುತ್ ಪೂರೈಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಇಂದು ಘೋಷಿ ಸಿದ್ದಾರೆ. ಆ ಮೂಲಕ ಕಾಫಿ ಬೆಳೆಗಾರರ ಬಹುದಿನಗಳ ಬೇಡಿಕೆ ಯನ್ನು ರಾಜ್ಯ ಸರ್ಕಾರ ಈಡೇರಿಸಿದಂತಾಗಿದೆ. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, 10 ಹೆಚ್.ಪಿ. ವರೆಗಿನ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಬೇಕೆನ್ನುವುದು ಕಾಫಿ ಕೃಷಿಕರ ಬಹು ದಿನಗಳ ಬೇಡಿಕೆ ಯಾಗಿದೆ. ಈ ಬಗ್ಗೆ ಹಲವು ಬಾರಿ ಸರ್ಕಾ ರದ ಗಮನಕ್ಕೆ ತಂದಿ ದ್ದರೂ…

ಕಾಡಾನೆ ಹಾವಳಿ ನಿಯಂತ್ರಣಕ್ಕೆ ಆಗ್ರಹ
ಕೊಡಗು

ಕಾಡಾನೆ ಹಾವಳಿ ನಿಯಂತ್ರಣಕ್ಕೆ ಆಗ್ರಹ

March 23, 2022

ಮಡಿಕೇರಿ, ಮಾ.22- ಜಿಲ್ಲೆಯಲ್ಲಿ ಕಾಡಾನೆಯ ಹಾವಳಿ ಹೆಚ್ಚಾಗುತ್ತಿದ್ದು, ಇವುಗಳ ನಿಯಂತ್ರಣಕ್ಕೆ ವಾರ್ಷಿಕವಾಗಿ ಸೂಕ್ತ ನಿರ್ವಹಣೆ ಮಾಡಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಆಗ್ರಹಿಸಿದರು. ರಾಜ್ಯದಲ್ಲಿ ಕಾಡಾನೆ ಸೇರಿದಂತೆ ಇತರೆ ವನ್ಯ ಪ್ರಾಣಿ ಮಾನವ ಸಂಘರ್ಷ ಕುರಿತು ವಿಕಾಸ ಸೌಧದ ಸಭಾಂಗಣದಲ್ಲಿ ಮಂಗಳವಾರ ಅರಣ್ಯ ಸಚಿವ ಉಮೇಶ್ ಕತ್ತಿ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಬೀಳುವುದರಿಂದ ಆನೆ ಕಂದಕ ನಿರ್ವಹಣೆ ಕಷ್ಟ ಸಾಧ್ಯವಾಗಿದ್ದು, ವಾರ್ಷಿಕವಾಗಿ ಸೂಕ್ತ…

ಮಡಿಕೇರಿ ಮಾರ್ಗ ಮಂಗಳೂರು-ಮೈಸೂರು ರಸ್ತೆ  ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಆದೇಶ
ಕೊಡಗು

ಮಡಿಕೇರಿ ಮಾರ್ಗ ಮಂಗಳೂರು-ಮೈಸೂರು ರಸ್ತೆ ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಆದೇಶ

March 18, 2022

ಮಡಿಕೇರಿ, ಮಾ.17- ಕರಾವಳಿ ನಗರಿ ಮಂಗಳೂರಿ ನಿಂದ ಮಡಿಕೇರಿ ಮಾರ್ಗವಾಗಿ ಮೈಸೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಸಚಿವರನ್ನು ಭೇಟಿ ಮಾಡಿದ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃ ತ್ವದ ನಿಯೋಗ ಈಗಿರುವ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು, ಸಾಕಷ್ಟು ಅಪಘಾತಗಳು ಸಂಭವಿ ಸುತ್ತಿರುವ ಕುರಿತು…

ವನ್ಯಪ್ರಾಣಿಗಳು-ಮಾನವ ಸಂಘರ್ಷಕ್ಕೆ ಕಾರಣವಾಗಿರುವ ಹೆದ್ದಾರಿ, ರೈಲ್ವೆ ಮಾರ್ಗ ಯೋಜನೆ ಕೊಡಗಿಗೆ ಅವಶ್ಯವಿಲ್ಲ
ಕೊಡಗು

ವನ್ಯಪ್ರಾಣಿಗಳು-ಮಾನವ ಸಂಘರ್ಷಕ್ಕೆ ಕಾರಣವಾಗಿರುವ ಹೆದ್ದಾರಿ, ರೈಲ್ವೆ ಮಾರ್ಗ ಯೋಜನೆ ಕೊಡಗಿಗೆ ಅವಶ್ಯವಿಲ್ಲ

March 17, 2022

ಮಡಿಕೇರಿ, ಮಾ.16- ವನ್ಯ ಪ್ರಾಣಿಗಳು ಮತ್ತು ಮಾನವನ ನಡುವಿನ ಸಂಘರ್ಷ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು, ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣವಾಗುವ ಚತುಷ್ಪಥ ಹೆದ್ದಾರಿ, ರೈಲ್ವೆ ಮಾರ್ಗ, ಭೂ ಪರಿವರ್ತನೆ ಸೇರಿದಂತೆ ಬೃಹತ್ ಯೋಜನೆಗಳು ಕೊಡ ಗಿಗೆ ಅವಶ್ಯಕತೆ ಇಲ್ಲ ಎಂದು ಕೊಡಗು ಮತ್ತು ಕಾವೇರಿ ಉಳಿಸಿ ಅಭಿಯಾನದ ಸಂಚಾಲಕರಾದ ಕರ್ನಲ್ ಸಿ.ಪಿ.ಮುತ್ತಣ್ಣ (ನಿವೃತ್ತ) ಸರ್ಕಾರವನ್ನು ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡೂವರೆ ದಶಕಗಳಿಂದ ಕಾಡಾನೆಗಳ ಉಪಟಳ ಮಿತಿ ಮೀರಿದ್ದರೆ, ಇತ್ತೀಚಿನ ವರ್ಷಗಳಲ್ಲಿ ಹುಲಿ ಹಾವ ಳಿಯೂ ಕಾಣಿಸಿಕೊಂಡು…

ಉಕ್ರೇನ್‍ನಿಂದ ಭಾರತಕ್ಕೆ ಬಂದ ಕೊಡಗಿನ ಮೂವರು ವಿದ್ಯಾರ್ಥಿನಿಯರು
ಕೊಡಗು

ಉಕ್ರೇನ್‍ನಿಂದ ಭಾರತಕ್ಕೆ ಬಂದ ಕೊಡಗಿನ ಮೂವರು ವಿದ್ಯಾರ್ಥಿನಿಯರು

March 3, 2022

ಮಡಿಕೇರಿ, ಮಾ.2- ಯುದ್ಧ ಪೀಡಿತ ಉಕ್ರೇನ್‍ನ ವಿವಿಧ ಪ್ರದೇಶಗಳಿಂದ ಭಾರತ ಸರಕಾರ ‘ಆಪರೇಷನ್ ಗಂಗಾ’ ಹೆಸರಲ್ಲಿ ಏರ್‍ಲಿಫ್ಟ್ ಮಾಡುತ್ತಿದೆ. ಉಕ್ರೇನ್‍ನಲ್ಲಿ ವೈದ್ಯ ಕೀಯ ವಿದ್ಯಾಭ್ಯಾಸಕ್ಕಾಗಿ ತೆರಳಿರುವ ಕೊಡಗು ಜಿಲ್ಲೆಯ ಒಟ್ಟು 14 ವಿದ್ಯಾರ್ಥಿಗಳಿದ್ದು, ಈವರೆಗೆ ಕೊಡಗು ಜಿಲ್ಲೆಯ ಮೂವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ಈ ಪೈಕಿ ಗೋಣಿಕೊಪ್ಪದ ಮದೀಹ ಎಂಬಾಕೆ ಸುರಕ್ಷಿತವಾಗಿ ತವರುಮನೆ ಸೇರಿದ್ದಾಳೆ. ಮನೆಗೆ ಮರಳಿದ ಮದೀಹ: ವಿರಾಜ ಪೇಟೆ ತಾಲೂಕಿನ ಗೋಣಿಕೊಪ್ಪಲುವಿನ ನಿವಾಸಿ ಗಫೂರ್ ಎಂಬವರ ಪುತ್ರಿ ಎಂ.ಜಿ. ಮದೀಹ(22) ವೈದ್ಯಕೀಯ ವಿದ್ಯಾಭ್ಯಾಸ ಕ್ಕಾಗಿ…

ಮೇನಲ್ಲಿ ಶ್ರೀರಂಗಪಟ್ಟಣ-ಗುಡ್ಡೆಹೊಸೂರು  ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭ
ಕೊಡಗು

ಮೇನಲ್ಲಿ ಶ್ರೀರಂಗಪಟ್ಟಣ-ಗುಡ್ಡೆಹೊಸೂರು ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭ

February 6, 2022

ಮಡಿಕೇರಿ, ಫೆ.5- ಶ್ರೀರಂಗಪಟ್ಟಣ-ಗುಡ್ಡೆಹೊಸೂರು ನಡುವೆ 4 ಸಾವಿರ ಕೋಟಿ ರೂ. ವೆಚ್ಚ ದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಾಗಲಿದ್ದು, ಮೇ ತಿಂಗಳಿನಿಂದ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 4 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿ ಎರಡೂವರೆ ವರ್ಷ ಗಳಲ್ಲಿ ಸಂಪೂರ್ಣ ಮುಕ್ತಾಯವಾಗಲಿದೆ. ಎರಡು ಪ್ಯಾಕೇಜ್‍ಗಳ ಮೂಲಕ ನಿರ್ಮಾಣ ಕಾಮಗಾರಿ ನಡೆಯಲಿದ್ದು, ಶ್ರೀರಂಗಪಟ್ಟಣ ದಿಂದ ಪಿರಿಯಾಪಟ್ಟಣದವರೆಗೆ ಪ್ಯಾಕೇಜ್-3 ಹಾಗೂ ಪಿರಿಯಾಪಟ್ಟಣದಿಂದ ಗುಡ್ಡೆ ಹೊಸೂರುವರೆಗೆ…

ಆರಂಭದಲ್ಲಿಯೇ ಮುನ್ನೆಚ್ಚರ ವಹಿಸಿದ್ದಲ್ಲಿ ಕ್ಯಾನ್ಸರ್ ರೋಗ ಗುಣಪಡಿಸಬಹುದು
ಕೊಡಗು

ಆರಂಭದಲ್ಲಿಯೇ ಮುನ್ನೆಚ್ಚರ ವಹಿಸಿದ್ದಲ್ಲಿ ಕ್ಯಾನ್ಸರ್ ರೋಗ ಗುಣಪಡಿಸಬಹುದು

February 6, 2022

ಮಡಿಕೇರಿ, ಫೆ.5- ವಿಶ್ವ ಕ್ಯಾನ್ಸರ್ ದಿನ ಅಂಗವಾಗಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಡೀನ್ ಹಾಗೂ ನಿರ್ದೇಶಕ ಡಾ.ಕೆ.ಬಿ.ಕಾರ್ಯಪ್ಪ ವಹಿಸಿದ್ದರು. ಡಾ.ಕೆ.ಬಿ.ಕಾರ್ಯಪ್ಪ ಅವರು ಮಾತ ನಾಡಿ, ಕ್ಯಾನ್ಸರ್ ಕಾಯಿಲೆಯ ಬಗ್ಗೆ ಭಯ ಬೇಡ, ಕಾಯಿಲೆಯನ್ನು ಆದಷ್ಟು ಬೇಗ ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಅದರಿಂದ ಗುಣ ಮುಖರಾಗಬಹುದು ಎಂದು ತಿಳಿಸಿದರು. ಸರ್ಕಾರದಿಂದ ಕ್ಯಾನ್ಸರ್ ಕಾಯಿಲೆಗೆ ಉಚಿತವಾದ ಚಿಕಿತ್ಸೆ ಯನ್ನು ಸಾರ್ವಜನಿಕರಿಗೆ ನೀಡುವ ಸೌಲಭ್ಯವಿದ್ದು, ಆಯು ಷ್ಮಾನ್ ಭಾರತ್…

1 6 7 8 9 10 187
Translate »