ಜಿಲ್ಲಾ ಮಟ್ಟದ ಕಾಲ್ಚೆಂಡು ಪಂದ್ಯಾಟ ಅಮ್ಮತ್ತಿ ಕ್ಯಾಂಪ್ ಬಾಯ್ಸ್‍ಗೆ ಟ್ರೋಫಿ
ಕೊಡಗು

ಜಿಲ್ಲಾ ಮಟ್ಟದ ಕಾಲ್ಚೆಂಡು ಪಂದ್ಯಾಟ ಅಮ್ಮತ್ತಿ ಕ್ಯಾಂಪ್ ಬಾಯ್ಸ್‍ಗೆ ಟ್ರೋಫಿ

December 19, 2018

ವೀರಾಜಪೇಟೆ: ವೀರಾಜಪೇಟೆ ನೆಹರುನಗರದ ನವಜ್ಯೋತಿ ಯುವಕ ಸಂಘದಿಂದ ಆಯೋಜಿಸಲಾ ಗಿದ್ದ ಜಿಲ್ಲಾಮಟ್ಟದ ಪುರುಷರ ಟೈಗರ್ ಫೈ ಕಾಲ್ಚೆಂಡು ಪಂದ್ಯಾಟದ ಪಾರಿ ತೋಷಕವನ್ನು ಅಮ್ಮತ್ತಿಯ ಕ್ಯಾಂಪ್ ಬಾಯ್ಸ್ ತಂಡ ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ನೆಹರು ಎಫ್‍ಸಿ ಬಿ ಪಾಲಿಬೆಟ್ಟ ತಂಡ ಪಡೆದುಕೊಂಡಿತು.

ಕಾಲ್ಚೆಂಡು ಪಂದ್ಯಾಟದಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದು ಸೆಮಿ ಫೈನಲ್ ಪಂದ್ಯಾಟವು ಕ್ಯಾಂಪ್ ಬಾಯ್ಸ್ ಅಮ್ಮತ್ತಿ ಎ ಮತ್ತು ನೆಹರು ಎಫ್‍ಸಿ ಎ ಪಾಲಿಬೆಟ್ಟ ತಂಡಗಳ ಮಧ್ಯೆ ನಡೆದು ನೆಹರು ಎಫ್‍ಸಿಎ ಪಾಲಿಬೆಟ್ಟ ತಂಡವು 3-1 ಗೊಲು ಗಳಿಂದ ಫೈನಲ್ ಪ್ರವೇಶ ಪಡೆಯಿತು. ದ್ವಿತೀಯ ಸೆಮಿ ಫೈನಲ್ ಪಂದ್ಯಾಟವು ಕ್ಯಾಂಪ್ ಬಾಯ್ಸ್ ಅಮ್ಮತ್ತಿ ಬಿ ಮತ್ತು ನೆಹರು ಎಫ್.ಸಿ ಬಿ ಪಾಲಿಬೆಟ್ಟ ತಂಡಗಳ ಮಧ್ಯೆ ನಡೆದು ಯಾವುದೇ ಗೋಲು ಗಳಿಸದೆ ಸಮಬಲ ಸಾಧಿಸಿದ ಬಳಿಕ ಟ್ರೈ ಬ್ರೇಕರ್ ನೀಡಿದ್ದು ಕ್ಯಾಂಪ್ ಬಾಯ್ಸ್ ಬಿ ತಂಡ 4-1 ಗೋಲುಗಳಿಂದ ಮುನ್ನಡೆ ಸಾಧಿಸಿತು. ಶೇಷಪ್ಪ ಮತ್ತು ಶ್ರೀನಿವಾಸ್ ಪಂದ್ಯಾಟದ ತಿರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಉತ್ತಮ ಗೋಲು ಕೀಪರ್ ಪ್ರಶಸ್ತಿ ನೆಹರು ಎಫ್.ಸಿ ತಂಡದ ಮಣಿ ಕಂಠ ಪಡೆದುಕೊಂಡರು. ಸರಣಿ ಪಂದ್ಯ ಪುರುಷೋತಮ ಪ್ರಶಸ್ತಿ ಕ್ಯಾಂಪ್ ಬಾಯ್ಸ್ ತಂಡದ ಮುನ್ನಡೆ ಅಟಗಾರ ಶಿರಾಜ್ ಪಡೆದುಕೊಂಡರು. ವಿಜೇತ ತಂಡಗಳಿಗೆ ಅಕರ್ಷಕ ಟ್ರೋಫಿ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಪಟ್ಟಣದ ನೆಹರುನಗರದ ನವಜ್ಯೋತಿ ಯುವಕ ಸಂಘದ 29ನೇ ವಾರ್ಷೀಕೋ ತ್ಸವದ ಅಂಗವಾಗಿ ಪುರುಷರ 3ನೇ ವರ್ಷದ ಟೈಗರ್ ಫೈ ಕಾಲ್ಚೆಂಡು ಪಂದ್ಯಾ ಟವು ಸ್ಥಳೀಯ ತಾಲೂಕು ಮೈದಾನದಲ್ಲಿ ಅಯೋಜಿಸಲಾಗಿತ್ತು. ಪಂದ್ಯಾಟದ ಸಮಾ ರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಪಟ್ಟಣ ಪಂಚಾಯಿತಿ ಸದಸ್ಯ ಡಿ.ಪಿ. ರಾಜೇಶ್ ಮಾತನಾಡಿ, ಯುವಕ ಸಂಘ ಗಳು ಸಾಮಾಜಿಕ ಕಳಕಳಿಯಿಂದ ಕ್ರೀಡೆಗೆ ಉತ್ತೇಜನ ನೀಡುವುದು ಉತ್ತಮ. ಕೊಡಗು ಪ್ರಕೃತಿ ವಿಕೋಪದಿಂದ ತತ್ತರಿಸಿದ್ದರು ಕ್ರೀಡೆಯಲ್ಲಿ ಭಾಗವಹಿಸುವಂತೆ ಮಾಡಿರುವ ಯುವಕ ಸಂಘದ ಉತ್ತಮ ಕಾರ್ಯ ಎಂದರು. ಪಟ್ಟಣ ಪಂಚಾ ಯಿತಿಯ ಹಿರಿಯ ಸದಸ್ಯ ಮತ್ತು ಕ್ರೀಡಾ ಪಟು ಸಿ.ಕೆ. ಪೃಥ್ವಿನಾಥ್ ಮಾತನಾಡಿ, ಕಾಲ್ಚೆಂಡು ಪಂದ್ಯಾಟವು ಯುವಕರ ದ್ಯೆಹಿಕ ಸಾಮರ್ಥ್ಯವನ್ನು ಹೆಚ್ಚುವಂತೆ ಮಾಡುತ್ತದೆ. ಕ್ರೀಡೆಯಿಂದ ಆರೋಗ್ಯ ವನ್ನು ಸಮತೋಲನದಲ್ಲಿಡಲು ಸಾಧ್ಯ ವಾಗುತ್ತದೆ ಎಂದರು.
ನವಜ್ಯೋತಿ ಯುವಕ ಸಂಘದ ಅಧ್ಯಕ್ಷ ಜನಾರ್ಧನ ಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಜೆಡಿಎಸ್ ನಗರ ಅಧ್ಯಕ್ಷ ಪಿ.ಎ. ಮಂಜುನಾಥ್, ಬಿಜೆಪಿಯ ಜೋಕಿಂ ರೋಡ್ರಿಗಸ್, ಪಟ್ಟಣ ಪಂಚಾ ಯಿತಿ ಸದಸ್ಯರಾದ ಮೊಹಮ್ಮದ್ ರಾಫಿ, ಉದ್ಯಮಿ ಕಿಲ್ಟನ್ ವಾಜ್, ಕಾಂಗ್ರೆಸ್ ಪಕ್ಷದ ಏಜಾಸ್ ಅಹ್ಮದ್ ಮತ್ತಿತರರು ಉಪ ಸ್ಥಿತರಿದ್ದರು.

Translate »