ಎಸ್‍ಎಸ್‍ಎಲ್‍ಸಿ ಟಾಪ್ 10 ವಿದ್ಯಾರ್ಥಿಗಳ ಉತ್ತರ ಪತ್ರಿಕೆ ವೆಬ್‍ಸೈಟ್‍ನಲ್ಲಿ ಪ್ರಕಟ
ಕೊಡಗು

ಎಸ್‍ಎಸ್‍ಎಲ್‍ಸಿ ಟಾಪ್ 10 ವಿದ್ಯಾರ್ಥಿಗಳ ಉತ್ತರ ಪತ್ರಿಕೆ ವೆಬ್‍ಸೈಟ್‍ನಲ್ಲಿ ಪ್ರಕಟ

March 1, 2020

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಹೇಳಿಕೆ
ಮಡಿಕೇರಿ,ಫೆ.29-ಫಲಿತಾಂಶದಲ್ಲಿ ಹೆಚ್ಚಳ ಹಾಗೂ ವಿದ್ಯಾರ್ಥಿಗಳು ಪರೀಕ್ಷೆ ಯಲ್ಲಿ ಹೇಗೆ ಉತ್ತರಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಎಸ್‍ಎಸ್ ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ರಾಜ್ಯದ 10 ವಿದ್ಯಾರ್ಥಿಗಳ ಎಲ್ಲಾ ವಿಷಯದ ಉತ್ತರ ಪತ್ರಿಕೆಯನ್ನು ವೈಬ್‍ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಾಥ ಮಿಕ ಮತ್ತು ಪೌಢಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಹೇಳಿದರು.

ನಾಪೋಕ್ಲುವಿನ ಕೊಡವ ಸಮಾಜದಲ್ಲಿ ಶನಿವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿಕಸನ ಸಂಸ್ಥೆಯಿಂದ ಏರ್ಪಡಿಸಿದ್ದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅತಿ ಹೆಚ್ಚು ಅಂಕ ಪಡೆದವರ ಬರವಣಿಗೆ ಕೌಶಲ್ಯ ಹೇಗಿರುತ್ತೆ? ಪ್ರಶ್ನೆಗೆ ಉತ್ತರಿಸಿರುವ ವಿಧಾನ ಹೇಗಿದೆ? ಹೀಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯ ಉತ್ತರ ಪತ್ರಿಕೆಯ ವಿಶೇ ಷತೆ ಬಗ್ಗೆ ತಿಳಿದುಕೊಳ್ಳಲು ಈ ವಿಧಾನ ಅನುಕೂಲವಾಗಲಿದೆ. ಟಾಪರ್ಸ್ ಉತ್ತರ ಪತ್ರಿಕೆ ನೋಡಿ ವಿದ್ಯಾರ್ಥಿಗಳು ಅದರಿಂದ ಪ್ರಭಾವಿತರಾಗಿ ಅತಿ ಹೆಚ್ಚು ಅಂಕ ಪಡೆಯಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಪರೀಕ್ಷೆ ಬರೆಯಲು ಸಮಯ ಸಾಕಾಗು ವುದಿಲ್ಲ ಎಂಬ ದೃಷ್ಟಿಯಿಂದ ಈ ಬಾರಿ ಪರೀಕ್ಷಾ ಸಮಯವನ್ನು ಅರ್ಧ ಗಂಟೆ ಹೆಚ್ಚಿಸ ಲಾಗಿದೆ ಎಂದರು. ಎಸ್‍ಎಸ್‍ಎಲ್‍ಸಿ ಮುಖ್ಯ ಪರೀಕ್ಷೆಯು ಜಿಲ್ಲಾಧಿಕಾರಿ ಅವರ ನಿಯಂ ತ್ರಣದಲ್ಲಿ ನಡೆಯಲಿದೆ. ಹಾಗಾಗಿ, ವಿದ್ಯಾರ್ಥಿ ಗಳು ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧಿಸಿ ದಂತೆ ತಲೆಕೆಡಿಸಿಕೊಳ್ಳದೆ ವಿಶ್ವಾಸದಿಂದ ಓದಿ ಪರೀಕ್ಷೆ ಬರೆಯಬೇಕು ಎಂದರು.

ರಾಜ್ಯದ ಕಟ್ಟಕಡೆಯ ಮಕ್ಕಳು ಶಿಕ್ಷಣ ಪಡೆಯಬೇಕು. ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಶಿಕ್ಷಣ ಸಚಿವರಾದ ನಂತರ ರಾಜ್ಯದ 300ರಿಂದ 400 ಶಾಲೆ ಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.

ವಿದ್ಯಾರ್ಥಿಗಳೊಂದಿಗೆ ರಸಪ್ರಶ್ನೆ, ಸಂವಾದ ಕಾರ್ಯಕ್ರಮ ಏರ್ಪಡಿಸುವು ದರಿಂದ ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ಹೆಚ್ಚುತ್ತದೆ. ಇದರಿಂದ ಪರೀಕ್ಷೆ ಬರೆಯಲು ಇನ್ನಷ್ಟು ಸಹಕಾರಿಯಾಗಲಿದೆ. ವಿದ್ಯಾರ್ಥಿ ಗಳು ಪಠ್ಯ ಪುಸ್ತಕವನ್ನು ಓದುವುದರಿಂದ ಶೇಕಡಾವಾರು ಫಲಿತಾಂಶ ಪಡೆಯಬಹು ದಾಗಿದೆ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಶತ್ರುವಲ್ಲ. ಬದಲಾಗಿ ಭಯವೇ ಮೊದಲ ಶತ್ರುವಾ ಗಿದೆ. ಆದ್ದರಿಂದ ಭಯಕ್ಕೆ ಗುಡ್‍ಬೈ ಹೇಳ ಬೇಕು. ವರ್ಷಪೂರ್ತಿ ಆಯಾಯ ದಿನದ ಪಾಠವನ್ನು ಅಂದೇ ಅಧ್ಯಯನ ಮಾಡಿದ್ದಲ್ಲಿ ಭಯ ಬೀಳುವ ಅಗತ್ಯವಿಲ್ಲ. ಪರೀಕ್ಷೆಗೆ ಇನ್ನೂ ಇಪ್ಪತ್ತೇಳು ದಿನವಿದ್ದು, ಮೊಬೈಲ್, ಟಿವಿಯಿಂದ ದೂರವಿರಬೇಕು ಎಂದರು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಿ.ವಿ.ಸ್ನೇಹ, ವಿಕಸನ ಸಂಸ್ಥೆಯ ಅಧ್ಯಕ್ಷ ಚೆಯ್ಯಂಡ ಸತ್ಯ, ಸದಸ್ಯರಾದ ಕಿಶೋರ್ ರೈ, ಕೂಡಿಗೆ ಡಯಟ್ ಸಂಸ್ಥೆಯ ಪ್ರಾಂಶು ಪಾಲ ಶ್ರೀಧರನ್, ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಟಿ.ಎನ್.ಗಾಯತ್ರಿ, ಹೆಚ್.ಕೆ.ಪಾಂಡು, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮನುಮುತ್ತಪ್ಪ, ವಿವಿಧ ಶಾಲೆಯ ವಿದ್ಯಾರ್ಥಿಗಳು ಇದ್ದರು.

ವಿದ್ಯಾರ್ಥಿಗಳೊಂದಿಗೆ ಸಚಿವರ ಸಂವಾದ
ಮಡಿಕೇರಿ,ಫೆ.29-ನಾಪೋಕ್ಲುವಿನ ಕೊಡವ ಸಮಾಜದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳೊಂದಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಎಸ್.ಸುರೇಶ್ ಕುಮಾರ್ ಸಂವಾದ ನಡೆಸಿ ಮಾತನಾಡಿದ ಅವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಎದುರಿಸುವುದು ಹೇಗೆ? ಹೆಚ್ಚಿನ ಅಂಕ ಪಡೆಯುವುದು, ಓದಿನ ಕಡೆ ಗಮನ ನೀಡುವುದು ಮತ್ತಿತರ ಬಗ್ಗೆ ಸಚಿವರು ಹಲವು ಸಲಹೆ ನೀಡಿದರು.

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸುವುದು, ಭಯ ವಿದ್ದಲ್ಲಿ ಓದಿರುವುದು ಸಹ ಮರೆತು ಹೋಗುತ್ತದೆ. ಭಯ ಒಂದು ರೀತಿ ಶತ್ರು ಇದ್ದಂತೆ, ಆದ್ದರಿಂದ ಭಯವನ್ನು ಮನಸ್ಸಿನಿಂದ ತೆಗೆದುಹಾಕಿ ಎಂದು ಸಚಿವರು ಸಲಹೆ ಮಾಡಿದರು. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜೀವನದ ಕೊನೆಯ ಹಂತವಲ್ಲ. ಜೀವನದಲ್ಲಿ ಹಲವು ಪರೀಕ್ಷೆಗಳನ್ನು ನಿರಂತರವಾಗಿ ಎದುರಿಸಬೇಕಾಗುತ್ತದೆ. ಅದರಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಒಂದು ಪರೀಕ್ಷೆಯಾಗಿದೆ. ಆದ್ದರಿಂದ ಓದಿನ ಕಡೆ ಹೆಚ್ಚಿನ ಗಮನ ಹರಿಸುವಂತಾಗಬೇಕು ಎಂದು ಹೇಳಿದರು.

ಪರೀಕ್ಷಾ ಕೊಠಡಿಗೆ ತೆರಳಿದ ಸಂದರ್ಭದಲ್ಲಿ ಪ್ರಶಾಂತವಾಗಿರಬೇಕು. ಪ್ರಶ್ನೆ ಪತ್ರಿಕೆಯನ್ನು ಪೂರ್ಣವಾಗಿ ಓದಬೇಕು. ಎರಡನೇ ಬಾರಿ ಓದಿ, ಉತ್ತರ ಗೊತ್ತಿರುವ ಪ್ರಶ್ನೆಗೆ ಮೊದಲು ಉತ್ತರಿಸಬೇಕು ಎಂದು ಸಚಿವರು ಸಲಹೆ ಮಾಡಿದರು.

ವಿದ್ಯಾರ್ಥಿ ಶಾಲಾ ಶಿಕ್ಷಕರನ್ನು ವಿವಿಧ ತರಬೇತಿಗೆ ನಿಯೋಜಿಸಿದ್ದಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ತೊಂದರೆಯಾಗಲಿದೆ ಎಂದು ಸಚಿವರ ಗಮನ ಸೆಳೆದರು. ಮುಂದಿನ ವರ್ಷದಿಂದ ಶಿಕ್ಷಕರನ್ನು ತರಬೇತಿಗೆ ನಿಯೋಜಿಸುವುದನ್ನು ಕಡಿಮೆ ಮಾಡಲಾಗುವುದು ಎಂದು ಸಚಿವರು ಹೇಳಿದರು. ಮತ್ತೊಬ್ಬ ವಿದ್ಯಾರ್ಥಿನಿ ಪರೀಕ್ಷೆ ಸಂಬಂಧಿಸಿದಂತೆ 8ನೇ ತರಗತಿಯಿಂದಲೇ ಅಗತ್ಯ ಜಾಗೃತಿ ಮೂಡಿಸಬೇಕು. ತರಬೇತಿ, ಮಾರ್ಗದರ್ಶನ ಮಾಡುವಂತಾಗಬೇಕು ಎಂದು ತಿಳಿಸಿದರು.

ಮತ್ತೊಬ್ಬ ವಿದ್ಯಾರ್ಥಿನಿ ಶಾಲೆಗಳಲ್ಲಿ ಎಲ್ಲಾ ಮಕ್ಕಳು ಒಂದೇ ಎಂದು ಹೇಳುತ್ತಾರೆ. ಆದರೆ ಜಾತಿ ಪ್ರಮಾಣ ಪತ್ರ ಕೇಳುತ್ತಾರೆ. ಇದು ಸರಿಯೇ? ಎಂದು ಪ್ರಶ್ನಿಸಿದರು.

ಸಮಾಜದಲ್ಲಿ ಇನ್ನೂ ಬಡತನದಲ್ಲಿರುವವರಿಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿ ಸಲು ಜಾತಿ ಪ್ರಮಾಣ ಪತ್ರವನ್ನು ಪಡೆಯಲಾಗುತ್ತದೆ ಎಂದು ನುಡಿದರು.

ಮತ್ತೊಬ್ಬ ವಿದ್ಯಾರ್ಥಿನಿ ಸರ್ಕಾರಿ ಶಾಲೆಯಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿ ಆರಂಭಿಸ ಬೇಕು ಎಂದು ಮನವಿ ಮಾಡಿದರು. ಸಭೆಯ ಆರಂಭದಲ್ಲಿ ಹಲವು ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಭಯ ಇದೆಯೇ ಎಂದು ಸಚಿವರು ಪ್ರಶ್ನಿಸಿದರು. ಪಠ್ಯ ಪುಸ್ತಕದಲ್ಲಿನ ವಿಷಯವನ್ನೇ ಪ್ರಶ್ನೆ ಕೇಳಲಾಗುತ್ತದೆ. ಯಾವುದೇ ತರಹದ ಗೊಂದಲವಿರುವುದಿಲ್ಲ ಎಂದು ಹೇಳಿದರು.

ಎಲ್ಲಾ ಶಾಲೆಗಳಲ್ಲೂ ಕನ್ನಡ ಕಲಿಕೆ ಕಡ್ಡಾಯ
ಮಡಿಕೇರಿ,ಫೆ.29-ಯಾವುದೇ ಶಾಲೆಯಾದರೂ ಸರಿಯೇ ಕನ್ನಡ ಕಲಿಕೆ ಕಡ್ಡಾಯವಾಗಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಹೆಳಿದರು. ಟಿಬೆಟಿಯನ್ ಶಾಲೆಗಳಲ್ಲಿ ಕನ್ನಡ ಕಲಿಕೆಗೆ ವಿರೋಧ ವಿಚಾರ ಕುರಿತು ನಾಪೋಕ್ಲುವಿನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಟಿಬೆಟಿಯನ್ ಆಂತರಿಕ ಸರ್ಕಾರದ ಶಿಕ್ಷಣ ಸಚಿವರು ಈ ಕುರಿತು ತಮಗೆ ಮನವಿ ಮಾಡಿದ್ದು, ಆರನೇ ತರಗತಿಯಿಂದ ಕನ್ನಡ ಬೋಧನೆಗೆ ಅವಕಾಶ ಕೇಳಿದ್ದಾರೆ. ಯಾವುದೇ ಶಾಲೆಗಳಾದರೂ, ಕನ್ನಡ ಕಲಿಕೆ ಕಡ್ಡಾಯ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಅವರ ಲಿಖಿತ ಮನವಿಗೂ ಲಿಖಿತವಾಗಿಯೇ ಉತ್ತರ ನೀಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಟಿಪ್ಪು ಸುಲ್ತಾನ್ ವಿಷಯವನ್ನು ಪಠ್ಯದಿಂದ ಕೈಬಿಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅದನ್ನು ಮತ್ತಷ್ಟು ವಿಸ್ತಾರವಾಗಿ ಚರ್ಚಿಸಲಾಗುವುದು. ಬಳಿಕ ಅಂತಿಮ ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು. ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ಅವರು ಪ್ರದಾನಿ ನರೇಂದ್ರ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸುರೇಶ್ ಕುಮಾರ್, ಆಡಬಾರದು ಆಡಿದ್ರೆ ಕೇಳಬಾರದು ಕೇಳ್ಬೇ ಕಾಗುತ್ತೆ. ದೊರೆಸ್ವಾಮಿಯವರು ತುಂಬಾ ಹಿರಿಯರಿದ್ದಾರೆ. ಅವರು ಪ್ರಧಾನಿ ಮೋದಿಯವರ ಬಗ್ಗೆ ಮಾತನಾಡಿದ್ದು ಸರಿಯಲ್ಲ. ಅವರ ಹಿರಿತನ ವನ್ನು ಗಮನದಲ್ಲಿಟ್ಟುಕೊಂಡು ಮಾತನಾಡಬೇಕಾಗಿತ್ತು ಎಂದು ಹೇಳಿದ ರಲ್ಲದೇ, ಶಾಸಕ ಯತ್ನಾಳ್ ಅವರು ಕೂಡ ಮಾತನಾಡುವ ಬರದಲ್ಲಿ ಹಾಗೆ ಮಾತನಾಡಬಾರದಿತ್ತು. ಇದೊಂದು ಕಹಿ ಘಟನೆ ಎಂದರು.

Translate »