ನೇಣು ಹಾಕಿಕೊಂಡು ಕ್ಯಾಮರಾಮನ್ ಆತ್ಮಹತ್ಯೆ
ಕೊಡಗು

ನೇಣು ಹಾಕಿಕೊಂಡು ಕ್ಯಾಮರಾಮನ್ ಆತ್ಮಹತ್ಯೆ

December 19, 2018

ಮಡಿಕೇರಿ: ಸುದ್ದಿವಾಹಿನಿಯೊಂದರಲ್ಲಿ ಕಳೆದ 16 ವರ್ಷಗಳ ಕಾಲ ಕ್ಯಾಮರಾಮನ್ ಆಗಿ ಕೆಲಸ ನಿರ್ವಹಿಸಿ, ಕಳೆದ 6 ತಿಂಗಳಿಂದ ಆಟೋ ಚಾಲಕರಾಗಿ ದುಡಿಯುತ್ತಿದ್ದ ವ್ಯಕ್ತಿಯೋರ್ವರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಡಿಕೇರಿ ಹೊರವಲಯದ ಕರ್ಣಂಗೇರಿ ಗ್ರಾಮದ ನಿವಾಸಿ ನಂದ ಕುಮಾರ್(46) ಮೃತಪಟ್ಟ ವ್ಯಕ್ತಿ. ಮಂಗಳವಾರ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಈ ಘಟನೆ ನಡೆದಿದ್ದು, ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮಹಜರು ನಡೆಸಿ, ಜಿಲ್ಲಾ ಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದರು. ನಂದಾಕುಮಾರ್ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿ ದ್ದಾರೆ. ಮೃತರು ಹಲವು ವರ್ಷಗಳ ಕಾಲ ಕೊಡಗು ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನಂದಕುಮಾರ್ ಅಕಾಲಿಕ ನಿಧನಕ್ಕೆ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಮತ್ತು ಮಾಧ್ಯಮ ಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.

Translate »