ಮಂಡ್ಯ, ಆ.12(ಮೋಹನ್‍ರಾಜ್)- ಮಂಡ್ಯ ಜಿಲ್ಲೆಯ ನಾಗಮಂಗಲ, ಕೆ.ಆರ್.ಪೇಟೆ ಹಾಗೂ ಪಾಂಡವ ಪುರ ತಾಲೂಕುಗಳಿಗೆ ರೂ. 690.36 ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಈಗಾಗಲೇ ಮಂಜೂರಾಗಿದ್ದು, ಅನುಷ್ಠಾನಕ್ಕಾಗಿ ಟೆಂಡರ್ ಆಹ್ವಾನಿಸಲಾಗಿದೆ. ಈಗ ಇನ್ನುಳಿದ ನಾಲ್ಕು ತಾಲೂಕುಗಳ 413 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಯೋಜನೆ ಮಂಜೂರು ಮಾಡಿಸಲು ಸಚಿವ ಡಾ.ನಾರಾಯಣಗೌಡ ಸಫಲರಾಗಿದ್ದು, ಒಟ್ಟು ರೂ. 1091 ಕೋಟಿ ಮೊತ್ತದ ಕ್ರಿಯಾಯೋಜನೆಗೆ ಸರ್ಕಾರ ದಿಂದ ಅನುಮೋದನೆ ದೊರೆತಿದೆ. ಆ ಮೂಲಕ ಸಚಿವ ಡಾ.ನಾರಾಯಣಗೌಡ ಕೊಟ್ಟ ಭರವಸೆ ಈಡೇರಿದೆ….
ಮೂಲ ಕಾಂಗ್ರೆಸ್ಸಿಗರ ಕಡೆಗಣನೆ ಆರೋಪ
July 21, 2021ಶ್ರೀರಂಗಪಟ್ಟಣ, ಜು.20(ವಿನಯ್‍ಕಾರೇಕುರ)- ಶ್ರೀರಂಗಪಟ್ಟಣ ಕ್ಷೇತ್ರ ವ್ಯಾಪ್ತಿ ಇರುವ ಮೂಲ ಕಾಂಗ್ರೆಸಿಗರನ್ನು ಕಡೆಗಾಣಿಸಲಾಗು ತ್ತಿದೆ ಎಂದು ಕಾಂಗ್ರೆಸ್ ಮುಖಂಡ ಪಾಲ ಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಗೊಂಡಿತು. ಪಟ್ಟಣದ ಖಾಸಗಿ ವಸತಿ ಗೃಹದಲ್ಲಿ ನಡೆದ ಸಭೆಯಲ್ಲಿ ನೂರಾರು ಕಾಂಗ್ರೆಸಿಗರು ಭಾಗವಹಿಸಿ ಸಭೆಯಲ್ಲಿ ಪಕ್ಷ ಬಲ ವರ್ಧನೆಗೆ ಹಾಗೂ ಮೂಲ ಕಾಂಗ್ರೆಸ್ ಕಾರ್ಯಕರ್ತರ ಕಡೆಗಣನೆ ಕುರಿತು ಚರ್ಚೆ ನಡೆಸಿದರು. ಮಾಜಿ ಶಾಸಕ ರಮೇಶ್ ಬಂಡಿಸಿz್ದÉೀ ಗೌಡರು ತಮ್ಮ ಜೊತೆ ಬಂದ ಜೆಡಿಎಸ್ ಹಿಂಬಾಲಕರಿಗೆ ಮಾನ್ಯತೆ ನೀಡುತ್ತಿದ್ದು, ಹಲವು…
ಕೆಆರ್‍ಎಸ್‍ಗೆ ದೃಷ್ಟಿ ತಗುಲಿದೆ, ಹೋಮ ಮಾಡಿಸಬೇಕು
July 21, 2021ಶ್ರೀರಂಗಪಟ್ಟಣ, ಜು.20(ವಿನಯ್ ಕಾರೇಕುರ)- ಕೆಆರ್‍ಎಸ್ ಅಣೆಕಟ್ಟೆಗೆ ಯಾರದ್ದೋ ದೃಷ್ಟಿ ತಗುಲಿದ್ದು, ಇದೀಗ ಅಣೆಕಟ್ಟೆಯ ಪಾದಚಾರಿ ರಸ್ತೆಗಾಗಿ ನಿರ್ಮಿ ಸಿದ್ದ ಕಟ್ಟಡ ಕುಸಿದಿದೆ. ಮುಂದೆ ಅಣೆಕಟ್ಟೆಗೆ ಹೆಚ್ಚಿನ ಅಪಾಯ ಎದುರಾಗದಂತೆ ಹೋಮ ನಡೆಸಲು ಯೋಚಿಸಿರುವುದಾಗಿ ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು. ತಾಲೂಕಿನ ವಿವಿಧೆಡೆ ಸೋಮವಾರ 6.42 ಕೋಟಿ ವೆಚ್ಚದಲ್ಲಿ ಗ್ರಾಮಗಳ ಸಂಪರ್ಕ ರಸ್ತೆ, ಚರಂಡಿ ಸೇರಿದಂತೆ ಕಾಂಕ್ರೀಟ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು. ಜೀವನಾಡಿ ಕನ್ನಂಬಾಡಿ ಅಣೆಕಟ್ಟೆ ಸುಭದ್ರವಾಗಿದೆ, ಆದರೆ ಕೆಲ ದಿನಗಳಿಂದೀ ಚೆಗೆ…
ಗಿಡನೆಟ್ಟು ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಹುಟ್ಟುಹಬ್ಬ ಆಚರಣೆ
July 21, 2021ಮಂಡ್ಯ, ಜು.20- ಅಖಿಲ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಮಂಡ್ಯ ಜಿಲ್ಲಾ ಸಮಿತಿ ವತಿಯಿಂದ ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ 53ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ಸಂತೆ ಮೈದಾನದಲ್ಲಿರುವ ರುದ್ರಭೂಮಿ ಹಾಗೂ ಬಂದೀಗೌಡ ಬಡಾವಣೆಯಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಗಿಡ-ಮರಗಳಿದ್ದರೆ ಪ್ರಾಣಿ ಪಕ್ಷಿಗಳಿಗೆ ನೆಲೆಯನ್ನು ನೀಡಿ ಮೋಡಗಳನ್ನು ತಡೆದು ಮಳೆ…
ಹಣಕಾಸು ಯೋಜನೆಯ ಅನುದಾನ ಪ್ರತಿ ವಾರ್ಡ್‍ಗೂ ಸಮಾನ ಹಂಚಿಕೆಗೆ ನಿರ್ಣಯ
July 21, 2021ಮಂಡ್ಯ, ಜು.20(ಮೋಹನ್‍ರಾಜ್)- ಎಸ್‍ಸಿಪಿ ಹಾಗೂ ಟಿಎಸ್‍ಪಿ, 14, 15ನೇ ಹಣಕಾಸು ಯೋಜನೆಯ ಅನುದಾನ ವನ್ನು ನಗರದ ಎಲ್ಲ 35 ವಾರ್ಡುಗಳಿಗೂ ಸಮವಾಗಿ ಹಂಚಿಕೆ ಮಾಡಲು ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಅಧ್ಯಕ್ಷ ಎಚ್.ಎಸ್.ಮಂಜು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಎಸ್‍ಸಿಪಿ ಹಾಗೂ ಟಿಎಸ್‍ಪಿ ಅನುದಾನದ ಕ್ರಿಯಾ ಯೋಜನೆ ಕುರಿತಂತೆ ನಗದ ಎಲ್ಲ ವಾರ್ಡು ಗಳಲ್ಲೂ ಈ ವರ್ಗದ ಜನರಿದ್ದಾರೆ. ಒಂದೇ ವಾರ್ಡಿಗೆ ಸ್ವಲ್ಪ ಪ್ರಮಾಣದ ಅನು ದಾನವನ್ನು ನೀಡುವುದರಿಂದ ಯಾವುದೇ ಕಾಮಗಾರಿಯನ್ನೂ…
ಕೆಆರ್‍ಎಸ್ ಜಲಾಶಯದ ಸಣ್ಣ ಗೋಡೆ ಕುಸಿತ
July 20, 2021ಶ್ರೀರಂಗಪಟ್ಟಣ, ಜು.19 (ವಿನಯ್‍ಕಾರೇಕುರ)-ಅಕ್ರಮ ಗಣಿಗಾರಿಕೆ ಯಿಂದ ತಾಲೂಕಿನ ವಿಶ್ವವಿಖ್ಯಾತ ಕೃಷ್ಣರಾಜ ಸಾಗರÀ ಅಣೆಕಟ್ಟೆಗೆ ಗಂಡಾಂತರ ಕಾದಿದೆ ಎಂಬ ಸಂಸದೆ ಸುಮ ಲತಾ ಅಂಬರೀಷ್À ಅವರ ಹೇಳಿಕೆ ಬೆನ್ನಲ್ಲೇ ಭಾನುವಾರ ತಡರಾತ್ರಿ ಕೆಆರ್‍ಎಸ್ ಅಣೆಕಟ್ಟೆಯ +80 ಅಡಿ ಗೇಟು ಗಳ ಬಳಿ ಪಾದಚಾರಿ ರಸ್ತೆ ತಳಹದಿಯ ಕಲ್ಲು ಕುಸಿದಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಕೆಲ ದಿನಗಳಿಂದ ರಾಜ್ಯ ಮಟ್ಟದಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಕೃಷ್ಣರಾಜ ಸಾಗರ ಅಣೆಕಟ್ಟೆಯ ಬಿರುಕು ಸುದ್ದಿ, ಸದ್ಯ ಕಳೆದ ಒಂದು ವಾರ ದಿಂದ ತಣ್ಣಗಾಗಿತ್ತು….
ಪಿಎಸ್‍ಎಸ್‍ಕೆ ಗುತ್ತಿಗೆ ನೌಕರರ ಆತ್ಮಹತ್ಯೆ ಯತ್ನ
July 20, 2021ಪಾಂಡವಪುರ, ಜು.19- ತಾಲೂಕಿನ ಪಿಎಸ್‍ಎಸ್‍ಕೆ ಕಾರ್ಖಾನೆಯ ಗುತ್ತಿಗೆ ನೌಕರ ರಾಗಿ ಕೆಲಸ ಮಾಡಿದ 21 ಮಂದಿಯನ್ನು ಮತ್ತೆ ಕೆಲಸಕ್ಕೆ ಸೇರಿಕೊಳ್ಳದ ಹಿನ್ನೆಲೆಯಲ್ಲಿ ಇಬ್ಬರು ನೌಕರರು ಕಾರ್ಖಾನೆ ಬಾಯ್ಲರ್ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಕಾರ್ಖಾನೆಯ ಆವರಣದಲ್ಲಿ ಜಮಾ ಯಿಸಿದ ಗುತ್ತಿಗೆ ಕಾರ್ಮಿಕರು ಕೆಲಸಕ್ಕೆ ತೆಗೆದುಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು, ಕಾರ್ಖಾನೆಯ ಅಧಿಕಾರಿ ಗಳು ನೌಕರರ ಮನವಿಗೆ ಸ್ಪಂದಿಸದ ಹಿನ್ನೆಲೆ ಯಲ್ಲಿ ಸೋಮವಾರ ಬೆಳಗ್ಗೆ ಗುತ್ತಿಗೆ ಕಾರ್ಮಿಕ ರಾದ ಮನು ಮತ್ತು ರಾಮಕೃಷ್ಣ ಎಂಬು ವರು ಕಾರ್ಖಾನೆಯ…
ಯುವಜನರ ಕೌಶಲಾಭಿವೃದ್ಧಿಗೆ 10 ಕೋಟಿ ವೆಚ್ಚದಲ್ಲಿ ತರಬೇತಿ ಶಾಲೆ ಮಂಜೂರು
July 18, 2021ಕೆ.ಆರ್.ಪೇಟೆ,ಜು.17(ಶ್ರೀನಿವಾಸ್)-ತಾಲೂಕಿನ ಯುವ ಜನತೆಯ ಕೌಶಲಾ ಭಿವೃದ್ಧಿಗಾಗಿ ಕೌಶಲ್ಯ ತರಬೇತಿ ಶಾಲೆ ಆರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ 10 ಕೋಟಿ ರೂ. ವೆಚ್ಚದಲ್ಲಿ ಮಂಜೂರಾತಿ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾ ಯಣಗೌಡ ಮಾಹಿತಿ ನೀಡಿದರು. ತಾಲೂಕಿನ ಬೂಕನಕೆರೆ ಹೋಬಳಿ ಬಳ್ಳೇಕೆರೆ ಗ್ರಾಮದ ಮುಖಂಡ ಯೋಗಣ್ಣ ಅವರ ತೋಟದಮನೆ ಆವರಣದಲ್ಲಿ ಆಯೋ ಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತ ನಾಡಿದರು. ತಾಲೂಕಿನ ಸುಪುತ್ರ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ಕಾರಣದಿಂದಾಗಿ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ…
ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ನಿಗಾ ವಹಿಸಿ
July 18, 2021ಪಾಂಡವಪುರ, ಜು.17-ಎಸ್‍ಎಸ್ ಎಲ್‍ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿ ಗಳಿಗೆ ಯಾವುದೇ ಸಮಸ್ಯೆ ಎದುರಾಗ ದಂತೆ ನಿಗಾ ವಹಿಸಿ, ಸಮಸ್ಯೆಗಳೆನಾದರೂ ಎದುರಾದರೆ ನನ್ನ ಗಮನಕ್ಕೆ ತನ್ನಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಶಾಸಕ ಸಿ.ಎಸ್.ಪುಟ್ಟರಾಜು ಸೂಚಿಸಿದರು. ಪಟ್ಟಣದ ಬಿಆರ್‍ಸಿ ಕೇಂದ್ರದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಪೂರ್ವ ಸಿದ್ಧತೆ ಸಂಬಂಧ ಬಿಇಓ ಹಾಗೂ ಶಿಕ್ಷಕ ಸಭೆ ನಡೆಸಿ ಅವರು ಮಾತನಾಡಿದರು. ಸರ್ಕಾರ ಸೂಚಿಸಿರುವ ಮಾರ್ಗದಂತೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಿ. ಪರೀಕ್ಷೆ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆ, ತೊಂದರೆ ಯಾಗ…
ಮಂಡ್ಯ ಸಮಗ್ರ ಅಭಿವೃದ್ಧಿ ಹರಿಕಾರ ಮಾದೇಗೌಡ
July 18, 2021ಮಂಡ್ಯ,ಜು.17(ಮೋಹನ್‍ರಾಜ್)- ಗಾಂಧಿ ತತ್ವ ಮೈಗೂಡಿಸಿಕೊಂಡು ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಡಿಪಾಯ ಹಾಕಿದ ಜಿ.ಮಾದೇಗೌಡರು ಶಿಕ್ಷಣ, ಸಾಹಿತ್ಯ, ಸಂಸ್ಕøತಿ, ಕೈಗಾರಿಕೆ, ಆರೋಗ್ಯ, ಧಾರ್ಮಿಕ ಸೇರಿದಂತೆ ಹತ್ತು ಹಲವು ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನ-ಮಾನ ಗಳಿಸಿದ್ದಾರೆ. ಇಂತಹ ಗ್ರಾಮೀಣ ಗಾಂಧಿಗೆ ಮೈಸೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಗೌರವ ಕೂಡ ಸಂದಿದೆ. ಗ್ರಾಮೀಣ ಪ್ರದೇಶದ ಯುವಕ, ಯುವತಿಯರಿಗೆ ವಿದ್ಯಾದಾಹವನ್ನು ನೀಗಲು ಭಾರತಿ ವಿದ್ಯಾ ಸಂಸ್ಥೆಯನ್ನು 1962ರಲ್ಲಿ ಆರಂಭಿಸಿ, ಇದೀಗ ಅದು ಬೃಹತ್ತಾಕಾರ ವಾಗಿ ಮಿನಿ ವಿಶ್ವ ವಿದ್ಯಾಲಯದಂತೆ ಭಾರತೀನಗರದಲ್ಲಿ ಬೆಳೆದು…