ಜಿಪಂ ಸದಸ್ಯತ್ವ ರದ್ಧತಿಗೆ ತಾತ್ಕಾಲಿಕ ತಡೆಯಾಜ್ಞೆ
ಕೊಡಗು

ಜಿಪಂ ಸದಸ್ಯತ್ವ ರದ್ಧತಿಗೆ ತಾತ್ಕಾಲಿಕ ತಡೆಯಾಜ್ಞೆ

December 19, 2018

ಮಡಿಕೇರಿ:  ಜಿಪಂ ಸದಸ್ಯೆ ಕವಿತಾ ಪ್ರಭಾಕರ್ ಸದ ಸ್ಯತ್ವ ರದ್ದುಗೊಳಿಸಿ ಮಡಿ ಕೇರಿಯ ಹಿರಿಯ ಸಿವಿಲ್ ನ್ಯಾಯಾಲಯ ನೀಡಿದ್ದ ತೀರ್ಪಿಗೆ ಜಿಲ್ಲಾ ನ್ಯಾಯಾಲಯ ತಾತ್ಕಾ ಲಿಕ ತಡೆಯಾಜ್ಞೆ ನೀಡಿದೆ. ಕವಿತಾ ಪ್ರಭಾಕರ್ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ ಪರಾಭವ ಗೊಂಡಿದ್ದ ತಣ್ಣಿಮಾನಿ ಮೂಲದ ಕಾಂಗ್ರೆಸ್ ಅಭ್ಯರ್ಥಿ ದೇವಂಗೋಡಿ ತಿಲಕ ಅವರು ಚುನಾವಣೆ ಸಂದರ್ಭ ಚುನಾವ ಣಾಧಿಕಾರಿಗೆ ದೂರು ನೀಡಿ, ಕವಿತಾ ಅವರ ಪತಿ ಜಿಪಂ ಕಾಮಗಾರಿ ಗುತ್ತಿಗೆದಾರರಾಗಿರು ವುದರಿಂದ ಕವಿತಾ ಅವರ ನಾಮಪತ್ರ ತಿರಸ್ಕರಿಸುವಂತೆ ಮನವಿ ಮಾಡಿದ್ದರು. ಆದರೆ ತಿಲಕ ಅವರ ಮನವಿಯನ್ನು ಚುನಾ ವಣಾಧಿಕಾರಿ ತಿರಸ್ಕರಿಸಿದ್ದರಿಂದ ತಿಲಕ ಮಡಿ ಕೇರಿಯ ಹಿರಿಯ ಸಿವಿಲ್ ನ್ಯಾಯಾಲ ಯದಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆ ಸಿದ್ದ ನ್ಯಾಯಾಲಯ ಕವಿತಾ ಪ್ರಭಾಕರ್ ಅವರ ಜಿಪಂ ಸದಸ್ಯತ್ವ ರದ್ದುಗೊಳಿಸಿ ಡಿ.4 ರಂದು ತೀರ್ಪು ನೀಡಿತ್ತು.

ಈ ತೀರ್ಪಿನ ವಿರುದ್ಧ ಕವಿತಾ ಪ್ರಭಾ ಕರ್ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಮನವಿಯನ್ನು ಪುರ ಸ್ಕರಿಸಿರುವ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ವೀರಭದ್ರಪ್ಪ ವೀರಪ್ಪ ಮಲ್ಲಪ್ಪ ಅವರು ಹಿರಿಯ ಸಿವಿಲ್ ನ್ಯಾಯಾ ಲಯ ನೀಡಿದ್ದ ತೀರ್ಪಿಗೆ ತಾತ್ಕಾಲಿಕ ತಡೆ ಯಾಜ್ಞೆ ವಿಧಿಸಿದ್ದಾರೆ. ಕವಿತಾ ಪ್ರಭಾಕರ್ ಪರವಾಗಿ ವಕೀಲ ಕೆ.ಪಿ. ಬಾಲಸುಬ್ರ ಮಣ್ಯಂ ವಾದ ಮಂಡಿಸಿದರು.

Translate »