ದೇಶದ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅಪಾರ
ಮಂಡ್ಯ

ದೇಶದ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅಪಾರ

March 3, 2020

ಮಂಡ್ಯ,ಮಾ.2-ಕಾರ್ಮಿಕರು ಮಾಡುವ ಕೆಲಸದಿಂದ ಪ್ರತಿ ಹಂತದಲ್ಲು ಕೂಡ ಅಭಿವೃದ್ಧಿಯನ್ನು ಕಾಣಲು ಸಾಧ್ಯ, ಒಂದು ದೇಶ ಅಭಿವೃದ್ಧಿಯಾಗಬೇಕಾ ದರೆ, ಒಂದು ನಾಗರೀಕತೆ ಉತ್ತಮವಾಗಿ ಬೆಳೆÀಯಬೇಕೆಂದರೆ ಕಾರ್ಮಿಕರ ಕೊಡುಗೆ ಅಪಾರವಾದುದ್ದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಹೇಳಿದರು.

ಇಂದು ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಮಂಡ್ಯ ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ, ಬೆಂಗ ಳೂರು ಇವರ ಸಂಯುಕ್ತಾಶ್ರದಲ್ಲಿ ನಡೆದ ಕಾರ್ಮಿಕ ಸಮ್ಮಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರು ತಮ್ಮ ಬೆವರನ್ನು ಸುರಿಸಿ ಸಮಾಜ ಕಟ್ಟುವ ಕೆಲಸವನ್ನು ಈ ದಿನ ನೆನಪಿಸಿ ಕೊಳ್ಳುತ್ತಿರುವುದು ಅವಿಸ್ಮರಣಿಯ ದಿನವಾ ಗಿದ್ದು ಅದಕ್ಕೆ ಬೆಲೆ ಕಟ್ಟಲಾಗದು ಎಂದರು.

ಗುಹೆಗಳಲ್ಲಿ ವಾಸಮಾಡುತ್ತಿದ್ದ ಮನುಷ್ಯ ಇಂದು ಗಗನಚುಂಬಿ ಕಟ್ಟಡಗಳಲ್ಲಿ ವಾಸ ಮಾಡುತ್ತಿದ್ದಾನೆ ಮತ್ತು ಗಗನದಲ್ಲಿ, ಹಡಗಿ ನಲ್ಲಿ ಹೋಗುತ್ತಿದ್ದಾನೆ ಎಂದರೆ ಇದರ ಹಿಂದೆÉ ಪ್ರತಿಯೊಬ್ಬ ಕಾರ್ಮಿಕನ ಶ್ರಮವಿದೆ.. ಬಸವಣ್ಣನವರು ಹೇಳಿರುವ ಕಾಯಕವೇ ಕೈಲಾಸ ಎಂಬುದನ್ನು ನಮ್ಮ ಪೂರ್ವಿಕರು ನಂಬಿದ್ದು, ಅದರಂತೆ ತಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ದೇವರನ್ನು ಕಂಡು ಕೊಂಡು ಬಂದಿದ್ದಾರೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ರಾಷ್ಟ್ರಕೂಟರು ನಿರ್ಮಾಣ ಮಾಡಿರುವ ಕೈಲಾಸ ಪರ್ವ ತವು ಬೃಹತ್ ಏಕಶೀಲ ದೇವಾಸ್ಥಾನ ವಾಗಿದ್ದು, ಈ ಏಕಶೀಲ ದೇವಸ್ಥಾನವನ್ನು ವಿಶ್ವದಲ್ಲಿರುವ ವಿಜ್ಞಾನಿಗಳು, ವಾಸ್ತು ಶಿಲ್ಪ ಗಾರರು ಮತ್ತು ಸಾಮಾಜಿಕ ಚಿಂತಕರು ಅಭ್ಯಾಸ ಮಾಡಿ, ಇಂತಹ ದೇವಸ್ಥಾನ ವನ್ನು ಇಪ್ಪತ್ತೊಂದನೆ ಶತಮಾನದಲ್ಲಿ ನಿರ್ಮಾಣ ಮಾಡುವುದು ಕಷ್ಟ ಎಂದು ಹೇಳಿದ್ದಾರೆ. ಸಾವಿರ ವರ್ಷಗಳ ಹಿಂದೆಯೆ ಇಂತಹ ಅದ್ಭುತವಾದ ದೇವಸ್ಥಾನವನ್ನು ನಮ್ಮ ಭಾರತ ದೇಶದ ಕಾರ್ಮಿಕರು ನಿರ್ಮಾಣ ಮಾಡಿದ್ದಾರೆ ಎಂದರೇ, ನಮ್ಮಲ್ಲಿರುವ ಕೌಶಲ್ಯ, ಚತುರತೆ, ನಿಖರತೆ, ನಿಷ್ಠಾವಂತಿಕೆ ಮತ್ತು ಜೀವಂತಿಕೆಗೆ ಸಾಕ್ಷಿಯಾಗಿದೆ ಎಂದು ತಿಳಿದರು.

ಕಷ್ಟಪಟ್ಟು ಕಾಯಕ ಯೋಗಿಯಾಗಿ ತನ್ನ ಬೆವರನ್ನು ಸುರಿಸಿದ ಕಾರ್ಮಿಕರ ಬಗ್ಗೆ ಸರ್ಕಾರ ಹತ್ತು-ಹಲವು ಚಿಂತನೆ ಗಳನ್ನು ಮಾಡಿದೆ. ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ, ಮನೆ ಕಟ್ಟಲು ಪ್ರೋತ್ಸಾಹ ಧನ, ಪಿಂಚಣಿ ಮತ್ತು ಜೀವವಿಮೆಯಂತಹ ಯೋಜನೆ ಗಳ ಸೌಲಭ್ಯಗಳನ್ನು ನೀಡುತ್ತಿದೆ. ಕಾಲನು ಕಾಲಕ್ಕೆ ಅವರಿಗೆ ತರಬೇತಿ ನೀಡುವುದು, ಅವರ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಕೆಲಸದ ಒತ್ತಡದಿಂದ ಹೇಗೆ ಹೊರಬರ ಬೇಕೆಂದು ತಿಳಿಸುವ ಹಲವಾರು ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ಕಾರ್ಮಿಕರಾದವರು ಯಾವುದೇ ದುಷ್ಚಟಗಳಿಗೆ ಒಳಗಾಗದೆ ಆರೋಗ್ಯದಲ್ಲಿ ಅಭಿವೃದ್ದಿಯನ್ನು ಕಂಡರೆ ದೇಶವು ಅಭಿವೃದ್ಧಿಯಾಗುವುದು ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾಪಂಚಾಯತ್ ಉಪಾಧ್ಯಕ್ಷರಾದ ಪಿ.ಕೆ. ಗಾಯತ್ರಿರೇವಣ್ಣ, ತಾ. ಪಂ ಅಧ್ಯಕ್ಷರಾದ ಹೆಚ್.ಎಸ್. ಶಿವ ಕುಮಾರಿ, ಕಾರ್ಮಿಕ ಅಧಿಕಾರಿ ಹೆಚ್. ಆರ್.ನಾಗೇಂದ್ರ, ಕೌಶಲ್ಯ ಅಭಿವೃದ್ಧಿ ಅಧಿಕಾರಿಯಾದ ಶಿವಕುಮಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಕಾರ್ಮಿಕರು ಉಪಸ್ಥಿತರಿದ್ದರು.

Translate »