ಮೇಲುಕೋಟೆ,ಮಾ.2-ವೈರಮುಡಿ ಜಾತ್ರಾ ಮಹೋತ್ಸವಕ್ಕೂ ಮುನ್ನಾ ಎನ್‍ಎಸ್‍ಎಸ್ ಶಿಭಿರಾರ್ಥಿ ಗಳು ಗ್ರಾ.ಪಂ ಸಹಕಾರದಲ್ಲಿ ಮೇಲುಕೋಟೆಯ ವಿವಿಧೆಡೆ ಪ್ರಥಮ ಹಂತದ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಿದ್ದಾರೆ. ಪಾಂಡವಪುರ ವಿಜಯ ಪ್ರಥಮ ದರ್ಜೆ ಕಾಲೇಜಿನ ನೇತೃತ್ವದಲ್ಲಿ ಮೇಲುಕೋಟೆಯಲ್ಲಿ ನಡೆದ ಮಂಡ್ಯ ಜಿಲ್ಲಾ ಮಟ್ಟದ ಅಂತರ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ 39 ರಾಷ್ಟ್ರೀಯ ಸೇವಾ ಯೋಜನೆಯ 180 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. 7 ದಿನಗಳ ಕಾಲ ನಡೆದ ಶಿಬಿರದ ವೇಳೆ 5 ತಂಡಗಳಾಗಿ ಶ್ರಮ ದಾನ ಮಾಡಿದ ವಿದ್ಯಾರ್ಥಿಗಳು,…
ಲೋಕಪಾವನಿಯಲ್ಲಿ ಎತ್ತು, ಗಾಡಿ ತೊಳೆಯುವಾಗ ಯುವಕ ನಾಪತ್ತೆ
March 3, 2020ಶ್ರೀರಂಗಪಟ್ಟಣ,ಮಾ.2(ವಿನಯ್‍ಕಾರೇಕುರ,ನಾಗಯ್ಯ)-ಗಾಡಿ ಮತ್ತು ಎತ್ತುಗಳನ್ನು ತೊಳೆಯಲು ಹೋದ ಯುವಕ ನೋರ್ವ ಕೊಚ್ಚಿ ಹೋಗಿ ನಾಪತ್ತೆ ಯಾಗಿರುವ ಘಟನೆ ಶ್ರೀರಂಗ ಪಟ್ಟಣ ತಾಲ್ಲೂಕಿನ ಬಾಬು ರಾಯನಕೊಪ್ಪಲಿನ ಲೋಕ ಪಾವನಿ ನದಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಮತ್ತೋರ್ವ ಯುವಕ ಈಜಿ ದಡ ಸೇರಿದ್ದಾನೆ. ಬಾಬುರಾಯನ ಕೊಪ್ಪಲು ನಿವಾಸಿ ಲಾಯರ್ ಶೇಷಾದ್ರಿ ಮತ್ತು ಹೇಮಾ ದಂಪತಿ ಪುತ್ರ ಸೋಮೇಶ್ವರ್ (21) ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾದವನಾಗಿದ್ದು, ಆತನ ಚಿಕ್ಕಪ್ಪನ ಮಗ ಶಿವು ಈಜಿ ದಡ ಸೇರಿದ್ದಾನೆ. ವಿವರ: ಬಾಬುರಾಯನಕೊಪ್ಪಲಿನ ಲೋಕಪಾವನಿ ನದಿ ಪಕ್ಕದಲ್ಲಿರುವ…
ಮೈಷುಗರ್ ಕಾರ್ಖಾನೆ ಖಾಸಗೀಕರಣ ಮಾಡದಂತೆ ಒತ್ತಾಯ
March 3, 2020ಮಂಡ್ಯ,ಮಾ.2(ನಾಗಯ್ಯ)-ಮೈಷು ಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡದೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿ ಕೊಳ್ಳಬೇಕು ಎಂದು ಪ್ರಗತಿಪರ ಸಂಘ ಟನೆಗಳ ಮುಖಂಡರು ಒತ್ತಾಯಿಸಿದರು. ನಗರದಲ್ಲಿಂದು ಜಂಟಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ರೈತನಾಯಕಿ ಸುನಂದಾ ಜಯರಾಂ, ಕಾಂಗ್ರೆಸ್ ಜಿಲ್ಲಾ ಧ್ಯಕ್ಷ ಸಿ.ಡಿ.ಗಂಗಾಧರ್, ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್.ಕೃಷ್ಣ ಅವರು, ಖಾಸಗೀಕರಣ ಮಾಡುತ್ತೇವೆ ಎಂಬ ಸಕ್ಕರೆ ಸಚಿವರ ಹೇಳಿಕೆಯನ್ನು ಖಂಡಿಸಿದರು. ಮಾ.5ರಂದು 2020-21ನೇ ಸಾಲಿನ ರಾಜ್ಯ ಬಜೆಟ್‍ನಲ್ಲಿ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಲು ಹಣ ಮೀಸಲಿಡಬೇಕು. ಕಾರ್ಖಾನೆಯ ಸಾಧÀಕ -ಬಾಧಕಗಳ…
ದೇಶದ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅಪಾರ
March 3, 2020ಮಂಡ್ಯ,ಮಾ.2-ಕಾರ್ಮಿಕರು ಮಾಡುವ ಕೆಲಸದಿಂದ ಪ್ರತಿ ಹಂತದಲ್ಲು ಕೂಡ ಅಭಿವೃದ್ಧಿಯನ್ನು ಕಾಣಲು ಸಾಧ್ಯ, ಒಂದು ದೇಶ ಅಭಿವೃದ್ಧಿಯಾಗಬೇಕಾ ದರೆ, ಒಂದು ನಾಗರೀಕತೆ ಉತ್ತಮವಾಗಿ ಬೆಳೆÀಯಬೇಕೆಂದರೆ ಕಾರ್ಮಿಕರ ಕೊಡುಗೆ ಅಪಾರವಾದುದ್ದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಹೇಳಿದರು. ಇಂದು ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಮಂಡ್ಯ ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ, ಬೆಂಗ ಳೂರು ಇವರ ಸಂಯುಕ್ತಾಶ್ರದಲ್ಲಿ ನಡೆದ ಕಾರ್ಮಿಕ ಸಮ್ಮಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರು ತಮ್ಮ…
ಮಂಡ್ಯದಲ್ಲಿ ರೌಡಿಗಳ ಅಟ್ಟಹಾಸ: 38 ರೌಡಿಗಳ ಗಡಿಪಾರಿಗೆ ಸಿದ್ಧತೆ
March 2, 2020ಮಂಡ್ಯ,ಮಾ.1(ನಾಗಯ್ಯ)-ಇತ್ತೀಚೆಗೆ ಮಂಡ್ಯ ದಲ್ಲಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದ್ದು, ಶಾಂತಿ-ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ 38 ರೌಡಿಗಳ ಗಡಿಪಾರಿಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ಭಾನುವಾರ ಜಿಲ್ಲಾದಂಡಾಧಿ ಕಾರಿಗಳಾದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕ ಟೇಶ್ ರೌಡಿಗಳ ವಿಚಾರಣೆ ನಡೆಸಿದರು. ಕಳೆದೆರಡು ತಿಂಗಳಿಂದ ಜಿಲ್ಲೆಯ ವಿವಿಧೆಡೆ ಗಳಲ್ಲಿ ಕ್ಷುಲ್ಲಕ ಕಾರಣಕ್ಕೆ 8ಕ್ಕೂ ಹೆಚ್ಚು ಕೊಲೆ, 10ಕ್ಕೂ ಹೆಚ್ಚು ದರೋಡೆ ಪ್ರಕರಣಗಳು ಮತ್ತು ಹಲವು ಸರಗಳ್ಳತನ ಪ್ರಕರಣಗಳು ವರದಿಯಾ ಗಿದ್ದು, ಸಾರ್ವಜನಿಕರ ನೆಮ್ಮದಿ ಹದಗೆಟ್ಟಿತ್ತು. ಒಂದಲ್ಲಾ ಒಂದು ಅಪರಾಧ ಪ್ರಕರಣಗಳು ನಿತ್ಯ ನಡೆಯುತ್ತಿದ್ದು,…
ಕಾಯಕ ವರ್ಗಗಳ ಅಭಿವೃದ್ಧಿಗೆ ನಿಗಮಮಂಡಳಿ ಸ್ಥಾಪನೆ ಅಗತ್ಯ
March 2, 2020ಕೆ.ಆರ್.ಪೇಟೆ,ಮಾ.1-ರಾಜ್ಯದಲ್ಲಿನ ಎಲ್ಲಾ ಕಾಯಕ ವರ್ಗಗಳ ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ನಿಗಮ-ಮಂಡಳಿ ಸ್ಥಾಪನೆ ಮಾಡಬೇಕು ಎಂದು ರಾಜ್ಯ ಕಾಯಕ ಸಮುದಾಯಗಳ ಒಕ್ಕೂಟದ ಸಂಚಾಲಕ ಹಾಗೂ ರಾಜ್ಯ ಬಿಜೆಪಿ ಮುಖಂಡ ರಘು ಕೌಟಿಲ್ಯ ಹೇಳಿದರು. ಪಟ್ಟಣದ ಹಳೇ ಕಿಕ್ಕೇರಿ ರಸ್ತೆಯಲ್ಲಿ ತಾಲೂಕು ಮಡಿವಾಳರ ಸಂಘವು ಆಯೋಜಿಸಿದ್ದ ಶಿವಶರಣ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಹಮ್ಮಿ ಕೊಂಡಿದ್ದ ಅಭಿನಂದನಾ ಸಮಾರಂಭ ದಲ್ಲಿ ಕಾಯಕ ಸಮುದಾಯಗಳ ಅಭಿ ವೃದ್ಧಿ ಮತ್ತು ಅವರ ಸ್ಥಿತಿಗತಿ ಕುರಿತು…
ಭಾರತೀಯ ಸಂಸ್ಕøತಿ ಶ್ರೀಮಂತಗೊಳಿಸಲು ಕರೆ
March 2, 2020ಪಾಂಡವಪುರ, ಮಾ.1- ಭಾರತೀಯ ಸಂಸ್ಕøತಿ ಕೂಡಿಬಾಳುವ ಸಂಸ್ಕøತಿಯಾ ಗಿದ್ದು, ನಮ್ಮ ಸಂಸ್ಕøತಿಯನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕಾಗಿದೆ ಎಂದು ಡಾ.ಶ್ರೀ ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿ ತಿಳಿಸಿದರು. ತಾಲೂಕಿನ ಬೇಬಿಬೆಟ್ಟದಲ್ಲಿ ನಡೆದ ಬಾರಿ ದನಗಳ ಜಾತ್ರಾಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗ ವಹಿಸಿ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಮಾಡಿದ ಬಳಿಕ ಮಾತನಾಡಿದ ಅವರು, ನಮ್ಮಲ್ಲಿ ಭಾರತೀಯ ಸಂಸ್ಕøತಿ ಶ್ರೀಮಂತವಾದದ್ದು. ಆದರೆ, ನಮ್ಮಲ್ಲಿ ಇತ್ತೀಚಿನ ದಿನಗಳಲ್ಲಿ ಕೂಡಿಬಾಳುವ ಸಂಸ್ಕøತಿ ಮರೆಯಾಗುತ್ತಿದೆ. ಎಲ್ಲಿ ನೋಡಿ ದರು ಒಂಟಿತನ ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಗ್ರಾಮೀಣ…
ಜೆಡಿಎಸ್ ಕಾರ್ಯಕರ್ತರನ್ನು ಮುಟ್ಟಿದರೆ ಸುಮ್ಮನಿರಲ್ಲ
March 1, 2020ಕೆ.ಆರ್.ಪೇಟೆ,ಫೆ.29-ತಾಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ಸಚಿವ ಕೆ.ಸಿ.ನಾರಾಯಣಗೌಡ ಅವರಿಂದ ದೌರ್ಜನ್ಯ ಹೆಚ್ಚಾಗಿದೆ ಎಂದು ಆರೋಪಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ನನ್ನ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಮುಟ್ಟಿದರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು. ಅವರು ತಾಲೂಕಿನ ಶಿವಪುರ ಬಳಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾ ಟಿಸಿ ಮಾತನಾಡಿದರು. ರಾಜ್ಯದ ಯಾವುದೇ ಭಾಗದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ತೊಂದರೆಯಾದರೆ 24ಗಂಟೆಗಳ ಕಾಲ ಹೋರಾಟ ಮಾಡಿ ರಕ್ಷಣೆ ನೀಡುತ್ತೇನೆ. ನನಗೆ ಅಧಿಕಾರ ಇರಲಿ, ಇಲ್ಲದಿರಲಿ ಕಾರ್ಯ ಕರ್ತರ ರಕ್ಷಣೆ ನನಗೆ ಮುಖ್ಯ…
ಜೆಡಿಎಸ್ ಕಾರ್ಯಕರ್ತರು ಎಲ್ಲಿದ್ದಾರೆಂದು ಮುಟ್ಟಬೇಕು: ಕೆ.ಎಸ್.ಈಶ್ವರಪ್ಪ ವ್ಯಂಗ್ಯ
March 1, 2020ಕೊಪ್ಪಳ,ಫೆ.29-ಜೆಡಿಎಸ್ ಕಾರ್ಯಕರ್ತರನ್ನು ಕೆಣಕಿದರೆ ಸುಮ್ಮನಿರಲ್ಲ ಎಂಬ ಮಾಜಿ ಪ್ರಧಾನಿ ದೇವೇಗೌಡ ಅವರ ಎಚ್ಚರಿಕೆಗೆ ವ್ಯಂಗ್ಯವಾಡಿ ರುವ ಸಚಿವ ಕೆ.ಎಸ್.ಈಶ್ವರಪ್ಪ, ಜೆಡಿಎಸ್ ಕಾರ್ಯಕರ್ತರು ಎಲ್ಲಿದ್ದಾರೆಂದು ಮುಟ್ಟಬೇಕು ಎಂದು ಪ್ರಶ್ನಿಸಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ಮುಖಂಡನ ಕಲ್ಲು ಕ್ವಾರೆಗೆ ತಡೆ ನೀಡಿರುವ ಹಿನ್ನೆಲೆ ಅಧಿಕಾರಿ ವಿರುದ್ಧ ದೇವೇಗೌಡ ಅವರು ಗುಡುಗಿದರು. ಈ ವೇಳೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ದೇವೇ ಗೌಡರು, ಮೂರು ವರ್ಷ ಬಿಜೆಪಿ ಅಧಿಕಾರ ನಡೆಸಲು ನಾವು ಯಾವುದೇ ತೊಂದರೆ ನೀಡುವುದಿಲ್ಲ. ಆದರೆ, ನಮ್ಮ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ನಾವು…
ಮರ್ಮಾಂಗ ಕತ್ತರಿಸಿಕೊಳ್ಳಲು ಬಾಲಕನಿಗೆ ಪ್ರಚೋದನೆ: ಆರೋಪಿ ಸೆರೆ
March 1, 2020ಶ್ರೀರಂಗಪಟ್ಟಣ, ಫೆ.29-(ವಿನಯ್ ಕಾರೇಕುರ) ಮರ್ಮಾಂಗ ಕತ್ತರಿಸಿಕೊಳ್ಳುವಂತೆ ಅಪ್ರಾಪ್ತ ಬಾಲಕನ ಪ್ರಚೋದಿಸಿದ ವ್ಯಕ್ತಿಯನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಾಂಡವಪುರ ತಾಲೂಕು ಸೀತಾಪುರ ಗ್ರಾಮದ ಸುನೀಲ್ ಕುಮಾರ್ ಅಲಿಯಾಸ್ ಸುನೀ ಅಲಿಯಾಸ್ ಗುಡ್ಡಪ್ಪ(28) ಬಂಧಿತನಾಗಿದ್ದು, ಈತನ ವಿರುದ್ಧ ಕೊಲೆ ಪ್ರಯತ್ನ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ವಿವರ: ಕಾರಿನಲ್ಲಿ ಬಂದ ಮೂವರ ತಂಡ ಪ್ರೇಮಿಗಳ ದಿನವಾದ ಫೆ.14ರಂದು ಕಾಲೇಜಿಗೆ ತೆರಳುತ್ತಿದ್ದ 17 ವರ್ಷದ ಬಾಲಕನನ್ನು ಡ್ರಾಪ್ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ಹರವು ಎಲೆಕೆರೆ ಗ್ರಾಮದ…