ಮಂಡ್ಯ

ಸರ್ಕಾರಿ ಸ್ವಾಮ್ಯದಲ್ಲೇ ಮೈಶುಗರ್ ಉಳಿಸಲು ಆಗ್ರಹಿಸಿ ಪ್ರತಿಭಟನೆ 
ಮಂಡ್ಯ

ಸರ್ಕಾರಿ ಸ್ವಾಮ್ಯದಲ್ಲೇ ಮೈಶುಗರ್ ಉಳಿಸಲು ಆಗ್ರಹಿಸಿ ಪ್ರತಿಭಟನೆ 

October 22, 2020

ಮಂಡ್ಯ, ಅ.21- ಸರ್ಕಾರಿ ಸ್ವಾಮ್ಯ ದಲ್ಲೇ ಮೈಶುಗರ್ ಕಾರ್ಖಾನೆಯನ್ನು ಉಳಿಸಿ ಕೊಂಡು ಕಬ್ಬು ಅರೆಯಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು. ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜೀವನಾಡಿ ಮೈಶುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ನಡೆಸಬೇಕೆಂದು ರೈತರು, ಜನಪರ ಹೋರಾಟಗಾರರು ಮತ್ತು ದಲಿತ ಸಂಘ ಟನೆಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಮನವಿಗಳನ್ನು…

ಸೋಲನ್ನು ಜೀರ್ಣಿಸಿಕೊಳ್ಳುವುದರಿಂದ ಉತ್ತಮ ಸಾಧನೆ ಸಾಧ್ಯ
ಮಂಡ್ಯ

ಸೋಲನ್ನು ಜೀರ್ಣಿಸಿಕೊಳ್ಳುವುದರಿಂದ ಉತ್ತಮ ಸಾಧನೆ ಸಾಧ್ಯ

October 22, 2020

ಶ್ರೀರಂಗಪಟ್ಟಣ, ಅ,21(ವಿನಯ್‍ಕಾರೇಕುರ)- ಪ್ರತಿಯೊಬ್ಬ ಮನುಷ್ಯನಿಗೆ ಓದು ಮತ್ತು ಕ್ರೀಡೆ ಎರಡು ಇರಬೇಕು. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಭೌತಿಕವಾಗಿ, ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಮತ್ತು ಆರೋಗ್ಯವಾಗಿ ಇರಬೇಕು ಕೇವಲ ಕಾಯಿಲೆ ಇಲ್ಲ ಎಂದರೆ ಆರೋಗ್ಯವಾಗಿ ಇದ್ದಾನೆ ಎಂದು ಹೇಳಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಭೌತಿಕ ವಾಗಿ ಸಶಕ್ತವಾಗಿ ಲವಲವಿಕೆಯನ್ನು ಕಂಡುಕೊಳ್ಳಬೇಕೆಂದರೆ ಮತ್ತು ಮಾನಸಿಕವಾಗಿ ಕ್ರಿಯಾ ಶೀಲವಾಗಿರಬೇಕೆಂದರೆ ಕ್ರೀಡೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಇಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಯುವ ಸಬಲೀಕರಣ, ಕ್ರೀಡಾ ಇಲಾಖೆ ಮತ್ತು ನೆಹರು…

ಮದ್ದೂರು ಬಳಿ ಹೆಬ್ಬಾವು ಪತ್ತೆ
ಮಂಡ್ಯ

ಮದ್ದೂರು ಬಳಿ ಹೆಬ್ಬಾವು ಪತ್ತೆ

October 22, 2020

ಮದ್ದೂರು, ಅ.21- ತಾಲೂಕಿನ ಮಾಚಹಳ್ಳಿ ಕೆರೆಯಲ್ಲಿ ಭಾರಿ ಗಾತ್ರದ ಹೆಬ್ಬಾವನ್ನು ಅರಣ್ಯಾಧಿಕಾರಿಗಳು ಉರಗ ಪ್ರೇಮಿ ಮ.ನ.ಪ್ರಸನ್ನಕುಮಾರ್ ಜತೆಗೂಡಿ ಸೆರೆ ಹಿಡಿದಿದ್ದಾರೆ. ಬುಧವಾರ ಕೆರೆಯಲ್ಲಿ ಮೀನಿಗೆ ಹಾಕಿದ್ದ ಬಲೆಯಲ್ಲಿ ಸಿಕ್ಕಿ ಹಾಕಿ ಕೊಂಡಿದ್ದ ಹೆಬ್ಬಾವನ್ನು ರಕ್ಷಣೆ ಮಾಡಲಾಯಿತು. ಸುಮಾರು 10 ಅಡಿ ಉದ್ದ ಹಾಗೂ ಅಂದಾಜು 30 ಕೆ.ಜಿ. ತೂಕದ ಹೆಬ್ಬಾವನ್ನು ಕಂಡು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. ಅರಣ್ಯಾಧಿಕಾರಿಗಳು ಹಾಗೂ ಮ.ನ.ಪ್ರಸನ್ನಕುಮಾರ್ ಹಾವನ್ನು ಹಿಡಿದು ಮಳವಳ್ಳಿ ತಾಲೂಕಿನ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.  

ಶ್ರೀರಂಗಪಟ್ಟಣದಲ್ಲಿ ಸರಳ ದಸರಾ: ವೀಕ್ಷಣೆಗೆ 15 ಕಡೆ ಎಲ್‍ಇಡಿ ವಾಲ್ ಅಳವಡಿಕೆ
ಮಂಡ್ಯ

ಶ್ರೀರಂಗಪಟ್ಟಣದಲ್ಲಿ ಸರಳ ದಸರಾ: ವೀಕ್ಷಣೆಗೆ 15 ಕಡೆ ಎಲ್‍ಇಡಿ ವಾಲ್ ಅಳವಡಿಕೆ

October 22, 2020

ಶ್ರೀರಂಗಪಟ್ಟಣ, ಅ,21 (ವಿನಯ್ ಕಾರೇಕುರ)- ಈ ಬಾರಿಯ ಶ್ರೀರಂಗ ಪಟ್ಟಣ ದಸರಾವನ್ನು ಸರಳ ಹಾಗೂ ಪಾರಂ ಪರಿಕವಾಗಿ ಆಚರಿಸಲು ಜಿಲ್ಲಾಡಳಿತದ ಜೊತೆ ಸೇರಿ ನಿರ್ಧಾರ ಮಾಡಲಾಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ದಸರಾ ಕೋವಿಡ್ ಸಂಕಷ್ಟದ ನಡುವೆ ಯಾವುದೇ ಗುಂಪು ಸೇರಿಸದೆ ಜೈಪುರ್, ಉದಯ್‍ಪುರ್ ಸೇರಿದಂತೆ ರಾಜಸ್ಥಾನ ಗಳ ಕಡೆ ನಡೆಸುವಂತೆ ಪಟ್ಟಣದ ಐತಿಹಾಸಿಕ ಬತೇರಿಯ ಎತ್ತರದ ಪ್ರದೇಶದಲ್ಲಿ ಬಹಳ ವಿಶಿಷ್ಠವಾಗಿ…

ಮಂಡ್ಯ ಸರ್ಕಾರಿ ಮಹಾವಿದ್ಯಾಲಯ ಶೀಘ್ರವೇ ವಿಶ್ವವಿದ್ಯಾಲಯ
ಮಂಡ್ಯ

ಮಂಡ್ಯ ಸರ್ಕಾರಿ ಮಹಾವಿದ್ಯಾಲಯ ಶೀಘ್ರವೇ ವಿಶ್ವವಿದ್ಯಾಲಯ

June 13, 2020

ಮಂಡ್ಯ, ಜೂ.12(ನಾಗಯ್ಯ)- ಮಂಡ್ಯ ಸರ್ಕಾರಿ ಮಹಾ ವಿದ್ಯಾಲಯ (ಸ್ವಾಯತ್ತ) ವನ್ನು ವಿಶ್ವವಿದ್ಯಾಲಯವ ನ್ನಾಗಿ ಅಧಿಕೃತವಾಗಿ ಸದ್ಯದಲ್ಲೇ ಘೋಷಣೆ ಮಾಡಲಾಗುವುದು. ಉಪ ಕುಲಪತಿ ನೇಮ ಕಕ್ಕೂ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾ ಯಣ್ ಇಂದಿಲ್ಲಿ ತಿಳಿಸಿದರು. ಅವರಿಂದು ಸರ್ಕಾರಿ ಮಹಾವಿದ್ಯಾ ಲಯಕ್ಕೆ ಭೇಟಿ ನೀಡಿ, ಅಲ್ಲಿನ ಕಾರ್ಯ ವಿಧಾನ ಪರಿಶೀಲಿಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿ, 2015ರಲ್ಲಿ ವಿವಿ ಯನ್ನಾಗಿ ಘೋಷಣೆ ಮಾಡಲಾಗಿತ್ತು. ಆದರೆ ಕೆಲವು ಸಣ್ಣಪುಟ್ಟ ಅಡೆತಡೆಗಳಿ…

ಮೈಷುಗರ್ ನೂತನ ಎಂಡಿಯಾಗಿ ಪಿ.ವಸಂತಕುಮಾರ್ ಅಧಿಕಾರ ಸ್ವೀಕಾರ
ಮಂಡ್ಯ

ಮೈಷುಗರ್ ನೂತನ ಎಂಡಿಯಾಗಿ ಪಿ.ವಸಂತಕುಮಾರ್ ಅಧಿಕಾರ ಸ್ವೀಕಾರ

June 7, 2020

ಮಂಡ್ಯ, ಜೂ.6(ನಾಗಯ್ಯ)- ಮೈಷುಗರ್ ಕಾರ್ಖಾನೆಯ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಪಿ.ವಸಂತಕುಮಾರ್ ಶನಿ ವಾರ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಾಂತಾರಾಂ ಅವರ ಅವಧಿ ಜೂ. 1ರಂದು ಪೂರ್ಣಗೊಂಡಿದ್ದರಿಂದ ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಮಳವಳ್ಳಿ ಮೂಲದ ಹಿರಿಯ ಐಎಎಸ್ ಅಧಿಕಾರಿ ಪಿ.ವಸಂತಕುಮಾರ್ ಅವರನ್ನು ಪೂರ್ಣಾವಧಿಗೆ ನೇಮಕ ಮಾಡಲಾಗಿದೆ. ಮನವಿ ಸಲ್ಲಿಕೆ: ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ವ್ಯವಸ್ಥಾಪಕ ನಿರ್ದೇಶಕ ಪಿ.ವಸಂತ ಕುಮಾರ್ ಅವರನ್ನು ಭೇಟಿ ಮಾಡಿದ ಕಾರ್ಖಾನೆಯ ಪ.ಜಾತಿ/ ಪಂಗಡದ ನೌಕರರ ಸಂಘದ ಅಧ್ಯಕ್ಷ ಎಂಡಿ ಜಯರಾಂ ಹಾಗೂ…

ಕಾಂಗ್ರೆಸ್ ಮುಖಂಡ ಬಿ.ರೇವಣ್ಣರಿಂದ ಸಾವಿರಾರು ಬೀದಿಬದಿ ವ್ಯಾಪಾರಿಗಳು, ಬಡವರಿಗೆ ದಿನಸಿ ಕಿಟ್ ವಿತರಣೆ
ಮಂಡ್ಯ

ಕಾಂಗ್ರೆಸ್ ಮುಖಂಡ ಬಿ.ರೇವಣ್ಣರಿಂದ ಸಾವಿರಾರು ಬೀದಿಬದಿ ವ್ಯಾಪಾರಿಗಳು, ಬಡವರಿಗೆ ದಿನಸಿ ಕಿಟ್ ವಿತರಣೆ

June 2, 2020

ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹುಟ್ಟುಹಬ್ಬದ ಹಿನ್ನೆಲೆ ಮಂಡ್ಯ, ಜೂ.1(ನಾಗಯ್ಯ)- ಪಾಂಡವಪುರ ಪಟ್ಟಣ ದಲ್ಲಿ ಸೋಮವಾರ ಮಾಜಿ ಸಚಿವ ಎನ್. ಚಲುವ ರಾಯಸ್ವಾಮಿ ಅವರ ಹುಟ್ಟುಹಬ್ಬವನ್ನು ಸಮಾಜ ಸೇವಕ, ಮೈಸೂರು ಲಾರಿ ಮಾಲೀಕರ ಸಂಘದ ಅಧ್ಯಕ್ಷರೂ ಆದ ಕಾಂಗ್ರೆಸ್ ಮುಖಂಡ ಬಿ.ರೇವಣ್ಣ ಅವರು ಸಾವಿರಾರು ಬೀದಿಬದಿ ವ್ಯಾಪಾರಿಗಳು ಹಾಗೂ ಬಡವರಿಗೆ ಸುಮಾರು 3200 ದಿನಸಿ ಕಿಟ್‍ಗಳನ್ನು ವಿತರಿಸುವ ಮೂಲಕ ಸಾರ್ಥಕ ರೀತಿ ಆಚರಿಸಿದರು. ಪಾಂಡವಪುರ ಪಟ್ಟಣದ ಫೈಲೈಟ್ ಸರ್ಕಲ್‍ನಲ್ಲಿ ಎನ್.ಚಲುವರಾಯಸ್ವಾಮಿ ಅವರ ಪ್ಲೆಕ್ಸ್ ನಿಲ್ಲಿಸಿ ಕೇಕ್ ಕಟ್ ಮಾಡಿದ…

ಪತ್ರಕರ್ತರ ಕೊರೊನಾ ಟೆಸ್ಟ್‍ಗೆ ಅಡ್ಡಿ ಪ್ರಕರಣ ನಾಲ್ವರು ಪತ್ರಕರ್ತರ ವಿರುದ್ಧ ಕೆಟಿಎಸ್ ಪುತ್ರನಿಂದ ಎಫ್‍ಐಆರ್
ಮಂಡ್ಯ

ಪತ್ರಕರ್ತರ ಕೊರೊನಾ ಟೆಸ್ಟ್‍ಗೆ ಅಡ್ಡಿ ಪ್ರಕರಣ ನಾಲ್ವರು ಪತ್ರಕರ್ತರ ವಿರುದ್ಧ ಕೆಟಿಎಸ್ ಪುತ್ರನಿಂದ ಎಫ್‍ಐಆರ್

May 1, 2020

ಮಂಡ್ಯ, ಏ.30(ನಾಗಯ್ಯ)- ಕಳೆದ ಐದು ದಿನಗಳ ಹಿಂದೆ ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರ ಕೊರೊನಾ ಟೆಸ್ಟ್‍ಗೆ ಅಡ್ಡಿಪಡಿಸಿದ ಜೆಡಿಎಸ್‍ನ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮತ್ತು ಅವರ ಮಗ ಕೃಷಿಕ್ ಗೌಡ ಪತ್ರಕರ್ತರ ವಿರುದ್ಧವೇ ದೂರು ದಾಖಲಿಸಿದ್ದಾರೆ. ಪತ್ರಕರ್ತರಾದ ಕೆ.ಎನ್.ನಾಗೇಗೌಡ, ಸುನೀಲ್, ಎಚ್.ಎಸ್. ಮಹೇಶ್, ಮದನ್ ಅವರುಗಳು ತಮ್ಮ ತಂದೆ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹಾಗೂ ತನ್ನ ಮೇಲೂ ಹಲ್ಲೆ ನಡೆಸಿದ್ದಲ್ಲದೆ, ನಿಂದಿಸಿದ್ದಾರೆ ಎಂದು ಆರೋಪಿಸಿ ನಗರದ ಪಶ್ಚಿಮ ಠಾಣೆಯಲ್ಲಿ ದೂರು ನೀಡಿದ್ದು, ಮಂಗಳವಾರ ರಾತ್ರಿ ಎಫ್‍ಐಆರ್…

ಪಾಂಡವಪುರದ ವಿವಿಧೆಡೆ ಕಾಯಕಯೋಗಿ ಸ್ಮರಣೆ
ಮಂಡ್ಯ

ಪಾಂಡವಪುರದ ವಿವಿಧೆಡೆ ಕಾಯಕಯೋಗಿ ಸ್ಮರಣೆ

April 27, 2020

ಪಾಂಡವಪುರ, ಏ.26- ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಸೇರಿದಂತೆ ವಿವಿಧೆಡೆ ಕಾಯಕಯೋಗಿ ಬಸವಣ್ಣ ನವರ 887ನೇ ಜಯಂತೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಮಿನಿವಿಧಾನಸೌಧದಲ್ಲಿ ಆಯೋ ಜಿಸಿದ್ದ ಕಾರ್ಯಕ್ರಮವನ್ನು ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಬಸವಣ್ಣ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಬಸವಣ್ಣನವರ ತತ್ವ ಆದರ್ಶ ಮೈಗೂಡಿಸಿ ಕೊಂಡು ಮುನ್ನಡೆಯಬೇಕು ಎಂದರು. ತಾಲೂಕಿನ ಬೇಬಿಬೆಟ್ಟದ ಶ್ರೀರಾಮಯೋಗೀ ಶ್ವರ ಮಠದಲ್ಲಿ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಸರಳ ವಾಗಿ…

ನಗುವನಹಳ್ಳಿ ಗ್ರಾಪಂಗೆ ‘ನಮ್ಮ ಗ್ರಾಮ ನಮ್ಮ ಯೋಜನೆ’ ರಾಷ್ಟ್ರ ಪ್ರಶಸ್ತಿ 
ಮಂಡ್ಯ

ನಗುವನಹಳ್ಳಿ ಗ್ರಾಪಂಗೆ ‘ನಮ್ಮ ಗ್ರಾಮ ನಮ್ಮ ಯೋಜನೆ’ ರಾಷ್ಟ್ರ ಪ್ರಶಸ್ತಿ 

April 27, 2020

ಶ್ರೀರಂಗಪಟ್ಟಣ, ಏ.26(ವಿನಯ್ ಕಾರೇ ಕುರ)- ಕೊರೊನಾ ಲಾಕ್‍ಡೌನ್ ನಡುವೆ ತಾಲೂಕಿನ ನಗುವನಹಳ್ಳಿ ಗ್ರಾಪಂಗೆ 2018- 19ನೇ ಸಾಲಿನ `ನಮ್ಮ ಗ್ರಾಮ ನಮ್ಮ ಯೋಜನೆ ಯಡಿ’ (ಜಿಪಿಡಿಪಿಎ) ರಾಷ್ಟ್ರ ಪ್ರಶಸ್ತಿ ಲಭಿಸಿದ್ದು, ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಆಯ್ಕೆ ಪ್ರಮಾಣ ಪತ್ರ ರವಾನಿಸಿದ್ದಾರೆ. ಈ ಗ್ರಾಪಂ ಪಿಡಿಓ ಹೆಚ್.ಜಿ.ಯೋಗೇಶ್ ಹಾಗೂ ಎರಡನೇ ಬಾರಿಗೆ ಗ್ರಾಪಂ ಅಧ್ಯಕ್ಷರಾಗಿರುವ ನಂದಕುಮಾರ್ ರಾಷ್ಟ್ರ ಪ್ರಶಸ್ತಿಯ ರೂವಾರಿಗಳಾಗಿದ್ದಾರೆ. ಸಾರ್ವಜನಿಕರು ಸುಲಭವಾಗಿ ಗ್ರಾಪಂಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಪಡೆಯಲು ಅನುವಾಗುವಂತೆ ಮಂಡ್ಯ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ…

1 21 22 23 24 25 108
Translate »