ಜೆಡಿಎಸ್ ಕಾರ್ಯಕರ್ತರನ್ನು ಮುಟ್ಟಿದರೆ ಸುಮ್ಮನಿರಲ್ಲ
ಮಂಡ್ಯ

ಜೆಡಿಎಸ್ ಕಾರ್ಯಕರ್ತರನ್ನು ಮುಟ್ಟಿದರೆ ಸುಮ್ಮನಿರಲ್ಲ

March 1, 2020

ಕೆ.ಆರ್.ಪೇಟೆ,ಫೆ.29-ತಾಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ಸಚಿವ ಕೆ.ಸಿ.ನಾರಾಯಣಗೌಡ ಅವರಿಂದ ದೌರ್ಜನ್ಯ ಹೆಚ್ಚಾಗಿದೆ ಎಂದು ಆರೋಪಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ನನ್ನ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಮುಟ್ಟಿದರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.

ಅವರು ತಾಲೂಕಿನ ಶಿವಪುರ ಬಳಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾ ಟಿಸಿ ಮಾತನಾಡಿದರು. ರಾಜ್ಯದ ಯಾವುದೇ ಭಾಗದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ತೊಂದರೆಯಾದರೆ 24ಗಂಟೆಗಳ ಕಾಲ ಹೋರಾಟ ಮಾಡಿ ರಕ್ಷಣೆ ನೀಡುತ್ತೇನೆ. ನನಗೆ ಅಧಿಕಾರ ಇರಲಿ, ಇಲ್ಲದಿರಲಿ ಕಾರ್ಯ ಕರ್ತರ ರಕ್ಷಣೆ ನನಗೆ ಮುಖ್ಯ ಗುರಿ ಯಾಗಿದೆ ಎಂದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹೆಚ್.ಟಿ.ಮಂಜು ನಿಯಮಾನುಸಾರ ಟಿ.ಜೆ.ಸ್ಟೋನ್ ಕ್ರಷರ್ ನಡೆಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಇಲಾಖೆಗಳು ಲೈಸೆನ್ಸ್ ನೀಡಿವೆ. ಆದರೆ ನಾರಾಯಣ ಗೌಡ ಅವರು ಬಿಜೆಪಿ ಸೇರಿದ ನಂತರ ಇನ್ನಿಲ್ಲದ ಕಿರುಕುಳ ನೀಡಿ, ಕ್ರಷರ್ ಬಂದ್ ಮಾಡಿಸಿದ್ದಾರೆ ಎಂದು ಆರೋಪಿಸಿದರು.

ರಾಜಕೀಯ ದ್ವೇಷ ಸಾಧಿಸುತ್ತಿರುವ ಸಚಿವ ನಾರಾಯಣಗೌಡ ಅವರು ಇದೇ ರೀತಿ ಜೆಡಿಎಸ್ ಕಾರ್ಯಕರ್ತರಿಗೆ ತೊಂದರೆ ನೀಡಿದರೆ ಇವರ ವಿರುದ್ಧ ಜನರೇ ದಂಗೆ ಏಳುವ ಕಾಲ ದೂರವಿಲ್ಲ. ಹಾಗಾಗಿ ಅಧಿ ಕಾರದ ಮದ ಬಿಟ್ಟು ರಾಜಕೀಯ ಮಾಡ ಬೇಕು. ಯಾರಿಗೂ ಅಧಿಕಾರ ಶಾಶ್ವತವಲ್ಲ. ಮುಂದೆ ನಾರಾಯಣಗೌಡರೂ ಮಾಜಿ ಯಾಗಲೇಬೇಕು. ಇದನ್ನು ಅರಿತು ರಾಜಕೀಯ ಮಾಡಬೇಕು ಎಂದು ಸಲಹೆ ನೀಡಿದರು.

ಟಿ.ಜೆ.ಕ್ರಷರ್ ಬಂದ್ ಆಗಿರುವುದರಿಂದ ನನ್ನ ಪಕ್ಷದ ಕಾರ್ಯಕರ್ತ ಹೆಚ್.ಟಿ. ಮಂಜು ಅವರು ಮಾಡಿರುವ ಬ್ಯಾಂಕ್ ಬಡ್ಡಿ ಬೆಳೆಯುತ್ತಿದೆ. ಕಾರ್ಮಿಕರಿಗೆ ಸಂಬಳ ನೀಡಲು ತೊಂದರೆಯಾಗಿದೆ. ಈ ರೀತಿ ಕಾನೂನುಬದ್ದವಾಗಿ ನಡೆಯುತ್ತಿರುವ ಕೈಗಾರಿಕೆಯನ್ನು ಅಧಿಕಾರ ದುರ್ಬಳಕೆ ಮಾಡಿ ಮುಚ್ಚಿಸುವ ಕೆಲಸವನ್ನು ಮಾಡು ತ್ತಿರುವ ಸಚಿವ ನಾರಾಯಣಗೌಡ ಅವರಿಗೆ ಹೆದರುವ ಪ್ರಶ್ನೆಯೇ ಇಲ್ಲ. ನನ್ನ ಕಾರ್ಯ ಕರ್ತರಿಗೆ ತೊಂದರೆಯಾದರೆ ಸುಮ್ಮನೆ ಕೂರುವುದಿಲ್ಲ. ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ನೇತೃತ್ವದಲ್ಲಿ ಕೆ.ಆರ್.ಪೇಟೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾ ಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಶಾಸಕರಾದ ಮರಿತಿಬ್ಬೇ ಗೌಡ, ಕೆ.ಸುರೇಶ್‍ಗೌಡ, ಡಾ.ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಅಘಲಯ ಜಾನಕೀರಾಂ, ಯುವ ಜೆಡಿಎಸ್ ಅಧ್ಯಕ್ಷ ಬಸ್ ಸಂತೋಷ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ರಾದ ಬಿ.ಎಲ್.ದೇವರಾಜು, ರಾಮ ದಾಸ್, ಚಿನಕುರಳಿ ಅಶೋಕ್, ಜೆ.ಪ್ರೇಮ ಕುಮಾರಿ, ಮನ್‍ಮುಲ್ ಅಧ್ಯಕ್ಷ ರಾಮ ಚಂದ್ರು, ಪಕ್ಷದ ಮುಖಂಡರಾದ ಎ.ಆರ್. ರಘು, ಬಸ್ ಕೃಷ್ಣೇಗೌಡ, ನೆಲ್ಲಿಗೆರೆ ಬಾಲು, ಬಿ.ಎನ್.ದಿನೇಶ್, ಮೋಹನ್, ಎಂ.ಬಿ. ಹರೀಶ್, ಐನೋರಹಳ್ಳಿ ಮಲ್ಲೇಶ್, ಎಸ್.ಎಲ್.ಮೋಹನ್, ಎಚ್.ಟಿ.ಲೋಕೇಶ್, ಖಲೀಲ್‍ಬಾಬು, ಕೆ.ಬಿ.ನಾಗೇಶ್, ಪೂವನಹಳ್ಳಿ ರೇವಣ್ಣ, ಶಶಿಧರ್ ಸಂಗಾ ಪುರ, ಹೆಚ್.ಸಿ.ಲೋಕೇಶ್, ಭೈರಾಪುರ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

Translate »