ಕುಶಾಲನಗರ: ಆಂಬುಲೆನ್ಸ್‍ನಲ್ಲಿ ಹರಳು ಕಲ್ಲು ಸಾಗಾಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ಮಡಿಕೇರಿಯ ರಫೀಉಲ್ಲಾ ಖಾನ್, ಎಂ.ಎಂ. ಸಿರಾಜ್, ಸಿಕಂದರ್, ಎಂ.ಎಂ.ಮೊಹಮ್ಮದ್ ಆಲಿ ಬಂಧಿತ ಆರೋಪಿಗಳು. ಆರೋಪಿಗಳು ಮೇಕೇರಿ ಗ್ರಾಮದಿಂದ ಹರಳು ಕಲ್ಲುಗಳನ್ನು ತುಂಬಿಕೊಂಡು ಮೈಸೂರಿಗೆ ಸಾಗಿಸುತ್ತಿದ್ದರೆಂದು ತಿಳಿದು ಬಂದಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕುಶಾಲನಗರ ಪೊಲೀಸರು ಮಾದಪಟ್ಟಣ ಬಳಿ ಆಂಬು ಲೆನ್ಸ್ ಅನ್ನು ಪರಿಶೀಲಿಸಿದಾಗ ಸುಮಾರು 50 ಸಾವಿರ ರೂ. ಮೌಲ್ಯದ ಹರಳು ಕಲ್ಲುಗಳು ಪತ್ತೆಯಾಗಿವೆ. ಇದರಿಂದ ವಾಹನ ವಶಪಡಿಸಿಕೊಂಡು…
ರಾಜಕೀಯ ರಹಿತವಾಗಿ ಕೊಡವ ಸಮಾಜಗಳ ಕರ್ತವ್ಯ ನಿರ್ವಹಣೆ ಅಗತ್ಯ
December 20, 2018ವಿರಾಜಪೇಟೆ: ಕೊಡವ ಸಂಸ್ಕøತಿ ಅಚಾರ ವಿಚಾರ ವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲಾ ಕೊಡವ ಸಮಾಜಗಳು ರಾಜಕೀಯ ರಹಿತವಾಗಿ ಕೆಲಸ ಮಾಡಬೇಕಾಗಿದೆ ಎಂದು ಮಾಜಿ ಕಾನೂನು ಸಚಿವ ಮೇರಿಯಂಡ ಸಿ.ನಾಣಯ್ಯ ಹೇಳಿದರು. ವಿರಾಜಪೇಟೆ ಕೊಡವ ಸಮಾಜದಲ್ಲಿ ‘ಬೆಂದು-ಬಿಡಾರ’ ವನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಬಳಿಕ ಸಭಾ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಕೊಡವ ಸಮಾಜಗಳ ಯಾವುದೇ ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕಿಯವನ್ನು ಬದಿಗೊತ್ತಿ ಕೆಲಸ ಮಾಡಬೇಕು. ಹಾಗೂ ಶಿಕ್ಷಣ ಮತ್ತು ಇತರ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಒತ್ತು ನೀಡುವ…
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಿಂದ ಕೊಡಗು ನಿರ್ಲಕ್ಷ್ಯ
December 19, 2018ಮಡಿಕೇರಿ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ರಾಜ್ಯ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿದು 6 ತಿಂಗಳು ಕಳೆದರೂ ಕೂಡ ಕೊಡಗು ಜಿಲ್ಲೆಗೆ ಯಾವುದೇ ಯೋಜನೆಗಳು ಜಾರಿಯಾಗಿಲ್ಲ. ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಪರಿಹಾರ ಕಾರ್ಯಕ್ಕಾಗಿ ಮಾತ್ರ ವಿವಿಧ ಇಲಾಖೆಗಳ ಮೂಲಕ 85 ಕೋಟಿ ರೂ. ಜಿಲ್ಲೆಗೆ ಬಿಡುಗಡೆಯಾಗಿದೆ. ಈ ನೆರವನ್ನು ಹೊರತುಪಡಿಸಿದರೆ ವಿಶೇಷ ಅನುದಾನ ಜಿಲ್ಲೆಗೆ ಬಂದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರು, ಬೆಳೆಗಾರರ ಅಲ್ಪಾವಧಿಯ ಸಾಲಮನ್ನಾ ಘೋಷಣೆ ರಾಜ್ಯಕ್ಕೆ ಸಂಬಂಧಿಸಿದಾಗಿದ್ದು, ಕೊಡಗು ಜಿಲ್ಲೆಯ 17,780 ಫಲಾನುಭವಿಗಳನ್ನು ವಿವಿಧ…
ಶ್ರದ್ಧಾಭಕ್ತಿಯಿಂದ ನಡೆದ ವೈಕುಂಠ ಏಕಾದಶಿ
December 19, 2018ಕುಶಾಲನಗರ: ಇಲ್ಲಿನ ರಥ ಬೀದಿಯಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮ ಮಂಗಳವಾರ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಆವರಣದಲ್ಲಿ ಕನ್ನಿಕಾ ಪರಮೇಶ್ವರಿ ಅಮ್ಮನವರ ದೇವತಾ ಮೂರ್ತಿಗೆ ಬೆಳಿಗ್ಗೆಯಿಂದ ವಿವಿಧ ಬಗೆಯ ಅಭಿಷೇಕ ಪೂಜೆಗಳು ನೆರವೇರಿದವು. ನಂತರ ಹಲವು ಪುಷ್ಪಗಳಿಂದ ಅಮ್ಮನವರನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾ ಲಯದ ಸುತ್ತಲೂ ಏಳು ದ್ವಾರಗಳನ್ನು ನಿರ್ಮಿಸಿ ದೇವಾಲಯದ ಪ್ರವೇಶದ್ವಾರ ದಲ್ಲಿ ಸಿರಿದೇವಿ, ಭೂದೇವಿಯೊಂದಿಗೆ ಶ್ರೀ ವಿಷ್ಣು ದೇವರನ್ನು ಪ್ರತಿಷ್ಠಾಪಿಸಿ ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಿ ಪೂಜೆ…
ತಿತಿಮತಿಯಲ್ಲಿ ರೈತರು-ಅಧಿಕಾರಿಗಳ ಸಭೆ: ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ರೈತರ ಒತ್ತಾಯ, ಪ್ರತಿಭಟನೆ
December 19, 2018ಗೋಣಿಕೊಪ್ಪಲು: ಕಾಡಾನೆ ಉಪ ಟಳ, ಹುಲಿ ಹಾವಳಿ ಸೇರಿದಂತೆ ಕಾಡು ಪ್ರಾಣಿಗಳಿಂದ ರೈತರು ಬೆಳೆದ ಬೆಳೆಗಳ ನಷ್ಟದ ಬಗ್ಗೆ ಅರಣ್ಯ ಇಲಾಖೆಯು ನೀಡುವ ಪರಿಹಾರ ವಿಳಂಬ ನೀತಿಯ ಬಗ್ಗೆ ರೈತರು ಅರಣ್ಯ ಅಧಿಕಾರಿಗಳೊಂದಿಗೆ ತಮ್ಮ ಅಳಲು ತೋಡಿಕೊಂಡರು. ಮೊದಲ ಬಾರಿಗೆ ಗ್ರಾಮೀಣ ಪ್ರದೇಶ ತಿತಿಮತಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು, ಸದಸ್ಯರು ಹಿರಿಯ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಯಿತು. ಆರಂಭದಲ್ಲಿ ಅರಣ್ಯ ಇಲಾಖೆಯ ಸುತ್ತೋಲೆಯಿಂದ ರೈತರಿಗೆ ಆಗುತ್ತಿರುವ ಅನ್ಯಾಯದ…
ಜಿಪಂ ಸದಸ್ಯತ್ವ ರದ್ಧತಿಗೆ ತಾತ್ಕಾಲಿಕ ತಡೆಯಾಜ್ಞೆ
December 19, 2018ಮಡಿಕೇರಿ: ಜಿಪಂ ಸದಸ್ಯೆ ಕವಿತಾ ಪ್ರಭಾಕರ್ ಸದ ಸ್ಯತ್ವ ರದ್ದುಗೊಳಿಸಿ ಮಡಿ ಕೇರಿಯ ಹಿರಿಯ ಸಿವಿಲ್ ನ್ಯಾಯಾಲಯ ನೀಡಿದ್ದ ತೀರ್ಪಿಗೆ ಜಿಲ್ಲಾ ನ್ಯಾಯಾಲಯ ತಾತ್ಕಾ ಲಿಕ ತಡೆಯಾಜ್ಞೆ ನೀಡಿದೆ. ಕವಿತಾ ಪ್ರಭಾಕರ್ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ ಪರಾಭವ ಗೊಂಡಿದ್ದ ತಣ್ಣಿಮಾನಿ ಮೂಲದ ಕಾಂಗ್ರೆಸ್ ಅಭ್ಯರ್ಥಿ ದೇವಂಗೋಡಿ ತಿಲಕ ಅವರು ಚುನಾವಣೆ ಸಂದರ್ಭ ಚುನಾವ ಣಾಧಿಕಾರಿಗೆ ದೂರು ನೀಡಿ, ಕವಿತಾ ಅವರ ಪತಿ ಜಿಪಂ ಕಾಮಗಾರಿ ಗುತ್ತಿಗೆದಾರರಾಗಿರು ವುದರಿಂದ ಕವಿತಾ ಅವರ ನಾಮಪತ್ರ ತಿರಸ್ಕರಿಸುವಂತೆ ಮನವಿ ಮಾಡಿದ್ದರು. ಆದರೆ…
ನೇಣು ಹಾಕಿಕೊಂಡು ಕ್ಯಾಮರಾಮನ್ ಆತ್ಮಹತ್ಯೆ
December 19, 2018ಮಡಿಕೇರಿ: ಸುದ್ದಿವಾಹಿನಿಯೊಂದರಲ್ಲಿ ಕಳೆದ 16 ವರ್ಷಗಳ ಕಾಲ ಕ್ಯಾಮರಾಮನ್ ಆಗಿ ಕೆಲಸ ನಿರ್ವಹಿಸಿ, ಕಳೆದ 6 ತಿಂಗಳಿಂದ ಆಟೋ ಚಾಲಕರಾಗಿ ದುಡಿಯುತ್ತಿದ್ದ ವ್ಯಕ್ತಿಯೋರ್ವರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಡಿಕೇರಿ ಹೊರವಲಯದ ಕರ್ಣಂಗೇರಿ ಗ್ರಾಮದ ನಿವಾಸಿ ನಂದ ಕುಮಾರ್(46) ಮೃತಪಟ್ಟ ವ್ಯಕ್ತಿ. ಮಂಗಳವಾರ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಈ ಘಟನೆ ನಡೆದಿದ್ದು, ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮಹಜರು ನಡೆಸಿ, ಜಿಲ್ಲಾ ಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದರು. ನಂದಾಕುಮಾರ್ ಆತ್ಮಹತ್ಯೆಗೆ…
ಜಿಲ್ಲಾ ಮಟ್ಟದ ಕಾಲ್ಚೆಂಡು ಪಂದ್ಯಾಟ ಅಮ್ಮತ್ತಿ ಕ್ಯಾಂಪ್ ಬಾಯ್ಸ್‍ಗೆ ಟ್ರೋಫಿ
December 19, 2018ವೀರಾಜಪೇಟೆ: ವೀರಾಜಪೇಟೆ ನೆಹರುನಗರದ ನವಜ್ಯೋತಿ ಯುವಕ ಸಂಘದಿಂದ ಆಯೋಜಿಸಲಾ ಗಿದ್ದ ಜಿಲ್ಲಾಮಟ್ಟದ ಪುರುಷರ ಟೈಗರ್ ಫೈ ಕಾಲ್ಚೆಂಡು ಪಂದ್ಯಾಟದ ಪಾರಿ ತೋಷಕವನ್ನು ಅಮ್ಮತ್ತಿಯ ಕ್ಯಾಂಪ್ ಬಾಯ್ಸ್ ತಂಡ ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ನೆಹರು ಎಫ್‍ಸಿ ಬಿ ಪಾಲಿಬೆಟ್ಟ ತಂಡ ಪಡೆದುಕೊಂಡಿತು. ಕಾಲ್ಚೆಂಡು ಪಂದ್ಯಾಟದಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದು ಸೆಮಿ ಫೈನಲ್ ಪಂದ್ಯಾಟವು ಕ್ಯಾಂಪ್ ಬಾಯ್ಸ್ ಅಮ್ಮತ್ತಿ ಎ ಮತ್ತು ನೆಹರು ಎಫ್‍ಸಿ ಎ ಪಾಲಿಬೆಟ್ಟ ತಂಡಗಳ ಮಧ್ಯೆ ನಡೆದು ನೆಹರು ಎಫ್‍ಸಿಎ ಪಾಲಿಬೆಟ್ಟ ತಂಡವು 3-1…
ಕೊಡಗು ಜಿಲ್ಲೆಯಲ್ಲಿ ಶಂಕಿತ 24 ಎಚ್1 ಎನ್1 ಪ್ರಕರಣ ಪತ್ತೆ, 7 ಪ್ರಕರಣ ದೃಢ ರೋಗ ಹರಡದಂತೆ ಅರಿವು ಮೂಡಿಸಲು ಸೂಚನೆ
December 18, 2018ಮಡಿಕೇರಿ: ಎಚ್1 ಎನ್ 1 ರೋಗ ಬಗ್ಗೆ ಹೆಚ್ಚಿನ ಅರಿವು ಮೂಡಿಸು ವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಇಲಾಖಾ ಅಧಿಕಾರಿಗಳ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಚ್1 ಎನ್ 1 ರೋಗದ ಬಗ್ಗೆ ಅಲ್ಲಲ್ಲಿ ಮಾಹಿತಿ ಕೇಳಿ ಬರುತ್ತದೆ. ಆದ್ದರಿಂದ ಈ ಬಗ್ಗೆ ಜಿಲ್ಲೆಯ ಎಲ್ಲಾ ಕಡೆಗಳಲ್ಲಿ…
ಗೋಣಿಕೊಪ್ಪದಲ್ಲಿ ಪ್ರಾಯೋಗಿಕ ಏಕಮುಖ ಸಂಚಾರಕ್ಕೆ ಕ್ರಮ
December 18, 2018ಗೋಣಿಕೊಪ್ಪಲು: ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಗೋಣಿಕೊಪ್ಪ ಪಟ್ಟಣದಲ್ಲಿ ಏಕಮುಖ ಸಂಚಾರಕ್ಕೆ ಪ್ರಾಯೋ ಗಿಕವಾಗಿ ಚಾಲನೆ ನೀಡಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಪನ್ನೇಕರ್ ಹೇಳಿದರು.ಇಲ್ಲಿನ ಪರಿಮಳ ಮಂಗಳ ವಿಹಾದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋ ಜಿಸಿದ್ದ ವಾಹನ ಸುರಕ್ಷತೆ ಹಾಗೂ ಸಂಚಾರ ಪಾಲನೆ ಎಂಬ ವಿಷಯ ಕುರಿತು ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುನಿಲ್ ಮಾದಪ್ಪ ಹಾಗೂ ಸಾರ್ವಜನಿಕರು ಪಟ್ಟಣದಲ್ಲಿನ ವಾಹನ ದಟ್ಟಣೆ ನಿಯಂತ್ರಣಕ್ಕೆ ಬೈಪಾಸ್ ಮೂಲಕ ಏಕಮುಖ…










