ಕೊಡಗು

ಕುಟ್ಟ ಬಳಿ 9 ಮೇಕೆ ಕೊಂದು ಭಯ ಹುಟ್ಟಿಸಿದ್ದ ಹುಲಿ ಸೆರೆ
ಕೊಡಗು

ಕುಟ್ಟ ಬಳಿ 9 ಮೇಕೆ ಕೊಂದು ಭಯ ಹುಟ್ಟಿಸಿದ್ದ ಹುಲಿ ಸೆರೆ

December 17, 2021

ಗೋಣಿಕೊಪ್ಪ, ಡಿ.16(ಎಂಟಿವೈ/ದರ್ಶನ್)- ಪೊನ್ನಂಪೇಟೆ ತಾಲೂಕಿನ ಕಾಡಂಚಿನ ಗ್ರಾಮವಾದ ಕುಟ್ಟ-ಬಾಡಗ ಗ್ರಾಮದಲ್ಲಿ 9 ಮೇಕೆ ಕೊಂದು ಕಳೆದ ಎರಡು ದಿನಗಳಿಂದ ಆತಂಕ ಮೂಡಿಸಿದ್ದ 10 ವರ್ಷದ ಹೆಣ್ಣು ಹುಲಿಯನ್ನು ಅರಣ್ಯ ಸಿಬ್ಬಂದಿ ಸುರಕ್ಷಿತವಾಗಿ ಸೆರೆ ಹಿಡಿದಿದ್ದು, ಮೈಸೂರಿನ ಕೂರ್ಗಳ್ಳಿಯಲ್ಲಿರುವ ಮೃಗಾ ಲಯದ ಪುನರ್ವಸತಿ ಕೇಂದ್ರಕ್ಕೆ ತಂದು ಆರೈಕೆ ಮಾಡಲಾಗುತ್ತಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ದಲ್ಲಿ ಎನ್.ಹೆಚ್.47 ಸಂಖ್ಯೆಯ ಹೆಣ್ಣು ಹುಲಿಯೇ ಸೆರೆ ಸಿಕ್ಕಿದ್ದು, ಹಲ್ಲುಗಳು ಸವೆದಿ ರುವುದರಿಂದ ಹಾಗೂ ಹಿಂಭಾಗದ ತೊಡೆ ಸೆಳೆತಕ್ಕೆ ಒಳಗಾಗಿದ್ದರಿಂದ ಈ ಹುಲಿಗೆ…

ದೇಶದ ರಕ್ಷಣಾ ವ್ಯವಸ್ಥೆ ಬಲಪಡಿಸಲು ಶ್ರಮಿಸುತ್ತಿದ್ದರು…
ಕೊಡಗು

ದೇಶದ ರಕ್ಷಣಾ ವ್ಯವಸ್ಥೆ ಬಲಪಡಿಸಲು ಶ್ರಮಿಸುತ್ತಿದ್ದರು…

December 9, 2021

ಮಡಿಕೇರಿ: ಸಿಡಿಎಸ್ ಬಿಪಿನ್ ರಾವತ್ ಮತ್ತವರ ಪತ್ನಿ ಹಾಗೂ ಇಡೀ ಅಧಿ ಕಾರಿಗಳ ತಂಡ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಸುದ್ದಿ ತೀವ್ರ ಆಘಾತ ತಂದಿದೆ ಎಂದು ನಿವೃತ್ತ ಮೇಜರ್ ಜನರಲ್ ಅರ್ಜುನ್ ಮುತ್ತಣ್ಣ ಸಂತಾಪ ಸೂಚಿಸಿದ್ದಾರೆ. ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಿಷ್ಟಪಡಿಸಲು ಬಿಪಿನ್ ರಾವತ್ ಶ್ರಮ ವಹಿಸುತ್ತಿದ್ದ ಸಂದರ್ಭವೇ ಅವರ ದುರ್ಮರಣ ವಾಗಿದ್ದು ಸಹಜವಾಗಿಯೇ ದೇಶಕ್ಕೆ ದೊಡ್ಡ ನಷ್ಟ ತಂದಿದೆ. ಲಡಾಕ್ ವಿವಾದದಂತಹ ಸಂದರ್ಭ ಬಿಪಿನ್ ರಾವತ್ ಅವರಂತಹ ಹಿರಿಯ ಸೇನಾಧಿಕಾರಿಗಳ ಅಗತ್ಯವಿರುತ್ತದೆ ಎಂದು ಮೇ.ಜ. ಅರ್ಜುನ್…

ಬಿಪಿನ್ ರಾವತ್‍ರಿಗೆ ಕೊಡಗಿನ ಆತ್ಮೀಯ ನಂಟು
ಕೊಡಗು

ಬಿಪಿನ್ ರಾವತ್‍ರಿಗೆ ಕೊಡಗಿನ ಆತ್ಮೀಯ ನಂಟು

December 9, 2021

ಮಡಿಕೇರಿ, ಡಿ.8- ಹೆಲಿಕಾಪ್ಟರ್ ಪತನ ಗೊಂಡು ದುರ್ಮರಣ ಹೊಂದಿದ ಸಿಡಿಎಸ್ ಬಿಪಿನ್ ರಾವತ್ ಅವರು ಸೈನಿಕರ ನಾಡು ಕೊಡಗಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ಬಗ್ಗೆ ಅಪಾರ ಗೌರವ ಹೊಂದಿ ದ್ದರು. ಹಾಗಾಗಿ 4 ಬಾರಿ ಕೊಡಗಿಗೆ ಭೇಟಿ ನೀಡಿದ್ದರು. ಜನರಲ್ ತಿಮ್ಮಯ್ಯ ಮ್ಯೂಸಿ ಯಂಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಅವರು, ಗೋಣಿಕೊಪ್ಪದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ಪ್ರತಿಮೆಗಳನ್ನು ಸ್ಥಾಪಿಸಲು…

ಸುಂಟಿಕೊಪ್ಪ ಸರ್ಕಾರಿ ಶಾಲೆ ನೀರಿನ ಟ್ಯಾಂಕ್‍ಗೆ ವಿಷ ಪದಾರ್ಥ ಮಿಶ್ರಣ
ಕೊಡಗು

ಸುಂಟಿಕೊಪ್ಪ ಸರ್ಕಾರಿ ಶಾಲೆ ನೀರಿನ ಟ್ಯಾಂಕ್‍ಗೆ ವಿಷ ಪದಾರ್ಥ ಮಿಶ್ರಣ

December 8, 2021

ಸುಂಟಿಕೊಪ್ಪ,ಡಿ.7-ಕಿಡಿಗೇಡಿಗಳು ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್‍ಗೆ ವಿಷ ಮಿಶ್ರಣ ಮಾಡಿದ್ದು, ಈ ನೀರನ್ನು ಶೌಚಾಲಯಕ್ಕೆ ಮಾತ್ರ ಬಳಸುತ್ತಿ ದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಕೊಡಗು ಜಿಲ್ಲೆಯ ಸುಂಟಿ ಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಗ್ರಾಮ ಪಂಚಾಯಿತಿಯ ನೀರಿನ ಟ್ಯಾಂಕಿಗೆ ವಿಷಪೂರಿತ ರಸಾಯನಿಕ ಪದಾರ್ಥಗಳನ್ನು ದುಷ್ಕರ್ಮಿ ಗಳು ಹಾಕಿದ್ದಾರೆ. ಇದರಿಂದ ಶೌಚಾಲಯಕ್ಕೆ ತೆರ ಳಿದ ವಿದ್ಯಾರ್ಥಿಗಳಿಗೆ ಕೆಟ್ಟ ವಾಸನೆ ಬರುತ್ತಿರುವುದು ಗಮನಕ್ಕೆ ಬಂದಿದೆ. ಬಳಿಕ, ವಿದ್ಯಾರ್ಥಿಗಳು ವಿಚಾರ ವನ್ನು ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಮುಖ್ಯ ಶಿಕ್ಷಕರು ಹಾಗೂ…

ಅ.೭ರಿಂದ ಕೊಡಗಿನ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ
ಕೊಡಗು

ಅ.೭ರಿಂದ ಕೊಡಗಿನ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ

October 4, 2021

ಮಡಿಕೇರಿ,ಅ.೩-ಅಕ್ಟೋಬರ್ ೭ರ ಕರಗ ಪೂಜೆಯಿಂದ ಅ.೧೭ರ ಕಾವೇರಿ ತೀರ್ಥೋದ್ಭವದವರೆಗೆ ಮಡಿಕೇರಿ ನಗರ ವ್ಯಾಪ್ತಿಯ ಪ್ರವಾಸಿತಾಣ ಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಮಡಿಕೇರಿಯ ರಾಜಾಸೀಟ್, ಜನರಲ್ ತಿಮ್ಮಯ್ಯ ಮ್ಯೂಸಿಯಂ, ಗದ್ದಿಗೆ, ಕೋಟೆ, ನೆಹರು ಮಂಟಪಗಳಿಗೆ ಅ.೭ರಿಂದ ೧೭ವರೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶ ನಿಷೇಧಿಸಿದ್ದಾರೆ. ಇನ್ನು ಕರಗ ಪೂಜೆಯಲ್ಲಿ ಪಾಲ್ಗೊಳ್ಳಲು ೨೫ ಮಂದಿಗೆ ಅವಕಾಶ ನೀಡಿದ್ದು, ಪ್ರತಿಯೊಬ್ಬರೂ ಕನಿಷ್ಠ ೧ ಡೋಸ್ ಲಸಿಕೆ ಹಾಗೂ ೭೨ ಗಂಟೆಗಳ…

ಪರಿಸರ ಪೂರಕ ಪ್ರವಾಸೋದ್ಯಮಕ್ಕೆ ಶ್ರಮ ವಹಿಸಿ
ಕೊಡಗು

ಪರಿಸರ ಪೂರಕ ಪ್ರವಾಸೋದ್ಯಮಕ್ಕೆ ಶ್ರಮ ವಹಿಸಿ

September 28, 2021

ಮಡಿಕೇರಿ, ಸೆ.27-ಪರಿಸರಕ್ಕೆ ಪೂರಕವಾದ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕಿದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಈಶ್ವರ್‍ಕುಮಾರ್ ಖಂಡು ಸಲಹೆ ನೀಡಿದರು. ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರವಾಸೋದ್ಯಮ ಪಾಲು ದಾರರೊಂದಿಗೆ ಪ್ರವಾಸೋದ್ಯಮ ಇಲಾಖಾ ಸಭಾಂಗಣದಲ್ಲಿ ಸೋಮವಾರ ನಡೆದ ಚಿತ್ರಕಲಾ ಸ್ಪರ್ಧೆ ಹಾಗೂ ಪ್ರವಾಸಿ ಮಾಹಿತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. `ಅಂತರ್ಗತ ಅಭಿವೃದ್ಧಿಗೆ ಪ್ರವಾಸೋದ್ಯಮ’ ಎಂಬುದು ಈ ವರ್ಷದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಗುರಿಯಾಗಿದೆ. ಮಕ್ಕಳು…

ಕಾವೇರಿ ತೀರ್ಥೋದ್ಭವದ ಗೊಂದಲ ನಿವಾರಣೆಗೆ ಜಿಲ್ಲಾಡಳಿತಕ್ಕೆ ಮನವಿ
ಕೊಡಗು

ಕಾವೇರಿ ತೀರ್ಥೋದ್ಭವದ ಗೊಂದಲ ನಿವಾರಣೆಗೆ ಜಿಲ್ಲಾಡಳಿತಕ್ಕೆ ಮನವಿ

September 28, 2021

ಮಡಿಕೇರಿ, ಸೆ.27- ಕಳೆದ ಕೆಲ ವರ್ಷಗಳಿಂದ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವದ ಸಂದರ್ಭ ಗೊಂದಲಗಳು ಸೃಷ್ಟಿಯಾಗುತ್ತಿದ್ದು, ಜಿಲ್ಲಾಡಳಿತದ ನಿರ್ಬಂಧಗಳಿಂದ ಕೊಡವರು ಹಾಗೂ ಕೊಡಗಿನ ಮೂಲ ನಿವಾಸಿಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದೆ. ಆದ್ದರಿಂದ ಈ ಬಾರಿ ಕಾವೇರಿ ತುಲಾ ಸಂಕ್ರಮಣ ಅಧಿಕಾರಿಗಳ ಹಬ್ಬವಾಗಿರದೆ, ಭಕ್ತರ ಭಾವನೆಗಳಿಗೆ ಪೂರಕವಾಗಿರಲಿ ಎಂದು ಅಖಿಲ ಕೊಡವ ಸಮಾಜ ಮನವಿ ಮಾಡಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ತೀರ್ಥೋದ್ಭವದ ದಿನದಲ್ಲಿ ಸಾಂಪ್ರದಾಯಿಕ ಆಚರಣೆಗಳಿಗೆ ಅಡ್ಡಿಯಾಗದಂತೆ ಜಿಲ್ಲಾಡಳಿತ ನಿಯಮ ರೂಪಿಸಬೇಕು….

ಕುಶಾಲನಗರದಲ್ಲಿ ಕೈಲ್ ಪೆÇಳ್ದ್ ಸಂತೋಷ ಕೂಟ
ಕೊಡಗು

ಕುಶಾಲನಗರದಲ್ಲಿ ಕೈಲ್ ಪೆÇಳ್ದ್ ಸಂತೋಷ ಕೂಟ

September 28, 2021

ಕುಶಾಲನಗರ, ಸೆ.27-ಇಲ್ಲಿನ ಕೊಡವ ಸಮಾಜದಲ್ಲಿ ಭಾನುವಾರ ಕೈಲ್ ಪೆÇಳ್ದ್ ಸಂತೋಷ ಕೂಟ ನಡೆಯಿತು. ಯುಕೊ ಸಂಘಟನೆ ಕೊಡಗು ಜಿಲ್ಲೆ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊಡಗಿನ ಮಣ್ಣು ಹಾಗೂ ಕೊಡವರ ನಡುವೆ ಅವಿನಾಭಾವ ಸಂಬಂಧವಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕೊಡವ ಸಂಸ್ಕೃತಿ, ಆಚಾರ-ವಿಚಾರವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸವಾಗಬೇಕಿದೆ. ಪೂರ್ವಜರ ವೀರ ಪರಂಪರೆ, ಅವರು ಹಾಕಿಕೊಟ್ಟ ಭದ್ರ ಬುನಾದಿಂದ ಕೊಡವರಿಗೆ ಪ್ರತ್ಯೇಕ ಗೌರವ ದೊರಕುತ್ತಿರುವುದು ಅಭಿಮಾನದ ಸಂಕೇತ. ಕೊಡವರು…

ಕೊಡಗಿನಲ್ಲಿ ಪ್ರತಿಭಟನೆಗೆ ಸೀಮಿತ ಭಾರತ್ ಬಂದ್
ಕೊಡಗು

ಕೊಡಗಿನಲ್ಲಿ ಪ್ರತಿಭಟನೆಗೆ ಸೀಮಿತ ಭಾರತ್ ಬಂದ್

September 28, 2021

ಮಡಿಕೇರಿ,ಸೆ.27-ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಮಸೂದೆ ಗಳು ಸೇರಿದಂತೆ ಪೆಟ್ರೋಲಿಯಂ ಉತ್ಪನ್ನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕರೆ ನೀಡಿದ್ದ ಭಾರತ್ ಬಂದ್ ಕೊಡಗಿನಲ್ಲಿ ಪ್ರತಿಭಟನೆಗಷ್ಟೇ ಸೀಮಿತವಾ ಯಿತು. ಜಿಲ್ಲೆಯಲ್ಲಿ ರೈತ ಸಂಘ ಮುಂದಾಳತ್ವ ದಲ್ಲಿ ವಿವಿಧ ರಾಜಕೀಯ ಪಕ್ಷಗಳ ಸಹಿತ ಸಂಘ- ಸಂಸ್ಥೆಗಳು ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. ಮಡಿಕೇರಿ ವರದಿ: ನಗರದಲ್ಲಿ ಅಂಗಡಿ- ಮುಂಗಟ್ಟು, ವ್ಯಾಪಾರ ವಹಿವಾಟು, ವಾಹನ ಸಂಚಾರ ಎಂದಿನಂತಿತ್ತು. ಸುರಿ ಯುತ್ತಿದ್ದ ಮಳೆಯ…

ಗುಂಡ್ಲುಪೇಟೆ: ಸಂಭ್ರಮದ ಗೌರಿ-ಗಣೇಶ ಹಬ್ಬ
ಕೊಡಗು

ಗುಂಡ್ಲುಪೇಟೆ: ಸಂಭ್ರಮದ ಗೌರಿ-ಗಣೇಶ ಹಬ್ಬ

September 13, 2021

ಗುಂಡ್ಲುಪೇಟೆ, ಸೆ.12(ಸೋಮ್.ಜಿ)- ಪಟ್ಟಣ ಹಾಗೂ ತಾಲೂಕಿನಾದ್ಯಂತ ಸಡಗರ ಮತ್ತು ಸಂಭ್ರಮದಿಂದ ಗೌರಿ-ಗಣೇಶ ಹಬ್ಬ ಆಚರಿಸಲಾಯಿತು. ಮುಂಜಾನೆ ಯಿಂದಲೇ ಪಟ್ಟಣದ ಸುಮಂಗಲಿಯರು ಮತ್ತು ಮಕ್ಕಳು ಗೌರಿ ಗುಡಿಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸು ವುದರೊಂದಿಗೆ ಶುಭ ಫಲ, ಮುತ್ತೈದೆ ಭಾಗ್ಯ ಮತ್ತು ಆರೋಗ್ಯ ನೀಡುವಂತೆ ತಾಯಿಯಲ್ಲಿ ಪ್ರಾರ್ಥಿಸಿದರು. ಪಟ್ಟಣದ ಪ್ರಸನ್ನ ಗಣಪತಿ ದೇವಸ್ಥಾನ, ದ.ರಾ.ಬೇಂದ್ರೆನಗರದ ಸರ್ವಸಿದ್ಧಿ ವಿನಾ ಯಕ ದೇವಸ್ಥಾನ, ಶ್ರೀರಾಮೇಶ್ವರ ದೇವಾ ಲಯ, ಬಲಮುರಿ ಗಣಪತಿ ದೇವಾ ಲಯ ಸೇರಿದಂತೆ ಹತ್ತು ಹಲವು ಕಡೆ…

1 7 8 9 10 11 187
Translate »