ಚುನಾವಣೆ ಯಾವಾಗ ಬರುತ್ತೋ ಗೊತ್ತಿಲ್ಲ: ಕಾರ್ಯಕರ್ತರು ರೆಡಿಯಾಗಿ
ಮಂಡ್ಯ, ಮೈಸೂರು

ಚುನಾವಣೆ ಯಾವಾಗ ಬರುತ್ತೋ ಗೊತ್ತಿಲ್ಲ: ಕಾರ್ಯಕರ್ತರು ರೆಡಿಯಾಗಿ

June 7, 2019

ಬೆಂಗಳೂರು: ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ, ಮೈತ್ರಿ ಸರ್ಕಾರ ಕಂಪ್ಲೀಟ್ ಆಗುತ್ತೆ. ದಿನ ನಿತ್ಯ ಮಾಧ್ಯಮದಲ್ಲಿ ಬರುವುದನ್ನು ನೋಡಿ ನೀವು ಟೆನ್ಷನ್ ಆಗ್ತೀರಾ. ಒಳಗಡೆ ಏನು ಅನ್ನೋದು ನಮಗೆ ಗೊತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಕಾರ್ಯಕರ್ತರಿಗೆ ಹೇಳಿರುವ ವಿಡಿಯೋ ವೈರಲ್ ಆಗಿದೆ.

ಜೆಡಿಎಸ್ ಕಾರ್ಯಕರ್ತರ ಜೊತೆ ಮಾತ ನಾಡಿರುವ ನಿಖಿಲ್ ಕುಮಾರಸ್ವಾಮಿ, 4 ವರ್ಷ ಸರ್ಕಾರ ನಡೆಸುತ್ತೇವೆ. ಚುನಾವಣೆಗೆ ಮುಂದಿನ ತಿಂಗಳಿಂದಲೇ ಶುರು ಮಾಡಿ. ಒಂದು ವರ್ಷಕ್ಕೆ ಬರುತ್ತೋ, ಎರಡು ವರ್ಷಕ್ಕೆ ಬರುತ್ತೋ, ಮೂರು ವರ್ಷಕ್ಕೆ ಬರುತ್ತೋ ಗೊತ್ತಿಲ್ಲ, ಜೆಡಿಎಸ್ ಕಾರ್ಯ ಕರ್ತರು ರೆಡಿಯಿರಬೇಕು ಎಂದು ತಿಳಿಸಿದ್ದಾರೆ.

ಸರ್ಕಾರ ನಡೆಯುತ್ತೋ, ಇಲ್ಲವೋ ಎಂಬ ಬಗ್ಗೆ ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರ ಜೊತೆ ಚರ್ಚಿಸಿರುವ ವಿಡಿಯೋ ಇದಾಗಿದ್ದು, ಸುನೀಲ್ ಗೌಡ ದಂಡಿಗಾನಹಳ್ಳಿ ಎಂಬುವವರು ತಮ್ಮ ಫೇಸ್‍ಬುಕ್‍ನಲ್ಲಿ ಸುಮಾರು 42 ಸೆಕೆಂಡ್‍ಗಳ ಕಾಲ ಮಾತನಾಡಿರುವ ವಿಡಿಯೋವನ್ನು ಅಪೆÇ್ಲೀಡ್ ಮಾಡಿದ್ದಾರೆ. ಒಮ್ಮೆ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಆತ್ಮವಿಶ್ವಾಸದಿಂದ ಮಾತನಾಡಿ ದ್ದಾರೆ. ನಂತರ ಚುನಾವಣೆ ಯಾವಾಗ ಬರುತ್ತೋ ಗೊತ್ತಿಲ್ಲ, ಜೆಡಿಎಸ್ ಕಾರ್ಯಕರ್ತರು ತಯಾರಾಗಿರಿ ಎಂಬರ್ಥದಲ್ಲಿ ಮಾತನಾಡಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

Translate »