ಮಂಡ್ಯ

ಹಿಂದುಳಿದ ವರ್ಗಗಳ ದಾರಿದೀಪ ಅರಸು
ಮಂಡ್ಯ

ಹಿಂದುಳಿದ ವರ್ಗಗಳ ದಾರಿದೀಪ ಅರಸು

August 21, 2021

ಕೆ.ಆರ್.ಪೇಟೆ,ಆ.20(ಶ್ರೀನಿವಾಸ್)-ಕರ್ನಾಟಕದ ಮುಖ್ಯಮಂತ್ರಿಗಳ ಸಾಲಿನಲ್ಲಿ ಸದಾ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುವ ಡಿ. ದೇವರಾಜ ಅರಸು, ಹಿಂದುಳಿದ ವರ್ಗಗಳ ಸಮುದಾಯದ ಬದುಕಿನ ದಾರಿದೀಪ ವಾಗಿದ್ದಾರೆ ಎಂದು ತಹಸೀಲ್ದಾರ್ ಎಂ. ಶಿವಮೂರ್ತಿ ಅಭಿಪ್ರಾಯಪಟ್ಟರು. ಪಟ್ಟಣದ ಮಿನಿ ವಿಧಾನಸೌಧದ ಆವರಣ ದಲ್ಲಿ ತಾಲೂಕು ಆಡಳಿತ ಮತ್ತು ಹಿಂದು ಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ದಿವಂಗತ ಡಿ.ದೇವರಾಜ ಅರಸು ಅವರ ಜಯಂತ್ಯೋ ತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯಮಂತ್ರಿಯಾಗಿ ಅತಿ ದೀರ್ಘಕಾಲ ಆಡಳಿತ ನಡೆಸಿದ ಅರಸು, ಸಮಾಜದ ಹಿಂದುಳಿದ ವರ್ಗಗಳು, ದಲಿತರು…

ಆ.23ರಿಂದ ಶಾಲೆಗಳ ಆರಂಭಕ್ಕೆ ಸಿದ್ಧತೆ
ಮಂಡ್ಯ

ಆ.23ರಿಂದ ಶಾಲೆಗಳ ಆರಂಭಕ್ಕೆ ಸಿದ್ಧತೆ

August 21, 2021

ಮಂಡ್ಯ, ಆ.20(ಮೋಹನ್‍ರಾಜ್)- 8ರಿಂದ ಪ್ರಥಮ ಪಿಯುಸಿ ವರೆಗೆ ಎಲ್ಲಾ ತರಗತಿಗಳು ಆ.23ರಿಂದ ಆರಂಭವಾಗಲಿದ್ದು, ಶಾಲೆ ಆರಂಭಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿ ಗಳ ಹಿತದೃಷ್ಟಿಯಿಂದ ಇಡೀ ಶಿಕ್ಷಣ ಇಲಾಖೆ ಶಕ್ತಿ ಮೀರಿ ಪ್ರಾಮಾಣಿಕವಾಗಿ ದುಡಿಯ ಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ಮೈಸೂರಿಗೆ ತೆರಳುವ ಮಾರ್ಗಮಧ್ಯೆ ನಗರದ ಪ್ರವಾಸಿ ಮಂದಿ ರದ ಬಳಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಜೊತೆಯಲ್ಲಿ ಬಾಳಬೇಕಾದ ಅನಿವಾರ್ಯತೆ ನಮಗೆ ಒದಗಿ ಬಂದಿದೆ. ಆದರೆ ಕೋವಿಡ್…

ಶ್ರೀರಂಗಪಟ್ಟಣ ಬಳಿ ಕುಡಿಯುವ ನೀರು ಪೈಪ್‍ಲೈನ್ ಒಡೆದ ಪರಿಣಾಮ ಕಾಲುವೆಯಂತಾದ ಮೈಸೂರು-ಬೆಂಗಳೂರು ಹೆದ್ದಾರಿ
ಮಂಡ್ಯ

ಶ್ರೀರಂಗಪಟ್ಟಣ ಬಳಿ ಕುಡಿಯುವ ನೀರು ಪೈಪ್‍ಲೈನ್ ಒಡೆದ ಪರಿಣಾಮ ಕಾಲುವೆಯಂತಾದ ಮೈಸೂರು-ಬೆಂಗಳೂರು ಹೆದ್ದಾರಿ

August 21, 2021

ಶ್ರೀರಂಗಪಟ್ಟಣ, ಆ.20(ವಿನಯ್ ಕಾರೇಕುರ)- ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ರಸ್ತೆ ಕಾಲುವಂತಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು. ಶ್ರೀರಂಗಪಟ್ಟಣ ತಾಲೂಕಿನ ಬಾಬು ರಾಯನಕೊಪ್ಪಲು ಗ್ರಾಮದ ಬಳಿ ಶುಕ್ರವಾರ ಪೈಪ್‍ಲೈನ್ ಒಡೆದು ನೀರು ಬುಗ್ಗೆ ರೀತಿ ಚಿಮ್ಮುತ್ತಿತ್ತು. ಬಾಬುರಾಯನಕೊಪ್ಪಲು ಗ್ರಾಮದ ಲೋಕಪಾವನಿ ಸೇತುವೆ ಬಳಿ ಮಂಡ್ಯಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‍ಲೈನ್ ಹಾದುಹೋಗಿತ್ತು. ಈ ಪೈಪ್ ಒಡೆದು ಅಪಾರ ಪ್ರಮಾಣದ ಕುಡಿಯುವ ಕಾವೇರಿ ನೀರು ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಹರಿಯಲಾರಂಭಿಸಿತು. ಹೆದ್ದಾರಿ ಸೇತುವೆ ಮೇಲೆ ಮಂಡಿಯುದ್ದ…

ಸಮಾಜಮುಖಿ ಕೆಲಸಗಳನ್ನು ಮೈಗೂಡಿಸಿಕೊಳ್ಳಲು ಸಲಹೆ
ಮಂಡ್ಯ

ಸಮಾಜಮುಖಿ ಕೆಲಸಗಳನ್ನು ಮೈಗೂಡಿಸಿಕೊಳ್ಳಲು ಸಲಹೆ

August 20, 2021

ಮಳವಳ್ಳಿ, ಆ.19(ಮೋಹನ್‍ರಾಜ್)- ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಸಮಾಜಮುಖಿ ಚಿಂತನೆಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ವಾಗುತ್ತದೆ ಎಂದು ಲಯನ್ಸ್ ಕ್ಲಬ್‍ನ ಮಾಜಿ ರಾಜ್ಯಪಾಲ ಲಯನ್ ಕೆ.ದೇವೇಗೌಡ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಲಯನ್ಸ್ ಕ್ಲಬ್ ಮಳವಳ್ಳಿ ಸಿಟಿ ಘಟಕದ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿ ರುವ ಲಯನ್ಸ್ ಕ್ಲಬ್ 200ಕ್ಕೂ ಹೆಚ್ಚು ದೇಶಗಳಲ್ಲಿ ಶಾಖೆ ಗಳನ್ನು ಒಳಗೊಂಡಿದೆ. ಮಂಡ್ಯ…

ಗ್ರಾಮೀಣಾಭಿವೃದ್ಧಿಗೆ ಹಲವು ಯೋಜನೆಗಳು ಜಾರಿ
ಮಂಡ್ಯ

ಗ್ರಾಮೀಣಾಭಿವೃದ್ಧಿಗೆ ಹಲವು ಯೋಜನೆಗಳು ಜಾರಿ

August 20, 2021

ಪಾಂಡವಪುರ, ಆ.19- ಗ್ರಾಮೀಣ ಪ್ರದೇಶದ ಜನರ ಜೀವನ ಮಟ್ಟ ಸುಧಾರಿ ಸಲು ಕೇಂದ್ರ ಹಾಗೂ ರಾಜ್ಯ ಸರಕಾರ ಹಲವು ಯೋಜನೆಗಳನ್ನು ರೂಪಿಸಿ ಅನು ಷ್ಠಾನಗೊಳಿಸುತ್ತಿದ್ದು, ಅದರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಹು ಮುಖ್ಯವಾ ಗಿದೆ ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಆರ್.ಪಿ.ಮಹೇಶ್ ತಿಳಿಸಿದರು. ಪಟ್ಟಣದಲ್ಲಿ ತಾಪಂ ಸಭಾಂಗಣದಲ್ಲಿ ಸಾಮಾಜಿಕ ಪರಿಶೋಧನಾ ನಿರ್ದೇಶನಾ ಲಯ, ಜಿಲ್ಲಾ ಪಂಚಾಯತ್ ಸಹಯೋಗ ದೊಂದಿಗೆ ಸ್ವಸಹಾಯ ಸಂಘದ ಮಹಿಳಾ ಗ್ರಾಮ ಸಂಪನ್ಮೂಲ ವ್ಯಕ್ತಿಗಳಿಗೆ ಏರ್ಪಡಿ ಸಿದ್ದ…

ಮಂಡ್ಯದಲ್ಲಿ ಮೆಗಾ ಲೋಕ್ ಅದಾಲತ್; 21 ಸಾವಿರಕ್ಕೂ ಹೆಚ್ಚು ಪ್ರಕರಣಗಳ ಇತ್ಯರ್ಥ
ಮಂಡ್ಯ

ಮಂಡ್ಯದಲ್ಲಿ ಮೆಗಾ ಲೋಕ್ ಅದಾಲತ್; 21 ಸಾವಿರಕ್ಕೂ ಹೆಚ್ಚು ಪ್ರಕರಣಗಳ ಇತ್ಯರ್ಥ

August 20, 2021

ಮಂಡ್ಯ, ಆ.19(ಮೋಹನ್‍ರಾಜ್)- ಆಗಸ್ಟ್ 14ರಂದು ಹಮ್ಮಿಕೊಳ್ಳಲಾಗಿದ್ದ ಮೆಗಾ ಲೋಕ್ ಅದಾಲತ್‍ನಲ್ಲಿ ಒಟ್ಟು 30, 904 ಕೇಸ್‍ಗಳನ್ನು ಇತ್ಯರ್ಥಕ್ಕೆ ತೆಗೆದುಕೊಂ ಡಿದ್ದು, ಅವುಗಳಲ್ಲಿ 21 ಸಾವಿರಕ್ಕೂ ಹೆಚ್ಚು ಕೇಸುಗಳನ್ನು ಬಗೆಹರಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾ ರದ ಅಧ್ಯಕ್ಷ ಎಸ್.ಬಿ.ವಸ್ತ್ರಮಠ ಹೇಳಿದರು. ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಟ್ಟಡದಲ್ಲಿ ಮೆಗಾ ಲೋಕ್ ಅದಾಲತ್‍ಗೆ ಸಂಬಂಧಿಸಿದಂತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲಾ ತಾಲೂಕುವಾರು ಕೋರ್ಟ್ ಗಳಲ್ಲಿ…

ದಬ್ಬೇಘಟ್ಟ ಬಳಿ ಬೋನಿಗೆ ಬಿದ್ದ ಚಿರತೆ
ಮಂಡ್ಯ

ದಬ್ಬೇಘಟ್ಟ ಬಳಿ ಬೋನಿಗೆ ಬಿದ್ದ ಚಿರತೆ

August 19, 2021

ಕಿಕ್ಕೇರಿ, ಆ.18- ಹೋಬಳಿಯ ದಬ್ಬೇಘಟ್ಟ ಬಳಿ ಚಿರತೆಯೊಂದು ಅರಣ್ಯ ಇಲಾಖೆ ಇರಿಸಲಾಗಿದ್ದ ಬೋನಿಗೆ ಬಿದ್ದಿದ್ದು, ಇದುವರೆ ವಿಗೂ ಒಟ್ಟು 2 ಚಿರತೆಗಳು ಸೆರೆಯಾಗಿದೆ. ಹೋಬಳಿಯ ದಬ್ಬೇಘಟ್ಟ ಗ್ರಾಮದ ಪಾಪೇಗೌಡರ ಜಮೀನು ಬಳಿ ಬೋನು ಇರಿಸಲಾ ಗಿತ್ತು. ಆಹಾರ ಅರಸಿ ಬಂದಿದ್ದ ಚಿರತೆ ಬೋನಿನಲ್ಲಿದ್ದ ಮೇಕೆ ಕಂಡು ಮಂಗಳ ವಾರ ಮುಂಜಾನೆ ಬೋನಿಗೆ ಸೆರೆಯಾಗಿದೆ. ಇದೇ ಸ್ಥಳದಲ್ಲಿ ನರೇಂದ್ರ ಪ್ರಸಾದ್ ಅವರ ಫಾರಂಹೌಸ್‍ನಲ್ಲಿ ಚಿರತೆ ಸೆರೆಹಿಡಿಯಲು ಇಡಲಾಗಿದ್ದ ಬೋನಿಗೆ ನಾಲ್ಕೈದು ದಿನಗಳ ಹಿಂದೆ(ಆ.13ರ ಶುಕ್ರವಾರ) ಚಿರತೆಯೊಂದು ಸೆರೆಯಾಗಿತ್ತು. ಈಗ…

ಶಾಸಕ ರವೀಂದ್ರ-ಸಂಸದೆ ಸುಮಲತಾ ‘ಲೆಟರ್‍ಹೆಡ್ ವಾಕ್ಸಮರ’
ಮಂಡ್ಯ

ಶಾಸಕ ರವೀಂದ್ರ-ಸಂಸದೆ ಸುಮಲತಾ ‘ಲೆಟರ್‍ಹೆಡ್ ವಾಕ್ಸಮರ’

August 19, 2021

ಮಂಡ್ಯ, ಆ.18(ಮೋಹನ್‍ರಾಜ್)- ಸಂಸದೆ ಸುಮಲತಾ ಅಂಬರೀಷ್ ಅಧ್ಯಕ್ಷತೆ ಯಲ್ಲಿ ನಡೆದ ದಿಶಾಸಭೆಯಲ್ಲಿ ಜೆಡಿಎಸ್ ಶಾಸಕರು ಹಾಗೂ ಸಂಸದೆ ಸುಮಲತಾ ಅಂಬರೀಷ್ ನಡುವಿನ ವಾಕ್ಸಮರ ತಾರಕ ಕ್ಕೇರಿತ್ತು. ಸುಮಲತಾ ಆಪ್ತರು ಸಂಸದರ ಲೆಟರ್‍ಹೆಡ್ ದುರ್ಬಳಕೆ ಮಾಡಿಕೊಳ್ಳು ತ್ತಿದ್ದಾರೆಂದು ಸಾಕ್ಷಿ ಸಭೆ ಮುಂದಿಟ್ಟ ಶಾಸಕ ರವೀಂದ್ರ ಶ್ರೀಕಂಠಯ್ಯ, ಸಂಸದರ ವಿರುದ್ಧ ವಾಗ್ಬಾಣ ಪ್ರಯೋಗಿಸಿದರು. ಇದಕ್ಕೆ ದಳ ಶಾಸಕರು ಬೆಂಬಲವಾಗಿ ನಿಂತಿದ್ದರಿಂದ ಸಭೆ ರಣರಂಗವಾಯಿತು. ಇನ್ನು ಸಭೆಗೆ ಆಗಮಿಸಿದ್ದ ಅಧಿಕಾರಿ ವರ್ಗ ಮೂಕ ಪ್ರೇಕ್ಷಕರಾದರು. ಬುಧವಾರ ನಗರದ ಜಿಲ್ಲಾ ಪಂಚಾ ಯ್ತಿಯ…

ಮೈಷುಗರ್ ಶೀಘ್ರ ಪುನಾರಂಭ
ಮಂಡ್ಯ

ಮೈಷುಗರ್ ಶೀಘ್ರ ಪುನಾರಂಭ

August 17, 2021

ಮಂಡ್ಯ, ಆ.16(ಮೋಹನ್‍ರಾಜ್)- ಜಿಲ್ಲೆಯ ಜೀವನಾಡಿ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಶೀಘ್ರವೇ ಪುನರಾರಂ ಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ರೇಷ್ಮೆ ಹಾಗೂ ತೋಟಗಾರಿಕಾ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು. ನಗರದ ಸರ್‍ಎಂ.ವಿಶ್ವೇಶ್ವರಯ್ಯ ಕ್ರೀಡಾಂ ಗಣದಲ್ಲಿ ಸ್ವಾತಂತ್ರೋತ್ಸವದ ಧ್ವಜಾರೋ ಹಣ ನೆರವೇರಿಸಿ ಅವರು ಮಾತನಾಡಿ ದರು. ಜಿಲ್ಲೆಯ ಪಿ.ಎಸ್.ಎಸ್.ಕೆ.ಯನ್ನು ಪುನಾರಂಭಿಸಲಾಗಿದ್ದು, 10 ಸಾವಿರ ರೈತರಿಗೆ ನೆರವಾಗುತ್ತಿದೆ. ಮಂಡ್ಯ ತಾಲೂಕಿನ ಕೊತ್ತತ್ತಿ ಹೋಬಳಿಯ 28 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಹಾಗೂ 5 ಕೆರೆಗಳಿಗೆ ನೀರು ತುಂಬಿಸುವ 18.5 ಕೋಟಿ ರೂ….

ಕೊರೊನಾ ಹೆಚ್ಚಳ; ತಿಮ್ಮನಕೊಪ್ಪಲು ಸೀಲ್‍ಡೌನ್
ಮಂಡ್ಯ

ಕೊರೊನಾ ಹೆಚ್ಚಳ; ತಿಮ್ಮನಕೊಪ್ಪಲು ಸೀಲ್‍ಡೌನ್

August 17, 2021

ಪಾಂಡವಪುರರ, ಆ.16- ತಾಲೂಕಿನ ತಿಮ್ಮನಕೊಪ್ಪಲು ಗ್ರಾಮದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿದ್ದು, ಗ್ರಾಮ ವನ್ನು ಸೀಲ್‍ಡೌನ್ ಮಾಡಿದ್ದು, ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ವೈದ್ಯರು ಹಾಗೂ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ದೊಡ್ಡಬ್ಯಾಡರಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ತಿಮ್ಮನಕೊಪ್ಪಲು ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಅಂತ್ಯಸಂಸ್ಕಾರಕ್ಕೆ ಸಾಕಷ್ಟು ಮಂದಿ ಗ್ರಾಮಸ್ಥರು ಸೇರಿದ್ದರು. ಅಂತ್ಯಸಾಂಸ್ಕಾರದ ಪಾಲ್ಗೊಂಡಿದ್ದ ಕೆಲವರಿಗೆ ಕೋವಿಡ್ ಇದ್ದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸುಮಾರು 25 ಮಂದಿಗೆ ಕೋವಿಡ್ ಕಂಡು ಬಂದಿದೆ. ಇದರಿಂದಾಗಿ ಗ್ರಾಮವನ್ನು ಸೀಲ್‍ಡೌನ್…

1 8 9 10 11 12 108
Translate »