ಮೃತ ಜೆಡಿಎಸ್ ಕಾರ್ಯಕರ್ತನ ನಿವಾಸಕ್ಕೆ ಭೇಟಿ, ಸಾಂತ್ವನ ಮಂಡ್ಯ, ಜೂ.25(ನಾಗಯ್ಯ)- ಲೋಕ ಸಭಾ ಚುನಾವಣೆಯಲ್ಲಿ ಸೋಲನ್ನನುಭವಿ ಸಿದ ಬಳಿಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸೋತರೂ ಕ್ಷೇತ್ರದಿಂದ ದೂರ ಇರಲ್ಲ. ಅಲ್ಲೇ ಮನೆ ಮಾಡಿ ಕೊಂಡು ಜನರ ಜತೆ ಇರುತ್ತೇನೆ ಎಂದಿದ್ದರು. ಅದರಂತೆ ಇದೀಗ ಮಂಡ್ಯ ದಿಂದ ಒಂದು ಕಿ.ಮೀ.ದೂರದಲ್ಲೇ ನಿಖಿಲ್ ತೋಟ ಖರೀದಿಸಿದ್ದಾರೆ. ಈ ಕುರಿತು ಮಳವಳ್ಳಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮಂಡ್ಯ ಸಿಟಿಗೆ ಒಂದು ಕಿ.ಮೀ. ದೂರದಲ್ಲೇ ತೋಟ…
ಕಾರು, ಗೂಡ್ಸ್ ವಾಹನದ ಡ್ರೈವರ್‍ಗಳ ದುರ್ಮರಣ, ನಾಲ್ವರಿಗೆ ಗಂಭೀರ ಗಾಯ
June 12, 2019ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರು ಡಿವೈಡರ್ ಹಾರಿ ಎದುರಿಗೆ ಬರುತ್ತಿದ್ದ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿ ನಾಲ್ವರು ಗಾಯಗೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ. ಹೊಸೂರು ಗ್ರಾಮದ ಬಳಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಶ್ರೀರಂಗ ಪಟ್ಟಣದ ಸಂತೇ ಮಾಳದ ನಿವಾಸಿ ರಂಜಿತ್(26) ಮತ್ತು ಚಾಮರಾಜ ನಗರದ ಫಾಹಿದ್ ಕಲಾರ್(28) ಮೃತ ದುರ್ದೈವಿಗಳು. ಘಟನೆ ಹಿನ್ನೆಲೆ: ಸೋಮವಾರ ರಾತ್ರಿ 10ರ ಸುಮಾರಿ ನಲ್ಲಿ ಮೈಸೂರು ಕಡೆಗೆ ವೇಗವಾಗಿ…
ಚುನಾವಣೆ ಯಾವಾಗ ಬರುತ್ತೋ ಗೊತ್ತಿಲ್ಲ: ಕಾರ್ಯಕರ್ತರು ರೆಡಿಯಾಗಿ
June 7, 2019ಬೆಂಗಳೂರು: ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ, ಮೈತ್ರಿ ಸರ್ಕಾರ ಕಂಪ್ಲೀಟ್ ಆಗುತ್ತೆ. ದಿನ ನಿತ್ಯ ಮಾಧ್ಯಮದಲ್ಲಿ ಬರುವುದನ್ನು ನೋಡಿ ನೀವು ಟೆನ್ಷನ್ ಆಗ್ತೀರಾ. ಒಳಗಡೆ ಏನು ಅನ್ನೋದು ನಮಗೆ ಗೊತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಕಾರ್ಯಕರ್ತರಿಗೆ ಹೇಳಿರುವ ವಿಡಿಯೋ ವೈರಲ್ ಆಗಿದೆ. ಜೆಡಿಎಸ್ ಕಾರ್ಯಕರ್ತರ ಜೊತೆ ಮಾತ ನಾಡಿರುವ ನಿಖಿಲ್ ಕುಮಾರಸ್ವಾಮಿ, 4 ವರ್ಷ ಸರ್ಕಾರ ನಡೆಸುತ್ತೇವೆ. ಚುನಾವಣೆಗೆ ಮುಂದಿನ ತಿಂಗಳಿಂದಲೇ ಶುರು ಮಾಡಿ. ಒಂದು ವರ್ಷಕ್ಕೆ ಬರುತ್ತೋ, ಎರಡು ವರ್ಷಕ್ಕೆ ಬರುತ್ತೋ, ಮೂರು ವರ್ಷಕ್ಕೆ…
ಇಂದು ಮಂಡ್ಯ ಮತದಾರ ಪ್ರಭುವಿನ ‘ಮಹಾತೀರ್ಪು’
May 23, 2019ಮಂಡ್ಯ: ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಇಡೀ ಇಂಡಿಯಾದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮತದಾರ ಪ್ರಭು ಬರೆದಿರುವ ‘ಮಹಾತೀರ್ಪು’ ಇಂದು ಬಹಿರಂಗಗೊಳ್ಳಲಿದೆ. ಹೈವೋಲ್ಟೇಜ್ ಕದನ ಕಣವಾಗಿರುವ ಈ ಕ್ಷೇತ್ರದ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೈತ್ರಿ ಕೂಟದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬ ರೀಶ್ ಸೇರಿದಂತೆ 22 ಅಭ್ಯರ್ಥಿಗಳ ಹಣೆ ಬರಹ ಇಂದು ಬಯಲಾಗಲಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಮತ್ತು ಮಾಜಿ ಸಚಿವ, ನಟ ದಿ.ಅಂಬರೀಶ್…
ಲಗ್ನಪತ್ರಿಕೆಯಲ್ಲಿ `ಸಂಸದ’ ನಿಖಿಲ್!ಸುಮಲತಾಗೆ ಫ್ಲೆಕ್ಸ್‍ನಲ್ಲಿ ಅಭಿನಂದನೆ
May 23, 2019ಶ್ರೀರಂಗಪಟ್ಟಣ: ಮಂಡ್ಯ ಲೋಕಸಭಾ ಕ್ಷೇತ್ರದ ಮತ ಎಣಿಕೆ ಗುರುವಾರ ನಡೆಯಲಿದ್ದು, ಫಲಿತಾಂಶ ತಿಳಿಯಲು ಮಧ್ಯಾಹ್ನದವರೆಗೂ ಕಾಯಬೇಕಿದ್ದರೂ, ತಾಲೂಕಿನ ಜೆಡಿಎಸ್ ಮುಖಂಡರು ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಅದಾಗಲೇ `ಸಂಸದ’ ಎಂದೇ ಪರಿಗಣಿಸಿಬಿಟ್ಟಿದ್ದಾರೆ! ಇನ್ನೊಂದೆಡೆ, ಕೊಪ್ಪದಲ್ಲಿ ಸುಮಲತಾ ಅಂಬರೀಶ್ ಅಭಿಮಾನಿಗಳು, ಸುಮಲತಾ ವಿಜಯೋತ್ಸವ ಆಚರಿಸಲು ಮುಂದಾಗಿ ದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೆದ್ದ ಸುಮಲತಾ ಅವರಿಗೆ ಅಭಿನಂದನೆಗಳು ಎಂದೂ ಫ್ಲೆಕ್ಸ್ ಮುದ್ರಿಸಿ ಮುಖ್ಯ ರಸ್ತೆಗಳಲ್ಲಿ ಅಳವಡಿಸಿ ಸಂಭ್ರಮಿಸುತ್ತಿದ್ದಾರೆ. ಲಗ್ನಪತ್ರಿಕೆ: ಜೆಡಿಎಸ್ ಮುಖಂಡರೊ ಬ್ಬರ ಪುತ್ರನ ಮದುವೆಯ ಆಹ್ವಾನ ಪತ್ರಿಕೆ ಯಲ್ಲಿ…
ಮಿಮ್ಸ್ ಮಾಜಿ ನಿರ್ದೇಶಕ ಸೇರಿ 6 ಜನರ ವಿರುದ್ಧ ಎಫ್‍ಐಆರ್‍ಗೆ ಕೋರ್ಟ್ ಆದೇಶ
May 23, 2019ಮಂಡ್ಯ: ಮಂಡ್ಯ ಮೆಡಿಕಲ್ ಕಾಲೇಜಿನ (ಮಿಮ್ಸ್) ಹಿಂದಿನ ನಿರ್ದೇಶಕ, ಮಾಜಿ ಸಂಸದ ಜಿ.ಮಾದೇಗೌಡ ಅವರ ಪುತ್ರ ಡಾ.ಜಿ.ಎಂ. ಪ್ರಕಾಶ್ ಸೇರಿದಂತೆ 6 ಜನರ ವಿರುದ್ಧ ಸುಳ್ಳು ಬೋಧನಾ ಪ್ರಮಾಣಪತ್ರ ನೀಡಿರು ವುದೂ ಸೇರಿದಂತೆ ಹಲವು ಆರೋಪಗಳ ಮೇಲೆ ಮಂಡ್ಯದ 2ನೇ ಅಪರ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಕೇಸ್ ದಾಖಲಾಗಿದೆ. ಮಿಮ್ಸ್ ಮಾಜಿ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್, ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಿವರಾಮ್, ಮಿಮ್ಸ್ ಮಾಜಿ ವೈದ್ಯಕೀಯ ಅಧೀಕ್ಷಕ ಡಾ.ಎಂ.ಹನುಮಂತಪ್ರಸಾದ್, ಮಾಜಿ ಆಡಳಿತಾಧಿಕಾರಿ ಕುಮಾರಿ ಜಯಾ, ಮಾಜಿ…
ಕೆಲಸ ನಿರಾಕರಣೆ ವಿರೋಧಿಸಿ ಧರಣಿ
May 23, 2019ಮಂಡ್ಯ: ಕಾರ್ಮಿಕರಿಗೆ ಕೆಲಸ ನಿರಾಕರಣೆ ಮಾಡಿರುವುದು ನಿಯಮ ಬಾಹಿರ ಎಂದು ಖಂಡಿಸಿರುವ ಮೆ.ಮೆಗ್ನೀ ಷಿಯಂ ಅಂಡ್ ಅಲೈಡ್ ಪ್ರಾಡಕ್ಟ್‍ನ ಕಾರ್ಮಿ ಕರು, ಹೈಕೋರ್ಟ್ ತೀರ್ಪಿನನ್ವಯ ಕನಿಷ್ಠ ವೇತನ ನೀತಿಯನ್ನು ಅನುಷ್ಠಾನಗೊಳಿಸ ಬೇಕು ಎಂದು ಅಗ್ರಹಿಸಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರÀು. ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಜಮಾವಣೆಗೊಂಡ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಕಾರ್ಮಿಕ ಇಲಾಖೆ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಧರಣಿ ನಡೆಸಿದರು. ಮದ್ದೂರಿನ ಹುರುಗಲವಾಡಿ ಕೈಗಾ ರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯು 2 ತಿಂಗಳಿನಿಂದ ಕಾರ್ಮಿಕರಿಗೆ ಕೆಲಸ…
ಹಳ್ಳಿಗಾಡಿಗೂ ಕಾಲಿಟ್ಟ ಸರಗಳ್ಳರು!
May 23, 2019ಕೆಜಿ ಕೊಪ್ಪಲು ಗ್ರಾಮಕ್ಕೆ ಬೈಕ್‍ನಲ್ಲಿ ಬಂದು ಸರ ಕಿತ್ತೊಯ್ದರು! ಮದ್ದೂರು: ಬೆಂಗಳೂರು, ಮೈಸೂರು ಮೊದಲಾದ ದೊಡ್ಡ ನಗರ ಗಳಲ್ಲಿಯಷ್ಟೇ ನಡೆಯುತ್ತಿದ್ದ ಸರಗಳವು ಪ್ರಕರಣಗಳು ಈಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ. ನಗರಗಳಲ್ಲಿ ಪೊಲೀಸ್ ಕಾವಲು ಬಿಗಿಯಾಗಿದೆ ಎಂಬ ಕಾರಣಕ್ಕೋ ಏನೋ ದ್ವಿಚಕ್ರ ವಾಹನ ಸರಗಳ್ಳರು ಈಗ ಹಳ್ಳಿ ಗಾಡಿನ ಕಡೆಗೆ ಕಾಲಿಟ್ಟಿದ್ದಾರೆ! ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯಲ್ಲಿ ಸರಗಳವು ಪ್ರಕರಣ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಬಂದ ಯುವಕ ರಿಬ್ಬರು ಮಹಿಳೆಯಿಂದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮದ್ದೂರು…
ಬರದಿಂದ ತತ್ತರಿಸುತ್ತಿದೆ ಸಕ್ಕರೆ ನಾಡು ಮಂಡ್ಯ
May 6, 2019ಮಂಡ್ಯ: ವಿಶ್ವಪ್ರಸಿದ್ಧ ಕೃಷ್ಣ ರಾಜಸಾಗರ (ಕೆಆರ್‍ಎಸ್) ಜಲಾಶಯವನ್ನೇ ಒಡಲಲ್ಲಿಟ್ಟುಕೊಂಡಿದ್ದರೂ, ನಾಡಿನ ಜೀವನದಿ ಕಾವೇರಿ ಹರಿಯುತ್ತಿದ್ದರೂ, ಸಾವಿರಾರು ಕೆರೆ-ಕಟ್ಟೆಗಳು ಇದ್ದರೂ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಹಲವೆಡೆ ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಇನ್ನೊಂದೆಡೆ ಬೇಸಿಗೆಯ ಉರಿ ಬಿಸಿಲಿನ ತಾಪ ಮಂಡ್ಯ ಜಿಲ್ಲೆಯ ಜನ ತತ್ತರಿ ಸುವಂತೆ ಮಾಡುತ್ತಿದೆ. ಕೆರೆ-ಕಟ್ಟೆಗಳಲ್ಲಿ ನೀರು ಬತ್ತಿಹೋಗಿದೆ. ನೀರು, ದುಡಿಮೆ ಅರಸಿಕೊಂಡು ಜಿಲ್ಲೆಯ ಗ್ರಾಮೀಣ ಭಾಗದ ಜನರು ಗಂಟು ಮೂಟೆ ಕಟ್ಟಿಕೊಂಡು ನಗರ ಪ್ರದೇಶಗಳತ್ತ ಗುಳೇ ಹೋಗಲು ಸಜ್ಜಾಗುತ್ತಿ ದ್ದಾರೆ. ಮಂಡ್ಯ, ನಾಗಮಂಗಲ,…
ಪಾಂಡವಪುರ ತಾಲೂಕಿನಲ್ಲಿ ಬಿರುಗಾಳಿ-ಮಳೆ; ಅಪಾರ ಹಾನಿ
April 29, 2019ಪಪ್ಪಾಯಿ, ಬಾಳೆ ತೋಟಗಳಲ್ಲಿ ಭಾರೀ ಬೆಳೆ ಹಾನಿ ಧರೆಗುರುಳಿದ ವಿದ್ಯುತ್ ಕಂಬ, ಟ್ರಾನ್ಸ್‍ಫಾರ್ಮರ್ ವಿದ್ಯುತ್ ಇಲ್ಲದೆ ಹಲವು ಗ್ರಾಮಗಳಲ್ಲಿ ಪರದಾಟ ನೆಲಕ್ಕುರುಳಿದ ಮರಗಳು, ಸಂಚಾರ ಅಸ್ತವ್ಯಸ್ತ ಪಾಂಡವಪುರ: ಪಾಂಡವಪುರ ತಾಲೂಕಿನ ಹಲವೆಡೆ ಶನಿವಾರ ತಡರಾತ್ರಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಆದರೆ ಯಾವುದೇ ಪ್ರಾಣಹಾನಿಯಾಗಿಲ್ಲ. ರಾಗಿ ಮುದ್ದನಹಳ್ಳಿ, ಬೇಬಿ, ಹಾರೋ ಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆ-ಗಾಳಿ ಅವಾಂತರ ಸೃಷ್ಟಿಸಿದ್ದು, ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಮರಗಳು ಧರಾಶಾಯಿಯಾಗಿವೆ. ಶಾಲೆ, ಮನೆ, ಇಟ್ಟಿಗೆ…