ಮಂಡ್ಯ, ಆ.16(ಮೋಹನ್‍ರಾಜ್)- ಜನಾಶೀರ್ವಾದ ಕಾರ್ಯಕ್ರಮದ ಹಿನ್ನೆಲೆ ಯಲ್ಲಿ ಮಂಡ್ಯಕ್ಕೆ ಆಗಮಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಹಿಳಾ ಕಾರ್ಮಿಕರೊಂದಿಗೆ ಗದ್ದೆಯಲ್ಲಿ ನಾಟಿ ಮಾಡಿ ಹಾಗೂ ಟ್ರ್ಯಾಕ್ಟರ್ ಚಾಲನೆ ಮಾಡಿ ಗಮನ ಸೆಳೆದರು. ಸೋಮವಾರ ಬೆಳಗ್ಗೆ ಬೆಂಗಳೂರಿ ನಿಂದ ಮಂಡ್ಯ ಕಡೆಗೆ ಬರುವ ಮಾರ್ಗ ಮಧ್ಯದಲ್ಲಿ ಚನ್ನಪಟ್ಟಣ ಬಳಿ ಇರುವ ಕೆಂಗಲ್ ಹನುಮಂತನ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಂಡ್ಯ ಗಡಿ ಪ್ರವೇಶಿಸುತ್ತಿದ್ದಂತೆ ಮದ್ದೂರು ತಾಲೂಕಿನ ನಿಡಘಟ್ಟ ಬಳಿ ಕೇಂದ್ರ ಸಚಿವ ರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು….
ಸಣ್ಣ ರೈತರ ಉಳಿವಿಗೆ 10 ಸಾವಿರ ಕೃಷಿ ಉತ್ಪಾದಕರ ಸಂಘ ಅಸ್ತಿತ್ವಕ್ಕೆ
August 17, 2021ಮಂಡ್ಯ, ಆ.16(ಮೋಹನ್‍ರಾಜ್)- ದೇಶದ ಸಣ್ಣ ಮತ್ತು ಮಧ್ಯಮ ವರ್ಗದ ರೈತರುಗಳನ್ನು ಉಳಿಸಲು ಹಾಗೂ ಅವರ ಸಂಕಷ್ಟಕ್ಕೆ ಸಹಾಯ ಮಾಡಲು ಕೇಂದ್ರ ಸರ್ಕಾರ ದೇಶಾದ್ಯಂತ 10 ಸಾವಿರ ಕೃಷಿ ಉತ್ಪಾದ ಕರ ಸಂಘ ಅಸ್ತಿತ್ವಕ್ಕೆ ತರಲು ನಿರ್ಧರಿಸಿದೆ ಎಂದು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ಸೋಮವಾರ ನಗರದ ಪತ್ರಿಕಾ ಭವನ ದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದ ಶೇ.80ರಷ್ಟು ರೈತರು ಸಣ್ಣ ಮತ್ತು ಮಧ್ಯಮ ವರ್ಗಕ್ಕೆ ಸೇರಿದವ ರಾಗಿದ್ದಾರೆ. ಮಂಡ್ಯ…
ದಬ್ಬೇಘಟ್ಟ ಬಳಿ ಬೋನಿಗೆ ಬಿದ್ದ ಚಿರತೆ
August 15, 2021ಕಿಕ್ಕೇರಿ, ಆ.14-ಬಹಳ ದಿನಗಳಿಂದ ಕೆ.ಆರ್.ಪೇಟೆ ತಾಲೂ ಕಿನ ಕಿಕ್ಕೇರಿ ಹೊಬಳಿಯ ರೈತರನ್ನು ಆತಂಕಕ್ಕೀಡು ಮಾಡಿದ್ದ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ವಾರದಿಂದಲೂ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗಾಗಿ ಮೇಕೆ ಮರಿ ಬಿಟ್ಟು ಹೋಬಳಿಯ ಸುತ್ತಮುತ್ತ ಬೋನು ಇರಿಸುತ್ತಿದ್ದರು. ಶನಿವಾರ ಮುಂಜಾನೆ ಹೋಬಳಿಯ ದಬ್ಬೇಘಟ್ಟ ಗ್ರಾಮದ ನರೇಂದ್ರಪ್ರಸಾದ್ ಅವರ ಫಾರಂಹೌಸ್‍ನಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಜಮೀನಿನ ಮಾಲೀಕರು ಅರಣ್ಯ ಇಲಾಖೆ ಯವರಿಗೆ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಉಪವಲಯಅರಣ್ಯ ಇಲಾಖಾಧಿಕಾರಿ ರಮೇಶ್, ಅರಣ್ಯರಕ್ಷಕ ಶಿವಕುಮಾರ್, ಸಿಬ್ಬಂದಿ…
ಗಣಿಗಾರಿಕೆ ಸ್ಥಗಿತದಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತ
August 15, 2021ಜಿಲ್ಲಾಡಳಿತದ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿ ಶ್ರೀರಂಗಪಟ್ಟಣ, ಆ.14(ವಿನಯ್ ಕಾರೇಕುರ)- ಜಿಲ್ಲಾಡಳಿತವೇ ದುರುದ್ದೇಶದಿಂದ ಗಣಿಗಾ ರಿಕೆ ಸಂಪೂರ್ಣ ಸ್ಥಗಿತಗೊಳಿಸಿ, ಜಿಲ್ಲೆಯ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದರು. ತಾಲೂಕಿನ ಹುಣಸನಹಳ್ಳಿಯಲ್ಲಿ 20 ಲಕ್ಷ ರೂ. ಚೊಟ್ಟನಹಳ್ಳಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಗೆಗುದ್ದಲಿ ಪೂಜೆ, ಹುಣಸನಹಳ್ಳಿಯಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ ಹಾಗೂ ಹುಂಜನಕೆರೆ ಗ್ರಾಮದ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾಡಳಿತ ಗಣಿಗಾರಿಕೆಯನ್ನು ಉದ್ದೇಶ…
ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್ ನಡೆಸಲು ಹೋರಾಟ
August 15, 2021ಮಂಡ್ಯ, ಆ.14(ಮೋಹನ್‍ರಾಜ್)-ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಬೇಕು ಎಂದು ಒಂದೂ ವರೆ ವರ್ಷದಿಂದ ನಿರಂತರವಾಗಿ ಹೋರಾಟ ನಡೆಯುತ್ತಿದೆ. ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲೂ ಸದನದ ಒಳಗೂ ಹೊರಗೂ ಹೋರಾಟ ನಡೆ ದಿದ್ದು, ಈಗಲೂ ಅದು ಮುಂದುವರೆ ದಿದೆ ಎಂದು ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ದರು. ಹಿತರಕ್ಷಣಾ ಸಮಿತಿ ಪದಾಧಿಕಾರಿ ಗಳು ಸೇರಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ….
ದೊಡ್ಡರಸಿನಕೆರೆಯಲ್ಲಿ ಕ್ಯಾತಮ್ಮ ದೇವಿ ಹಬ್ಬಕ್ಕೆ ತೆರೆ
August 14, 2021ಭಾರತೀನಗರ, ಆ.13(ಅ.ಸತೀಶ್)- ಇಲ್ಲಿಗೆ ಸಮೀಪದ ದೊಡ್ಡರಸಿನಕೆರೆ ಗ್ರಾಮದಲ್ಲಿ 12 ವರ್ಷಗಳ ನಂತರ ಬಹಳ ವಿಜೃಂಭಣೆಯಿಂದ ನಡೆದ ಶ್ರೀ ಕ್ಯಾತಮ್ಮದೇವಿ ಪೂಜಾ ಮಹೋತ್ಸವಕ್ಕೆ ಗುರುವಾರ ರಾತ್ರಿ ತೆರೆಬಿದ್ದಿತು. ಶ್ರೀ ಕ್ಯಾತಮ್ಮದೇವಿಯ ಪೂಜಾ ಮಹೋತ್ಸವದ ಅಂಗವಾಗಿ ಇಡೀ ಗ್ರಾಮದ ರಸ್ತೆಗಳು ಹಾಗೂ ಎಲ್ಲಾ ದೇವಾಲಯಕ್ಕೆ ವಿಶೇಷ ವಾಗಿ ದೀಪಾಲಂಕಾರ ಮಾಡಲಾಗಿತ್ತು. ಮೂರು ದಿನಗಳೂ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪೂಜಾ ಮಹೋತ್ಸವದಲ್ಲಿ ಸಾವಿರಾರು ಮಹಿಳೆಯರು ಭಾಗ ವಹಿಸಿ ಹಣ್ಣೆಡಿಗೆ ಹೊತ್ತು, ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ಹೆಬ್ಬಾಳದಿಂದ ಸುಮಾರು 4…
ಭಾರತದ ಯುವ ಇಂಜಿನಿಯರ್‍ಗಳಿಗೆ ವಿಶ್ವದಲ್ಲಿ ಹೆಚ್ಚಿನ ಬೇಡಿಕೆ
August 14, 2021ಕೆ.ಆರ್.ಪೇಟೆ, ಆ.13(ಶ್ರೀನಿವಾಸ್)- ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚ ದಲ್ಲಿ ಭಾರತದ ಯುವ ಇಂಜಿನಿಯರು ಗಳಿಗೆ ವಿಶ್ವದಾದ್ಯಂತ ಬೇಡಿಕೆಯಿದೆ. ಭವಿಷ್ಯದ ನಾಡು ಕಟ್ಟಲು ತಾಂತ್ರಿಕ ಕೌಶಲ್ಯವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ವಿಜ್ಞಾನದ ಆವಿಷ್ಕಾರಗಳನ್ನು ಬಳಸಿಕೊಂಡು ಶ್ರೇಷ್ಠ ಸಾಧಕರಾಗಬೇಕು. ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣ ಹೊಂದಿದರೆ ಉದ್ಯೋಗಾವಕಾಶ ಗಳು ಹುಡುಕಿಕೊಂಡು ಬರುತ್ತದೆ ಎಂದು ರಾಜ್ಯದ ರೇಷ್ಮೆ, ಯುವಜನ ಸಬಲೀ ಕರಣ, ಕ್ರೀಡಾ ಸಚಿವ ಡಾ.ನಾರಾಯಣ ಗೌಡ ಸಲಹೆ ನೀಡಿದರು. ಅವರು ಪಟ್ಟಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಸರ್ಕಾರಿ ಇಂಜಿನಿಯರಿಂಗ್…
ಯಾರಿಗೆ ಒಲಿಯಲಿದೆ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷಗಾದಿ..?
August 14, 2021ಜಿ.ಮಾದೇಗೌಡರ ನಿಧನದಿಂದ ತೆರವಾಗಿರುವ ಸ್ಥಾನ ಕಳೆದ 3 ವರ್ಷಗಳಿಂದ ಪುನರ್‍ರಚನೆಯಾಗದ ಸಮಿತಿ ರೈತರು, ಕಾವೇರಿ ವಿಚಾರದಲ್ಲಿ ಮುಂಚೂಣಿಯ ಹೋರಾಟ ಸಮಿತಿ ಜಿಎಂ, ಕೆಎಸ್ಪಿ ಅನುಪಸ್ಥಿತಿಯಲ್ಲಿ ಹೊಸ ನಾಯಕನ ಹುಡುಕಾಟ ಆತ್ಮಾನಂದ, ಕೆಟಿಎಸ್, ಕೆಎಸ್‍ಎನ್, ಸುನಂದಾ, ಜಿಬಿಎಸ್ ರೇಸ್‍ನಲ್ಲಿ ಮಂಡ್ಯ, ಆ.13(ಮೋಹನ್‍ರಾಜ್)- ರೈತ ಹೋರಾಟ ಹಾಗೂ ಪ್ರಗತಿಪರ ಹೋರಾ ಟಕ್ಕೆ ಹೆಸರುವಾಸಿಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಹೋರಾಟ ಅಂದ ತಕ್ಷಣ ನೆನಪಾ ಗುವುದು ರೈತ ಹಿತರಕ್ಷಣಾ ಸಮಿತಿ. ಜಿಲ್ಲೆಯ ಜನರ ಯಾವುದೇ ಸಮಸ್ಯೆಗೆ ರಾಜ್ಯಮಟ್ಟದಲ್ಲಿ ಧನಿಯಾಗಿ ನಿಲ್ಲುತ್ತಿದ್ದ ರೈತ ಹಿತರಕ್ಷಣಾ…
ಬಂಗಾರದೊಡ್ಡಿ ನಾಲೆಗೆ ನೀರು ಹರಿಸಲು ಚಾಲನೆ
August 13, 2021ಶ್ರೀರಂಗಪಟ್ಟಣ, ಆ.12(ವಿನಯ್‍ಕಾರೇಕುರ)- ಪಟ್ಟಣದ ಸಮೀಪ ಆಧುನೀಕರಣಗೊಂಡಿ ರುವ ಐತಿಹಾಸಿಕ ಬಂಗಾರದೊಡ್ಡಿ ನಾಲೆಗೆ ನೀರು ಹರಿಸುವ ಮೂಲಕ ಶಾಸಕ ರವೀಂದ್ರ ಶ್ರೀಕಂಠಯ್ಯ ಚಾಲನೆ ನೀಡಿದರು. ಪಟ್ಟಣ ಸಮೀಪದ ಕಾವೇರಿ ನದಿಗೆ ಹೊಂದಿಕೊಂಡಂತೆ ಇದ್ದ ಬಂಗಾರದೊಡ್ಡಿ ನಾಲೆಯನ್ನು 14 ಕೋಟಿ ರೂ. ವೆಚ್ಚದಲ್ಲಿ ಆಧುನೀ ಕರಣಗೊಳಿಸಿದ್ದು, ಕಾವೇರಿ ನದಿಗೆ ಪೂಜೆ ಸಲ್ಲಿಸಿ ಗೇಟ್ ತೆರೆದು ನದಿಯಿಂದ ಬಂಗಾರ ದೊಡ್ಡಿ ನಾಲೆಗೆ ನೀರು ಹರಿಸಲಾಯಿತು. ನೂರಾರು ವರ್ಷಗಳಷ್ಟು ಹಳೆಯದಾದ ಕಂಠೀರವ ನರಸರಾಜ ಒಡೆಯರ್ ಅವರು ನಿರ್ಮಿಸಿದ್ದ ಸುಮಾರು 8 ಕಿಮೀ. ಉದ್ದದ…
ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಪೊಲೀಸ್ ಜೀಪ್
August 13, 2021ಮಳವಳ್ಳಿ, ಆ.12(ಮೋಹನ್‍ರಾಜ್)- ವಾಹನಗಳ ತಪಾಸಣೆ ಮಾಡುತ್ತಿದ್ದ ವೇಳೆ ನಿಲ್ಲಿಸದೇ ಪರಾರಿಯಾಗುತ್ತಿದ್ದ ಬಸ್‍ನ್ನು ಬೆನ್ನಟ್ಟಿದ ಸಂದರ್ಭದಲ್ಲಿ ಗ್ರಾಮಾಂತರ ಪೊಲೀಸರ ವಾಹನ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಪರಿಣಾಮ ಇಬ್ಬರು ಗಾಯ ಗೊಂಡಿರುವ ಘಟನೆ ತಾಲೂಕಿನ ಪಂಡಿತಹಳ್ಳಿ ಗ್ರಾಮದ ಬಳಿ ಬುಧ ವಾರ ತಡರಾತ್ರಿ ನಡೆದಿದೆ. ಗ್ರಾಮಾಂತರ ಠಾಣೆಯ ಎಎಸ್‍ಐ ಹುಚ್ಚಯ್ಯ, ಚಾಲಕ ನಾಗಯ್ಯ ಗಾಯಗೊಂಡವರಾಗಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದ ಬಳಿ ಬುಧವಾರ ತಡರಾತ್ರಿ ಪಟ್ಟಣದ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಲಾರಿಯ ಹಿಂದೆ ಬರುತ್ತಿದ್ದ ಖಾಸಗಿ…